ಕಾರನ್ನು ಆಟೋ ಪೈಲಟ್‌ ಮೋಡ್‌ನಲ್ಲಿರಿಸಿ ನಿದ್ರಿಸಿದ ಚಾಲಕ

ಈ ವೀಡಿಯೊದಲ್ಲಿ ಟೆಸ್ಲಾ 3 ಕಾರು ಆಟೋಮ್ಯಾಟಿಕ್ ಆಗಿ ಚಾಲನೆಯಾಗುತ್ತಿರುವುದನ್ನು ಹಾಗೂ ಸಿಗ್ನಲ್‌ಗಳಲ್ಲಿ ಆಟೋಮ್ಯಾಟಿಕ್ ಆಗಿ ನಿಲ್ಲುವುದನ್ನು ಕಾಣಬಹುದು. ಜೊತೆಗೆ ಕಾರು ಟ್ರಾಫಿಕ್‌ನಿಂದ ಹೊರಬರುವುದನ್ನು ಕಾಣಬಹುದು.

ಕಾರನ್ನು ಆಟೋ ಪೈಲಟ್‌ ಮೋಡ್‌ನಲ್ಲಿರಿಸಿ ನಿದ್ರಿಸಿದ ಚಾಲಕ

ವ್ಯಕ್ತಿಯೊಬ್ಬ ತನ್ನ ಟೆಸ್ಲಾ ಕಾರನ್ನು ಆಟೋ ಪೈಲಟ್‌ ಮೋಡ್‌ನಲ್ಲಿರಿಸಿ ಮಲಗಿದ್ದಾನೆ. ಈ ಕಾರು ಹೆದ್ದಾರಿಯಲ್ಲಿ ಸಾಗುವಾಗ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸಿದೆ. ಅಪಾಯಕಾರಿ ಚಾಲನೆ ಮಾಡಿದ ಆರೋಪದ ಮೇಲೆ ಪೊಲೀಸರು ಈ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕೆನಡಾದ ಪೊನೊಕಾ ಸಿಟಿಯಲ್ಲಿರುವ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರನ್ನು ಆಟೋ ಪೈಲಟ್‌ ಮೋಡ್‌ನಲ್ಲಿರಿಸಿ ನಿದ್ರಿಸಿದ ಚಾಲಕ

ಈ ಕಾರು ಆಟೋ ಮೋಡ್‌ನಲ್ಲಿ 140 ಕಿ.ಮೀ ವೇಗದಲ್ಲಿ ಸಾಗುತ್ತಿತ್ತು. ಕಾರಿನ ಮುಂಭಾಗದ ಎರಡೂ ಸೀಟುಗಳನ್ನು ಮಡುಚಿ ಕಾರಿನಲ್ಲಿದ್ದವರು ನಿದ್ರಿಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಾರನ್ನು ಆಟೋ ಪೈಲಟ್‌ ಮೋಡ್‌ನಲ್ಲಿರಿಸಿ ನಿದ್ರಿಸಿದ ಚಾಲಕ

ಈ ಕಾರು ಆಟೋ ಪೈಲಟ್‌ ಮೋಡ್‌ನಲ್ಲಿ ಚಲಿಸುವ ಎಲೆಕ್ಟ್ರಿಕ್ ಟೆಸ್ಲಾ ಕಾರ್ ಆಗಿದ್ದು, ಇದನ್ನು 20 ವರ್ಷದ ವ್ಯಕ್ತಿ ಚಾಲನೆ ಮಾಡುತ್ತಿದ್ದ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

ಕಾರನ್ನು ಆಟೋ ಪೈಲಟ್‌ ಮೋಡ್‌ನಲ್ಲಿರಿಸಿ ನಿದ್ರಿಸಿದ ಚಾಲಕ

ಈ ಕಾರು 140 ಕಿ.ಮೀ ವೇಗದಲ್ಲಿ ಸಾಗುತ್ತಿತ್ತು. ಆದರೆ ಹೆದ್ದಾರಿಯಲ್ಲಿ ವೇಗದ ಮಿತಿ ಗಂಟೆಗೆ 110 ಕಿ.ಮೀಗಳಾಗಿದೆ. ಈ ಟೆಕ್ನಾಲಜಿ ಹಿಂದೆ ಲಭ್ಯವಿರಲಿಲ್ಲ. ಎರಡು ದಶಕಗಳ ತಮ್ಮ ವೃತ್ತಿಜೀವನದಲ್ಲಿ ಇಂತಹ ಪ್ರಕರಣವನ್ನು ನೋಡಿಲ್ಲವೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಾರನ್ನು ಆಟೋ ಪೈಲಟ್‌ ಮೋಡ್‌ನಲ್ಲಿರಿಸಿ ನಿದ್ರಿಸಿದ ಚಾಲಕ

ಕಾರು ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಸಹ ವಿಂಡ್‌ಶೀಲ್ಡ್ ಮೂಲಕ ಯಾರೂ ನೋಡುತ್ತಿರಲಿಲ್ಲವೆಂದು ಅವರು ಹೇಳಿದರು. ಟೆಸ್ಲಾ ಆಟೋ ಪೈಲಟ್ ಕಾರಿನ ಸ್ಟೀಯರಿಂಗ್, ಆಕ್ಸಲರೇಟರ್ ಹಾಗೂ ಬ್ರೇಕ್ ಗಳು ಆಟೋಮ್ಯಾಟಿಕ್ ಆಗಿ ಲೇನ್‌ನಲ್ಲಿ ಮಾತ್ರ ಚಲಿಸುತ್ತವೆ.

ಕಾರನ್ನು ಆಟೋ ಪೈಲಟ್‌ ಮೋಡ್‌ನಲ್ಲಿರಿಸಿ ನಿದ್ರಿಸಿದ ಚಾಲಕ

ಪ್ರವಾಸದ ಸಮಯದಲ್ಲಿ ಆಟೋ ಪೈಲಟ್ ಮೋಡ್ ಗಳ ನಿಗಾವಹಿಸುವುದು ಅವಶ್ಯಕ. ಟೆಸ್ಲಾ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ, ಆಟೋ ಪೈಲೆಟ್ ಫೀಚರ್ ಗಳಿಗೆ ಡ್ರೈವರ್‌ಗಳ ಮೇಲ್ವಿಚಾರಣೆಯ ಅಗತ್ಯವಿದೆ. ಈ ವಾಹನಗಳು ಆಟೋಮ್ಯಾಟಿಕ್ ವಾಹನಗಳಲ್ಲ ಎಂದು ಹೇಳಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕಾರನ್ನು ಆಟೋ ಪೈಲಟ್‌ ಮೋಡ್‌ನಲ್ಲಿರಿಸಿ ನಿದ್ರಿಸಿದ ಚಾಲಕ

ಕಂಪನಿಯು ಶೀಘ್ರದಲ್ಲೇ ತನ್ನ ಕಾರುಗಳನ್ನು ಅಪ್ ಡೇಟ್ ಮಾಡಲಿದೆ. ಟೆಸ್ಲಾ ಕಾರುಗಳನ್ನು ಯಾರೂ ಚಾಲನೆ ಮಾಡುವ ಅಗತ್ಯವಿಲ್ಲ. ಇನ್ನು ಮುಂದೆ ಅವುಗಳನ್ನು ಸಿಗ್ನಲ್‌ನಲ್ಲಿ ನಿಲ್ಲಿಸುವ ಅಗತ್ಯವಿರುವುದಿಲ್ಲ.

ಕಾರನ್ನು ಆಟೋ ಪೈಲಟ್‌ ಮೋಡ್‌ನಲ್ಲಿರಿಸಿ ನಿದ್ರಿಸಿದ ಚಾಲಕ

ಟೆಸ್ಲಾ ಕಾರುಗಳಲ್ಲಿ ಸಿಗ್ನಲ್‌ನಲ್ಲಿ ಆಟೋಮ್ಯಾಟಿಕ್ ಆಗಿ ನಿಲ್ಲುವಂತಹ ಟೆಕ್ನಾಲಜಿಯನ್ನು ಅಳವಡಿಸಲಾಗುವುದು. ಆಟೋಮ್ಯಾಟಿಕ್ ಚಾಲನಾ ಜಗತ್ತಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಲಿದೆ. ಥರ್ಡ್ ರೋ ಟೆಸ್ಲಾ ಪಾಡ್‌ಕ್ಯಾಸ್ಟ್ ಇತ್ತೀಚೆಗೆ ಈ ಕುರಿತು ಟ್ವಿಟರ್‌ನಲ್ಲಿ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಕಾರನ್ನು ಆಟೋ ಪೈಲಟ್‌ ಮೋಡ್‌ನಲ್ಲಿರಿಸಿ ನಿದ್ರಿಸಿದ ಚಾಲಕ

ಈ ವೀಡಿಯೊದಲ್ಲಿ ಟೆಸ್ಲಾ 3 ಕಾರು ಆಟೋಮ್ಯಾಟಿಕ್ ಆಗಿ ಚಾಲನೆಯಾಗುತ್ತಿರುವುದನ್ನು ಹಾಗೂ ಸಿಗ್ನಲ್‌ಗಳಲ್ಲಿ ಆಟೋಮ್ಯಾಟಿಕ್ ಆಗಿ ನಿಲ್ಲುವುದನ್ನು ಕಾಣಬಹುದು. ಜೊತೆಗೆ ಕಾರು ಟ್ರಾಫಿಕ್‌ನಿಂದ ಹೊರಬರುವುದನ್ನು ಕಾಣಬಹುದು.

Most Read Articles
 
Kannada
English summary
Tesla car driver puts car to auto pilot mode and sleeps. Read in Kannada.
Story first published: Friday, September 18, 2020, 19:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X