ಫ್ರೆಂಚ್ ಚಾಂಪಿಯನ್‌ ನಡಾಲ್‌ಗೆ ಕಿಯಾ ಕಾರು ಉಡುಗೊರೆ

By Nagaraja

ದಾಖಲೆಯ ಎಂಟನೇ ಬಾರಿಗೆ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿ ಕಿರೀಟ ಮುಡಿಗೇರಿಸಿಕೊಂಡಿರುವ ಸ್ಪೇನ್‌ನ ರಾಫೆಲ್ ನಡಾಲ್ ಅವರಿಗೀಗ ಸಂಭ್ರಮ ಆಚರಿಸಿಕೊಳ್ಳಲು ಎರಡೆರಡು ಕಾರಣಗಳಿವೆ.

ಒಂದೆಡೆ ಗ್ರಾನ್‌ಸ್ಲಾಮ್ ಗೆದ್ದಿರುವುದು ಖುಷಿಯಾಗಿದ್ದರೆ ಮತ್ತೊಂದೆಡೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಡಾಲ್‌ಗೆ ನೂತನ ಕಿಯಾ ಪ್ರೊಸಿಡ್ ಜಿಟಿ (kia pro_cee'd GT) ಕಾರು ಉಡುಗೊರೆಯಾಗಿ ಲಭಿಸಿದೆ.

ನಿಮ್ಮ ಮಾಹಿತಿಗಾಗಿ, ನಡಾಲ್ ಪ್ರಸ್ತುತ ಕಿಯಾ ಮೋಟಾರ್ಸ್ ಕಂಪನಿಯ ಜಾಗತಿಕ ಪ್ರಚಾರ ರಾಯಭಾರಿಯಾಗಿದ್ದಾರೆ. ಇದೇ ಕಾರಣಕ್ಕಾಗಿ ಕಂಪನಿಯಿಂದ ನೂತನ ಉಡುಗೊರೆ ಕೂಡಾ ಲಭಿಸಿದೆ.

ಫ್ರೆಂಚ್ ಚಾಂಪಿಯನ್‌ ನಡಾಲ್‌ಗೆ ಕಿಯಾ ಕಾರು ಉಡುಗೊರೆ

ಆ ಬಳಿಕ ಪ್ರತಿಕ್ರಿಯಿಸಿದ ನಡಾಲ್, ಕಿಯಾ ಕಾರನ್ನು ನಾನು ಡ್ರೈವಿಂಗ್ ಮಾಡಿದ್ದು, ಅದ್ಭುತ ಅನುಭವ ನೀಡುತ್ತಿದೆ ಎಂದಿದ್ದಾರೆ.

ಫ್ರೆಂಚ್ ಚಾಂಪಿಯನ್‌ ನಡಾಲ್‌ಗೆ ಕಿಯಾ ಕಾರು ಉಡುಗೊರೆ

ಇದೀಗ ಜೂನ್ 24ರಿಂದ ಆರಂಭವಾಗಲಿರುವ ವಿಂಬಲ್ಡನ್ ಚಾಂಪಿಯನ್‌ಶಿಪ್ ಎದುರು ನೋಡುತ್ತಿರುವ ನಡಾಲ್, ಹೊಸ ಕಾರು ಹೆಚ್ಚು ಸ್ಫೂರ್ತಿ ತುಂಬುವ ನಂಬಿಕೆ ವ್ಯಕ್ತಪಡಿಸಿದ್ದಾರೆ.

ಫ್ರೆಂಚ್ ಚಾಂಪಿಯನ್‌ ನಡಾಲ್‌ಗೆ ಕಿಯಾ ಕಾರು ಉಡುಗೊರೆ

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಟೆನಿಸ್ ಜಗತ್ತಿನ ಜತೆ ಕಿಯಾ ಮೋಟಾರ್ಸ್ ನಂಟು ಬೆಳೆಸಿರುವುದು. ಈ ಹಿಂದೆ 2008ರ ವರೆಗೆ ಆಸ್ಟ್ರೇಲಿಯನ್ ಓಪನ್ ಪ್ರಮುಖ ಪ್ರಯೋಜಕತ್ವವನ್ನು ವಹಿಸಿತ್ತು.

ಫ್ರೆಂಚ್ ಚಾಂಪಿಯನ್‌ ನಡಾಲ್‌ಗೆ ಕಿಯಾ ಕಾರು ಉಡುಗೊರೆ

ಹಾಗೆಯೇ ಕಳೆದ ದಶಕದಲ್ಲಿ ಅಮೆರಿಕದ ಟೆನಿಸ್ ದಿಗ್ಗಜ ಆಂಡ್ರೆ ಆಗಾಸ್ಸಿ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಕಗೊಳಿಸಿತ್ತು.

ಫ್ರೆಂಚ್ ಚಾಂಪಿಯನ್‌ ನಡಾಲ್‌ಗೆ ಕಿಯಾ ಕಾರು ಉಡುಗೊರೆ

ಇದೇ ವೇಳೆ ರಾಫೆಲ್ ನಡಾಲ್ ಅವರು ಕಿಯಾ ಸೊರೆಂಟೊ ಕಾರಿನ ಕೀ ಕೂಡಾ ಪಡೆದಿದ್ದಾರೆ.

Article Published On: Saturday, June 22, 2013, 14:26 [IST]
English summary
Rafael Nadal won his record 8th title at the French Open 2013. His Roland Garros tournament not only saw the ace tennis champ celebrate his birthday during the games, but he also received a Kia pro_cee’d GT.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+