ಜಗತ್ತಿನ ಅಗ್ರ 10 ಪ್ರಯಾಣಿಕ ವಾಣಿಜ್ಯ ವಿಮಾನಗಳು
ಹಾಲಿಡೇ ಪ್ರವಾಸ ಹೋಗುವ ಯೋಜನೆಯಲ್ಲಿದ್ದೀರಾ ? ಇಲ್ಲಿ ಕೊಡಲಿರುವ ಅಗ್ರ 10 ಪ್ರಯಾಣಿಕ ವಾಣಿಜ್ಯ ವಾಹನಗಳು ನಿಮ್ಮ ನೆರವಿಗೆ ಬರಲಿದೆ. ಆರಾಮ, ಅನುಕೂಲಕರ ಪ್ರಯಾಣವನ್ನು ಒದಗಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿರುವ ವಿಮಾನಗಳನ್ನು ನಾವಿಲ್ಲಿ ಚರ್ಚಿಸಲಿದ್ದೇವೆ.
Also Read: ಜಗತ್ತಿನ ಅತಿ ಅಪಾಯಕಾರಿ ಪ್ರಯಾಣಿಕ ವಿಮಾನಗಳು
ಆಧುನಿಕ ಸಂಚಾರ ವಾಹಕಗಳಲ್ಲಿ ವಿಮಾನಗಳ ಪಾತ್ರ ಗಮನಾರ್ಹವೆನಿಸಿದ್ದು, 20ನೇ ಶತಮಾನದಲ್ಲಿ ಅತಿ ಹೆಚ್ಚಿನ ಬದಲಾವಣೆಗಳನ್ನು ಕಂಡಿದೆ. ಅತಿ ದೂರದ ಪ್ರದೇಶವನ್ನು ವಾಯು ಮಾರ್ಗದ ಮೂಲಕ ಕೆಲವೇ ಗಂಟೆಗಳಲ್ಲಿ ಸಂಪರ್ಕಿಸುವ ಮೂಲಕ ರಾಷ್ಟ್ರಗಳ ನಡುವಣ ಅಂತರವೂ ಕಡಿಮೆಯಾಗಿದ್ದು, ಇದರಿಂದಾಗಿ ವಿದೇಶಗಳಲ್ಲಿ ಕೆಲಸ ಹುಡುಕಿ ತೆರಳುವವರ ಸಂಖ್ಯೆಯಲ್ಲೂ ಗಣನೀಯ ವರ್ಧನೆಯುಂಟಾಗಿದೆ.

10. ಮೆಕ್ ಡೊನೆಲ್ ಡಗ್ಲಾಸ್ ಡಿಸಿ-10
ಮೆಕ್ ಡೊನೆಲ್ ಡಗ್ಲಾಸ್ ನಿರ್ಮಿತ ಮೆಕ್ ಡೊನೆಲ್ ಡಗ್ಲಾಸ್ ಡಿಸಿ-10 (McDonnell Douglas DC-10) ಗರಿಷ್ಠ 380 ಪ್ರಯಾಣಿಕರನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ.

ಮೆಕ್ ಡೊನೆಲ್ ಡಗ್ಲಾಸ್ ಡಿಸಿ-10
1968ರಲ್ಲಿ ನಿರ್ಮಿತ ಈ ವಿಮಾನವು 1970ರಲ್ಲಿ ಮೊದಲ ಹಾರಾಟವನ್ನು ನಡೆಸಿತ್ತು. ಮೂರು ಎಂಜಿನ್ ಗಳಿಂದ ನಿಯಂತ್ರಿತ ಅಮೆರಿಕ ಮೂಲದ ಈ ವಿಮಾನವನ್ನು ಬಳಿಕ ಡಿಸಿ 10 ಹಿಮ್ಮೆಟ್ಟಿಸಿದೆ.

09. ಏರ್ ಬಸ್ ಎ320
ಏರ್ ಫ್ರಾನ್ಸ್‌ನ ಏರ್ ಬಸ್ ಎ320 ಒಂದು ಬಹು ರಾಷ್ಟ್ರೀಯ ವಿಮಾನವಾಗಿದ್ದು 1987ನೇ ಇಸವಿಯಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿತ್ತು. ಏರ್ ಬಸ್ ಎ318, ಎ319, ಎ320 ಮತ್ತು ಎ321 ಇದೇ ಸಾಲಿಗೆ ಸೇರಿದ ವಿಮಾನಗಳಾಗಿವೆ.

ಏರ್ ಬಸ್ ಎ320
3000ದಿಂದ 12000 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸುವ ಸಾಮರ್ಥ್ಯವುಳ್ಳ ಏರ್ ಬಸ್ ವಿಮಾನ 220 ಪ್ರಯಾಣಿಕರನ್ನು ಹೊತ್ಯೊಯ್ಯುವಷ್ಟು ಸಕ್ಷಮವಾಗಿದೆ.

08. ಏರ್ ಬಸ್ ಎ330
ಏರ್ ಬಸ್ ಎ330 ಒಂದು ದೂರ ವ್ಯಾಪ್ತಿಯ ಟ್ವಿನ್ ಎಂಜಿನ್ ನಿಯಂತ್ರಿತ ಜೆಟ್ ಏರ್ ಲೈನರ್ ವಿಮಾನವಾಗಿದೆ. ಏರ್ ಬಸ್ ನಿರ್ಮಿತ ಈ ವಿಮಾನವು 5,600ದಿಂದ 13,430 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಏರ್ ಬಸ್ ಎ330
335 ಪ್ರಯಾಣಿಕರನ್ನು ಅಥವಾ 70 ಟನ್ ತೂಕವನ್ನು ಹೊತ್ಯೊಯ್ಯುವ ಸಾಮರ್ಥ್ಯವನ್ನು ಏರ್ ಬಸ್ ಎ330 ಹೊಂದಿದೆ. 1992ರಲ್ಲಿ ಮೊದಲ ಹಾರಾಟ ನಡೆಸಿರುವ ಏರ್ ಬಸ್ ಎ330 ಈಗಲೂ ಬಳಕೆಯಲ್ಲಿದೆ.

07. ಕಾನ್‌ಕಾರ್ಡ್
ಟರ್ಬೊಜೆಟ್ ನಿಯಂತ್ರಿತ ಸೂಪರ್ ಸೋನಿಕ್ ಪ್ರಯಾಣಿಕ ಜೆಟ್ ಏರ್ ಲೈನರ್ ವಿಮಾನ ಇದಾಗಿದ್ದು, 1969ರಲ್ಲಿ ಮೊದಲ ಹಾರಾಟ ನಡೆಸಿತ್ತು.

ಕಾನ್‌ಕಾರ್ಡ್
ಬ್ರಿಟನ್ ಹಾಗೂ ಫ್ರಾನ್ಸ್ ಪ್ರಾಥಮಿಕ ಬಳಕೆದಾರರಾಗಿರುವ ಕಾನ್ ಕಾರ್ಡ್ ವಿಮಾನದಲ್ಲಿ 92ರಿಂದ 128 ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

06. ಮೆಕ್ ಡೊನೆಲ್ ಡಗ್ಲಾಸ್ ಎಂಡಿ-11
ಮೆಕ್ ಡೊನೆಲ್ ಡಗ್ಲಾಸ್ ಎಂಡಿ-10 ಉತ್ತರಾಧಿಕಾರಿಯಾಗಿರುವ ಎಡಿ-11, ಮೂರು ಎಂಜಿನ್ ನಿಯಂತ್ರಿತ ಪ್ರಯಾಣಿಕ ಹಾಗೂ ಸರಕು ಸಾಗಾಣಿಕಾ ವಿಮಾನವಾಗಿದೆ. ಇದರ ಎರಡು ಎಂಜಿನ್ ಗಳನ್ನು ರೆಕ್ಕೆಗಳ ಕೆಳಗೂ ಮೂರನೇಯದನ್ನು ಹಿಂಭಾಗದಲ್ಲೂ ಲಗತ್ತಿಸಲಾಗಿದೆ.

ಎಂಡಿ 11
ಸಂಪೂರ್ಣ ಡಿಜಿಟಲ್ ಗ್ಲಾಕ್ ಕಾಕ್ ಪಿಟ್ ವ್ಯವಸ್ಥೆಯನ್ನು ಹೊಂದಿರುವ ಎಂಡಿ11 ಇದುವರೆಗೆ 200 ಯುನಿಟ್ ಗಳಷ್ಟು ನಿರ್ಮಾಣವಾಗಿದ್ದು, ಲೂಫ್ತಾನ್ಸಾ ಕಾರ್ಗೊ ಮುಂತಾದ ಏರ್ ಲೈನರ್ ಗಳನ್ನು ಪ್ರಾಥಮಿಕ ಬಳಕೆದಾರರಾಗಿದ್ದಾರೆ.

05. ಬೋಯಿಂಗ್ 787 ಡ್ರೀಮ್ ಲೈನರ್
ದೂರವ್ಯಾಪ್ತಿ ವಿಶಾಲವಾದ ದೇಹ ರಚನೆ ಹೊಂದಿರುವ ಟ್ವಿನ್ ಎಂಜಿನ್ ನಿಯಂತ್ರಿತ ಬೋಯಿಂಕ್ 787 ಡ್ರೀಮ್ ಲೈನರ್ ವಿಮಾನವನ್ನು ಬೋಯಿಂಗ್ ಕಮರ್ಷಿಯಲ್ ಏರ್ ಪ್ಲೇನ್ಸ್ ಅಭಿವೃದ್ಧಿಪಡಿಸಿದೆ. ಇದರಲ್ಲಿ 242ರಿಂದ 335 ಪ್ರಯಾಣಿಕರಿಗೆ ಸಂಚರಿಸಬಹುದಾಗಿದೆ.

ಬೋಯಿಂಗ್ 787
ಜಗತ್ತಿನ ಅತ್ಯುತ್ತಮ ಇಂಧನ ಕ್ಷಮತೆಯ ವಿಮಾನಗಳಲ್ಲಿ ಒಂದಾಗಿರುವ ಬೋಯಿಂಗ್ 787, 2009ರಲ್ಲಿ ಮೊದಲ ಹಾರಾಟವನ್ನು ನಡೆಸಿತ್ತು. ಭಾರತದ ಏರ್ ಇಂಡಿಯಾ ಸಹ ಇದರ ಬಳಕೆಯನ್ನು ಹೊಂದಿದೆ.

04. ಬೋಯಿಂಗ್ 737
ಕಡಿಮೆ ಹಾಗೂ ಮಧ್ಯಮ ವ್ಯಾಪ್ತಿಯ ಬೋಯಿಂಗ್ 737 ಟ್ವಿನ್ ಜೆಟ್ ಎಂಜಿನ್ ನಿಯಂತ್ರಿತ ವಿಮಾನವಾಗಿದೆ. ಇದು 85ರಿಂದ 215 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಬೋಯಿಂಗ್ 737
ಬೋಯಿಂಗ್ ಕಮರ್ಷಿಯಲ್ ಏರ್ ಪ್ಲೇನ್ಸ್ ನಿರ್ಮಿತ ಬೋಯಿಂಗ್ 737 ತವರೂರಾದ ಅಮೆರಿಕನ್ ಏರ್ ಲೈನ್ಸ್ ಸೇವೆಯಲ್ಲಿದೆ. ಇದು 1967ನೇ ಇಸವಿಯಲ್ಲಿ ಮೊದಲ ಹಾರಾಟ ನಡೆಸಿತ್ತು.

03. ಏರ್ ಬಸ್ ಎ380
ಡಬಲ್ ಡೆಕ್, ವಿಶಾಲ ದೇಹ ರಚನೆ ಹಾಗೂ ನಾಲ್ಕು ಎಂಜಿನ್ ಗಳಿಂದ ನಿರ್ಮಿತ ಈ ಬಹು ರಾಷ್ಟ್ರೀಯ ಜೆಟ್ ಏರ್ ಲೈನರ್ ವಿಮಾನವನ್ನು ಯುರೋಪ್ ವಿಮಾನಯಾನ ಸಂಸ್ಥೆ ಏರ್ ಬಸ್ ನಿರ್ಮಿಸಿದೆ.

ಏರ್ ಬಸ್ ಎ380
2005 ಎಪ್ರಿಲ್ 27ರಂದು ಮೊದಲ ಹಾರಾಟ ನಡೆಸಿರುವ ಏರ್ ಬಸ್ ಎ380 ಲೂಫ್ತಾನ್ಸಾ ಜೊತೆಗೆ ಸಿಂಗಾಪುರ ಏರ್ ಲೈನ್ಸ್ ಹಾಗೂ ಎಮಿರೇಟ್ಸ್ ಸಂಸ್ಥೆಗಳ ಸೇವೆಯಲ್ಲಿದೆ.

02. ಬೋಯಿಂಗ್ 777
ದೂರಗಾಮಿ ಟ್ವಿನ್ ಎಂಜಿನ್ ನಿಯಂತ್ರಿತ ಬೋಯಿಂಗ್ 777 ವಿಮಾನವು 314ರಿಂದ 451 ಪ್ರಯಾಣಿಕರನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 9,695ರಿಂದ 15,844 ಕೀ.ಮೀ. ವ್ಯಾಪ್ತಿಯ ವರೆಗೆ ಸಂಚರಿಸಬಹುದಾಗಿದೆ.

ಬೋಯಿಂಗ್ 777
1994ನೇ ಇಸವಿಯಲ್ಲಿ ಮೊದಲ ಹಾರಾಟ ನಡಿಸಿರುವ ಬೋಯಿಂಗ್ 777 ಅಮೆರಿಕ ಜೊತೆಗೆ, ಏರ್ ಫ್ರಾನ್ಸ್ ಹಾಗೂ ಎಮಿರೇಟ್ಸ್ ಸಂಸ್ಥೆಗಳ ಸೇವೆಯಲ್ಲಿದೆ.

01. ಬೋಯಿಂಗ್ 747
ಮೇಲಿನ ಪಟ್ಟಿಯಿಂದಲೇ ಅಮೆರಿಕ ಮೂಲಕ ಬೋಯಿಂಗ್ ಕಮರ್ಷಿಯಲ್ ಏರ್ ಪ್ಲೇನ್ ವಿಮಾನಯಾನ ಸಂಸ್ಥೆಯು ಹೇಗೆ ಜಗತ್ತಿನ ಅತಿ ಶ್ರೇಷ್ಠ ಪ್ರಯಾಣಿಕ ವಿಮಾನಗಳಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಪ್ರಸ್ತುತ ಬೋಯಿಂಗ್ 747 ಮೊದಲ ಬಾರಿಗೆ 1970ನೇ ಇಸವಿಯಲ್ಲಿ ಪರಿಚಯವಾಗಿತ್ತು.

ಬೋಯಿಂಗ್ 747
ಜಂಬೋ ಜೆಟ್ ಹಾಗೂ ಕ್ವೀನ್ ಆಫ್ ದಿ ಸ್ಕೈಸ್ ಎಂಬ ಅಕ್ಕರೆಯ ಹೆಸರನ್ನು ತನ್ನದಾಗಿಸಿಕೊಂಡಿರುವ ಬೋಯಿಂಗ್ 747 ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಾನ್ಯತೆ ಪಡೆದ ವಿಮಾನಗಳಲ್ಲಿ ಒಂದಾಗಿದೆ. ಇದು 8350 ಕೀ.ಮೀ.ಗಳಿಂದ 13,450 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

ಪ್ರಪಂಚದ 19 ನಾನ್-ಸ್ಟಾಪ್ ವಿಮಾನಯಾನಗಳು! ಮುಂದಕ್ಕೆ ಓದಿ


Click it and Unblock the Notifications








