ಆಟೋಮೊಬೈಲ್ ಕ್ಷೇತ್ರದ 10 ಅತಿ ದೊಡ್ಡ ಹಗರಣಗಳು

By Nagaraja

ಡೀಸೆಲ್ ಕಾರುಗಳನ್ನು ಹೆಚ್ಚು ಪರಿಸರ ಸ್ನೇಹಿ ಎಂದು ತೋರಿಸುವುದಕ್ಕಾಗಿ ಕಾರಿನಲ್ಲಿ ವಿಶೇಷ ಸಾಫ್ಟ್‌ವೇರ್ ತಂತ್ರಾಂಶವನ್ನು ಆಳವಡಿಸುವ ಮೂಲಕ ಮಹಾ ಮಾಲಿನ್ಯ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಫೋಕ್ಸ್ ವ್ಯಾಗನ್ ಮೋಸದ ಪ್ರಕರಣ ಹಚ್ಚ ಹಸಿರಾಗಿರುವಂತೆಯೇ ವಾಹನ ಇತಿಹಾಸದಲ್ಲಿ ದಾಖಲಾಗಿರುವ ಅಗ್ರ 10 ಹಗರಣ ಪ್ರಕರಣಗಳ ಬಗ್ಗೆ ಮೆಲುಕು ಹಾಕುವ ಪ್ರಯತ್ನವನ್ನು ಇಲ್ಲಿ ಮಾಡಲಿದ್ದೇವೆ.

Also Read : ಫೋಕ್ಸ್‌ವ್ಯಾಗನ್ ಮೋಸದಾಟ ಬಯಲಿಗೆಳೆದಿದ್ದು ಭಾರತೀಯ - ಮುಂದಕ್ಕೆ ಓದಿ

ಅಮೆರಿಕ ಪರಿಸರ ಸಂರಕ್ಷಣಾ ಇಲಾಖೆಯು ಫೋಕ್ಸ್ ವ್ಯಾಗನ್ ಪ್ರಕರಣ ಬಯಲಿಗೆ ತಂದಿತ್ತು. ಅಮೆರಿಕ ಮಾಲಿನ್ಯ ತಪಾಸನೆಯ ಮಾನದಂಡ (ಎಮಿಷನ್ ಟೆಸ್ಟ್) ಮರೆಮಾಚಲು ಫೋಕ್ಸ್‌ವ್ಯಾಗನ್ ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಬಳಕೆ ಮಾಡಿತ್ತು. ಇದರಿಂದ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದುತ್ತಿದ್ದವು. ನೈಜ ಪರಿಸ್ಥಿತಿಯಲ್ಲಿ ಪ್ರಾಯೋಗಾಲಯದಲ್ಲಿ ಕೊಡುವ ಕ್ಷಮತೆಗೂ, ರಸ್ತೆಯ ಮೇಲೆ ಬಂದಾಗ ತೋರಿಸುವ ಕ್ಷಮತೆಗೂ ವ್ಯತ್ಯಾಸಗಳು ಕಂಡುಬಂದಿತ್ತು. ಇದು ಇಪಿಎ ಸ್ಟ್ಯಾಂಡರ್ಡ್ ಮಟ್ಟಕ್ಕಿಂತಲೂ 10ರಿಂದ 40 ಪಟ್ಟು ಹೆಚ್ಚಾಗಿದ್ದವು. ಅಂದ ಹಾಗೆ ವಾಹನ ಜಗತ್ತಿನಲ್ಲಿ ಇದು ಮೊದಲ ಬಾರಿಯೇನಲ್ಲ ಇಂತಹ ಹಗರಣಗಳು ದಾಖಲಾಗುತ್ತಿದ್ದವು. ಈ ಬಗೆಗಿನ ಸಮಗ್ರ ಮಾಹಿತಿಗಾಗಿ ಚಿತ್ರಪುಟವನ್ನು ಸಂದರ್ಶಿಸಿರಿ.

01. ಟಕ್ಕರ್ 48

01. ಟಕ್ಕರ್ 48

ಎರಡನೇ ಮಹಾಯುದ್ಧದ ಬಳಿಕ ಅಮೆರಿಕದ ಆಟೋಮೊಬೈಲ್ ವಿನ್ಯಾಸಗಾರ ಹಾಗೂ ಉದ್ಯಮಿ ಪ್ರೆಸ್ಟನ್ ಟಕ್ಕರ್ ( Preston Tucker) ನೂತನ ಆಟೋಮೊಬೈಲ್ ಬ್ರಾಂಡ್ ವೊಂದವನ್ನು ಮಾರುಕಟ್ಟೆಗೆ ತರುವ ಪ್ರಯತ್ನ ಮಾಡಿದ್ದರು. ಆದರೆ ದುರದೃಷ್ಟವಶಾತ್ ಅವರ ಆಸೆ ಈಡೇರಲಿಲ್ಲ. ಟಕ್ಕರ್ ಅವರಲ್ಲಿ ಎಷ್ಟೊಂದು ಆತ್ಮವಿಶ್ವಾಸ ಅಡಗಿತ್ತೆಂದರೆ ತಮ್ಮ ಬ್ರಾಂಡ್ ಅಸ್ತಿತ್ವಕ್ಕೆ ಬರುವ ಮೊದಲೇ ಡೀಲರ್ ಶಿಪ್ ಪರವಾನಗಿಯನ್ನು ಮಾರಿ ಬಿಟ್ಟಿದ್ದರು. ಅಲ್ಲದೆ ಅವರ ಮೇಲೆ ಶೇರು ಅವ್ಯವಹಾರದ ಆಪಾದನೆ ಹಿನ್ನೆಲೆಯಲ್ಲಿ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್ ಚೇಂಜ್ ಕಮಿಷನ್ ತನಿಖೆಯನ್ನು ನಡೆಸಿತ್ತಾದರೂ ಅಂತಿಮವಾಗಿ ಖುಲಾಸೆಗೊಂಡಿದ್ದರು.

02. ಫೋರ್ಡ್ ಪಿಂಟೊ

02. ಫೋರ್ಡ್ ಪಿಂಟೊ

1977ರಲ್ಲಿ ಫೋರ್ಡ್ ಪಿಂಟೊ ಕರಾಳ ಮುಖವನ್ನು ಮದರ್ ಜಾನ್ಸ್ ನಿಯತಕಾಲಿಕವು ತೆರೆದಿತ್ತು. ವರದಿಯ ಪ್ರಕಾರ ಫೋರ್ಡ್ ಮೋಟಾರು ಕಂಪನಿಯು ಮಾರಾಟ ಮಾಡುತ್ತಿದ್ದ ಪಿಂಟೊ ಕಾರಿನಲ್ಲಿ ಅಪಘಾತದ ವೇಳೆ ಸಂಭವಿಸುತ್ತಿದ್ದ ತಾಂತ್ರಿಕ ದೋಷದಿಂದಾಗಿ ಕಾರಿಗೆ ಬೇಗನೇ ಬೆಂಕಿ ಹಚ್ಚಿಕೊಳ್ಳುತ್ತಿತ್ತು. ಪರಿಣಾಮ ಹಲವು ಅಪಘಾತ ಪ್ರಕರಣಗಳಲ್ಲಾಗಿ ನೂರಾರು ಮಂದಿ ಸಾವಿಗೀಡಾಗಿದ್ದರು. ಇಷ್ಟೆಲ್ಲ ಆದರೂ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಫೋರ್ಡ್ ಸಂಸ್ಥೆಯು ಪಿಂಟೊ ನಿರ್ಮಾಣವನ್ನು ಮುಂದುವರಿಸಿರುವುದು ಟೀಕೆಗೆ ಗ್ರಾಸವಾಗಿತ್ತು.

03. ಫೋರ್ಡ್ ನಿಲುಗಡೆ ತೊಂದರೆ

03. ಫೋರ್ಡ್ ನಿಲುಗಡೆ ತೊಂದರೆ

1980ರಲ್ಲಿ ಮಗದೊಮ್ಮೆ ಫೋರ್ಡ್ ಕಾರುಗಳು ಪಾರ್ಕಿಂಗ್ ತೊಂದರೆಯನ್ನು ಎದುರಿಸಿದ್ದವು. ವರದಿಗಳ ಪ್ರಕಾರ ಫೋರ್ಡ್ ಗೇರ್ ಬಾಕ್ಸ್ ಸಮಸ್ಯೆಯಿಂದಾಗಿ 23,000 ತೊಂದರೆಗಳು ದಾಖಲಾಗಿದ್ದವು. ಅದೇ ಸಾಲಿನಲ್ಲಿ ಹೊಸ ವರದಿಯೊಂದಿಗೆ ಬಂದಿದ್ದ ಮಥರ್ ಜೋನ್ಸ್ ನಿಯತಕಾಲಿಕವು ಪ್ರಸ್ತುತ ತೊಂದರೆಯು ದಶಕಗಳಿಂದಲೂ ಗೇರ್ ಬಾಕ್ಸ್ ಸಮಸ್ಯೆ ಕಾಡುತ್ತಿದೆ ಎಂದಿತ್ತು. ಪರಿಣಾಮ 1966ರಿಂದ 1980ರ ವರೆಗೆ ನಿರ್ಮಾಣವಾದ 20 ದಶಲಕ್ಷ ವಾಹನಗಳಲ್ಲಿ ಸಮಸ್ಯೆಯಿದೆ ಎಂಬುದು ಅಂದಾಜಿಸಲಾಗಿತ್ತು. ಆದರೆ ಕಾರನ್ನು ಹಿಂಪಡೆದು ಸಮಸ್ಯೆ ಬಗೆ ಹರಿಸುವ ಬದಲು ಫೋರ್ಡ್ ಸಂಸ್ಥೆಯು ಕಾರು ಹಿಂಭಾಗದಲ್ಲಿ ವಾರ್ನಿಂಗ್ ಸ್ಟಿಕ್ಕರ್ ಮಾತ್ರ ಅಂಟಿಸಿಕತ್ತು.

 04. ಆಡಿ ಆಕಸ್ಮಿಕ ವೇಗವರ್ಧನೆ

04. ಆಡಿ ಆಕಸ್ಮಿಕ ವೇಗವರ್ಧನೆ

1986ರಲ್ಲಿ ಆಡಿ 5000 ಸಡನ್ ವೇಗವರ್ಧನೆ ಬಗ್ಗೆ ಸಿಬಿಎಸ್ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಕೆಲವೊಂದು ಬಾರಿ ಸಡನ್ ಆಗಿ ವೇಗವರ್ಧಿಸುವ ಕಾರು ಚಾಲಕನ ನಿಯಂತ್ರಣ ತಪ್ಪಲು ಎಡೆ ಮಾಡುತ್ತಿತ್ತು. ಪರಿಣಾಮ 1984ರಲ್ಲಿ 74000 ಯುನಿಟ್ ಗಳಿಷ್ಟಿದ್ದ ಆಡಿ ಮಾರಾಟವು 1991ರ ವೇಳೆಯಾಗುವಾಗ 12,000 ಯುನಿಟ್ ಗಳಿಗೆ ಇಳಿಕೆಯಾಗಿದ್ದವು.

05. ಟಕಟ ಸೀಟು ಬೆಲ್ಟ್

05. ಟಕಟ ಸೀಟು ಬೆಲ್ಟ್

ಜಪಾನ್ ಮೂಲದ ಬಿಡಿಭಾಗ ತಯಾರಿಕ ಸಂಸ್ಥೆಯಾಗಿರುವ ಟಕಟ ಸೀಟು ಬೆಲ್ಟ್ ನಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ 1986ರಿಂದ 1991ರ ಅವಧಿಯಲ್ಲಿ ಎಂಟು ಮಿಲಿಯನ್ ಗಳಷ್ಟು ಕಾರುಗಳನ್ನು ಹಿಂಪಡೆಯಲಾಗಿತ್ತು. ಇದು 30 ವರ್ಷಗಳಲ್ಲೇ ಸಂಭವಿಸಿರುವ ಎರಡನೇ ಅತಿ ದೊಡ್ಡ ಭದ್ರತಾ ರಿಕಾಲ್ ಆಗಿತ್ತು. ಅಂದು ದಾಖಲಾಗಿದ್ದ 700ರಷ್ಟು ಪ್ರಕರಣಗಳಲ್ಲಿ 60ರಷ್ಟು ಮಂದಿ ಗಾಯಗೊಂಡಿದ್ದರು.

06. ಫೋರ್ಡ್ ಫೈರ್ ಸ್ಟೋನ್ ಚಕ್ರ

06. ಫೋರ್ಡ್ ಫೈರ್ ಸ್ಟೋನ್ ಚಕ್ರ

ಈ ಬಾರಿ ಫೋರ್ಡ್ ಜೊತೆಗೆ ಚಕ್ರ ನಿರ್ಮಾಣ ಸಂಸ್ಥೆ ಫೋರ್ ಸ್ಟೋನ್ ವಿರುದ್ಧ ಎನ್‌ಎಚ್‌ಟಿಎಸ್‌ಎ ತನಿಖೆ ಕೈಗೆತ್ತಿಕೊಂಡಿತ್ತು. ಯಾಕೆಂದರೆ ಫೋರ್ಡ್ ಕಾರಿನಲ್ಲಿ ಆಳವಡಿಸಲಾಗಿದ್ದ ಫೈರ್ ಸ್ಟೋನ್ ಚಕ್ರಗಳಿಂದಾಗಿ ಸಂಭವಿಸಿದ್ದ ಉರುಳುವಿಕೆ ತೊಂದರೆಯಿಂದಾಗಿ ಅನೇಕ ಮಂದಿ ಸಾವಿಗೀಡಾಗಿದ್ದರು. ಪರಿಣಾಮ 6.5 ಮಿಲಿಯನ್ ಚಕ್ರಗಳನ್ನು ಹಿಂಪಡೆಯುವಲ್ಲಿ ಫೈರ್ ಸ್ಟೋನ್ ನಿರ್ಬಂಧಿತವಾಗಿತ್ತು. ತದಾ ಬೆನ್ನಲ್ಲೇ ಫೋರ್ಡ್ ಸಹ 13 ಮಿಲಿಯನ್ ಚಕ್ರಗಳನ್ನು ಹಿಂಪಡೆದಿತ್ತು.

07. ಡೈಮ್ಲರ್ ಲಂಚ ಪ್ರಕರಣ

07. ಡೈಮ್ಲರ್ ಲಂಚ ಪ್ರಕರಣ

2010ರಲ್ಲಿ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ ಡೈಮ್ಲರ್ ನಡೆಸಿರುವ ಕಾನೂನು ಬಾಹಿರ ವ್ಯವಹಾರದಲ್ಲಿ 1.9 ಮಿಲಿಯನ್ ಅಮೆರಿಕನ್ ಡಾಲರ್ ತೆರಿಗೆ ಹಾಗೂ 90 ಮಿಲಿಯನ್ ಅಮೆರಿಕನ್ ಡಾಲರ್ ಸಂಪತ್ತನ್ನು ಸಂಗ್ರಹಿಸಿತ್ತು. ಕೊನೆಗೂ ಪ್ರಕರಣ ಇತ್ಯರ್ಥಗೊಳಿಸುವಲ್ಲಿ ಡೈಮ್ಲರ್ ಯಶಸ್ವಿಯಾಗಿರುವುದು ವಿಶೇಷ.

08. ಟೊಯೊಟಾದ ಆಕಸ್ಮಿಕ ವೇಗೋತ್ಕರ್ಷ

08. ಟೊಯೊಟಾದ ಆಕಸ್ಮಿಕ ವೇಗೋತ್ಕರ್ಷ

ಆಡಿಗೆ ಸಮಾನವದ ರೀತಿಯಲ್ಲಿ ಟೊಯೊಟಾ ಕಾರುಗಳಲ್ಲಿ ಆಕಸ್ಮಿಕ ವೇಗೋತ್ಕರ್ಷ ತೊಂದರೆಗಳು ಕಾಣಿಸಿಕೊಂಡಿದ್ದವು. ಪರಿಣಾಮ 2009 ಹಾಗೂ 2010ರಲ್ಲಿ ಒಂಬತ್ತು ದಶಲಕ್ಷ ವಾಹನಗಳನ್ನು ಹಿಂಪಡೆಯಲಾಗಿತ್ತು.

09. ಜನರಲ್ ಮೋಟಾರ್ಸ್ ಇಗ್ನಿಷನ್ ಸ್ವಿಚ್

09. ಜನರಲ್ ಮೋಟಾರ್ಸ್ ಇಗ್ನಿಷನ್ ಸ್ವಿಚ್

2001ರಲ್ಲಿ ಜನರಲ್ ಮೋಟಾರ್ಸ್ ಎಂಜಿನಿಯರ್ ಗಳು ಸಟರ್ನ್ ಇಯಾನ್ ಕಾರಿನಲ್ಲಿ ಇಗ್ನಿಷನ್ ತೊಂದರೆಯನ್ನು ಪತ್ತೆ ಹಚ್ಚಿದ್ದರು. ವಿನ್ಯಾಸವನ್ನು ಪರಿಷ್ಕೃತಗೊಳಿಸುವ ಮೂಲಕ ಇದಕ್ಕೆ ತಾತ್ಕಾಲಿಕ ಪರಿಹಾರ ಕಂಡು ಹುಡುಕಿದಾದರೂ 2004-2005ರಲ್ಲೂ ಕೋಬಾಲ್ಟ್ ಮಾದರಿಗಳಲ್ಲೂ ಇದಕ್ಕೆ ಸಮಾನವಾದ ಸಮಸ್ಯೆ ಹುಟ್ಟಿಕೊಂಡಿತ್ತು. ಪರಿಣಾಮ ಅನೇಕ ಅಪಘಾತ ಪ್ರಕರಣದಿಂದಾಗಿ ಹಲವಾರು ಮಂದಿ ತಮ್ಮ ಜೀವವನ್ನೇ ತೆರುವಂತಾಗಿತ್ತು. ಪ್ರಸ್ತುತ ಪ್ರಕರಣದಲ್ಲಿ ಷೆವರ್ಲೆ ಬಹು ಕೋಟಿ ಮೊತ್ತಗಳನ್ನು ದಂಡವಾಗಿ ವಿಧಿಸಲಾಗಿತ್ತು. ಅಲ್ಲದೆ 2014ರಲ್ಲಿ ಹೇಳಿಕೆ ಹೊರಡಿಸಿದ್ದು ಸಂಸ್ಥೆಯು 2004ರಿಂದ ನಿರ್ಮಾಣವಾದ ಮಿಲಿಯನ್ ಗಳಷ್ಟು ವಾಹನಗಳನ್ನು ಹಿಂಪಡೆಯಲು ನಿರ್ಧರಿಸಿದ್ದರು.

10. ಟಕಟ ಏರ್ ಬ್ಯಾಗ್

10. ಟಕಟ ಏರ್ ಬ್ಯಾಗ್

ನೀವು ಯಾರು ಟಕಟ ಏರ್ ಬ್ಯಾಗ್ ಸಮಸ್ಯೆಯನ್ನು ಮರೆತಿರಲಿಕ್ಕಿಲ್ಲ. ಪದೇ ಪದೇ ಸುದ್ದಿಗೆ ಕಾರಣವಾಗುತ್ತಿರುವ ಟಕಟ ಏರ್ ಬ್ಯಾಗ್ ಸಮಸ್ಯೆಯಿಂದಾಗಿ 10ಕ್ಕೂ ಹೆಚ್ಚು ಸಂಸ್ಥೆಗಳು ಅಮೆರಿಕದಲ್ಲಿ ಈಗಾಗಲೇ 30 ದಶಲಕ್ಷಗಿಂತಲೂ ಹೆಚ್ಚಿನ ಕಾರುಗಳನ್ನು ಹಿಂಪಡೆದಿದೆ.

ಇವನ್ನೂ ಓದಿ

ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು? ಮುಂದಕ್ಕೆ ಓದಿ


More from DriveSpark

Article Published On: Tuesday, September 29, 2015, 15:04 [IST]
English summary
Ten Biggest Automotive Scandals Ever
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+