10 ಉಪಯುಕ್ತ ಕಾರು ತಂತ್ರಜ್ಞಾನಗಳು

By Nagaraja

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರು ತಂತ್ರಜ್ಞಾನಗಳು ನಿಧಾನವಾಗಿ ಜನಪ್ರಿಯತೆ ಸಾಧಿಸುತ್ತಿದೆ. ಹಿಂದೆಲ್ಲ ಐಷಾರಾಮಿ ಕಾರುಗಳಿಗೆ ಮಾತ್ರ ಸೀಮಿತವಾಗಿದ್ದ ಕಾರು ತಂತ್ರಜ್ಞಾನಗಳು ಬಜೆಟ್ ಕಾರುಗಳಲ್ಲೂ ಕಾಣಸಿಗುತ್ತಿದೆ.

Also Read: ಒಲಿಂಪಿಕ್ಸ್ ನಗರದತ್ತ ಚಾಲಕ ರಹಿತ ರೊಬೊಟ್ ಟ್ಯಾಕ್ಸಿ

ಇಂದಿನ ಈ ಲೇಖನದಲ್ಲಿ ಪ್ರತಿಯೊಬ್ಬ ಕಾರು ಸವಾರನಿಗೂ ಉಪಯುಕ್ತವಾಗಬಲ್ಲ 10 ವೈಶಿಷ್ಟ್ಗಗಳ ಬಗ್ಗೆ ವಿವರಣೆ ಕೊಡಲಿದ್ದೇವೆ. ಇದಕ್ಕಾಗಿ ಚಿತ್ರಪುಟದತ್ತ ಮುಂದುವರಿಯಿರಿ.

01. ಬ್ಲೂಟೂತ್

01. ಬ್ಲೂಟೂತ್

ಮೊಬೈಲ್ ಫೋನ್ ಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಬ್ಲೂಟೂತ್ ತಂತ್ರಜ್ಞಾನವು ಕಾರಿನಲ್ಲೂ ಅತಿ ಹೆಚ್ಚು ಉಪಯುಕ್ತವೆನಿಸಿದೆ. ಚಾಲನೆ ವೇಳೆ ಹ್ಯಾಂಡ್ಸ್ ಫ್ರೀ ಕಾಲಿಂಗ್ ನಲ್ಲಿ ಬ್ಲೂಟೂತ್ ಪಾತ್ರ ಮಹತ್ವೆದನಿಸಿಕೊಳ್ಳುತ್ತದೆ. ಬಹುತೇಕ ಎಲ್ಲ ಆಧುನಿಕ ಕಾರುಗಳಲ್ಲೂ ಇದು ಬೇಸಿಕ್ ವೈಶಿಷ್ಟ್ಯವಾಗಿ ಮಾರ್ಪಾಟ್ಟಿದೆ.

02. ಯುಎಸ್‌ಬಿ ಪೋರ್ಟ್

02. ಯುಎಸ್‌ಬಿ ಪೋರ್ಟ್

ಬ್ಲೂಟೂತ್ ತರಹನೇ ನಿಮ್ಮ ಮ್ಯೂಸಿಕ್ ಅಥವಾ ಆಡಿಯೋ ಡಿವೈಸ್ ಗಳನ್ನು ಕಾರಿಗೆ ಸಂಪರ್ಕಿಸಲು ಯುಎಸ್‌ಬಿ ಪೋರ್ಟ್ ಗಳು ಅತಿ ಮುಖ್ಯ ಪಾತ್ರ ವಹಿಸುತ್ತದೆ.

03. ಕೀಲೆಸ್ ಸ್ಟ್ಯಾರ್ಟ್/ಸ್ಟಾಪ್

03. ಕೀಲೆಸ್ ಸ್ಟ್ಯಾರ್ಟ್/ಸ್ಟಾಪ್

ಟ್ರಾಫಿಕ್ ಮುಂತಾದ ವಾಹನ ದಟ್ಟಣೆಯ ಪ್ರದೇಶದಲ್ಲಿ ಕೀಲೆಸ್ ಸ್ಟ್ಯಾರ್ಟ್/ಸ್ಟಾಪ್ ಆಯ್ಕೆಯು ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

04. ವಾಯ್ಸ್ ಕಂಟ್ರೋಲ್

04. ವಾಯ್ಸ್ ಕಂಟ್ರೋಲ್

ಆಧುನಿಕ ಕಾರುಗಳಲ್ಲಿ ಸುಲಭ ನಿರ್ವಹಣೆಗಾಗಿ ವಾಯ್ಸ್ ಕಂಟ್ರೋಲ್ ವ್ಯವಸ್ಥೆಯನ್ನು ನೀಡಲಾಗುತ್ತದೆ. ನಿಮ್ಮ ಪಯಣವನ್ನು ಹೆಚ್ಚು ಸುರಕ್ಷಿತವಾಗಿಸುವುದು ಇದರ ಹಿಂದಿರುವ ಉದ್ದೇಶವಾಗಿದೆ.

05. ರಿಮೋಟ್ ಕಂಟ್ರೋಲ್

05. ರಿಮೋಟ್ ಕಂಟ್ರೋಲ್

ಇನ್ನು ಕೆಲವು ಅತ್ಯಾಧುನಿಕ ಕಾರುಗಳಲ್ಲಿ ದೂರದಿಂದಲೇ ಇದ್ದುಕೊಂಡು ವಾಹನ ನಿಯಂತ್ರಿಸುವ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಇದಕ್ಕಾಗಿ ಗೂಗಲ್ ಪ್ಲೇಯಿಂದ ಆಪ್ ಡೌನ್ ಲೋಡ್ ಮಾಡಿಕೊಂಡು ಕಾರಿಗೆ ಹತ್ತುವ ಮುನ್ನವೇ ಕಾರಿನೊಳಗಿನ ತಾಪಮಾನ ನಿಯಂತ್ರಣ ಮುಂತಾದ ಅಗತ್ಯ ಬದಲಾವಣೆಗಳನ್ನು ತರಬಹುದಾಗಿದೆ.

06. ಬ್ಲೈಂಡ್ ಸ್ಪಾಟ್ ಮಾನಿಟರಿಂಗ್

06. ಬ್ಲೈಂಡ್ ಸ್ಪಾಟ್ ಮಾನಿಟರಿಂಗ್

ತಂತ್ರಜ್ಞಾನದ ಅವಿಷ್ಕಾರವಾದಂತೆ ಕಾರುಗಳ ಭದ್ರತೆಯಲ್ಲೂ ಸಾಕಷ್ಟು ಬದಲಾವಣೆ ಕಂಡುಬಂದಿದೆ. ಇದರಲ್ಲಿ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಒಂದಾಗಿದೆ. ಇದರ ನೆರವಿನಿಂದ ಸಂಭವಿಸಬಹುದಾದ ಅವಘಡವನ್ನು ತಪ್ಪಿಸಬಹುದಾಗಿದೆ.

07. ಲೇನ್ ಕೀಪಿಂಗ್ ಅಸಿಸ್ಟ್

07. ಲೇನ್ ಕೀಪಿಂಗ್ ಅಸಿಸ್ಟ್

ಭಾರತಗಿಂತಲೂ ವಿದೇಶಗಳಲ್ಲಿ ಲೇನ್ ಕೀಪಿಂಗ್ ಅಸಿಸ್ಟ್ ಸೇವೆಯು ಹೆಚ್ಚು ಚಾಲ್ತಿಯಲ್ಲಿದೆ. ಇದು ಚಾಲಕನ ಅರಿವಿಲ್ಲದೆ ಲೇನ್ ತಪ್ಪಿದ್ದಲ್ಲಿ ಎಚ್ಚರಿಸಲಿದೆ.

08. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್

08. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್

ರಾಡಾರ್ ಕ್ರೂಸ್ ಕಂಟ್ರೋಲ್ ಅಥವಾ ಆಟೋನೋಮಸ್ ಕ್ರೂಸ್ ಕಂಟ್ರೋಲ್ ಎಂದು ಕರೆಯಲ್ಪಡುವ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ವಾಹನಗಳಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಬಳಕೆ ಮಾಡುವ ಸ್ವಯಂಚಾಲಿತ ತಂತ್ರಜ್ಞಾನವಾಗಿದೆ.

 09. ಏರ್ ಬ್ಯಾಗ್

09. ಏರ್ ಬ್ಯಾಗ್

ಏರ್ ಬ್ಯಾಗ್ ಅಥವಾ ಗಾಳಿ ಚೀಲ ಅಪಘಾತ ವೇಳೆ ತೆರೆದುಕೊಳ್ಳುವ ಮೂಲಕ ಪ್ರಯಾಣಿಕರ ಪಾಲಿಗೆ ರಕ್ಷಾ ಕವಚದ ರೂಪದಲ್ಲಿ ಕೆಲಸ ಮಾಡುತ್ತದೆ.

10. ಢಿಕ್ಕಿ ತಡೆ ತಂತ್ರಜ್ಞಾನ

10. ಢಿಕ್ಕಿ ತಡೆ ತಂತ್ರಜ್ಞಾನ

ಸದ್ಯ ಢಿಕ್ಕಿ ತಡೆ ತಂತ್ರಜ್ಞಾನವು ಐಷಾರಾಮಿ ಕಾರುಗಳಲ್ಲಿ ಮಾತ್ರ ಲಭ್ಯವಿದೆ. ವಾಹನೋದ್ಯಮದಲ್ಲಿ ಏರ್ ಬ್ಯಾಗ್ ಬಳಿಕ ಕಂಡುಹಿಡಿಯಲಾದ ಅತಿ ನಾವೀನ್ಯ ಸುರಕ್ಷಾ ವೈಶಿಷ್ಟ್ಯವು ಇದಾಗಿದೆ.

10 ಉಪಯುಕ್ತ ಕಾರು ತಂತ್ರಜ್ಞಾನಗಳು

ನಿಮ್ಮಲ್ಲಿ ಕಿರುಕುಳವನ್ನುಂಟು ಮಾಡುವ 10 ಕಾರು ತಂತ್ರಜ್ಞಾನಗಳು

More from DriveSpark

Article Published On: Tuesday, December 1, 2015, 11:59 [IST]
English summary
10 Most Useful Car Technologies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+