Tesla ಎಲೆಕ್ರಿಕ್ ಕಾರಿಗೆ ಪೆಟ್ರೋಲ್ ತುಂಬಿಸಲು ಪ್ರಯತ್ನಿಸಿದ ಯುವತಿ: ಎಲಾನ್ ಮಸ್ಕ್ ಪ್ರತಿಕ್ರಿಯೆಗೆ ಜನ ಸುಸ್ತು

ಟೆಸ್ಲಾ (Tesla) ಅಮೆರಿಕಾ ಮೂಲದ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿದೆ. ಕಂಪನಿಯ ಎಲೆಕ್ಟ್ರಿಕ್ ಕಾರುಗಳು ತಮ್ಮ ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ನೋಟ, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಅತ್ಯಾಧುನಿಕ ಫೀಚರ್'ಗಳಿಗೆ ಹೆಸರುವಾಸಿಯಾಗಿವೆ. ಈ ಟೆಸ್ಲಾ ಕಂಪನಿಯು ಭಾರತಕ್ಕೆ ಕಾಲಿಡಲು ಕಳೆದ ಕೆಲವು ವರ್ಷಗಳಿಂದ ಸತತ ಪ್ರಯತ್ನಗಳು ನಡೆಯುತ್ತಿದೆ.

ಈ ಟೆಸ್ಲಾ ಕಾರು ಆನೇಕ ದೇಶಗಳಲ್ಲಿ ಮಾರಾಟವಾಗುತ್ತಿದೆ. ಇತೀಚೆಗೆ, ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಕಾರಿಗೆ ಪೆಟ್ರೋಲ್ ತುಂಬಿಸಲು ಪ್ರಯತ್ನಿಸುತ್ತಿರುವ ವೀಡಿಯೊವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಟ್ ಮಾಡಲಾಗಿದೆ, ಈ ವೀಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜಗತ್ತಿನದ್ಯಾಂತ ಎಲೆಕ್ಟ್ರಿಕ್ ಕಾರುಗಳು ಬಾರೀ ಜನಪ್ರಿಯವಾಗುತ್ತಿದೆ, ಇನ್ನು ಎಲೆಕ್ಟ್ರಿಕ್ ಕಾರುಗಳಿಗೆ ಪೆಟ್ರೋಲ್ ಕಾರುಗಳ ರೀತಿಯಲ್ಲಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

Tesla Car O

UK ಯಲ್ಲಿನ ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಕಾರಿನ ಡ್ರೈವರ್ ಎಡವಟ್ಟು ಮಾಡಿದ್ದಾರೆ. 22 ವರ್ಷದ ಡೇನಿಯಲ್ ರೈಟ್ ತನ್ನ ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಕಾರನ್ನು ಪೆಟ್ರೋಲ್ ಪಂಪ್ಗೆ ತೆಗೆದುಕೊಂಡು ಹೋಗಿ, ಪೆಟ್ರೋಲ್ ತುಂಬುವ ಕ್ಯಾಪ್ ಅನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದರು. ಇದನ್ನು ಬೇರೆಯವರು ವೀಡಿಯೊ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ಕೈಯಲ್ಲಿ ಪೆಟ್ರೋಲ್ ಹಾಕುವ ಪೈಪ್ ಇಡಿದುಕೊಂಡು ಕಾರಿನ ಸುತ್ತ ಪೆಟ್ರೋಲ್ ಹಾಕುವ ಕ್ಯಾಪ್ ಹುಡುಕುತ್ತ ಸುತ್ತಿದಳು. ಆದರೆ ಅಂತಹ ಇಂಧನ ತುಂಬುವ ಕ್ಯಾಪ್ ಇಲ್ಲದಿರುವುದರಿಂದ ಗೊಂದಲಕ್ಕೊಳಗಾದಳು. ಇದು ಎಲೆಕ್ಟ್ರಿಕ್ ಕಾರು ಮತ್ತು ಪೆಟ್ರೋಲ್‌ನಿಂದ ಅಲ್ಲ ಎಂದು ಜನರು ಪದೇ ಪದೇ ಹೇಳಿದಾಗ ಮಾತ್ರ ಅವಳು ತನ್ನ ಶ್ರಮ ಕೈಬಿಟ್ಟಿದ್ದಾಳೆ ಎಂದು ವೀಡಿಯೊ ತೋರಿಸುತ್ತದೆ.

ಈ ವೀಡಿಯೊ ತ್ವರಿತವಾಗಿ ವೈರಲ್ ಆಗಿದ್ದು, 40 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕೆಲವರು ಅಷ್ಟು ಜನಪ್ರಿಯವಾಗಿ ಟೆಸ್ಲಾ ಕಾರು, ಎಲೆಕ್ಟ್ರಿಕ್ ಎಂದು ತಿಳಿದಿಲ್ಲವೇ ಎಂದು, ಇನ್ನು ಕೆಲವರು ಆಕೆಯ ಬೈದು ಕಾಮೆಂಟ್ ಮಾಡಿದ್ದಾರೆ. ಇನ್ನು ಈ ವೀಡಿಯೊ ಎಲಾನ್ ಮಸ್ಕ್ ಅವರ ಗಮನಸೆಳೆದಿದೆ. ಈ ವೀಡಿಯೊಗೆ ಅವರು ಪ್ರತಿಕ್ರಿಯೆ ನೀಡಿದ್ದು, ಯುವತಿಯನ್ನು ಸಮರ್ಥಿಸಿಕೊಂಡರು, ಇದು "ಕಾಲಕಾಲಕ್ಕೆ ಸಂಭವಿಸುತ್ತದೆ" ಮತ್ತು ಇಂತಹ ಅಭ್ಯಾಸಗಳು ಮುಂದೆ ಸಾಯುತ್ತದೆ ಎಂದು ಹೇಳಿದ್ದಾರೆ.

ಜನರು ಇನ್ನೂ ಹೊಸ ಎಲೆಕ್ಟ್ರಿಕ್ ಪ್ರೊಪಲ್ಷನ್ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಬೇಕಾಗಿಲ್ಲ ಎಂದು ಟೆಸ್ಲಾ ಸಿಇಒ ಸ್ಪಷ್ಟವಾಗಿ ಸೂಚಿಸಿದ್ದಾರೆ. ಡೈಲಿ ಸ್ಟಾರ್‌ನೊಂದಿಗೆ ಮಾತನಾಡುತ್ತಾ, ಟೆಸ್ಲಾ ಮಾಡೆಲ್ ವೈ ಮಾಲೀಕರು ವೀಡಿಯೊವನ್ನು ತೆಗೆದುಕೊಂಡಾಗ ಇವಿ ತುಂಬಾ ಹೊಸದಾಗಿತ್ತು ಮತ್ತು ಇಂಧನ ತುಂಬುವ ನಿಲ್ದಾಣದಲ್ಲಿ ಪೆಟ್ರೋಲ್ ಕಾರುಗಳಿಗೆ ಇಂಧನ ತುಂಬುವ ಅವರ ಹಳೆಯ ಅಭ್ಯಾಸದಿಂದ ಇಂತಹ ಎಡವಟ್ಟು ಆಗಿದೆ ಎಂದು ಹೇಳಿದರು.

ಇನ್ನು ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ವಾಹನಗಳ ಮಾರಾಟ ಆರಂಭಿಸುವ ಟೆಸ್ಲಾ ಕನಸನ್ನು ಎಲಾನ್ ಮಸ್ಕ್ ಹಂಚಿಕೊಂಡಿದ್ದರು. ಆದರೆ ಅದು ಇನ್ನು ಕೂಡ ಸಾಧ್ಯವಾಗಿಲ್ಲ. ಬ್ರ್ಯಾಂಡ್ ಭಾರತದಲ್ಲಿ ಕಚೇರಿಯನ್ನು ನೋಂದಾಯಿಸಿದೆ ಮತ್ತು ಕಾರನ್ನು ಖರೀದಿದಾರರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲು ಆಮದು ಸುಂಕವನ್ನು ಕಡಿಮೆ ಮಾಡಲು ಅವರು ಸರ್ಕಾರವನ್ನು ವಿನಂತಿಸಿದ್ದರು. ಇವಿಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಭಾರತ ಸರ್ಕಾರ ಒಪ್ಪಲಿಲ್ಲ.

ಈಗ ಭಾರತದಲ್ಲಿ ಟೆಸ್ಲಾ ಕಾರುಗಳ ಬಿಡುಗಡೆಯನ್ನು ವಿಳಂಬವಾಗಿದೆ. ಆದರೆ ಟೆಸ್ಲಾ ಮಾದರಿಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಬಹುದು. ಅನೇಕ ಖಾಸಗಿ ಖರೀದಿದಾರರು ಭಾರತಕ್ಕೆ ಟೆಸ್ಲಾವನ್ನು ಆಮದು ಮಾಡಿಕೊಳ್ಳುವುದನ್ನು ಮತ್ತು ಅದನ್ನು ಇಲ್ಲಿ ನೋಂದಾಯಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಇನ್ನು ಹೊಸ ವರದಿಗಳ ಪ್ರಕಾರ, ಶೀಘ್ರದಲ್ಲೇ ಟೆಸ್ಲಾ ಕಂಪನಿಯು ಭಾರತದಲ್ಲಿ ಪ್ರಾರಂಭವಾಗುವ ಸಾಧ್ಯತೆಗಳಿದೆ.

Article Published On: Wednesday, May 24, 2023, 16:33 [IST]
English summary
Tesla owner tried to refill ev with petrol elon musk responded details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+