ವಿಹಾರ ನೌಕೆಗಳು ಮೋಜಿಗಷ್ಟೇ ಸೀಮಿತವೇ? ಬೆಚ್ಚಿ ಬೀಳಿಸುವ ಸತ್ಯಗಳು!

By Nagaraja

ವಿಹಾರ ನೌಕೆಗಳನ್ನು ಸಮುದ್ರದಲ್ಲಿ ತೇಲುವ 'ಐಷಾರಾಮಿ ಹೋಟೆಲ್' ಎಂದೇ ಬಣ್ಣಿಸಲಾಗುತ್ತಿದೆ. ವಿನೋದ ಸಂಚಾರದ ಪ್ರಾಮುಖ್ಯತೆ ಹೆಚ್ಚಾದಂತೆ ವಿಹಾರ ನೌಕೆಗಳ ಸಂಖ್ಯೆಯಲ್ಲೂ ಗಣನೀಯ ವರ್ಧನೆಯುಂಟಾಗಿದ್ದು, ಹಡಗು ತಯಾರಕ ಸಂಸ್ಥೆಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.

ಕೋಟಿಗಟ್ಟಲೆ ಬೆಲೆ ಬಾಳುವ ಇಂತಹ ಐಷಾರಾಮಿ ವಿಹಾರ ನೌಕೆಗಳಲ್ಲಿ ಚಿತ್ರಮಂದಿರ, ಕ್ಯಾಸಿನೋ, ರೆಸ್ಟೋರೆಂಟ್, ಈಜುಕೊಳ, ಲಿವಿಂಗ್ ರೂಂ ಮತ್ತು ಮೋಜಿಗಾಗಿ ಇನ್ನಿತರ ಸೇವೆಗಳನ್ನು ಒದಗಿಸಲಾಗುತ್ತದೆ. ಇವೆಲ್ಲದರ ಸೇವೆಗಾಗಿ ಬೃಹತ್ ಸಿಬ್ಬಂದಿ ವರ್ಗವನ್ನೇ ನಿಯೋಜಿಸಲಾಗುತ್ತದೆ. ಹಾಗಿದ್ದರೂ ವಿಹಾರ ನೌಕೆಗಳು ಸಹ ವಿವಾದದಿಂದ ಹೊರತಾಗಿಲ್ಲ. ನಿಜಕ್ಕೂ ಇದು ಮೋಜಿಗಷ್ಟೇ ಸೀಮಿತವೇ? ಬನ್ನಿ ನೋಡೋಣ...

ಶವಾಗಾರ

ಶವಾಗಾರ

ಬಲ್ಲ ಮೂಲಗಳ ಪ್ರಕಾರ ವಿಹಾರ ನೌಕೆಯಲ್ಲಿ ಸಂಚರಿಸುವ ಬಹುತೇಕರು ಮಧ್ಯ ವಯಸ್ಕರಾಗಿರುತ್ತಾರೆ. ವಿಹಾರ ನೌಕೆಯಲ್ಲಿ ವಾರಗಟ್ಟಲೆ ವಿಹಾರಿಸುವ ಅಗತ್ಯವಿರುವುದರಿಂದ ಹಿರಿಯ ನಾಗರಿಕರ ಬಗ್ಗೆ ವಿಶೇಷ ಖಾಳಜಿ ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಏನೇ ಅಕಾಲಿಕ ಮರಣ ಸಂಭವಿಸಿದ್ದಲ್ಲಿ ಶವಗಳನ್ನಿಡಲು ಶವಾಗಾರವನ್ನು ಏರ್ಪಡಿಸಲಾಗಿದೆ. ಇನ್ನು ಕೆಲವು ಬಾರಿ ಮುಂದಿನ ಬಂದರಿನಲ್ಲಿ ಶವವನ್ನು ಹೊರತೆಗೆಯಲಾಗುತ್ತದೆ.

ಆರೋಗ್ಯ ಸಮಸ್ಯೆ

ಆರೋಗ್ಯ ಸಮಸ್ಯೆ

ಸಣ್ಣ ಪ್ರದೇಶದಲ್ಲಿ ಅತಿ ಹೆಚ್ಚು ಮಂದಿ ಬೆರೆತುಕೊಳ್ಳುವುದರಿಂದ ರೋಗ ರುಜಿನಗಳು ಬೇಗನೇ ದೇಹವನ್ನು ಅಂಟಿಕೊಳ್ಳುತ್ತದೆ. ವಿಹಾರ ನೌಕೆ ಮೂಲಗಳ ಪ್ರಕಾರ, ಆಹಾರ ಸಂಬಂಧಿ ಖಾಯಿಲೆಗಳು ಅತಿ ಹೆಚ್ಚು ಬಾಧಿಸುತ್ತದೆ. ಈ ನಿಟ್ಟಿನಲ್ಲಿ ಹೆಚ್ಚು ಖಾಳಜಿ ವಹಿಸುವ ಅಗತ್ಯವಿರುತ್ತದೆ.

ಮಾಲಿನ್ಯ

ಮಾಲಿನ್ಯ

ಹಡಗುಗಳು ಅಪಾರ ಪ್ರಮಾಣದ ಮಾಲಿನ್ಯವನ್ನು ಹೊರಬಿಡುತ್ತದೆ. ಟನ್ ಗಟ್ಟಲೆ ಭಾರದ ಹಡಗು ಒಯ್ಯಲು ಅಪಾರ ಪ್ರಮಾಣದ ಇಂಧನ ಬೇಕಾಗುತ್ತದೆ. ಪರಸರ ಸಂರಕ್ಷಣಾ ಏಜೆನ್ಸಿಯ ಪ್ರಕಾರ 3000 ಪ್ರಯಾಣಿಕರನ್ನು ಹೊತ್ತೊಯ್ಯುವ ವಿಹಾರ ನೌಕೆಗಳು ಒಂದು ವಾರದಲ್ಲಿ ಅಂದಾಜು 8,00,000 ಲೀಟರ್ ಹೊಲಸು ನೀರನ್ನು ಹೊರ ಬಿಡುತ್ತದೆ. ಇವೆಲ್ಲವು ನೇರವಾಗಿ ಸಮುದ್ರಕ್ಕೆ ಹರಿಯ ಬಿಡುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ.

ಕಡಲ್ಗಳ್ಳರ ದಾಳಿ

ಕಡಲ್ಗಳ್ಳರ ದಾಳಿ

ಅತೀವ ಪ್ರಮಾಣದ ಸಂಪತ್ತನ್ನು ಒಯ್ಯುವುದರಿಂದಲೇ ವಿಹಾರ ಹಡಗುಗಳ ಮೇಲೆ ಕಡಲ್ಗಳ್ಳರು ದಾಳಿಯಿಡುತ್ತಾರೆ. ಹಿಂದೂ ಮಹಾಸಾಗರದ ಸೋಮಲಿಯಾದಲ್ಲಿ ಕಡಲ್ಗಳ್ಳರ ಪ್ರಕರಣವು ಹೆಚ್ಚುತ್ತಲೇ ಇದೆ. ವಿವಿಧ ದೇಶಗಳ ನೌಕಾ ಪಡೆಗಳು ಕಾರ್ಯಾಚರಣೆ ನಡೆಸುವುದರಿಂದ ಆಧುನಿಕ ಕಾಲದಲ್ಲಿ ಇದರ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ.

ನಿವೃತ್ತಿ

ನಿವೃತ್ತಿ

ಹಿರಿಯ ನಾಗರಿಕರು ನಿವೃತ್ತಿಯ ಬಳಿಕ ಹಡಗುಗಳನ್ನು ಆಸಕ್ತರಿಗೆ ಕಾಯಂ ಆಗಿ ಅಥವಾ ಬೇಕಾದಷ್ಟು ಸಮಯ ಮನೆಯಾಗಿ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಇಂತಿಷ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇವುಗಳಲ್ಲಿ 24 ಗಂಟೆಯೂ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತದೆ.

ಅನುಕೂಲಕ್ಕಾಗಿ ಧ್ವಜ

ಅನುಕೂಲಕ್ಕಾಗಿ ಧ್ವಜ

ಬಹುತೇಕ ಸಂಸ್ಥೆಗಳು ಪನಾಮಾ ಮತ್ತು ಲಿಬೇರಿಯಾ ದೇಶಗಳಲ್ಲಿ ಹಡಗುಗಳನ್ನು ದಾಖಲಾತಿ ಮಾಡುತ್ತದೆ. ತನ್ಮೂಲಕ ಅನುಕೂಲಕ್ಕಾಗಿ ಧ್ವಜ (flags of convenience) ನೀತಿಯನ್ನು ಅನುಸರಿಸುತ್ತದೆ. ವಾಯು ಮಾಲಿನ್ಯ ಅಥವಾ ಕಾರ್ಮಿಕರ ಬಗ್ಗೆ ಹೆಚ್ಚು ಕಾಳಜಿ ವಹಿಸದಿದ್ದರೂ ಇಲ್ಲಿ ಹಡಗು ದಾಖಲಾತಿ ಮಾಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ಮೂಲಕ ಹೆಚ್ಚು ತೆರಿಗೆ ಉಳಿಸುವ ಉದ್ದೇಶ ಹಡಗು ಸಂಸ್ಥೆಯದ್ದಾಗಿರುತ್ತದೆ.

ಹಾರ್ಮನಿ ಆಫ್ ದಿ ಸೀಸ್

ಹಾರ್ಮನಿ ಆಫ್ ದಿ ಸೀಸ್

ವಿಶ್ವದ ಅತಿ ದೊಡ್ಡ ಹಡಗೆಂಬ ಖ್ಯಾತಿಗೆ ರಾಯಲ್ ಕೆರೆಬಿಯನ್‌ಗೆ ಸೇರಿದ ಹಾರ್ಮನಿ ಆಫ್ ದಿ ಸೀಸ್ ಪಾತ್ರವಾಗಿದೆ. ಫ್ರಾನ್ಸ್‌ನಲ್ಲಿರುವ ವಿಶ್ವ ಪ್ರಸಿದ್ಧ ಈಫಲ್ ಗೋಪುರಗಿಂತಲೂ ದೊಡ್ಡದಾಗಿರುವ ಹಾರ್ಮನಿ ಆಫ್ ದಿ ಸೀಸ್ 6,000ದಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಕೋಸ್ಟಾ ಕಾನ್ಕಾರ್ಡಿಯಾ

ಕೋಸ್ಟಾ ಕಾನ್ಕಾರ್ಡಿಯಾ

2012ರಲ್ಲಿ ಇಟಲಿಯ ವಿಹಾರ ನೌಕೆಯಾಗಿರುವ ಕೋಸ್ಟಾ ಕಾನ್ಕಾರ್ಡಿಯಾ ಸಮುದ್ರದಲ್ಲಿ ಹಾದು ಹೋಗುತ್ತಿರಬೇಕಾದರೆ ಬೃಹತ್ ಬಂಡೆಕಲ್ಲಿಗೆ ಢಿಕ್ಕಿಯಾಗಿ ಭಾರಿ ಅವಘಡ ಸಂಭವಿಸಿತ್ತಲ್ಲದೆ ಮುಳುಗಳಾರಂಭಿಸಿತ್ತು. 4,000 ಪ್ರಯಾಣಿಕರೊಂದಿಗೆ ಸಾಗಿದ ಈ ವಿಹಾರ ನೌಕೆಯ ರಕ್ಷಣೆಗಾಗಿ ಸರಿ ಸುಮಾರು ಆರು ತಾಸುಗಳ ಕಾರ್ಯಾಚರಣೆ ನಡೆಸ ಬೇಕಾಯಿತು. ಆದರೂ 30 ಮಂದಿ ಸಾವನ್ನಪ್ಪಿದ್ದರಲ್ಲದೆ ಅನೇಕ ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

ಸಮುದ್ರ ಮಧ್ಯೆ ಸಿಕ್ಕಿಹಾಕಿಕೊಂಡ ಹಡಗು

ಸಮುದ್ರ ಮಧ್ಯೆ ಸಿಕ್ಕಿಹಾಕಿಕೊಂಡ ಹಡಗು

2013ರಲ್ಲಿ ಮೆಕ್ಸಿಕೊಗೆ ಸೇರಿದ ಬೃಹತ್ ಹಡಗು ವಿಹಾರದಲ್ಲಿರುವ ಎಂಜಿನ್ ರೂಂಗೆ ಬೆಂಕಿ ತಗುಲಿತ್ತು. ಘಟನೆಯಲ್ಲಿ ಯಾವುದೇ ಸಾವು, ನೋವಿನ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಎಂಜಿನ್ ವೈಫಲ್ಯದಿಂದಾಗಿ ಗಲ್ಪ್ ಆಫ್ ಮೆಕ್ಸಿಕೊದ ಸಮುದ್ರದ ನಡುವೆ ಹಡಗು ಸಿಕ್ಕಿ ಹಾಕಿಕೊಂಡಿತ್ತು. ಬಳಿಕ ಎಲ್ಲ ಪ್ರಯಾಣಿಕರನ್ನು ಸ್ಥಳಾಂತರಿಸಲು ಐದು ದಿನಗಳೇ ಬೇಕಾಯಿತು. ಪ್ರಯಾಣಿಕರು ಆಹಾರವಿಲ್ಲದೆ ಹಸಿವಿನಿಂದ ಗಂಟಗಟ್ಟಲೆ ಕಾಯಬೇಕಾದ ದುಸ್ಥಿತಿಯೂ ಎದುರಾಗಿತ್ತು.

ನಾಪತ್ತೆ

ನಾಪತ್ತೆ

ಹಡಗು ನಾಪತ್ತೆ ಪ್ರಕರಣ ಒಂದೆಡೆಯಾದರೆ ವಿಹಾರಕ್ಕೆಂದು ಹೊರಟ ಪ್ರಯಾಣಿಕರು ಮರೆಯಾಗುವ ವಿಚಾರ ಎಲ್ಲರನ್ನು ದಿಕ್ಕುಪಾಲಾಗಿಸುತ್ತದೆ. 2000ನೇ ಇಸವಿಯ ಬಳಿಕ 200ರಷ್ಟು ಇಂತಹ ಘಟನೆಗಳು ದಾಖಲಾಗಿದ್ದು, ಹಡಗು ಗಮ್ಯಸ್ಥಾನ ತಲುಪಿದ ಬಳಿಕ ಲಗ್ಗೇಜ್ ವಾರಸುದಾರರಿಲ್ಲದಾಗ ಹಿಂತಿರಿಗಿದಾಗ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬರುತ್ತದೆ. ಇವರಲ್ಲಿ ಬಹುತೇಕರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.


More from DriveSpark

Article Published On: Thursday, June 9, 2016, 10:30 [IST]
English summary
10 Interesting facts about Cruise Ships
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+