ನಿಮ್ಮಲ್ಲಿ ಕಿರುಕುಳವನ್ನುಂಟು ಮಾಡುವ 10 ಕಾರು ತಂತ್ರಜ್ಞಾನಗಳು
ಕಳೆದ ಹಲವಾರು ವರ್ಷಗಳಿಂದ ಸುಖ ಪ್ರಯಾಣಕ್ಕಾಗಿ ಹಲವಾರು ಅತ್ಯಾಧುನಿಕ ವಾಹನ ತಂತ್ರಜ್ಞಾನಗಳನ್ನು ಅಭಿವೃದ್ಧಿಸಲಾಗಿದೆ. ಈಗಲೂ ಈ ಪ್ರಕ್ರಿಯೆ ನಿರಂತರ ಜಾರಿಯಲ್ಲಿದೆ. ಹಳೆಯ ಕಾರುಗಳಿಗೆ ಹೋಲಿಸಿದಾಗ ವಾಹನ ತಂತ್ರಗಾರಿಕೆಯಲ್ಲಿ ಬಹಳಷ್ಟು ಬದಲಾವಣೆ ಕಂಡುಬಂದಿದೆ.
Also Read: ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?
ಪ್ರಯಾಣಿಕರ ಬಯಕೆಗಳಿಗೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಅವಿಷ್ಕಾರವಾಗುತ್ತಿದೆ. ಹಾಗಿದ್ದರೂ ಕೆಲವೊಂದು ತಂತ್ರಜ್ಞಾನಗಳು ಇದ್ದರೂ ಅದರ ಬಳಕೆ ತುಂಬಾನೇ ಕಷ್ಟಕರವಾಗುತ್ತದೆ. ಹಾಗಾಗಿ ಇದ್ದೂ ಇಲ್ಲದಂತಹ ಭಾವನೆಯುಂಟಾಗುತ್ತದೆ .ಹೀಗೆ ಬಳಕೆಯ ವೇಳೆ ನಿಮ್ಮಲ್ಲಿ ಕಿರುಕುಳವನ್ನುಂಟು ಮಾಡುವ 10 ವಾಹನ ತಂತ್ರಜ್ಞಾನಗಳ ಬಗ್ಗೆ ನಾವಿಲ್ಲಿ ಪಟ್ಟಿ ಮಾಡಿಕೊಡಲಿದ್ದೇವೆ.

01. ಟಚ್ ಸೆನ್ಸಿಟಿವ್ ಕಂಟ್ರೋಲ್
ಆಧುನಿಕ ಕಾರುಗಳಲ್ಲಿ ಸುಲಭ ಹಾಗೂ ಸರಳ ನಿರ್ವಹಣೆಗಾಗಿ ಟಚ್ ಬಟನ್ ಸೇವೆಯನ್ನು ನೀಡಲಾಗುತ್ತದೆ. ಆದರೆ ಒತ್ತೊತ್ತಾಗಿ ಕಂಡುಬರುವ ಟಚ್ ನಿಯಂತ್ರಣ ಬಟನ್ ಗಳು ಚಾಲನೆ ವೇಳೆ ನಿರ್ವಹಣೆ ಕಷ್ಟಕರವಾಗುತ್ತದೆ. ಇದರಿಂದ ಸಹಜವಾಗಿಯೇ ಸವಾರರಲ್ಲಿ ಕಿರಿಕಿರಿಯನ್ನುಂಟು ಮಾಡುತ್ತದೆ.

2. ಟಚ್ ಸ್ಕ್ರೀನ್ ಅವಲಂಬಿತ ಕಂಟ್ರೋಲ್
ನೂತನ ಕಾರುಗಳಲ್ಲಿ ಮಾಹಿತಿ ಮನರಂಜನಾ ವ್ಯವಸ್ಥೆಯು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ ಚೊಕ್ಕದಾದ ಈ ಪರದೆಯಲ್ಲಿ ಅಸಂಖ್ಯಾತ ಅಪ್ಲಿಕೇಷನ್ ಗಳ ನಿರ್ವಹಣೆ ಕ್ಲಿಷ್ಟಕರವಾಗುತ್ತದೆ ಎಂದು ಚಾಲಕರು ಅಳಲು ತೋಡಿಕೊಳ್ಳುತ್ತಾರೆ.

03. ಸ್ಟೀರಿಯೋ ಟ್ಯೂನಿಂಗ್
ಆಧುನಿಕ ಕಾರುಗಳಲ್ಲಿ ಸಾಂಪ್ರದಾಯಿಕ ಸ್ಟೀರಿಂಗ್ ಟ್ಯೂನಿಂಗ್ ನಾಬ್ ಗಳ ಹೊರತಾಗಿ ಟಚ್ ಪ್ಯಾನೆಲ್ ಗಳಲ್ಲೇ ಇದರ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಪರಿಣಾಮ ಚಾಲಕರಿಗೆ ನಿರ್ವಹಣೆ ತ್ರಾಸದಾಯಕವಾಗುತ್ತದೆ.

04. ನೇವಿಗೇಷನ್ ಸಿಸ್ಟಂ ಲಾಕ್
ಇನ್ನು ಕೆಲವು ಕಾರುಗಳಲ್ಲಿ ಸುರಕ್ಷಿತ ಪಯಣಕ್ಕಾಗಿ ನೇವಿಗೇಷನ್ ಕಂಟ್ರೋಲ್ ಗಳಲ್ಲಿ ಅನೇಕ ವಿಧದ ನಿಯಂತ್ರಣಗಳನ್ನು ಹೇರಲಾಗುತ್ತದೆ. ಪರಿಣಾಮ ಚಾಲನೆಯ ವೇಳೆ ಇದರ ನಿರ್ವಹಣೆಗೆ ತಡೆಯನ್ನುಂಟು ಮಾಡುತ್ತದೆ.

5. ದೈತ್ಯಾಕಾರಾದ ಕೀ
ಮುಂದುವರಿದ ತಂತ್ರಜ್ಞಾನದಲ್ಲಿ ಕಳೆದ ಹಲವಾರು ದಶಕಗಳಲ್ಲಿ ಕಾರು ಕೀಗಳಲ್ಲೂ ಸಾಕಷ್ಟು ಬದಲಾವಣೆ ಕಂಡುಬಂದಿದೆ. ಕಾರು ಕೀಗಳಲ್ಲೇ ಹಲವಾರು ನಿಯಂತ್ರಣ ಒದಗಿಸುವುದರಿಂದ ಇದರ ಗಾತ್ರದಲ್ಲೂ ಭಾರಿ ವರ್ಧನೆಯುಂಟಾಗಿದೆ. ಪರಿಣಾಮ ಜೇಬಿನಲ್ಲಿ ತುರುಕಿಸಿಕೊಂಡು ಹೋಗುವುದು ಕಷ್ಟಕರವಾಗಿದೆ.

06. ಕಪ್ ಹೋಲ್ಡರ್
ನಿಮ್ಮ ದೈನಂದಿನ ಪಯಣದ ವೇಳೆ ಬಾಟಲಿ, ವಾರ್ತಾ ಪತ್ರಿಕೆ ಮುಂತಾದ ಅಗತ್ಯ ವಸ್ತುಗಳಿನ್ನಡಲು ಕಪ್ ಹೋಲ್ಡರ್ ಗಳ ಸೇವೆಗಳನ್ನು ನೀಡಲಾಗುತ್ತದೆ. ಆದರೆ ಕಪ್ ಹೋಲ್ಡರ್ ಗಾತ್ರ ಸರಿಯಾದ ರೀತಿಯಲ್ಲಿ ಇಲ್ಲವಾದ್ದಲ್ಲಿ ಸಮಸ್ಯೆ ಸೃಷ್ಟಿಯಾಗುವುದು ಸಹಜ.

07. ಆಟೋ ಸ್ಟ್ಯಾಪ್-ಸ್ಟ್ಯಾರ್ಟ್
ಸಾಧ್ಯವಾದಷ್ಟು ಇಂಧನ ಉಳಿತಾಯ ಮಾಡುವ ನಿಟ್ಟಿನಲ್ಲಿ ವಾಹನಗಳಲ್ಲಿ ಆಟೋ ಸ್ಟ್ಯಾಪ್-ಸ್ಟ್ಯಾರ್ಟ್ ವ್ಯವಸ್ಥೆಗಳನ್ನು ನೀಡಲಾಗುತ್ತದೆ. ಆದರೆ ವಿಪರ್ಯಾಸವೆಂದರೆ ಕೆಲವೊಂದು ಬಾರಿ ಇಂತಹ ವೈಶಿಷ್ಟ್ಯಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾಲಿಕರು ರೇಗಿಸಿಕೊಳ್ಳುತ್ತಾರೆ.

08. ವಾಯ್ಸ್ ಕಂಟ್ರೋಲ್ಡ್ ಸಿಸ್ಟಂ
ಆಧುನಿಕ ಕಾರುಗಳಲ್ಲಿ ಸ್ಟೀರಿಂಗ್ ವೀಲ್‌ಗೆ ಹೊಂದಿಕೊಂಡು ವಾಯ್ಸ್ ಕಂಟ್ರೋಲ್ಡ್ ವ್ಯವಸ್ಥೆಯನ್ನು ನೀಡಲಾಗುತ್ತದೆ. ಆದರೆ ಇದಕ್ಕೆ ಜೋಡಣೆ ಮಾಡಲಾದ ಗಣಕಯಂತ್ರವು ನಿಮ್ಮ ಮಾತು ಆಲಿಸಬೇಕಾದ್ದಲ್ಲಿ ಎಷ್ಟು ಗಟ್ಟಿಯಾಗಿ ಕೂಗಬೇಕೋ ಏನೋ?

09. ಕಾರು ಅಲರಾಂ
ಕಳ್ಳತನದಿಂದ ಪಾರಾಗಲು ಕಾರಿಗೆ ಅಲರಾಂ ವ್ಯವಸ್ಥೆಯನ್ನು ಜೋಡಣೆ ಮಾಡಲಾಗುತ್ತದೆ. ಆದರೆ ನಿಮ್ಮ ದೈನಂದಿನ ಪಯಣದ ವೇಳೆ ಪಾರ್ಕ್ ಮಾಡಿದ ಪ್ರದೇಶದಿಂದ ಪದೇ ಪದೇ ಕೂಗುತ್ತಿದ್ದಲ್ಲಿ ಏನಾಬಹುದು?

10. ಚಿಕ್ಕದಾದ ಸೈಡ್ ಮಿರರ್
ಹಿಂದುಗಡೆಯಿಂದ ಬರುತ್ತಿರುವ ವಾಹನಗಳ ಸ್ಪಷ್ಟ ವೀಕ್ಷಣೆಗೆ ಸೈಡ್ ಮಿರರ್ ಗಳ ಪಾತ್ರ ಬಹು ಮುಖ್ಯವಾಗಿರುತ್ತದೆ. ಆದರೆ ಇಂತಹ ಗಾಜುಗಳ ಆಕಾರವು ಚಿಕ್ಕದಾದ್ದಲ್ಲಿ ನಿಮ್ಮಲ್ಲಿ ಕೋಪ ಭರಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಎಎಂಟಿ ಕುರಿತಾಗಿ ನೀವು ತಿಳಿದುಕೊಳ್ಳಲೇಬೇಕಾದ 10 ಅಂಶಗಳು


Click it and Unblock the Notifications








