ಸುರಕ್ಷತೆಯಲ್ಲಿ ಟಾಟಾ ಕಾರುಗಳಿಗಿಲ್ಲ ಸಾಟಿ: 70 ಕಿ.ಮೀ ವೇಗದಲ್ಲಿ 25 ಅಡಿ ಆಳಕ್ಕೆ ಬಿದ್ರೂ ಎಲ್ಲರೂ ಸೇಫ್!
ಕೇರಳದಲ್ಲಿ ಕುಟುಂಬವೊಂದು ಇತ್ತೀಚೆಗೆ ಟಾಟಾ ಟಿಯಾಗೊದಲ್ಲಿ ಪ್ರಯಾಣಿಸುವಾಗ ಭೀಕರ ಅಪಘಾತಕ್ಕೆ ಸಿಲುಕಿತ್ತು. ಆದರೆ ಈ ಅಪಘಾತದಲ್ಲಿ ಆಶ್ಚರ್ಯಕರವೆಂಬಂತೆ ಯಾರಿಗೂ ಗಾಯಗಳಾಗಿಲ್ಲ, ಕನಿಷ್ಠ ಬ್ಯಾಂಡೇಜ್ ಅವಶ್ಯಕತೆಯೂ ಬಂದಿಲ್ಲ.
Recommended Video
ನಾಲ್ಕು ಜನರನ್ನೊಳಗೊಂಡಿದ್ದ ಕುಟುಂಬವು ಟಾಟಾ ಟಿಯಾಗೊದಲ್ಲಿ ಗಂಟೆಗೆ 70 ಕಿ.ಮೀ ವೇಗದಲ್ಲಿ ಪ್ರಯಾಣಿಸುವಾಗ ನಿಯಂತ್ರಣ ತಪ್ಪಿ 25 ಅಡಿ ಆಳಕ್ಕೆ ಬಿದ್ದಿದೆ. ಕಾರಿನೊಳಗಿದ್ದವರೆಲ್ಲರೂ ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಿಲ್ಲದೆ ಹೊರಬಂದಿದ್ದಾರೆ. ಕಾರಿನಲ್ಲಿದ್ದ ಯಾರಿಗು ಕೂಡ ಕನಿಷ್ಠ ಬ್ಯಾಂಡೇಜ್ ಅಗತ್ಯವೂ ಬರಲಿಲ್ಲ ಎಂದು ಕಾರು ಮಾಲೀಕ ಹೇಳಿಕೊಂಡಿದ್ದಾರೆ.

ಮಾಲೀಕರು ಹಂಚಿಕೊಂಡ ಮಾಹಿತಿಯ ಪ್ರಕಾರ, ರಸ್ತೆಯಲ್ಲಿ 70 ಕಿ.ಮೀ ವೇಗದಲ್ಲಿ ಪ್ರಯಾಣಿಸುತ್ತಿದ್ದಾಗ ಇದ್ದಕ್ಕಿದ್ದಂತೆ ದಾರಿಯಲ್ಲಿ ಏನೋ ಅಡ್ಡ ಬಂದಂತಾಗಿದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸ್ಟೀರಿಂಗ್ ಚಕ್ರವನ್ನು ವೇಗವಾಗಿ ತಿರುಗಿಸಿದೆ, ಈ ವೇಳೆ ಕಾರು ನಿಯಂತ್ರಣ ತಪ್ಪಿ ಸುಮಾರು 25 ಅಡಿಗಳಷ್ಟು ಆಳಕ್ಕೆ ಉರುಳಿದೆ.

ಹಾಗಯೇ ಉರುಳುತ್ತಾ ವಾಹನವು ಮನೆಯೊಂದರ ಮೇಲೆ ಬಿದ್ದು ಬಳಿಕ ಕಾಂಕ್ರೀಟ್ ನೆಲಕ್ಕೆ ಅಪ್ಪಳಿಸಿದೆ ಎಂದು ವಿವರಿಸಿದ್ದಾರೆ. ಆದರೆ ಫೋಟೋಗಳಲ್ಲಿ ಕಾಣುವ ಕಾರನ್ನು ನೋಡಿದರೆ ಕಾರಿನ ಹೊರಭಾಗವು ಬಹಳಷ್ಟು ಹಾನಿಗೊಳಗಾದರು ಒಳಭಾಗಕ್ಕೆ ಯಾವುದೇ ಕನಿಷ್ಟ ಹಾನಿಯಾಗದಿರುವುದನ್ನು ಕಾಣಬಹುದು.

ಮುಂಭಾಗದ ಎರಡು ಏರ್‌ಬ್ಯಾಗ್‌ಗಳು ತೆರೆದಿರುವಂತೆ ಕೆಟ್ಟದಾಗಿ ಹಾನಿಗೊಳಗಾದ ಟಾಟಾ ಟಿಯಾಗೊವನ್ನು ಚಿತ್ರಗಳು ತೋರಿಸುತ್ತಿವೆ. ಮಾಲೀಕರ ಪ್ರಕಾರ, ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ವಾಹನದಲ್ಲಿದ್ದವರು ತಾವಾಗಿಯೇ ವಾಹನದಿಂದ ಹೊರಬಂದಿದ್ದಾರೆ. ಮಾಲೀಕ ಮತ್ತು ಆತನ ಪತ್ನಿ ಮುಂದಿನ ಸೀಟಿನಲ್ಲಿದ್ದರೆ, ಅವರ ಇಬ್ಬರು ಮಕ್ಕಳು ಹಿಂದಿನ ಸೀಟಿನಲ್ಲಿದ್ದರು.

ಅಪಘಾತದ ವೇಳೆ ಮಕ್ಕಳು ಸೀಟ್ ಬೆಲ್ಟ್ ಹಾಕಿಕೊಂಡಿದ್ದರೇ ಎಂಬುದು ಸ್ಪಷ್ಟವಾಗಿಲ್ಲ. ಟಾಟಾ ಕಾರು ಖರೀದಿಸಬೇಡಿ ಎಂದು ಎಲ್ಲರೂ ಸಲಹೆ ನೀಡಿದ್ದರು. ಆದರೆ ನಾನು ಅದನ್ನೇ ಖರೀದಿಸಿದೆ ಎಂದ ಮಾಲೀಕರು, ತನಗೆ ಮತ್ತು ತನ್ನ ಕುಟುಂಬಕ್ಕೆ ಎರಡನೇ ಜೀವನವನ್ನು ನೀಡಿದ ಟಾಟಾ ಕಾರುಗಳ ನಿರ್ಮಾಣ ಗುಣಮಟ್ಟಕ್ಕೆ ಧನ್ಯವಾದ ಹೇಳಿದ್ದಾರೆ.

ಘಟನೆ ಬಳಿಕ ಅವರು ಟಿಯಾಗೊವನ್ನು ತಮ್ಮ ಮೂರನೇ ಮಗಳು ಎಂದು ಪರಿಗಣಿಸಿದ್ದಾರೆ. ಅಪಘಾತದಲ್ಲಿ ಕಾರು ನಾಶವಾಗಿದೆ ಹೊಸ ಕಾರನ್ನು ಖರೀದಿಸುವ ಆರ್ಥಿಕ ಸಾಮರ್ಥ್ಯವನ್ನು ನಾನು ಹೊಂದಿಲ್ಲ. ಆದರೆ ಟಾಟಾ ನೆಕ್ಸಾನ್ ಅನ್ನು ಮುಂದಿನ ದಿನಗಳಲ್ಲಿ ಖರೀದಿಸಲು ಬಯಸುತ್ತಿರುವುದಾಗಿ ಮಾಲೀಕ ಹೇಳಿಕೊಂಡಿದ್ದಾರೆ. ನೀವು ಸುರಕ್ಷತೆಗೆ ಆದ್ಯತೆ ನೀಡಿದರೆ (ಈ ವಿಭಾಗದಲ್ಲಿ) ಟಾಟಾ ಟಿಯಾಗೊವನ್ನು ಖರೀದಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ನಟನ ಜೀವ ಉಳಿಸಿದ ಟಾಟಾ ನೆಕ್ಸಾನ್
ಹಲವು ಮಲಯಾಳಂ ಕಿರುಚಿತ್ರಗಳಲ್ಲಿ ನಟಿಸಿರುವ ವಿಶಾಕ್ ಎಂಬ ನಟ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ತಮ್ಮ ಟಾಟಾ ನೆಕ್ಸಾನ್‌ನಲ್ಲಿ ಹಿಂತಿರುಗುತ್ತಿದ್ದರು. ಮಾರ್ಗಮಧ್ಯದಲ್ಲಿ ಗುಡ್ಡಗಾಡು ಪ್ರದೇಶವೊಂದರ ಬಳಿ ಅಪಘಾತ ಸಂಭವಿಸಿತ್ತು. ಕಾರಿನಲ್ಲಿ ಅವರ ಜೊತೆ ಅವರ ಗೆಳೆಯರೂ ಇದ್ದರು.

ನೆಕ್ಸಾನ್ ಚಾಲಕ ರಸ್ತೆಯ ಸಣ್ಣ ಚರಂಡಿಯೊಂದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಸುಮಾರು 20-30 ಅಡಿಗಳಷ್ಟು ಆಳಕ್ಕೆ ಕಾರು ಉರುಳಿ ಬಿದ್ದಿದೆ. ಈ ಕಾರು ಪಲ್ಟಿಯಾಗಿ ನೆಲಕ್ಕೆ ಅಪ್ಪಳಿಸಿದೆ. ಮಗುಚಿ ಬಿದ್ದ ಕಾರು ನಜ್ಜುಗುಜ್ಜಾಗಿದೆ. ಆ ವೇಳೆ ಕಾರಿನ ಪ್ರಯಾಣಿಕರು ಕೂಡ ಬದುಕುಳುಯುವುದಿಲ್ಲ ಎಂದು ಭಾವಿಸಿದ್ದರು.

ಆದ್ರೆ ಒಳಗಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು. ಒಬ್ಬ ವ್ಯಕ್ತಿಗೆ ಮಾತ್ರ ಬೆನ್ನಿಗೆ ಗಾಯಗಳಾಗಿವೆ. ಇದನ್ನು ಹೊರತುಪಡಿಸಿ ಉಳಿದವರೆಲ್ಲರೂ ಕಾರಿನಲ್ಲಿ ಸುರಕ್ಷಿತವಾಗಿದ್ದರು. ಕಾರಣ ಟಾಟಾದ 5 ಸ್ಟಾರ್ ಸೇಫ್ಟಿ ಕಾರು ಇದಾಗಿದೆ. ಗರಿಷ್ಠ ಸುರಕ್ಷತೆಯ ಕಾರಾಗಿರುವ ಕಾರಣ ಪ್ರಯಾಣಿಕರು ಸೇಫ್ ಆಗಿದ್ದಾರೆ.

ಗ್ಲೋಬಲ್ ಎನ್‌ಸಿಎಪಿಯ ರೇಟಿಂಗ್‌ಗಳ ಪ್ರಕಾರ ಟಿಯಾಗೊ ಈ ವಿಭಾಗದಲ್ಲಿ ಅತ್ಯಂತ ಸುರಕ್ಷಿತ ಕಾರಾಗಿ ಹೊರಹೊಮ್ಮಿದೆ. ಇದು ನಾಲ್ಕು ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಆದರೂ ಫುಟ್‌ವೆಲ್ ಮತ್ತು ವಾಹನದ ರಚನೆಯನ್ನು ಅಸ್ಥಿರವೆಂದು ರೇಟ್ ಮಾಡಲಾಗಿದೆ.

ಟಾಟಾ ಮೋಟಾರ್ಸ್ ಭಾರತದಲ್ಲಿ ಅತ್ಯುತ್ತಮ ಸುರಕ್ಷತೆ-ರೇಟೆಡ್ ಮಾಡೆಲ್ ಲೈನ್-ಅಪ್‌ಗಳನ್ನು ಹೊಂದಿದೆ. ಟಾಟಾ ಟಿಯಾಗೊ ಮತ್ತು ಟಿಗೊರ್ ನಾಲ್ಕು-ಸ್ಟಾರ್ ಸುರಕ್ಷತಾ ರೇಟಿಂಗ್‌ಗಳನ್ನು ಹೊಂದಿದ್ದರೆ, ಟಾಟಾ ಆಲ್ಟ್ರೊಜ್ ಮತ್ತು ಟಾಟಾ ನೆಕ್ಸಾನ್ 5 ಸ್ಟಾರ್ ಸುರಕ್ಷತಾ ರೇಟಿಂಗ್‌ಗಳನ್ನು ಹೊಂದಿವೆ. ಹ್ಯಾರಿಯರ್ ಮತ್ತು ಸಫಾರಿಯಂತಹ ಇತರ ವಾಹನಗಳನ್ನು ಸುರಕ್ಷತಾ ರೇಟಿಂಗ್ ಏಜೆನ್ಸಿಯು ಇನ್ನೂ ಪರೀಕ್ಷಿಸಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಟಾಟಾ ಮೋಟಾರ್ ಕಾರುಗಳ ಅನೇಕ ಮಾಲೀಕರು ಈ ಹಿಂದೆ ವಾಹನಗಳ ನಿರ್ಮಾಣ ಗುಣಮಟ್ಟಕ್ಕೆ ಧನ್ಯವಾದ ಹೇಳಿದ್ದಾರೆ. ಅನೇಕ ಜನರು ತಾವು ಎದುರಿಸಿದ ಅಪಘಾತಗಳಲ್ಲಿ ಬದುಕುಳಿದ ಬಗ್ಗೆ ಅನುಭವವನ್ನು ಹಂಚಿಕೊಂಡಿದ್ದಾರೆ. ಟಾಟಾ ಪ್ರಸ್ತುತ 4-ಸ್ಟಾರ್ ಮತ್ತು 5-ಸ್ಟಾರ್ ಸುರಕ್ಷತೆಯ ರೇಟಿಂಗ್‌ಗಳೊಂದಿಗೆ ಹೆಚ್ಚಿನ ಸಂಖ್ಯೆಯ ಕಾರುಗಳನ್ನು ನೀಡುತ್ತಿದೆ.


Click it and Unblock the Notifications