ಎಚ್ಚರ..! ನಡು ರಸ್ತೆಯಲ್ಲಿ ಭೂತ, ಪ್ರೇತಗಳ ತಿರುಗಾಟ

By Nagaraja

ವೈಜ್ಞಾನಿಕ ಯುಗದಲ್ಲೂ ಮೂಢ ನಂಬಿಕೆಗಳ ಬೆನ್ನತ್ತಿ ಹೋಗುವ ಮಾನವರಿಗೆ ಭೂತ, ಪ್ರೇತ, ಪಿಶಾಚಿಗಳ ಕಾಟ ತಪ್ಪಿದ್ದಲ್ಲ. ದೈವ್ವ, ಭೂತ, ಪ್ರೇತ, ಪಿಶಾಚಿ ಇವೆಲ್ಲ ಇದೆಯಾ ಎಂಬುದು ಇನ್ನು ಅಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಅಚಾನಕ್ ಆಗಿ ಎದುರಾಗುವ ಕೆಲವೊಂದು ಘಟನೆಗಳನ್ನು ನೋಡಿದಾಗ ಭೂತ, ಪ್ರೇತ ಭ್ರಮೆಯನ್ನು ಒಪ್ಪಲೇಬೇಕಾಗುತ್ತದೆ. ಇವುಗಳನ್ನು ಆತ್ಮದ ಪ್ರತಿರೂಪವೆಂದು ಬಿಂಬಿಸಲಾಗುತ್ತಿದೆ.

ಸಂಶೋಧಕರ ಪ್ರಕಾರ ಜನರು ಮಾನಸಿಕ ಭಯವನ್ನು ಬಿಟ್ಟು ನಿಶ್ಚಿಂತತೆಯಿಂದ ಜೀವನ ನಡೆಸಿದರೆ ಮಾತ್ರ ಇದರಿಂದ ಮುಕ್ತಿ ಪಡೆಯಲು ಸಾಧ್ಯ. ಆಹೋರಾತ್ರಿ ಸಂಚರಿಸುವಾಗ ನಡು ರಸ್ತೆಯಲ್ಲಿ ಪ್ರೇತಗಳ ಕಾಟ ಎದುರಾದರೆ ಏನು ಮಾಡುವೀರಾ? ಇಂತಹದೊಂದು ಆಸಕ್ತಿದಾಯಕ ಕಥೆಯೊಂದಿಗೆ ನಾವು ನಿಮ್ಮ ಮುಂದೆ ಬಂದಿರುತ್ತೇವೆ.

01. ನಿಗೂಢ ಸುರಂಗ ಮಾರ್ಗ

01. ನಿಗೂಢ ಸುರಂಗ ಮಾರ್ಗ

ಕಲ್ಕಾ-ಶಿಮ್ಲಾ ರೈಲು ಹಳಿಯಲ್ಲಿ ಹಾದು ಹೋಗುತ್ತಿರುವ ಬರಗ್ ರೈಲ್ವೇ ಸುರಂಗ ಮಾರ್ಗವು ಹಲವಾರು ಸಂಶಯಗಳನ್ನು ಹುಟ್ಟು ಹಾಕಿವೆ. ಬ್ರಿಟಿಷ್ ಆಡಳಿತ ಕಾಲದಲ್ಲಿ ಇಲ್ಲಿನ ಸುರಂಗ ಮಾರ್ಗ ನಿರ್ಮಾಣದ ವೇಳೆ ವ್ಯಕ್ತಿಯೋರ್ವರು ಮೃತಪಟ್ಟಿದ್ದರು. ಅವರ ಆತ್ಮ ಈಗಲೂ ಕಗತ್ತಲಿನ ಮರೆಯಾಚೆ ತಿರುಗಾಡುತ್ತಿದ್ದು, ಸ್ಥಳೀಯರಿಗೆ ನಿತ್ಯ ಕಂಟಕವಾಗಿ ಪರಿಣಮಿಸಿದೆ.

02. ಈಸ್ಟ್ ಕೋಸ್ಟ್ ರಸ್ತೆ

02. ಈಸ್ಟ್ ಕೋಸ್ಟ್ ರಸ್ತೆ

ಕತ್ತಲು ಕವಿದ ನಿರ್ಜನವಾದ ರಸ್ತೆಯಲ್ಲಿ ಬಿಳಿ ಸೀರೆಯನ್ನು ಉಟ್ಟ ಮಹಿಳೆ ಏಕಾಂಕಿಯಾಕಿ ರಸ್ತೆಯಲ್ಲಿ ನಡೆದಾಡಿದರೆ ಹೇಗಿರಬಹುದು ಪರಿಸ್ಥಿತಿ? ಇದರಿಂದ ಏಕಾಗ್ರತೆ ಭಂಗ ಅಥವಾ ಭಯಭೀತಿಗೊಂಡಿರುವ ವಾಹನ ಚಾಲಕರಿಂದಾಗಿ ಅನೇಕ ಅಪಘಾತಗಳು ಘಟಿಸಿ ಹೋಗಿವೆ.

 03. ದೆಹಲಿ ಕಂಟೋನ್ಮೆಂಟ್ ಸ್ಟೇಷನ್

03. ದೆಹಲಿ ಕಂಟೋನ್ಮೆಂಟ್ ಸ್ಟೇಷನ್

ನಗರ ನಿವಾಸಿಗಳಿಗೆ ಪ್ರೇತ, ವಿಶಾಚಿಗಳಲ್ಲಿ ನಂಬಿಕೆ ಕಡಿಮೆಯೆಂಬ ಪ್ರತೀತಿಯಿದೆ. ಇದು ಶುದ್ಧ ಸುಳ್ಳು ಎಂಬುದನ್ನು ಬಿಂಬಿಸುವಂತೆ ರಾಷ್ಟ್ರ ರಾಜಧಾನಿ ನವದೆಹಲಿಯ ಹೃದಯ ಭಾಗದಲ್ಲಿರುವ ಕಂಟೋನ್ಮೆಂಟ್ ಸ್ಟೇಷನ್ ರಸ್ತೆಯಲ್ಲಿ ಅನೇಕ ಮಂದಿಗೆ ಭೂತ ಕಾಟ ಎದುರಾಗಿದೆ. ಇನ್ನು ಕೆಲವರಿಗೆ ಪಿಶಾಚಿ ಪ್ರಭಾವದಿಂದ ಆಕ್ಸೆಲೇಟರ್ ಜಾಮ್ ಆದ ಪ್ರಸಂಗವೂ ಎದುರಾಗಿದೆ.

 04. ರಾಂಚಿ-ಜಮ್ಶೆಡ್ಪುರ ರಾಷ್ಟ್ರೀಯ ಹೆದ್ದಾರಿ ನಂ.33

04. ರಾಂಚಿ-ಜಮ್ಶೆಡ್ಪುರ ರಾಷ್ಟ್ರೀಯ ಹೆದ್ದಾರಿ ನಂ.33

ಹಾಗೊಂದು ವೇಳೆ ದೂರ ಪ್ರಯಾಣ ಹಮ್ಮಿಕೊಳ್ಳುವ ಹವ್ಯಾಸ ನಿಮಗಿದ್ದಲ್ಲಿ ರಾಂಚಿ-ಜಮ್ಶೆಡ್ಪುರ ನಂ.33 ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆಯ ಪಯಣ ತಪ್ಪಿಸುವುದು ಒಳಿತು. ಎರಡು ಬದಿಗಳಿಂದಲೂ ಬಂಡೆ ಕಲ್ಲುಗಳಿಂದ ಆವರಿಸಲ್ಪಟ್ಟಿರುವ ಈ 40 ಕೀ.ಮೀ. ದೂರದ ರಸ್ತೆಯಲ್ಲಿ ಆಗಲೇ 243 ಮಂದಿ ಮರಣ ಹೊಂದಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಒಬ್ಬಂಟಿಯಾದ ಸ್ತ್ರೀ ಆಚಾನಕ್ ಆಗಿ ರಸ್ತೆ ಪ್ರವೇಶಿಸಿರುವುದೇ ಅಪಘಾತಕ್ಕೆ ಹೇತುವಾಗಿದೆ.

05. ಮಾರ್ವೆ ಮತ್ತು ಮಧ್ ದ್ವೀಪ ಹಾದಿ

05. ಮಾರ್ವೆ ಮತ್ತು ಮಧ್ ದ್ವೀಪ ಹಾದಿ

ವಿ ರೋಡ್ ಮತ್ತು ಮಾರ್ವೆ ಕಡಲು ತೀರದ ವರೆಗಿ ಒಂಬತ್ತು ಕೀ.ಮೀ. ಉದ್ದದ ಈ ರಸ್ತೆಯಲ್ಲಿ ಸದಾ ವಿಸ್ಮಯಕಾರಿ ಘಟನೆಗಳು ನಡೆಯುತ್ತಲೇ ಇದೆ. ಪ್ರತಿ ಬಾರಿಯೂ ಮಧು ಮಗಳಂತೆ ಶೃಂಗಾರಗೊಂಡಿರುವ ಸ್ತ್ರೀಯೊಬ್ಬಾಕೆ ಪ್ರತ್ಯಕ್ಷಗೊಳ್ಳುತ್ತಾರೆ ಎಂದು ಇಲ್ಲಿನವರು ಭಯಭೀತಿ ವ್ಯಕ್ತಪಡಿಸುತ್ತಾರೆ. ಇಲ್ಲಿ ಕಾಲ್ಗೆಜ್ಜೆಗಳ ನಾದವು ಕಿವಿಗೆ ಬಡಿಯುವುದು ಸಾಮಾನ್ಯ.

06. ಮುಂಬೈ-ನಾಸಿಕ್ ಹೈವೈ, ಕಸಾರಘಾಟ್

06. ಮುಂಬೈ-ನಾಸಿಕ್ ಹೈವೈ, ಕಸಾರಘಾಟ್

ಮುಂಬೈ-ನಾಸಿಕ್ ಹೈವೇಯಲ್ಲಿ ಕಸಾರಾ ಘಾಟ್ ತಲುಪಿದಾಗ ನಿಮಗೆ ವಿಶೇಷ ಶಕ್ತಿಯೊಂದರ ಅನುಭವವಾಗಿದೆ. ಪೊದೆಯಂತೆ ಎರಡು ಬದಿಗಳಲ್ಲಿ ಹರಡಿರುವ ಮರದ ರೆಂಬೆಗಳು ಮತ್ತಷ್ಟು ಭಯಾನಕ ವಾತಾವರಣ ಸೃಷ್ಟಿ ಮಾಡಿದೆ.

 07. ರಾಷ್ಟ್ರೀಯ ಹೆದ್ದಾರಿ 209, ಸತ್ಯಮಂಗಲಂ ವನ್ಯಜೀವಿ

07. ರಾಷ್ಟ್ರೀಯ ಹೆದ್ದಾರಿ 209, ಸತ್ಯಮಂಗಲಂ ವನ್ಯಜೀವಿ

ಸತ್ಯಮಂಗಲಂ ವನ್ಯಜೀವಿ ಅಭಯಾರಣ್ಯ ಕಾರಿಡಾರ್ ನಲ್ಲಿ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಸದಾ ಪ್ರೇತ, ಪಿಶಾಚಿಗಳ ಹಾವಳಿ ಇದೆ ಎನ್ನಲಾಗುತ್ತಿದೆ. ಒಂದು ಕಾಲದಲ್ಲಿ ಕಾಡುಗಳ್ಳ ವೀರಪ್ಪನ್ ಸಹ ಇದೇ ದಟ್ಟಾರಣ್ಯದಲ್ಲಿ ಅಭಯ ಪಡೆದಿರುವುದು ಈಗ ಇತಿಹಾಸ.

08. ಕಶೇಡಿ ಘಾಟ್, ಮುಂಬೈ-ಗೋವಾ ಹೈವೇ

08. ಕಶೇಡಿ ಘಾಟ್, ಮುಂಬೈ-ಗೋವಾ ಹೈವೇ

ಅಂತೆ-ಕಂತೆಗಳ ಮಗದೊಂದು ಅಧ್ಯಾಯ ಬರೆದಿರುವ ಕಶೇಡಿ ಘಾಟ್ ಮುಂಬೈ ಹಾಗೂ ಗೋವಾ ಹೆದ್ದಾರಿಯಲ್ಲಿ ಸ್ಥಿತಗೊಂಡಿದೆ. ಇಲ್ಲಿ ದೈವ್ವಗಳ ಪ್ರಭಾವದಿಂದಾಗಿ ಚಾಲಕರಿಗೆ ಕಡಿದಾದ ತಿರುವುಗಳಲ್ಲಿ ನಿಯಂತ್ರಣ ತಪ್ಪುವುದು ಸಾಮಾನ್ಯವಾಗಿದ್ದು, ಭಾರಿ ಅಪಘಾತವನ್ನೇ ಆಹ್ವಾನಿಸುತ್ತಿದೆ.

09. ಬೆಸೆಂಟ್ ಅವೆನ್ಯೂ ರಸ್ತೆ

09. ಬೆಸೆಂಟ್ ಅವೆನ್ಯೂ ರಸ್ತೆ

ಕುತೂಹಲದಾಯಕ ಸಂಗತಿಯೆಂದರೆ ಚೆನ್ನೈ ಹೃದಯ ಭಾಗದಲ್ಲಿರುವ ಬೆಸೆಂಟ್ ಅವೆನ್ಯೂ ರಸ್ತೆಯಲ್ಲಿ ಹಗಲು ವೇಳೆಯಲ್ಲೂ ಪಿಶಾಚಿ ಕಾಟ ಎದುರಾಗುತ್ತದೆ. ಇಲ್ಲಿನ ನಿಗೂಢತೆಯೆಂದರೆ ರಾತ್ರಿ ವೇಳೆಯಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಪದೇ ಪದೇ ವಿಚಿತ್ರವಾದ ಶಬ್ದಗಳು ಇಲ್ಲಿ ಸಾಮಾನ್ಯ ಎಂದು ಸ್ಥಳೀಯರು ಗುಸುಗುಟ್ಟುತ್ತಾರೆ.

10. ಮುಂಬೈ-ಪುಣೆ ಓಲ್ಡ್ ಎಕ್ಸ್ ಪ್ರೆಸ್ ವೇ

10. ಮುಂಬೈ-ಪುಣೆ ಓಲ್ಡ್ ಎಕ್ಸ್ ಪ್ರೆಸ್ ವೇ

ಯಾವುದೇ ಕಾರಣಕ್ಕೂ ರಾತ್ರಿ ವೇಳೆಯಲ್ಲಿ ಮುಂಬೈ-ಪುಣೆ ಓಲ್ಡ್ ಎಕ್ಸ್ ಪ್ರೆಸ್ ವೇಯ ನಿರ್ಜನ ಪ್ರದೇಶದಲ್ಲಿ ಲಿಫ್ಟ್ ಕೇಳಿದರೆ ಕೊಡಬೇಡಿರಿ. ಏಕೆಂದರೆ ಮುಂದೆ ಎದುರಾಗುವ ತೊಂದರೆಗಳು ಘೋರವಾಗಿರಲಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಎಚ್ಚರ..! ನಡು ರಸ್ತೆಯಲ್ಲಿ ಭೂತ, ಪ್ರೇತಗಳ ತಿರುಗಾಟ

ನಿಮ್ಮ ಜೀವನದಲ್ಲೂ ಈ ತರಹದ ಭೂತ, ಪ್ರೇತ, ಪಿಶಾಚಿಗಳ ಅನುಭವ ಎದುರಾಗಿದ್ದಲ್ಲಿ ಈ ಬಗೆಗಿನ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ವ್ಯಕ್ತಪಡಿಸಿಲು ಮರೆಯದಿರಿ.

More from DriveSpark

Article Published On: Thursday, March 10, 2016, 12:37 [IST]
English summary
10 Haunted Road Routes To Avoid If You're Scared Of TheParanormal
Read more on ಟಾಪ್ 10 top 10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+