ಅತ್ಯಾಧುನಿಕ ಕಾರನ್ನು ಅಪಘಾತಕ್ಕೆ ದೂಡಿದ ಆಟೋ ಪೈಲಟ್ ಮೋಡ್

ಟೆಸ್ಲಾ ಕಾರುಗಳು ಅತ್ಯಾಧುನಿಕ ಟೆಕ್ನಾಲಜಿಯನ್ನು ಹೊಂದಿರುತ್ತವೆ. ಟೆಸ್ಲಾ ಕಾರುಗಳು ಆಟೋ ಪೈಲಟ್ ಫೀಚರ್ ಅನ್ನು ಸಹ ಹೊಂದಿವೆ. ಈ ಫೀಚರ್ ಕಾರನ್ನು ಆಟೋಮ್ಯಾಟಿಕ್ ಆಗಿ ಸ್ಟಾರ್ಟ್ ಮಾಡಿ ಕಾರನ್ನು ಚಾಲನೆ ಮಾಡುತ್ತದೆ. ಈ ಫೀಚರ್ ಹೆಚ್ಚಿನ ಜನ ಮನ್ನಣೆಯನ್ನು ಪಡೆದಿದೆ.

ಅತ್ಯಾಧುನಿಕ ಕಾರನ್ನು ಅಪಘಾತಕ್ಕೆ ದೂಡಿದ ಆಟೋ ಪೈಲಟ್ ಮೋಡ್

ಆದರೆ ಈ ಫೀಚರ್ ಹಲವು ಬಾರಿ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಅವಘಡಗಳು ಸಂಭವಿಸಿವೆ. ಇತ್ತೀಚೆಗೆ ಟೆಸ್ಲಾ ಕಾರು ಆಟೋ ಪೈಲಟ್ ಮೋಡ್‌ನಲ್ಲಿದ್ದಾಗ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಅಮೆರಿಕಾದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಟೆಸ್ಲಾ ಮಾಡೆಲ್ ಎಸ್ ಎಲೆಕ್ಟ್ರಿಕ್ ಕಾರು ಆಟೋ ಪೈಲಟ್ ಮೋಡ್‌ನಲ್ಲಿದ್ದಾಗ ಅಪಘಾತಕ್ಕೀಡಾಗಿದೆ.

ಅತ್ಯಾಧುನಿಕ ಕಾರನ್ನು ಅಪಘಾತಕ್ಕೆ ದೂಡಿದ ಆಟೋ ಪೈಲಟ್ ಮೋಡ್

ಟೆಸ್ಲಾ ಕಾರು ರಸ್ತೆಯಲ್ಲಿ ನಿಂತಿದ್ದ ಪೋಲಿಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಟೆಸ್ಲಾ ಕಾರಿನ ಚಾಲಕ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಕಾರನ್ನು ಆಟೋ ಪೈಲಟ್ ಮೋಡ್‌ನಲ್ಲಿ ಇರಿಸಿ ಮೊಬೈಲ್ ಫೋನ್‌ನಲ್ಲಿ ವೀಡಿಯೊ ವೀಕ್ಷಿಸುತ್ತಿದ್ದ ಎಂಬುದು ಪ್ರಕರಣದ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಅತ್ಯಾಧುನಿಕ ಕಾರನ್ನು ಅಪಘಾತಕ್ಕೆ ದೂಡಿದ ಆಟೋ ಪೈಲಟ್ ಮೋಡ್

ಪೊಲೀಸ್ ಗಸ್ತು ಕಾರು ಹೆದ್ದಾರಿಯ ಬದಿಯಲ್ಲಿ ನಿಂತಿತ್ತು. ಕಾರಿನಲ್ಲಿ ಕುಳಿತಿದ್ದ ಪೋಲಿಸ್ ಫೋನ್ ಕರೆಯಲ್ಲಿ ನಿರತರಾಗಿದ್ದರಿಂದ ಅವರಿಗೆ ಹಿಂದಿನಿಂದ ಬರುತ್ತಿದ್ದ ಕಾರಿನ ಸುಳಿವು ದೊರೆತಿಲ್ಲ. ಇದರಿಂದಾಗಿ ಹಿಂದಿನಿಂದ ಬಂದ ಟೆಸ್ಲಾ ಕಾರು ಪೊಲೀಸ್ ಗಸ್ತು ಕಾರಿಗೆ ಡಿಕ್ಕಿ ಹೊಡೆದಿದೆ.

ಅತ್ಯಾಧುನಿಕ ಕಾರನ್ನು ಅಪಘಾತಕ್ಕೆ ದೂಡಿದ ಆಟೋ ಪೈಲಟ್ ಮೋಡ್

ಟೆಸ್ಲಾ ಕಾರು ಚಾಲಕನು ಆಟೋ ಪೈಲಟ್ ಮೋಡ್‌ನಲ್ಲಿ ಕಾರನ್ನು ಚಾಲನೆ ಮಾಡುತ್ತಾ ವೀಡಿಯೊಗಳನ್ನು ವೀಕ್ಷಿಸುತ್ತಿದ್ದ. ಈ ಘಟನೆ ನಂತರ ಚಾಲಕ ಭೀತಿಗೊಂಡಿದ್ದಾನೆ. ಈ ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಎರಡೂ ಕಾರುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಅತ್ಯಾಧುನಿಕ ಕಾರನ್ನು ಅಪಘಾತಕ್ಕೆ ದೂಡಿದ ಆಟೋ ಪೈಲಟ್ ಮೋಡ್

ಲೇನ್ ಬದಲಿಸದ ಕಾರಣಕ್ಕೆ ಹಾಗೂ ವಾಹನ ಚಾಲನೆ ವೇಳೆ ಫೋನ್ ಬಳಸಿದ್ದಕ್ಕಾಗಿ ಕಾರು ಚಾಲಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆಟೋ ಪೈಲಟ್‌ ಮೇಲೆಯೇ ಪೂರ್ತಿಯಾಗಿ ಅವಲಂಬಿತವಾಗುವುದು ಎಷ್ಟು ಅಪಾಯಕಾರಿ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.

ಅತ್ಯಾಧುನಿಕ ಕಾರನ್ನು ಅಪಘಾತಕ್ಕೆ ದೂಡಿದ ಆಟೋ ಪೈಲಟ್ ಮೋಡ್

ಕಾರಿನಲ್ಲಿರುವ ಆಟೋ-ಪೈಲಟ್ ಮೋಡ್ 100%ನಷ್ಟು ಅಪಘಾತವನ್ನು ತಡೆಯುವುದಿಲ್ಲವೆಂದು ಟೆಸ್ಲಾ ಕಂಪನಿ ಹೇಳಿದೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಈ ಫೀಚರ್ ಸಹಕಾರಿಯಾಗಲಿದೆ. ಜನರು ಆಟೋ ಪೈಲಟ್ ಫೀಚರ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿರುವ ಟೆಸ್ಲಾ ಕಂಪನಿ ಆಟೋ ಪೈಲಟ್ ಮೋಡ್‌ನಲ್ಲಿ ಚಾಲಕನು ಬೇರೆ ಕಡೆಗೆ ಗಮನ ಕೊಡಬಾರದು ಎಂದು ಕಂಪನಿ ಹೇಳಿದೆ.

Most Read Articles

Kannada
English summary
Tesla car crashed in autopilot mode. Read in Kannada.
Story first published: Friday, August 28, 2020, 19:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X