ಜೀವ ಉಳಿಸಿದ ADAS ತಂತ್ರಜ್ಞಾನ: ತುರ್ತು ಪರಿಸ್ಥಿತಿಯಲ್ಲಿ ತಾನಾಗಿಯೇ ಆಸ್ಪತ್ರೆಗೆ ಕರೆದೊಯ್ದು ಕಾರು!

ಟೆಸ್ಲಾ ಎಲೆಕ್ಟ್ರಿಕ್ ಕಾರೊಂದು ಮಾಲೀಕನ ಜೀವ ಉಳಿಸಿ ಅವರ ಪಾಲಿಗೆ ದೈವವಾಗಿದೆ. ಈ ಕಾರಿನೊಳಗಿನ ತಂತ್ರಜ್ಞಾನವು ಅನಗತ್ಯವೆಂದು ಬಹಳಷ್ಟು ಜನರು ಹೇಳುತ್ತಿದ್ದಾರಾದರೂ, ಇತ್ತೀಚಿನ ಈ ಘಟನೆಯು ಹಲವರ ವಾದವನ್ನು ತಪ್ಪೆಂದು ನಿರೂಪಿಸಿದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ, ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಂಪೂರ್ಣ ಸ್ವಯಂ ಚಾಲನಾ ಸಾಮರ್ಥ್ಯವನ್ನು ಹೊಂದಿರುವ ಟೆಸ್ಲಾ ಮಾಡೆಲ್ 3 ಕಾರು, ನಿರ್ಣಾಯಕ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಿ ಜೀವ ಉಳಿಸಿದೆ ಎಂದು ಮಾಲೀಕರು ಬಹಿರಂಗಪಡಿಸಿದ್ದಾರೆ. ಈ ಘಟನೆ ನಡೆದ ನಿಖರವಾದ ಸ್ಥಳವನ್ನು ಅವರು ತಿಳಿಸಿಲ್ಲ. ಆದರೆ, ಇಡೀ ಘಟನೆಯನ್ನು ಮ್ಯಾಕ್ಸ್ಪಾಲ್ ಫ್ರಾಂಕ್ಲಿನ್ ತಮ್ಮ ಎಕ್ಸ್ (ಟ್ವಿಟರ್)ನಲ್ಲಿ ಹಂಚಿಕೊಂಡಿದ್ದಾರೆ. ಫ್ರಾಂಕ್ಲಿನ್ ಅವರು, ಡಿ-ಹೈಡ್ರೇಷನ್ ಮತ್ತು ಅಪಾಯಕಾರಿ ರಕ್ತದ ಗ್ಲೂಕೋಸ್ ಮಟ್ಟದಿಂದ ಬಳಲುತ್ತಿದ್ದರು. ಅವರ ಇನ್ಸುಲಿನ್ ಪಂಪ್‌ನಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ತುರ್ತಾಗಿ ಆಸ್ಪತ್ರೆ ಸೇರಬೇಕಿತ್ತು. ಆದ್ರೆ ಈ ಸಮಯದಲ್ಲಿ ಒಬ್ಬಂಟಿಯಾಗಿದ್ದರು, ತಕ್ಷಣದ ಸಹಾಯಕ್ಕೆ ಯಾರೂ ಇರಲಿಲ್ಲ.

tesla-model-3-ev-car-saved-owner-life-in-emergency-situation

ಟೆಸ್ಲಾ ಇತ್ತು: ಯಾರೂ ಸಹಾಯಕ್ಕೆ ಸಿಗದ ಪರಿಸ್ಥಿತಿಯಲ್ಲಿ, ಅವರು ಸಹಾಯಕ್ಕಾಗಿ ತಮ್ಮ ಟೆಸ್ಲಾ ಮಾಡೆಲ್ 3 ಕಡೆಗೆ ತಿರುಗಿದರು. ಟೆಸ್ಲಾ ಇತ್ತೀಚೆಗೆ ಅಮೆರಿಕಾದಲ್ಲಿ ತನ್ನ ಕಾರುಗಳಲ್ಲಿ ಸಂಪೂರ್ಣ ಸ್ವಯಂ ಚಾಲನಾ ವೈಶಿಷ್ಟ್ಯವನ್ನು ಅನ್‌ಲಾಕ್ ಮಾಡಿದೆ. ಹಾಗಾಗಿ ಮ್ಯಾಕ್ಸ್ಪಾಲ್ ಫ್ರಾಂಕ್ಲಿನ್ ಕೂಡಲೇ ಸ್ವಾಯತ್ತ ಚಾಲನಾ ಮೋಡ್ ಅನ್ನು ಸಕ್ರಿಯಗೊಳಿಸಿ, ತಮ್ಮ ಜೀವನವನ್ನು ಟೆಸ್ಲಾಗೆ ಒಪ್ಪಿಸಿದ್ದರು.

ಫ್ರಾಂಕ್ಲಿನ್ ಪ್ರಕಾರ, ಅವರ ಮನೆಯಿಂದ ವಿಎ ವೈದ್ಯಕೀಯ ಕೇಂದ್ರಕ್ಕೆ ಸುಮಾರು 13 ಮೈಲಿಗಳಿತ್ತು. ಟೆಸ್ಲಾ ಮಾಡೆಲ್ 3 ಯಾವುದೇ ಅಡೆತಡೆಗಳಿಲ್ಲದೆ ಆಸ್ಪತ್ರೆಯನ್ನು ತಲುಪಿದೆ. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ, ಟೆಸ್ಲಾ ಮಾಡೆಲ್-3 ಕೌಶಲ್ಯದಿಂದ ಆಸ್ಪತ್ರೆಯನ್ನು ತಲುಪಲು ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ.

tesla-model-3-ev-car-saved-owner-life-in-emergency-situation

ಆಸ್ಪತ್ರೆಗೆ ಆಗಮಿಸಿದಾಗ, ಟೆಸ್ಲಾ ಮಾಡೆಲ್ - 3 ಸ್ವಯಂಚಾಲಿತವಾಗಿ ನಿಲ್ಲಿಸಿತು, ಇದು ಮಾಲೀಕರಿಗೆ ವಿಳಂಬವಿಲ್ಲದೆ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಟ್ಟಿತು. "ನನ್ನ ಬಳಿ ಪೋರ್ಷೆ, ಮರ್ಸಿಡಿಸ್, ಬಿಎಂಡಬ್ಲ್ಯು, ಅಕುರಾ ಮತ್ತು ಕ್ಯಾಡಿಲಾಕ್ ಸೇರಿದಂತೆ ಐಷಾರಾಮಿ ವಾಹನಗಳಿವೆ. ಆದ್ರೆ ನಾನು ಟೆಸ್ಲಾವನ್ನು ಇಂದು ಆಟೋಮೋಟಿವ್ ನಾವೀನ್ಯತೆಯ ಉತ್ತುಂಗ ಎಂದು ನಿಸ್ಸಂದಿಗ್ಧವಾಗಿ ಘೋಷಿಸುತ್ತೇನೆ. ನಿರ್ಣಾಯಕ ಕ್ಷಣಗಳಲ್ಲಿ ಜೀವ ಉಳಿಸುವ ಸಾಮರ್ಥ್ಯಗಳು ಅದರ ಶ್ರೇಷ್ಠತೆಯನ್ನು ಒತ್ತಿಹೇಳುತ್ತವೆ ಎಂದು ಟೆಸ್ಲಾ ಮಾಡೆಲ್ - 3 ಕಾರಿನೊಂದಿಗಿನ ತಮ್ಮ ಅನುಭವವನ್ನು ಮ್ಯಾಕ್ಸ್ಪಾಲ್ ಫ್ರಾಂಕ್ಲಿನ್ ಹಂಚಿಕೊಂಡಿದ್ದಾರೆ.

ಎಲಾನ್ ಮಸ್ಕ್‌ಗೆ ಫ್ರಾಂಕ್ಲಿನ್ ಕೃತಜ್ಞತೆ: ಟೆಸ್ಲಾ ಮಾಡೆಲ್ 3 ನಂತಹ ಅತ್ಯಾಧುನಿಕ ಕಾರುಗಳನ್ನು ಪರಿಚಯಿಸಿದಕ್ಕೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. "ಕೇವಲ ಸಾರಿಗೆ ಮಾತ್ರವಲ್ಲದೇ ಅದಕ್ಕಿಂತ ಹೆಚ್ಚಿನ ತಂತ್ರಜ್ಞಾನವನ್ನು ಮುನ್ನಡೆಸುವಲ್ಲಿ ಎಲಾನ್ ಮಸ್ಕ್ ಅವರ ನಾಯಕತ್ವಕ್ಕಾಗಿ ನಾನು ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

tesla-model-3-ev-car-saved-owner-life-in-emergency-situation

ಟೆಸ್ಲಾ ಮಾಡೆಲ್-3: ಟೆಸ್ಲಾ ಕಾರುಗಳಲ್ಲಿ ಅತ್ಯಂತ ಕೈಗೆಟುಕುವ ವಾಹನ ಇದಾಗಿದೆ. ಇದು 60 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಕಾರು ಒಮ್ಮೆ ಚಾರ್ಜ್‌ ಮಾಡಿದ್ರೆ ಸುಮಾರು 415 ಕಿ.ಮೀ ರೇಂಜ್ ನೀಡುತ್ತದೆ. ಈ ಎಂಜಿನ್ 283 ಬಿಹೆಚ್‌ಪಿ ಪವರ್ ಮತ್ತು 420 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 100 ಕಿ.ಮೀ ವೇಗವನ್ನು ಕೇವಲ 6.1 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 15, 2024, 12:28 [IST]
English summary
Tesla model 3 ev car saved owner life in emergency situation
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+