ಸದ್ದಿಲ್ಲದೇ ಐಷಾರಾಮಿ 2-ಡೋರ್ BMW ಕಾರನ್ನು ಖರೀದಿಸಿದ ತೆಲುಗು ನಟ ನಾಗ ಚೈತನ್ಯ.. ಬೆಲೆ ಎಷ್ಟು, ಹೇಗಿದೆ?
ಅಕ್ಕಿನೇನಿ ಕುಟುಂಬದ ನಟ ನಾಗ ಚೈತನ್ಯ (Naga Chaitanya), ತಂದೆ ನಾಗಾರ್ಜುನ ಹಾಗೂ ಸೋದರಮಾವ ವಿಕ್ಟರಿ ವೆಂಕಟೇಶ್ ಅವರಂತೆ ಜನಪ್ರಿಯರಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮನಂ, ಓಕ ಲೈಲಾ ಕೋಸಂ, ಪ್ರೇಮಂ, ಮಜಿಲಿ, ವೆಂಕಿ ಮಾಮ ಹಾಗೂ ಲಾಲ್ ಸಿಂಗ್ ಚಡ್ಡಾ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಹಲವು ಹೊಸ ಪ್ರಾಜೆಕ್ಟ್‌ಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಈಚೆಗೆ ನಟ ನಾಗ ಚೈತನ್ಯ, ದುಬಾರಿ ಬೆಲೆಯ ಐಷಾರಾಮಿ ಬಿಎಂಡಬ್ಲ್ಯೂ ಎಂ2 (BMW M2) ಕೂಪೆ ಸೆಡಾನ್‌ನ್ನು ಖರೀದಿ ಮಾಡಿದ್ದಾರೆ. ಇದೇ ಕಾರಿನಲ್ಲಿ ಹೈದರಾಬಾದ್ ವಿಮಾನ ನಿಲ್ದಾಣದಿಂದ ತಮ್ಮ ಪತ್ನಿ, ನಟಿ ಸೋಭಿತಾ ಧುಲಿಪಾಲ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಯಿತ್ತು.

ಬಿಎಂಡಬ್ಲ್ಯೂ ಎಂ2 ವಿಶೇಷತೆಗಳೇನು:
ಇದೊಂದು ಜನಪ್ರಿಯ ಸೆಡಾನ್ ಆಗಿದೆ. ರೂ.1.06 ಕೋಟಿ ಎಕ್ಸ್-ಶೋರೂಂ (ಬೆಂಗಳೂರು) ಬೆಲೆಯನ್ನು ಹೊಂದಿದೆ. ರೂ.1,30 ಕೋಟಿ ಆನ್-ರೋಡ್ ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರನ್ನು ಸೆಳೆಯುತ್ತದೆ. ಉತ್ತಮವಾದ ಗ್ರಿಲ್ ಹಾಗೂ ಬಂಪರ್‌ನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ.
ಈ ಕಾರು 4580 ಎಂಎಂ ಉದ್ದ, 1887 ಎಂಎಂ ಅಗಲ ಹಾಗೂ ಎತ್ತರ ಕೂಡ ಇದೆ. ಜೊತೆಗೆ 123 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2747 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 1754 ಕೆಜಿ ತೂಕವಿದೆ. ಆಲ್ಪೈನ್ ವೈಟ್, ಎಂ ಬ್ರೂಕ್ಲಿನ್ ಗ್ರೇ, ಸ್ಕೈಸ್ಕ್ರೇಪರ್ ಗ್ರೇ, ಸಾವೊ ಪಾಲೊ ಯೆಲ್ಲೋ, ಫೈರ್ ರೆಡ್, ಜಾವಾ ಗ್ರೀನ್, ವೂಡೂ ಬ್ಲ್ಯೂ, ಗ್ರಿಜಿಯೊ ಟೆಲೆಸ್ಟೊ ಹಾಗೂ ಟ್ವಿಲೈಟ್ ಪರ್ಪಲ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಹೊಚ್ಚ ಹೊಸ ಬಿಎಂಡಬ್ಲ್ಯೂ ಎಂ2 ಕೂಪೆ ಸೆಡಾನ್, 4 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 2 ಬಾಗಿಲುಗಳ ಆಯ್ಕೆಯನ್ನು ಪಡೆದಿದೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 390 ಲೀಟರ್ ಸಾಮರ್ಥ್ಯವನ್ನು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.
ಇದು ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 3-ಲೀಟರ್ 6-ಸಿಂಗಲ್-ಸಿಲಿಂಡರ್ ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 460 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 550 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 52 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ತನ್ನದಾಗಿಸಿಕೊಂಡಿದೆ.
ಈ ಕಾರು ಉತ್ತಮವಾದ ಇಂಧನ ದಕ್ಷತೆಯನ್ನು ಹೊಂದಿದೆ. 10.19 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 250 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 4.3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ನೂತನ 'ಬಿಎಂಡಬ್ಲ್ಯೂ ಎಂ2' ಸೆಡಾನ್ ಕ್ಯಾಬಿನ್ ವಿನ್ಯಾಸವು ತುಂಬಾ ಚೆನ್ನಾಗಿದೆ. 14.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಹೆಡ್ಸ್-ಅಪ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್‌ಗಳು. 3-ಜೋನ್ ಕ್ಲೇಮೇಟ್ ಕಂಟ್ರೋಲ್, ಹರ್ಮನ್ ಕಾರ್ಡನ್ 12-ಸ್ಪೀಕರ್ ಆಡಿಯೊ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಮತ್ತು ಡಿಜಿಟಲ್ ಕೀಯನ್ನು ಹೊಂದಿದೆ.
ಇದು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಎಎಸ್‌ಸಿ (ಆಕ್ಸಿಲರೇಶನ್ ಸ್ಲಿಪ್ ಕಂಟ್ರೋಲ್), ಡಿಎಸ್‌ಸಿ (ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್), ಸಿಬಿಎಸ್ (ಕಾರ್ನರಿಂಗ್ ಬ್ರೇಕ್ ಕಂಟ್ರೋಲ್), ಡಿಬಿಸಿ (ಡೈನಾಮಿಕ್ ಬ್ರೇಕ್ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications








