ಇವನನ್ನು ಶಿಕ್ಷಕ ಎನ್ನುವರೇ? ವಿದ್ಯಾರ್ಥಿಗೆ ನಡು ರಸ್ತೆಯಲ್ಲಿ ನರಕ ತೋರಿದ ಪಾಪಿ!
ಶಿಕ್ಷಕನೊಬ್ಬ ವಿದ್ಯಾರ್ಥಿಯ ಮೇಲೆ ಬೆಳೆಸಿಕೊಂಡಿದ್ದ ದ್ವೇಷವು ಎಷ್ಟರ ಮಟ್ಟಿಗಿತ್ತೆಂದರೆ ಕಾರಿನಿಂದ ಡಿಕ್ಕಿ ಹೊಡೆದ ನಂತರ ವಿದ್ಯಾರ್ಥಿಯನ್ನು ತನ್ನ ಕಾರಿನ ಬಾನೆಟ್ ಮೇಲೆ ಸುಮಾರು ಹತ್ತು ಕಿ.ಮೀ ದೂರ ಎಳೆದೊಯ್ದ ಘಟನೆ ನಡೆದಿದೆ. ಈ ಎಲ್ಲಾ ದೃಶ್ಯಗಳು ಮುಖ್ಯ ರಸ್ತೆಗಳಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಭಯಾನಕ ಘಟನೆಯ ವೀಡಿಯೊವನ್ನು ನಿಖಿಲ್ ಚೌಧರಿ ಎಂಬುವರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ನಡೆದ ಸ್ಥಳವನ್ನು ಪಂಜಾಬ್‌ನ ಕಪುರ್ತಾಲಾದ ಸುಲ್ತಾನ್‌ಪುರ ಲೋಧಿ ಪ್ರದೇಶ ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿ, ಹ್ಯುಂಡೈ SUV ಯ ವಿಂಡ್‌ಶೀಲ್ಡ್ ಮೇಲೆ ವಿದ್ಯಾರ್ಥಿಯೊಬ್ಬ ನೇತಾಡುತ್ತಿದ್ದರೂ ವೇಗವಾಗಿ ಚಲಿಸುತ್ತಿರುವುದನ್ನು ನಾವು ನೋಡಬಹುದು.

ವರದಿಗಳ ಪ್ರಕಾರ, ಈ ಘಟನೆ ಅಕ್ಟೋಬರ್ 26 ರಂದು ನಡೆದಿದೆ. IELTS ಓದುತ್ತಿರುವ ವಿದ್ಯಾರ್ಥಿ ಹರ್ಮನ್‌ಪ್ರೀತ್‌ನನ್ನು ವೇಗವಾಗಿ ಬಂದ ಹ್ಯುಂಡೈ ವೆನ್ಯೂ ಡಿಕ್ಕಿ ಹೊಡೆದಿದೆ. ಈ ಕಾರಿನಲ್ಲಿ ಶಿಕ್ಷಕ ಬಲ್ಜಿಂದರ್ ಸಿಂಗ್ ಇದ್ದ ಎನ್ನಲಾಗಿದೆ. ವಿದ್ಯಾರ್ಥಿಗೆ ಕಾರು ಡಿಕ್ಕಿ ಹೊಡೆದ ನಂತರ ಬಲ್ಜಿಂದರ್ ಸಿಂಗ್ ಕಾರನ್ನು ನಿಲ್ಲಿಸಲಿಲ್ಲ. ಕಾರಿನ ಬಾನೆಟ್ ಮೇಲೆ ಗಾಯಗಳೊಂದಿಗೆ ಬಿದ್ದರೂ ಶಿಕ್ಷಕ ಸುಮಾರು 10 ಕಿಲೋಮೀಟರ್ ಬಾನೆಟ್ ಮೇಲೆ ಹುಡುಗನೊಂದಿಗೆ ಕಾರನ್ನು ಓಡಿಸಿದ್ದಾನೆ.
ವೀಡಿಯೋದಲ್ಲಿ ಕಾಣುವಂತೆ ವಿದ್ಯಾರ್ಥಿಯು ತನ್ನ ಜೀವ ರಕ್ಷಣೆಗಾಗಿ ಎಸ್‌ಯುವಿಯ ರೂಫ್ ಮತ್ತು ವಿಂಡ್‌ಶೀಲ್ಡ್ ಅನ್ನು ಹಿಡಿದಿರುವುದನ್ನು ನಾವು ನೋಡಬಹುದು. ವಿದ್ಯಾರ್ಥಿ ತಪ್ಪಿಸಿಕೊಳ್ಳಲು ಎಸ್‌ಯುವಿಯಿಂದ ಜಿಗಿದನೇ ಅಥವಾ ಈ ಕ್ರೌರ್ಯವನ್ನು ಕೊನೆಗೊಳಿಸಲು ಸ್ಥಳೀಯರು ಮಧ್ಯಪ್ರವೇಶಿಸಿದ್ದೀರಾ ಎಂಬುದು ಸ್ಪಷ್ಟವಾಗಿಲ್ಲ. ಇದೆಲ್ಲವೂ ಹಗಲಿನಲ್ಲಿ ನಡೆದಿದ್ದು, ರಸ್ತೆಯಲ್ಲಿ ಇತರ ವಾಹನಗಳ ಸಂಚಾರವನ್ನು ನಾವು ನೋಡಬಹುದು.
ಒಂದು ವೇಳೆ ವಿದ್ಯಾರ್ಥಿ ರಸ್ತೆಗೆ ಬಿದ್ದರೆ ತಲೆಗೆ ಗಾಯವಾಗುವ ಅಥವಾ ಇನ್ನೊಂದು ವಾಹನಕ್ಕೆ ಡಿಕ್ಕಿಯಾಗುವ ಸಾಧ್ಯತೆಗಳೇ ಹೆಚ್ಚು. ಶಿಕ್ಷಕ ಬಲ್ಜಿಂದರ್ ಸಿಂಗ್ ಕ್ರಿಮಿನಲ್ ಇತಿಹಾಸವನ್ನು ಹೊಂದಿದ್ದು, ಆತನ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ವಿದ್ಯಾರ್ಥಿಯೊಂದಿಗೆ ಈ ರೀತಿ ವರ್ತಿಸಿದ್ದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಪಘಾತದಲ್ಲಿ ಹರ್ಮನ್‌ಪ್ರೀತ್ ಗಾಯಗೊಂಡಿದ್ದು, ನಂತರ ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿಗಳ ಪ್ರಕಾರ ಪೊಲೀಸರು ಇನ್ನೂ ಆರೋಪಿಯನ್ನು ಬಂಧಿಸಿಲ್ಲ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆರೋಪಿ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾನೆ, ಘಟನೆಯ ನಂತರ ವಿದ್ಯಾರ್ಥಿಯ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ತನ್ನ ಕಾರಿನ ಗಾಜು ಒಡೆದಿದ್ದಾರೆ ಎಂದು ಆರೋಪಿಸಿದ್ದಾನೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನಮಗೆ ತಿಳಿದಿರುವಂತೆ ಈ ಡಿಕ್ಕಿಯನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ಏಕೆಂದರೆ ಆಕಸ್ಮಿಕವಾಗಿ ಡಿಕ್ಕಿಯಾದರೆ ಯಾರೇ ಆಗಿ ಕಾರನ್ನು ನಿಲ್ಲಿಸುತ್ತಾರೆ. ಆದ್ರೆ ಇಲ್ಲಿ ಹಾಗಾಗಿಲ್ಲ, ವಿದ್ಯಾರ್ಥಿಯ ಮೇಲೆ ಸಿಟ್ಟು ಬೆಳೆಸಿಕೊಂಡು ಡಿಕ್ಕಿ ಹೊಡೆದಿದ್ದಾನೆ. ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications