ಭಾರತದಿಂದ ವಿದೇಶಗಳಿಗಿರುವ 10 ರೈಲು ಸಂಪರ್ಕ ಜಾಲಗಳು!
ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೇ ಜಾಲವನ್ನು ಹೊಂದಿರುವ ಭಾರತ ನೆರೆಯ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದೊಂದಿಗೆ ರೈಲು ಮಾರ್ಗವನ್ನು ಹಂಚಿಕೊಂಡಿದೆ. ಪ್ರಸ್ತುತ ಮತ್ತಷ್ಟು ದೇಶಗಳಿಗೆ ತನ್ನ ರೈಲು ಯಾನವನ್ನು ವಿಸ್ತರಿಸುವ ಯೋಜನೆಯನ್ನು ಭಾರತೀಯ ರೈಲ್ವೆ ಹೊಂದಿದೆ.
ಗಡಿಯಾಚೆಗಿನ ಭದ್ರತೆಯ ಜೊತೆಗೆ ನೆರೆಯ ರಾಷ್ಟ್ರಗಳೊಂದಿಗೆ ಅತ್ಯುತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುವ ಇರಾದೆಯಲ್ಲಿರುವ ಭಾರತವು ಮತ್ತಷ್ಟು ರಾಷ್ಟ್ರಗಳೊಂದಿಗೆ ಪ್ರಸ್ತಾಪಿತ ರೈಲು ಯಾನವನ್ನು ಭವಿಷ್ಯದಲ್ಲಿ ಆರಂಭಿಸಲಿದೆ.

ಜೋಗ್‌ಬಾನಿ-ಬಿರಾತ್ ನಗರ್ ಲಿಂಕ್ - ನೇಪಾಳ
ಭಾರತದಿಂದ ನೆರೆಯ ನೇಪಾಳಕ್ಕೆ ಎರಡು ರೈಲ್ವೆ ಜಾಲಗಳನ್ನು ಹೊಂದಿದೆ. ಇವುಗಳಲ್ಲಿ ರಕ್ಸೌಲ್ ಜಂಕ್ಷನ್, ಬಿಹಾರ-ಸಿರ್ಸಿಯಾ, ಪರ್ಸಾ ಹಾಗೂ ಜಯನಗರ, ಬಿಹಾರ-ಕಜುರಿ, ಧನುಷಾ ಮಾರ್ಗಗಳು ಪ್ರಮುಖವೆನಿಸಿದೆ.

ಸಂಜೋತಾ ಎಕ್ಸ್ ಪ್ರೆಸ್ - ಪಾಕಿಸ್ತಾನ
ಗಡಿಯಾಚೆಗಿನ ಭದ್ರತೆಯಲ್ಲಿ ಸದಾ ಪಾಕಿಸ್ತಾನ ಉದ್ವಿಗ್ನ ಪರಿಸ್ಥಿತಿ ಸೃಷ್ಟಿ ಮಾಡುತ್ತಿದ್ದರೂ ಭಾರತವು ತನ್ನ ನೆರೆಯ ರಾಷ್ಟ್ರದೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ರೈಲ್ವೆ ಜಾಲವನ್ನು ಹಂಚಿಕೊಂಡಿದೆ. ಸಂಜೋತಾ ಮತ್ತು ಥಾರ್ ಎಕ್ಸ್ ಪ್ರೆಸ್ ಗಳು ವಾಘಾ ಗಡಿ ಮುಖಾಂತರ ಪಾಕಿಸ್ತಾನವನ್ನು ತಲುಪುತ್ತದೆ.

ಮೈತ್ರಿ ಎಕ್ಸ್ ಪ್ರೆಸ್ - ಬಾಂಗ್ಲಾದೇಶ
ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಭಾರತ ಮೈತ್ರಿ ಎಕ್ಸ್ ಪ್ರೆಸ್ ಮುಖಾಂತರ ತನ್ನ ಸ್ನೇಹ ಬಾಂಧವ್ಯವನ್ನು ವೃದ್ಧಿಸಿಕೊಂಡಿದೆ. ಇದು ನೇರವಾಗಿ ಬಾಂಗ್ಲಾ ರಾಜಧಾನಿ ಢಾಕಾವನ್ನು ತಲುಪುತ್ತದೆ.

ಭೂತಾನ್ ರೈಲ್ವೆ
ಭೂತಾನ್ ಜೊತೆಗೆ ತನ್ನ ರೈಲ್ವೆ ಜಾಲವನ್ನು ವಿಸ್ತರಿಸುವ ಇರಾದೆಯನ್ನು ಭಾರತ ಹೊಂದಿದೆ. ಈ ಸಂಬಂಧ ರೂಪುರೇಷೆಯನ್ನು ಸಿದ್ಧಗೊಳಿಸಿದೆ.

ಮ್ಯಾನ್ಮಾರ್ ರೈಲ್
ಮಣಿಪುರ ಮತ್ತು ಮ್ಯಾನ್ಮಾರ್ ವರೆಗೂ ಸಂಪರ್ಕ ಕಲ್ಪಿಸುವ ಯೋಜನೆಯು ಭಾರತೀಯ ಸರಕಾರದ ಪರಿಗಣನೆಯಲ್ಲಿದೆ.

ವಿಯೆಟ್ನಾ ಲಿಂಕ್
ನೆರೆಯ ರಾಷ್ಟ್ರಗಳೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವ ಭಾರತ ಇತಿಹಾಸ ಪ್ರಸಿದ್ಧ ವಿಯೆಟ್ನಾಗೂ ರೈಲ್ವೆ ಸಂಪರ್ಕ ಕಲ್ಪಿಸಲಿದೆ.

ಚೀನಾ
ವಿಶ್ವದ ಅಶ್ವಶಕ್ತಿಯಾಗಿ ಬೆಳೆದು ಬಂದಿರುವ ಚೀನಾದೊಂದಿಗೂ ಭಾರತ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಬಂದಿದೆ. ಈಗ ನವದೆಹಲಿಯಿಂದ ಚೀನಾದ ಕುನ್ಮಿಂಗ್ ಗೆ ರೈಲ್ವೆ ಜಾಲ ವಿಸ್ತರಿಸಲಿದೆ.

ಥಾಯ್ಲೆಂಡ್
ನೆರೆಯ ಥಾಯ್ಲೆಂಡ್ ಜೊತೆಗೆ ಭಾರತ ತನ್ನ ರೈಲ್ವೆ ಜಾಲವನ್ನು ವಿಸ್ತರಿಸುವ ಮೂಲಕ ಉಭಯ ದೇಶೀಯ ಬಾಂಧವ್ಯಕ್ಕೆ ಉತ್ತೇಜನ ನೀಡಲಿದೆ.

ಮಲೇಷ್ಯಾ
ನಿಕಟ ಭವಿಷ್ಯದಲ್ಲಿ ಮಲೇಷ್ಯಾಗೂ ಭಾರತೀಯ ರೈಲ್ವೆ ವಿಸ್ತರಣೆಯಾಗಲಿದೆ ಎಂಬುದು ಶುಭ ಸೂಚಕವಾಗಿದ್ದು, ಪ್ರವಾಸಿಗರು ಗರಿಷ್ಠ ಪ್ರಯೋಜನ ಪಡೆಯಬಹುದು.

ಸಿಂಗಾಪುರ
ವಿಶ್ವದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದಾಗಿರುವ ಸಿಂಗಾಪುರಕ್ಕೂ ಭಾರತೀಯ ರೈಲ್ವೆ ತನ್ನ ಜಾಲವನ್ನು ವಿಸ್ತರಿಸಲಿದ್ದು, ತೆರೆ ಮರೆಯಲ್ಲಿ ನೀಲಿ ನಕ್ಷೆ ತಯಾರುಗೊಳ್ಳುತ್ತಿದೆ.


Click it and Unblock the Notifications








