Just In
Don't Miss!
- News
ಖಾತೆ ಹಂಚಿಕೆ ಕುರಿತಂತೆ ಡಾ. ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ಯಾಕೆ?
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಾರ್ಜಿಂಗ್ ಸ್ಟೇಷನ್‌ಗಳಾಗಿ ಬದಲಾಗಲಿವೆ ಟೆಲಿಫೋನ್ ಬೂತ್‌ಗಳು
ದಶಕಗಳ ಹಿಂದಿನ ಮಾತು. ಬಹುತೇಕ ಎಲ್ಲಾ ನಗರಗಳ ರಸ್ತೆಗಳಲ್ಲಿ ಸಾರ್ವಜನಿಕ ಟೆಲಿಫೋನ್ ಬೂತ್‌ಗಳು ಇರುತ್ತಿದ್ದವು. ಈ ಬೂತ್‌ಗಳು ದೂರಸಂಪರ್ಕದ ಪ್ರಮುಖ ಸಾಧನವಾಗಿದ್ದವು. ಮೊಬೈಲ್ ಫೋನ್‌ಗಳ ಆಗಮನದೊಂದಿಗೆ ಟೆಲಿಫೋನ್ ಬೂತ್‌ಗಳು ಮೂಲೆ ಗುಂಪಾದವು.

ಆದರೆ ವಿಶ್ವದ ಹಲವು ದೇಶಗಳಲ್ಲಿ ಟೆಲಿಫೋನ್ ಬೂತ್‌ಗಳು ಸ್ಮಾರಕಗಳಾಗಿವೆ. ಈ ಪೈಕಿ ಐರ್ಲೆಂಡ್ ದೇಶವು ಸಹ ಒಂದು. ಈ ದೇಶದಲ್ಲಿ ಟೆಲಿಫೋನ್ ಬೂತ್‌ಗಳಿಗೆ ಹೊಸ ಅವತಾರ ನೀಡಲು ಎರಡು ಕಂಪನಿಗಳು ಯೋಜನೆಯನ್ನು ರೂಪಿಸುತ್ತಿವೆ. ಕಾಲಕ್ಕೆ ತಕ್ಕಂತೆ ಈ ಟೆಲಿಫೋನ್ ಬೂತ್‌ಗಳನ್ನು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್'ಗಳಾಗಿ ಪರಿವರ್ತಿಸಲು ಈ ಕಂಪನಿಗಳು ನಿರ್ಧರಿಸಿವೆ.

ಇಂದು ಬಹುತೇಕ ಜನರು ಸ್ಮಾರ್ಟ್‌ಫೋನ್‌ಗಳು ಹೊಂದಿರುವುದರಿಂದ ಯಾರೂ ಟೆಲಿಫೋನ್ ಬೂತ್‌ಗಳನ್ನು ಬಳಸುತ್ತಿಲ್ಲ. ಈ ಕಾರಣಕ್ಕೆ ಐರ್ಲೆಂಡ್‌ನಲ್ಲಿರುವ ಟೆಲಿಫೋನ್ ಬೂತ್‌ಗಳನ್ನು ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್'ಗಳಾಗಿ ಬದಲಿಸಲಾಗುವುದು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಎಲೆಕ್ಟ್ರಿಕ್ ವಾಹನಗಳ ಮಾಲೀಕರು ತಮ್ಮ ವಾಹನಗಳ ಬ್ಯಾಟರಿಗಳನ್ನು ಇಲ್ಲಿ ಚಾರ್ಜ್ ಮಾಡಬಹುದು. ಕಾರ್ ಚಾರ್ಜಿಂಗ್ ಸೇವಾ ಪೂರೈಕೆದಾರ ಕಂಪನಿಯಾದ ಈಸಿಗೋ ಹಾಗೂ ಟೆಲಿಕಾಂ ಕಂಪನಿಯಾದ ಐರ್ ಈ ಯೋಜನೆಯನ್ನು ಜಾರಿಗೆ ತರಲಿವೆ.

180 ಟೆಲಿಫೋನ್ ಬೂತ್‌ಗಳನ್ನು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳಾಗಿ ಪರಿವರ್ತಿಸಲು ಈ ಎರಡು ಕಂಪನಿಗಳು ಕೈಜೋಡಿಸಿವೆ. ಈ ಪಬ್ಲಿಕ್ ಟೆಲಿಫೋನ್ ಬೂತ್‌ಗಳನ್ನು ಜನದಟ್ಟಣೆ ಇರುವ ಸ್ಥಳಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳಾಗಿ ಬದಲಿಸಿ ಸ್ಥಾಪಿಸಲಾಗುವುದು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇದರಿಂದ ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಟೆಲಿಫೋನ್ ಬೂತ್‌ಗಳಿದ್ದರೂ ಈಗ ಪ್ರಯೋಜನಕ್ಕೆ ಬಾರದಂತಾಗಿವೆ. ಆ ಪ್ರದೇಶಗಳಲ್ಲಿರುವ ಎಲೆಕ್ಟ್ರಿಕ್ ವಾಹನ ಮಾಲೀಕರು ತಮ್ಮ ವಾಹನಗಳ ಬ್ಯಾಟರಿಯನ್ನು ಚಾರ್ಜ್ ಮಾಡುವ ಬಗ್ಗೆ ಅಷ್ಟಾಗಿ ತಲೆಕೆಡಿಕೊಳ್ಳುವುದಿಲ್ಲ.

ಈ ಯೋಜನೆಯು ನಗರ ಪ್ರದೇಶಗಳ ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ವರದಾನವಾಗಲಿದೆ. ವಿಶ್ವದ ಬಹುತೇಕ ಎಲ್ಲಾ ದೇಶಗಳು ಸದ್ಯಕ್ಕೆ ವಾಯುಮಾಲಿನ್ಯ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆಗೊಳಿಸಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಪೈಕಿ ಐರ್ಲೆಂಡ್ ಕೂಡ ಒಂದು. 2030ರ ವೇಳೆಗೆ ತನ್ನ ದೇಶದಲ್ಲಿ 10 ಲಕ್ಷ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿಯಬೇಕೆಂದು ಐರ್ಲೆಂಡ್ ಬಯಸಿದೆ. ಆದರೆ ವಿಶ್ವದ ಇತರ ದೇಶಗಳ ಜನರಂತೆ ಐರ್ಲೆಂಡ್ ಜನರು ಸಹ ಚಾರ್ಜಿಂಗ್ ಸ್ಟೇಷನ್‌ಗಳಂತಹ ಮೂಲ ಸೌಕರ್ಯದ ಕೊರತೆಯ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಟೆಲಿಫೋನ್ ಬೂತ್‌ಗಳನ್ನು ಚಾರ್ಜಿಂಗ್ ಸ್ಟೇಷನ್‌ಗಳಾಗಿ ಪರಿವರ್ತಿಸುವಂತಹ ಯೋಜನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬರುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.