ಬುಲೆಟ್‌ಗಿಂತಲೂ ಬಲಿಷ್ಟ: ಸೈಬರ್ ಟ್ರಕ್‌ಗೆ ಹೊಡೆದ ಸ್ಟೀಲ್‌ಬ್ಯಾಟೇ ಡೊಂಕವಾಯಿತು... ಮಸ್ಕ್ ಹೇಳಿದ್ದೇನು?
ಎಲಾನ್ ಮಸ್ಕ್‌ನ ಸೈಬರ್ ಟ್ರಕ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿರುವ ಈ ವಾಹನ, ಭಾರತದಲ್ಲಿ ಇಲ್ಲದಿದ್ದರೂ, ಭಾರತೀಯರಿಗೆ ಈ ಟೆಸ್ಲಾ ಸೈಬರ್ ಟ್ರಕ್ ಎಂದರೆ ಏನೋ ಒಂದು ರೀತಿಯ ಕುತೂಹಲ. ಭಾರತದಲ್ಲಿ ಟೆಸ್ಲಾ ಯಾವಾಗ ಕಾಲಿಡುತ್ತದೋ, ಸೈಬರ್ ಟ್ರಕ್ ಯಾವಾಗ ಓಡಿಸುತ್ತೇವೋ ಎಂದು ಕಾಯುತ್ತಿರುವವರು ಅನೇಕ.
ಇದೀಗ ಟೆಸ್ಲಾ ಸೈಬರ್ ಟ್ರಕ್ ಸುದ್ದಿಯಲ್ಲಿದ್ದು, ಈ ಬಾರಿ ಈ ವಾಹನ ಸುದ್ದಿಯಾಗಿರುವುದು ಇದರ ಬಿಲ್ಡ್ ಕ್ವಾಲಿಟಿಯಿಂದ. ಹೌದು, ಸೈಬರ್ ಟ್ರಕ್‌ಗೆ ಬೇಸ್‌ಬಾಲ್ ಆಡುವ ಕಬ್ಬಿಣದ ಬ್ಯಾಟ್‌ನಲ್ಲಿ ಹೊಡೆಯುತ್ತಿರುವ ವಿಡಿಯೋವನ್ನು ಸ್ವತಃ ಎಲಾನ್ ಮಸ್ಕ್ ಶೇರ್ ಮಾಡಿದ್ದು, ಸೈಬರ್ ಟ್ರಕ್ ಬುಲೆಟ್ ರೀತಿಯಲ್ಲಿ ಗಟ್ಟಿಯಾಗಿದೆ ಎಂದು ಆ ವಿಡಿಯೋಗೆ ತಲೆಬರಹವನ್ನು ಬರೆದುಕೊಂಡಿದ್ದಾರೆ.

ವಿಡಿಯೋ ಕುರಿತಾಗಿ ನೋಡುವುದಾದರೆ, ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೇಸ್‌ಬಾಲ್ ಬಾಲ್ ಬ್ಯಾಟ್ ಹಿಡಿದುಕೊಂಡು ಟೆಸ್ಲಾ ಸೈಬರ್ ಟ್ರಕ್‌ಗೆ (Tesla Cyber Truck) ಹೊಡೆಯುತ್ತಿರುವುದನ್ನು ಕಾಣಬಹುದು. ಇದಾದ ನಂತರ ಮತ್ತೊಬ್ಬ ಬಂದು ಜೋರಾಗಿ ಹೊಡೆಯುತ್ತಿದ್ದರೂ, ಕಾರಿಗೆ ಎಳ್ಳಷ್ಟೂ ಡ್ಯಾಮೇಜ್ ಆಗಲಿಲ್ಲ. ಇದಾದ ನಂತರ ಬೇಸ್ ಬಾಲ್ ಬ್ಯಾಟೇ ಡೊಂಕಾಗಿರುವುದನ್ನು ಕಾಣಬಹುದಾಗಿದೆ. ಇದರಲ್ಲೇ ತಿಳಿಯುತ್ತದೆ ಟೆಸ್ಲಾ ಸೈಬರ್ ಟ್ರಕ್‌ನ ಬಿಲ್ಡ್ ಕ್ವಾಲಿಟಿ.
ಟೆಸ್ಲಾ ಸೈಬರ್‌ಟ್ರಕ್ (Tesla Cybertruck) ಫ್ಯೂಚರಿಸ್ಟಿಕ್ ಆಲ್-ಎಲೆಕ್ಟ್ರಿಕ್ ಪಿಕಪ್ ಅನ್ನು 4 ವರ್ಷಗಳ ಹಿಂದೆ 2019 ರಲ್ಲಿ ಅನಾವರಣಗೊಳಿಸಿತು. ಟೆಸ್ಲಾ ಸೈಬರ್‌ಟ್ರಕ್‌ನ ಮೂರು ಮಾದರಿಗಳು ಸಿಂಗಲ್-ಮೋಟರ್, ಡ್ಯುಯಲ್-ಮೋಟರ್ ಆಲ್-ವೀಲ್ ಡ್ರೈವ್ (ಎಡಬ್ಲ್ಯೂಡಿ), ಮತ್ತು ಟ್ರೈ-ಮೋಟರ್ ಆಲ್-ವೀಲ್ ಡ್ರೈವ್ ಆಗಿದೆ. ಇದರ ಟಾಪ್ ಸ್ಪೆಕ್ ಮಾದರಿಯನ್ನು 'ಸೈಬರ್‌ಬೀಸ್ಟ್' ಎಂದೂ ಕರೆಯಲಾಗುತ್ತದೆ. ಟೆಸ್ಲಾ ಸೈಬರ್‌ಟ್ರಕ್‌ನ ಬುಲೆಟ್ ಪ್ರೂಫ್ ಎಂದು ಮಸ್ಕ್ ಘೋಷಿಸಿದ್ದಾರೆ.
ಸೈಬರ್‌ಟ್ರಕ್‌ನ ಸಿಂಗಲ್-ಮೋಟರ್ ಸೈಬರ್‌ಟ್ರಕ್, ಅತ್ಯಂತ ಕೈಗೆಟುಕುವ ಮಾದರಿ, 2025 ರವರೆಗೆ ಲಭ್ಯವಿರುವುದಿಲ್ಲ. ಇದರ ಬಿಹೆಚ್‍ಪಿ ಪವರ್ ಅಂಕಿಅಂಶಗಳನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಇದು ಸುಮಾರು 6.5 ಸೆಕೆಂಡುಗಳಲ್ಲಿ 0-96.5 ಕಿ,ಮೀ(0-60 miles/hour) ವೇಗವನ್ನು ಪಡೆಯಬಹುದು. ಈ ಮಾದರಿಯ ಅಂದಾಜು 402 ಕಿ.ಮೀ ಕಿಲೋಮೀಟರ್‌ಗಳ ರೇಂಜ್ ಅನ್ನು ನೀಡುತ್ತದೆ. ಇದರ ಪ್ರಾರಂಭಿಕ ಬೆಲೆಯು $60,990 (ರೂ.50.83 ಲಕ್ಷ) ಆಗಿದೆ.
ಸೈಬರ್‌ಬೀಸ್ಟ್: ಟೆಸ್ಲಾ 'ಸೈಬರ್‌ಬೀಸ್ಟ್' ಎಂದು ಕರೆಯುವ ಟ್ರೈ-ಮೋಟರ್ ಆಲ್-ವೀಲ್ ಡ್ರೈವ್ ಸೈಬರ್‌ಟ್ರಕ್‌ನ ಟಾಪ್ ಸ್ಪೆಕ್ ಮಾದರಿಯ ವಿತರಣೆ ಪ್ರಾರಂಭಿಸಿದೆ. ಇದು 845hp ಪವರ್ ಅನ್ನು ಉತ್ಪಾದಿಸುತ್ತದೆ. ಈ ಮಾದರಿಯು ಕೇವಲ 2.6 ಸೆಕೆಂಡುಗಳಲ್ಲಿ 0-60 ಮೈಲುಗಳು/ಗಂಟೆ (0-96.5km/h) ವೇಗವನ್ನು ಪಡೆದುಕೊಳ್ಳುತ್ತದೆ. ಈ ಮಾದರಿಯ ಅಂದಾಜು 515 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದರ ಬೆಲೆಯು ರೂ. $99,990 (ರೂ. 83.34 ಲಕ್ಷ) ಆಗಿದೆ.

ಸೈಬರ್ ಟ್ರಕ್‌ನ ಒಳಭಾಗದಲ್ಲಿ 18.5-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ ಮತ್ತು ಡ್ಯಾಶ್‌ಬೋರ್ಡ್‌ನ ಮಧ್ಯದಲ್ಲಿ ಅಡ್ಡಲಾಗಿ ಜೋಡಿಸಲಾಗಿದೆ. ಹೆಚ್ಚುವರಿಯಾಗಿ, ಸೈಬರ್‌ಟ್ರಕ್ ಹಿಂದಿನ ಸೀಟಿನ ಸ್ಟ್ಯಾಂಡರ್ಡ್ ಸೆಂಟರ್ ಕನ್ಸೋಲ್‌ನ ಹಿಂಭಾಗದಲ್ಲಿ 9.4-ಇಂಚಿನ ಟಚ್‌ಸ್ಕ್ರೀನ್ ಅನ್ನು ಸಹ ಪಡೆಯುತ್ತದೆ. ಎಲೋನ್ ಮಸ್ಕ್ ಅವರು ಪ್ರಸ್ತುತ, ಕಂಪನಿಯು AWD ರೂಪಾಂತರದ ವಿತರಣೆಯನ್ನು ಪ್ರಾರಂಭಿಸುತ್ತದೆ ಎಂದು ಘೋಷಿಸಿದ್ದಾರೆ. ಸೈಬರ್‌ಬೀಸ್ಟ್ ಎಂದು ಕರೆಯಲ್ಪಡುವ ಹೆಚ್ಚು ಶಕ್ತಿಶಾಲಿ ರೂಪಾಂತರವೂ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications