ವಿಶಿಷ್ಟ ಬಗೆಯಲ್ಲಿ ಚಾರ್ಜ್ ಆದ ಟೆಸ್ಲಾ ಎಲೆಕ್ಟ್ರಿಕ್ ಕಾರು, ಮೆಚ್ಚುಗೆ ವ್ಯಕ್ತಪಡಿಸಿದ ಆನಂದ್ ಮಹೀಂದ್ರಾ
ಇತ್ತೀಚೆಗೆ ಟೆಸ್ಲಾ ಎಲೆಕ್ಟ್ರಿಕ್ ಕಾರಿನ ವೀಡಿಯೊವೊಂದು ಹೊರ ಬಂದಿದೆ. ವೀಡಿಯೊದಲ್ಲಿ ಈ ಟೆಸ್ಲಾ ಎಲೆಕ್ಟ್ರಿಕ್ ಕಾರಿನ ಮಾಲೀಕರು ತಮ್ಮ ಕಾರನ್ನು ಹೋಂಡಾದ ಪೋರ್ಟಬಲ್ ಜನರೇಟರ್ ನಿಂದ ಚಾರ್ಜ್ ಮಾಡುತ್ತಿರುವುದನ್ನು ಕಾಣಬಹುದು. ಈ ವೀಡಿಯೊ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ.

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆನಂದ್ ಮಹೀಂದ್ರಾರವರು ಕೂಡ ಈ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಟೆಸ್ಲಾ ಎಲೆಕ್ಟ್ರಿಕ್ ಕಾರು ಮಾಲೀಕರ ಕ್ರಿಯಾಶೀಲತೆಯನ್ನು ಮೆಚ್ಚಿಕೊಂಡ ಆನಂದ್ ಮಹೀಂದ್ರಾ ಈ ವೀಡಿಯೊವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕ್ರಿಯಾಶೀಲತೆಯನ್ನು ಕೇವಲ ಭಾರತೀಯರು ಮಾತ್ರ ತೋರುತ್ತಾರೆ ಎಂದು ಭಾವಿಸಲಾಗಿತ್ತು. ಬೇರೆಯವರು ಸಹ ತೋರುತ್ತಿರುವುದು ಅದ್ಭುತ ಎಂದು ಹೇಳಿದ್ದಾರೆ. ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಅನ್ನು ಹೋಂಡಾ ಕಂಪನಿಯ ಜನರೇಟರ್ ನಿಂದ ಚಾರ್ಜ್ ಮಾಡುತ್ತಿದ್ದಾನೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವೀಡಿಯೊದಲ್ಲಿರುವ ಟೆಸ್ಲಾ ಎಲೆಕ್ಟ್ರಿಕ್ ಕಾರಿನ ಮಾಲೀಕ ಹೊಸ ರೀತಿಯಲ್ಲಿ ಕಾರು ಚಾರ್ಜ್ ಮಾಡುವ ಪ್ರಕ್ರಿಯೆಯನ್ನು ವಿವರಿಸಿದ್ದಾನೆ. ಈ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರ್ ಅನ್ನು ಈ ರೀತಿಯಾಗಿ ಚಾರ್ಜ್ ಮಾಡುತ್ತಿರುವುದನ್ನು ನೋಡುತ್ತಿರುವುದಾಗಿ ಹೇಳಿದ್ದಾನೆ.

ಹೋಂಡಾದ ಜನರೇಟರ್‌ನೊಂದಿಗೆ ಪೂರ್ತಿಯಾಗಿ ಚಾರ್ಜ್ ಆಗಿರುವ ಟೆಸ್ಲಾ ಎಲೆಕ್ಟ್ರಿಕ್ ಕಾರನ್ನು ತಾನು ಇದುವರೆಗೂ ನೋಡಿರಲಿಲ್ಲವೆಂದು ಆ ವ್ಯಕ್ತಿ ಹೇಳಿದ್ದಾನೆ. ಈ ವೀಡಿಯೊವನ್ನು ಇದುವರೆಗೂ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್
ಈ ವೀಡಿಯೊವನ್ನು ಶೇರ್ ಮಾಡಿರುವ ಆನಂದ್ ಮಹೀಂದ್ರಾ, ಮಹೀಂದ್ರಾ ಎಲೆಕ್ಟ್ರಿಕ್ ಸಿಇಒ ಹಾಗೂ ಮಹೀಂದ್ರಾ ಎಲೆಕ್ಟ್ರಿಕ್ ಎಂಡಿ ಪವನ್ ಗೋಯೆಂಕಾರವರನ್ನು ಟ್ಯಾಗ್ ಮಾಡಿದ್ದಾರೆ. ಈ ರೀತಿಯ ಜನರೇಟರ್ ಗಳು ಬಂದರೆ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ದೂರ ತಲುಪುತ್ತವೆ ಎಂದು ಹೇಳಿದ್ದಾರೆ.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ 2020ರ ಥಾರ್ ಕಾರ್ ಅನ್ನು ಆಗಸ್ಟ್ 15ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ. ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಕಂಪನಿಯು ಈ ಕಾರಿಗೆ ಸಂಬಂಧಿಸಿದ ಹೊಸ ಹೊಸ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದೆ.


Click it and Unblock the Notifications








