ಉಡುಗೊರೆಯಾಗಿ ಸಿಕ್ಕ ಕಾರನ್ನು ಗುರುವಿಗೆ ನೀಡಿದ ಟೀಂ ಇಂಡಿಯಾ ವೇಗದ ಬೌಲರ್

ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಸಾಧನೆ ತೋರಿದ ಟಿ ನಟರಾಜನ್ ಸೇರಿದಂತೆ ಆರು ಭಾರತೀಯ ಕ್ರಿಕೆಟಿಗರಿಗೆ ಹೊಸ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಘೋಷಿಸಿದ್ದರು.

ಉಡುಗೊರೆಯಾಗಿ ಸಿಕ್ಕ ಕಾರನ್ನು ಗುರುವಿಗೆ ನೀಡಿದ ಟೀಂ ಇಂಡಿಯಾ ವೇಗದ ಬೌಲರ್

ಈ ಭರವಸೆಯಂತೆ ಕ್ರಿಕೆಟಿಗರು ವಾಸಿಸುವ ಸ್ಥಳಗಳಲ್ಲಿರುವ ಮಹೀಂದ್ರಾ ಶೋರೂಂಗಳ ಮೂಲಕ ಹೊಸ ತಲೆಮಾರಿನ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿರುವ ವೇಗದ ಬೌಲರ್ ನಟರಾಜನ್ ಅವರು ಸಹ ಹೊಸ ತಲೆಮಾರಿನ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ಸ್ವೀಕರಿಸಿದರು.

ಉಡುಗೊರೆಯಾಗಿ ಸಿಕ್ಕ ಕಾರನ್ನು ಗುರುವಿಗೆ ನೀಡಿದ ಟೀಂ ಇಂಡಿಯಾ ವೇಗದ ಬೌಲರ್

ಆದರೆ ಅವರು ಆ ಕಾರನ್ನು ಬಳಸಿಲ್ಲ. ನಟರಾಜನ್ ತಮಗೆ ನೀಡಲಾದ ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ತಮ್ಮ ಗುರು ಜಯಪ್ರಕಾಶ್ ಎಂಬುವವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ನಟರಾಜನ್ ಹಲವು ಸಂದರ್ಶನಗಳಲ್ಲಿ ಜಯಪ್ರಕಾಶ್'ರವರ ಬಗ್ಗೆ ಪ್ರಸ್ತಾಪಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಉಡುಗೊರೆಯಾಗಿ ಸಿಕ್ಕ ಕಾರನ್ನು ಗುರುವಿಗೆ ನೀಡಿದ ಟೀಂ ಇಂಡಿಯಾ ವೇಗದ ಬೌಲರ್

ನಟರಾಜನ್ ಇಂದು ಈ ಮಟ್ಟಕ್ಕೆ ಬೆಳೆಯಲು ಜಯಪ್ರಕಾಶ್ ಪ್ರಮುಖ ಕಾರಣ. ಈ ಕಾರಣಕ್ಕೆ ತಮಗೆ ಉಡುಗೊರೆಯಾಗಿ ನೀಡಲಾದ ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಜಯಪ್ರಕಾಶ್‌ರವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಉಡುಗೊರೆಯಾಗಿ ಸಿಕ್ಕ ಕಾರನ್ನು ಗುರುವಿಗೆ ನೀಡಿದ ಟೀಂ ಇಂಡಿಯಾ ವೇಗದ ಬೌಲರ್

ನಟರಾಜನ್ ಅವರ ಈ ನಡೆಯನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದಾರೆ. ಹೊಸ ತಲೆಮಾರಿನ ಥಾರ್ ಎಸ್‌ಯುವಿಯ ವಿತರಣೆ ಪಡೆಯಲು ಗ್ರಾಹಕರು ತಿಂಗಳುಗಟ್ಟಲೇ ಕಾಯಬೇಕಾಗಿದೆ. ಇದರ ನಡುವೆ ತಮಗೆ ಸಿಕ್ಕ ಕಾರ್ ಅನ್ನು ನಟರಾಜನ್ ತಮ್ಮ ಗುರುವಿಗೆ ನೀಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಉಡುಗೊರೆಯಾಗಿ ಸಿಕ್ಕ ಕಾರನ್ನು ಗುರುವಿಗೆ ನೀಡಿದ ಟೀಂ ಇಂಡಿಯಾ ವೇಗದ ಬೌಲರ್

ಮಹೀಂದ್ರಾ ಥಾರ್ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನಥಾರ್ ಎಸ್‌ಯುವಿಯನ್ನು 2020ರ ಅಕ್ಟೋಬರ್ 2ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

ಉಡುಗೊರೆಯಾಗಿ ಸಿಕ್ಕ ಕಾರನ್ನು ಗುರುವಿಗೆ ನೀಡಿದ ಟೀಂ ಇಂಡಿಯಾ ವೇಗದ ಬೌಲರ್

ಹಳೆಯ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯು ಸಂಪೂರ್ಣವಾಗಿ ಭಿನ್ನವಾಗಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುತ್ತಿದೆ. ಭಾರತದಾದ್ಯಂತ ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಗ್ರಾಹಕರು ಹೊಸ ತಲೆಮಾರಿನ ಥಾರ್ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಉಡುಗೊರೆಯಾಗಿ ಸಿಕ್ಕ ಕಾರನ್ನು ಗುರುವಿಗೆ ನೀಡಿದ ಟೀಂ ಇಂಡಿಯಾ ವೇಗದ ಬೌಲರ್

ಆದರೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಥಾರ್ ಎಸ್‌ಯುವಿಯನ್ನು ತಕ್ಷಣವೇ ಎಲ್ಲರಿಗೂವಿತರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ. ಜಾಗತಿಕವಾಗಿ ಸೆಮಿ ಕಂಡಕ್ಟರ್'ಗಳ ಕೊರತೆ ಎದುರಾಗಿರುವುದೇ ಇದಕ್ಕೆ ಪ್ರಮುಖ ಕಾರಣ.

ಉಡುಗೊರೆಯಾಗಿ ಸಿಕ್ಕ ಕಾರನ್ನು ಗುರುವಿಗೆ ನೀಡಿದ ಟೀಂ ಇಂಡಿಯಾ ವೇಗದ ಬೌಲರ್

ಆಟೋಮೊಬೈಲ್ ಉದ್ಯಮಕ್ಕೆ ಅಗತ್ಯವಾದ ಪ್ರಮುಖ ಅಂಶಗಳಲ್ಲಿ ಒಂದಾದ ಸೆಮಿ ಕಂಡಕ್ಟರ್'ಗಳ ಕೊರತೆಯಿಂದಾಗಿ ಹೊಸ ತಲೆಮಾರಿನ ಥಾರ್ ಎಸ್‌ಯುವಿಯ ಉತ್ಪಾದನೆಗೆ ಅಡ್ಡಿಯಾಗಿದೆ. ಇದರಿಂದಾಗಿ ಹೊಸ ಥಾರ್ ಎಸ್‌ಯುವಿಯ ವಿತರಣೆ ಪಡೆಯಲು ದೀರ್ಘಕಾಲ ಕಾಯಬೇಕಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಉಡುಗೊರೆಯಾಗಿ ಸಿಕ್ಕ ಕಾರನ್ನು ಗುರುವಿಗೆ ನೀಡಿದ ಟೀಂ ಇಂಡಿಯಾ ವೇಗದ ಬೌಲರ್

ಈಗಾಗಲೇ ಹೊಸ ಥಾರ್ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಿರುವ ವಿತರಣೆ ಯಾವಾಗ ಲಭ್ಯವಾಗುತ್ತದೆ ಎಂಬುದನ್ನು ಕಾಯುತ್ತಿದ್ದಾರೆ. ಇದರ ನಡುವೆ ಹೊಸ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ ಆನಂದ್ ಮಹೀಂದ್ರಾರವರಿಗೆ ಟೀಂ ಇಂಡಿಯಾದ ವೇಗದ ಬೌಲರ್ ನಟರಾಜನ್ ಧನ್ಯವಾದ ಅರ್ಪಿಸಿದ್ದಾರೆ.

Most Read Articles

Kannada
English summary
Team India fast bowler Natarajan gifts new Mahindra Thar to his coach. Read in Kannada.
Story first published: Friday, April 2, 2021, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X