ಟಾಟಾದ ಅಗ್ಗದ ಬೆಲೆಯ ಕಾರಿನಲ್ಲೂ ಅದೇ ಸುರಕ್ಷತೆ: ಎಲ್ಲರೂ ಸೇಫ್: ರೂ. 6 ಲಕ್ಷದ ಕಾರಿದು!

ಭಾರತದಲ್ಲಿ ಸುರಕ್ಷಿತ ಕಾರುಗಳಿಗೆ ಫೇಮಸ್ ಆಗಿರುವ Tata Motors ಗ್ರಾಹಕರ ವಿಶ್ವಾಸಾರ್ಹತೆಯನ್ನು ಗಳಿಸಿದೆ. ಈವರೆಗೆ ಟಾಟಾ ಕಾರುಗಳು ಅಪಘಾತಕ್ಕೀಡಾಗಿ ಪ್ರಯಾಣಿಕರು ಸಾವನ್ನಪ್ಪಿರುವ ಉದಾಹರಣೆಗಳು ತೀರಾ ಕಡಿಮೆ. ಇತ್ತೀಚಿನ ದಿನಗಳಲ್ಲಂತೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಟಾಟಾ ಕಾರುಗಳ ನಿರ್ಮಾಣ ಗುಣಮಟ್ಟವನ್ನು ಪ್ರದರ್ಶಿಸುತ್ತದೆ.

ಇತ್ತೀಚೆಗಷ್ಟೇ ಟಾಟಾ ಮೋಟಾರ್ಸ್‌ನ ಎಂಟ್ರಿ ಲೆವಲ್ ಕಾರುಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಟಿಯಾಗೋ ಹ್ಯಾಚ್‌ಬ್ಯಾಕ್ ಭೀಕರ ಅಪಘಾತಕ್ಕೆ ಒಳಗಾಗಿ ಪ್ರಯಾಣಿಕರು ಯಾವುದೇ ಹಾನಿಯಿಲ್ಲದೆ ಹೊರ ಬಂದಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಬಚಾವ್ ಆಗಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದ ವಿಡಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟಾಟಾ ಕಾರುಗಳ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

tata-tiago-accident-all-passengers-safe-video-viral

ಟಿಯಾಗೋ ಪಲ್ಟಿ: ಈ ಅಪಘಾತವು ಉತ್ತರ ಹಿಮಾಚಲ ಪ್ರದೇಶದ ಕಹಾನ್ ಬಳಿ ಸಂಭವಿಸಿರುವುದಾಗಿ ವರದಿಯಾಗಿದೆ. ಆಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ರಾತ್ರಿ ಸಂಭವಿಸಿರುವುದಾಗಿ ವಿಡಿಯೋದಲ್ಲಿ ಹೇಳಲಾಗಿದೆ. ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಟಾಟಾ ಟಿಯಾಗೋ ಪಕ್ಕದ ಆಳದ ಪ್ರದೇಶಕ್ಕೆ ಉರುಳಿರುವಂತೆ ವಿಡಿಯೋದಲ್ಲಿ ಕಾಣುತ್ತಿದೆ. ಕಾರಿನ ಹಾನಿಯನ್ನು ಕಂಡರೆ ಕಾರು ಹಲವು ಬಾರಿ ಪಲ್ಟಿಯಾದಂತೆ ಕಾಣುತ್ತಿದೆ.

ಸಣ್ಣ-ಪುಟ್ಟ ಗಾಯಗಳು: ಅಪಘಾತದಲ್ಲಿ ಯಾರೂ ಕೂಡ ಸಾವನ್ನಪ್ಪಿಲ್ಲ, ಆದ್ರೆ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇನ್ನು ವಾಹನದ ವಿಷಯಕ್ಕೆ ಬಂದರೆ ಕಾರು ಹೊರಭಾಗದಲ್ಲಿ ತೀವ್ರವಾಗಿ ಹಾನಿಯಾಗಿದೆ. ಮುಂಭಾಗದ ಸಂಪೂರ್ಣ ಬಂಪರ್ ಕಾಣೆಯಾಗಿದೆ. ಛಾವಣಿಯ ಭಾಗವು ಈ ಭಯಾನಕ ಅಪಘಾತದ ಸಂಪೂರ್ಣ ಹೊರೆಯನ್ನು ತಡೆದುಕೊಂಡಿದೆ. ಹೆಚ್ಚುವರಿಯಾಗಿ, ಕಾರಿನ ಬಾಗಿಲುಗಳು ಭಾರಿ ಹಾನಿಯಾಗಿರುವುದನ್ನು ನೋಡಬಹುದು.

tata-tiago-accident-all-passengers-safe-video-viral

ಟಾಟಾ ಟಿಯಾಗೊ ಗ್ಲೋಬಲ್ ಎನ್‌ಸಿಎಪಿಯಲ್ಲಿ 4 - ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಈ ಕಾರಿನಲ್ಲಿ 2 ಏರ್‌ಬ್ಯಾಗ್‌ ಗಳನ್ನು ನೀಡಲಾಗಿದೆ. ಆದರೆ ವೀಡಿಯೊದಲ್ಲಿ ಈ ನಿರ್ದಿಷ್ಟ ಟಾಟಾ ಟಿಯಾಗೊದ ಏರ್‌ಬ್ಯಾಗ್‌ಗಳು ತೆರೆದಿವೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿ ಕಾಣುತ್ತಿಲ್ಲ.

ಟಾಟಾ ಟಿಯಾಗೊ ಸುರಕ್ಷತೆ: ಎಬಿಎಸ್, ಆಟೋ-ಡಿಮ್ಮಿಂಗ್ ರಿಯರ್ ವ್ಯೂ ಮಿರರ್, ಸೆಂಟ್ರಲ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕ್, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯೂಷನ್), ಎಂಜಿನ್ ಇಮೊಬೈಲೈಜರ್, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಐಎಸ್ಒಫಿಕ್ಸ್ (ಚೈಲ್ಡ್ ಸೀಟ್ ಮೌಂಟ್), ಸೀಟ್ ಬೆಲ್ಟ್ ವಾರ್ನಿಂಗ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

tata-tiago-accident-all-passengers-safe-video-viral

ಟಾಟಾ ಟಿಯಾಗೊ CNG AMT ಬಿಡುಗಡೆ: ಇತ್ತೀಚೆಗಷ್ಟೆ ಟಾಟಾ ಮೋಟಾರ್ಸ್ ಭಾರತದಲ್ಲಿ ಟಿಯಾಗೋ CNG AMT ಮತ್ತು ಟೊಗೊರ್ CNG AMT ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದರಲ್ಲಿ ಟಾಟಾ ಟಿಯಾಗೋ CNG AMT ಕಾರಿನ ಪ್ರಾರಂಭಿಕ ಬೆಲೆಯು ರೂ.7.90 ಲಕ್ಷವಾದರೆ (ಎಕ್ಸ್ ಶೋರೂಂ), ಟೊಗೊರ್ CNG AMT ಕಾರಿನ ಬೆಲೆಯು ರೂ. 8.85 ಲಕ್ಷ (ಎಕ್ಸ್ ಶೋರೂಂ)ವಾಗಿದೆ.

ಹೊಸ ಟಾಟಾ ಟಿಯಾಗೋ CNG AMT ಕಾರು XTA, XZA+, XZA+ ಡ್ಯುಯಲ್-ಟೋನ್, ಮತ್ತು XZA NRG, ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಇವುಗಳ ಬೆಲೆಗಳು ಕ್ರಮವಾಗಿ ರೂ.7.90 ಲಕ್ಷ, ರೂ. 8.80 ಲಕ್ಷ, ರೂ. 8.90 ಲಕ್ಷ ಮತ್ತು ರೂ. 8.80 ಲಕ್ಷವಾಗಿದೆ. ಇನ್ನು ಟೊಗೋರ್ CNG AMT XZA ಬೆಲೆ ರೂ 8.85 ಲಕ್ಷ, ಆದರೆ XZA+ ರೂ 9.55 ಲಕ್ಷದಲ್ಲಿ ಲಭ್ಯವಿದೆ.

ಗಮನಾರ್ಹವಾಗಿ, ಟಾಟಾ ಟಿಯಾಗೊ CNG AMT ಮತ್ತು Tigor CNG AMT ಗಳು CNG ಇಂಧನದೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಭಾರತದಲ್ಲಿ ಮೊದಲ ವಾಹನಗಳಾಗಿವೆ. ಬ್ರಾಂಡ್‌ನ ಟ್ವಿನ್ CNG ತಂತ್ರಜ್ಞಾನದೊಂದಿಗೆ 1.2 ಲೀಟರ್, 3-ಸಿಲಿಂಡರ್ ನ್ಯಾಚುಅರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಪ್ರತಿ ಕೆಜಿಗೆ 28.06 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಟಾಟಾ ಹೇಳಿಕೊಂಡಿದೆ.

Article Published On: Tuesday, March 5, 2024, 13:20 [IST]
English summary
Tata tiago accident all passengers safe video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+