ಟಿಯಾಗೋ ಫೀಚರ್‌ ತಿಳಿದ ವ್ಯಾಗನರ್‌ ನಾಪತ್ತೆ: ವ್ಯಾಗನರ್‌ಗಿಂತ ಟಾಟಾ ಟಿಯಾಗೋ ಯಾಕೆ ಬೆಸ್ಟ್

ನಮಗೆಲ್ಲಾ ಗೊತ್ತಿರುವಂತೆ ಟಾಟಾ ಮೋಟಾರ್ಸ್‌ ತನ್ನ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಾವು ತಯಾರಿಸುವ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನವನ್ನು ನೀಡುತ್ತಿದೆ. ಹಾಗಾಗಿಯೇ ಟಾಟಾ ದ ಬಹುತೇಕ ಎಲ್ಲಾ ಕಾರುಗಳು ಸಹ ಗ್ರಾಹಕರಿಗೆ ಹೆಚ್ಚು ಸುರಕ್ಷಿತ ಎಂಬ ಮಾತುಗಳನ್ನು ಕಾರು ಪ್ರೇಮಿಗಳು ಕೂಗಿ ಹೇಳುತ್ತಿದ್ದಾರೆ.

ಈ ಪಟ್ಟಿಗೆ ಟಾಟಾ ಮೋಟಾರ್ಸ್‌ನ ಅತ್ಯಂತ ಹೆಚ್ಚು ಯಶಸ್ವಿಯಾಗಿರುವಂತಹ ಹಾಗೇಯೇ ಮಧ್ಯಮ ವರ್ಗದ ಜನರ ನೆಚ್ಚಿನ ಕಾರಾದಂತಹ ಟಿಯಾಗೋಗು ಸಹ ಅನ್ವಯಿಸುತ್ತದೆ. ಇದೇ ಸೆಗ್ಮೆಂಟ್‌ನ ಇತರ ಕಾರುಗಳಿಗೆ ಹೋಲಿಸಿದರೆ ಟಾಟಾ ಟಿಯಾಗೋ ಅತ್ಯಂತ ಹೆಚ್ಚು ಸುರಕ್ಷಿತ ಕಾರು ಎಂಬುದು ಹಲವರ ಅಭಿಪ್ರಾಯ. ಈ ಕುರಿತಾಗಿಯೇ ನಾವು ಇಂದಿನ ಲೇಖನದಲ್ಲಿ ನೋಡಲಿದ್ದೇವೆ.

TATA Tiago Is Safest Car Compared To Maruti Suzuki WagonR

ಎಬಿಎಸ್‌ ಮತ್ತು ಇಬಿಡಿ ಜೊತೆಗೆ ಕಾರ್ನರಿಂಗ್‌ ಸ್ಟೆಬಿಲಿಟಿ ಈ ಟಾಟಾ ಟಿಯಾಗೋ ಕಾರಿನಲ್ಲಿ ನಮಗೆ ಸಿಗುತ್ತದೆ. ಇತ್ತೀಚೆಗೆ ಎಬಿಎಸ್ ಅನ್ನು ಭಾರತದಲ್ಲಿ ಬಹುತೇಕ ಕಡ್ಡಾಯಗೊಳಿಸಿದ್ದು ಇದು ಗ್ರಾಹಕರ ಸುರಕ್ಷತೆಗೆ ಸಹಾಯ ಮಾಡುತ್ತದೆ. ಇದರ ಜೊತೆಗೆ ಕಾರ್ನರಿಂಗ್‌ ಸ್ಟೆಬಿಲಿಟಿ ಸಹ ಟಾಟಾ ಟಿಯಾಗೋದಲ್ಲಿ ಸಿಗುವುದರಿಂದ ಅದರ ದೃಢತೆ ಮತ್ತಷ್ಟು ಹೆಚ್ಚಾಗುತ್ತದೆ ಎಂಬುದು ನಿಜ. ಈ ಫೀಚರ್ ಇದೇ ಸೆಗ್ಮಂಟ್‌ನ ಬಹುತೇಕ ಕಾರುಗಳಲ್ಲಿ ಸಿಗುವುದಿಲ್ಲ.

ಟಾಟಾ ಟಿಯಾಗೋ ಕ್ರಾಶ್‌ ಟೆಸ್ಟ್‌ನಲ್ಲಿ ೪ ರೇಟಿಂಗ್‌ ಅನ್ನು ಪಡೆಯುವುದರ ಜೊತೆಗೆ ಸೆಗ್ಮೆಂಟ್ನ ಸೇಫೆಸ್ಟ್ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೇ ಸೆಗ್ಮಂಟ್‌ನಲ್ಲಿರುವ ಬಹುತೇಕ ಕಾರುಗಳಿಗೆ ಈ ಫೀಚರ್‌ ಇಲ್ಲ. ಉದಾಹರಣೆಗೆ ಈ ಸೆಗ್ಮೆಂಟ್‌ನಲ್ಲಿ ಅತೀ ಹೆಚ್ಚು ಮಾರಾಟವಾಗುವ ಮಾರುತಿ ಸುಜುಕಿ ವ್ಯಾಗನರ್‌ ಸಹ ಇಷ್ಟೊಂದು ಗಟ್ಟಿಯಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ.

TATA Tiago Is Safest Car Compared To Maruti Suzuki WagonR

ಇನ್ನು WagonR ನ ಸುರಕ್ಷತಾ ರೇಟಿಂಗ್ ಬಗ್ಗೆ ಹೇಳುವುದಾದ್ರೆ, ಇದು ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 1-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ನಿರ್ಮಾಣ ಗುಣಮಟ್ಟ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಕಾರುಗಳಿಗೆ NCAP 5-ಸ್ಟಾರ್ ರೇಟಿಂಗ್ ನೀಡುತ್ತದೆ. ಆದರೆ ನಿರ್ಮಾಣ ಗುಣಮಟ್ಟದಲ್ಲಿ ವ್ಯಾಗನ್ಆರ್ ವಯಸ್ಸಾದವರು ಮತ್ತು ಮಕ್ಕಳನ್ನು ರಕ್ಷಿಸುವಲ್ಲಿ ತುಂಬಾ ದುರ್ಬಲವಾಗಿದೆ.

ಇನ್ನು ಟಿಯಾಗೋ ಈ ಸೆಗ್ಮೆಂಟ್‌ನ ಬೆಸ್ಟ್‌ ಕಾರು ಎಂದು ಕರೆಯಲು ಇರುವ ಮತ್ತೊಂದು ಕಾರಣ ಇದರ ಡಿಸೈನ್‌. ಟಾಟಾ ಟಿಯಾಗೋ ಡಿಸೈನ್ ಬಗ್ಗೆ ಮಾತನಾಡುವುದಾದರೆ ಇದು ಸ್ಪೋರ್ಟಿ ಡಿಸೈನ್‌ ನಿಂದ ಕೂಡಿದ್ದು ನೋಡಲು ಒಂದು ಮಿನಿ ಆಲ್ಟ್ರೋಸ್‌ ರೀತಿಯಲ್ಲಿ ಭಾಸವಾಗುತ್ತದೆ. ಸ್ಪೋರ್ಟಿ ಆ್ಯಂಗುಲರ್‌ ಹೆಡ್‌ಲ್ಯಾಂಪ್‌ಗಳು, ಬೂಮ್‌ರಾಂಗ್‌ ಶೇಪ್‌ ಟೈಲ್‌ ಲ್ಯಾಂಪ್‌ಗಳು, ಸ್ಟೈಲಿಶ್‌ ಡ್ಯುಯಲ್‌ ಟೋನ್‌ ಬಂಪರ್‌ಗಳು ಈ ಕಾರಿನ ಸ್ಪೋರ್ಟಿ ಲುಕ್‌ ಅನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ.

ಇನ್ನು ಟಾಟಾ ಟಿಯಾಗೋನಲ್ಲಿ ನೆಕ್ಸ್ಟ್‌ ಜನರೇಷನ್‌ನ ಟೆಕ್‌ ನಿಮಗೆ ಇದರಲ್ಲಿ ಲಭ್ಯವಿದೆ. ಈ ಕಾರು ಕೇವಲ ಸೇಫ್ಟಿಗೆ ಮಾತ್ರವಲ್ಲ, ಅದರ ಹೊರತಾಗಿಯೂ ಟೆಕ್‌ಗೂ ಸಹ ಈ ಕಾರಿಗೆ ಜಾಗ ನೀಡಿದ್ದು, ಹಲವು ಕಾರುಗಳಲ್ಲಿ ನೀಡುವ ಡಿಜಿಟಲ್‌ ಇನ್‌ಫೋಟೈನ್‌ಮೆಂಟ್‌ ಸಿಸ್ಟಂ, ಡಿಜಿಟಲ್‌ ಇನ್ಸ್ಟ್ರುಮೆಂಟ್‌ ಕ್ಲಸ್ಟರ್‌ ಹಾಗೆಯೇ ಆ್ಯಪಲ್‌ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್‌ ಆಟೋ ಫೀಚರ್‌ಗಳು ಸಹ ದೊರಕುತ್ತದೆ.

ಟಿಯಾಗೋ ಎಂಜಿನ್ ವಿಶೇಷತೆಗಳನ್ನು ನೋಡುವುದಾದ್ರೆ, 1.2-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ಈ ಕಾರು 86 bhp ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಸಿಎನ್‌ಜಿ ರೂಪಾಂತರದಲ್ಲೂ ಲಭ್ಯವಿದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದೆ. ಕಂಪನಿಯ ಪ್ರಕಾರ, ಪೆಟ್ರೋಲ್‌ನಲ್ಲಿ 19.01kmpl ಮೈಲೇಜ್ ನೀಡುತ್ತದೆ, ಒಂದು ಕೆಜಿ CNG ನಲ್ಲಿ 26.49km ವರೆಗೆ ಮೈಲೇಜ್ ಪಡೆಯಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, January 27, 2024, 13:10 [IST]
English summary
Tata tiago is safest car compared to maruti suzuki wagonr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+