ಪೊಲೀಸ್ ಪಡೆ ಸೇರಿದ ದುಬಾರಿ ಬೆಲೆಯ ಕಾರುಗಳು

ಥೈಲ್ಯಾಂಡ್ ಪೊಲೀಸರು ಇತ್ತೀಚೆಗಷ್ಟೇ ಟೆಸ್ಲಾ ಮಾಡೆಲ್ 3 ಕಾರ್ ಅನ್ನು ತಮ್ಮ ಪಡೆಗೆ ಸೇರ್ಪಡೆಗೊಳಿಸಿದ್ದಾರೆ. ವರದಿಗಳ ಪ್ರಕಾರ, ಥೈಲ್ಯಾಂಡ್ ಪೊಲೀಸರು ಟೆಸ್ಲಾ ಮಾಡೆಲ್ 3ನ ಏಳು ಕಾರುಗಳನ್ನು ಗುತ್ತಿಗೆಗೆ ಪಡೆದಿದ್ದಾರೆ. ಈ ಎಲ್ಲಾ ಕಾರುಗಳನ್ನು ಪೊಲೀಸ್ ಬಳಕೆಗೆ ತಕ್ಕಂತೆ ಮಾಡಿಫೈಗೊಳಿಸಲಾಗಿದೆ.

ಪೊಲೀಸ್ ಪಡೆ ಸೇರಿದ ದುಬಾರಿ ಬೆಲೆಯ ಕಾರುಗಳು

ಈ ಕಾರುಗಳಲ್ಲಿ ಲೈಟ್ ಬಾರ್, ರೇಡಿಯೋ ಹಾಗೂ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ಈ ಕಾರುಗಳನ್ನು ಬ್ಯಾಂಕ್‌ಕಾಕ್‌ನ ಥಾಯ್ ಪೊಲೀಸ್ ಪ್ರಧಾನ ಕಚೇರಿಗೆ ತಲುಪಿಸಲಾಗಿದೆ. ಟೆಸ್ಲಾ ಮಾಡೆಲ್ 3 ಕಾರಿನ ಬೆಲೆ ಸುಮಾರು ರೂ.44 ಲಕ್ಷಗಳಾಗಿದೆ. ಆದರೆ, ಕಾರುಗಳ ಮೇಲೆ ವಿಧಿಸಲಾಗುವ ತೆರಿಗೆಯ ಕಾರಣಕ್ಕೆ ಥೈಲ್ಯಾಂಡ್ ಪೊಲೀಸರು ಈ ಕಾರುಗಳಿಗೆ ಇನ್ನೂ ಹೆಚ್ಚು ಬೆಲೆ ನೀಡಬೇಕಾಗುತ್ತದೆ.

ಪೊಲೀಸ್ ಪಡೆ ಸೇರಿದ ದುಬಾರಿ ಬೆಲೆಯ ಕಾರುಗಳು

ಥೈಲ್ಯಾಂಡ್‌ನಲ್ಲಿ ಎಲೆಕ್ಟ್ರಿಕ್ ಕಾರುಗಳ ಬೆಲೆ ಸರಾಸರಿ ರೂ.50 ಲಕ್ಷಗಳಾಗಿದೆ. ಸಿಂಗಾಪುರದಲ್ಲಿ ಎಲೆಕ್ಟ್ರಿಕ್ ಕಾರುಗಳ ಸರಾಸರಿ ಬೆಲೆ ಇದಕ್ಕಿಂತ ಎರಡು ಪಟ್ಟು ಹೆಚ್ಚು. ಟೆಸ್ಲಾ ಮಾಡೆಲ್ 3 ಕಾರುಗಳು ತಮ್ಮ ಪರ್ಫಾಮೆನ್ಸ್‌ಗೆ ಹೆಸರುವಾಸಿಯಾಗಿವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಪೊಲೀಸ್ ಪಡೆ ಸೇರಿದ ದುಬಾರಿ ಬೆಲೆಯ ಕಾರುಗಳು

ಈ ಕಾರುಗಳನ್ನು ಪೊಲೀಸರು ಕ್ರಿಮಿನಲ್‌ಗಳನ್ನು ಬೆನ್ನತ್ತಲು ಬಳಸುತ್ತಾರೆ. ಇದರಿಂದಾಗಿ ಅಪರಾಧಿಗಳನ್ನು ಹಿಡಿಯಲು ಸುಲಭವಾಗುತ್ತದೆ. ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನಲ್ಲಿ 75 ಕಿ.ವ್ಯಾ ಬ್ಯಾಟರಿ ಅಳವಡಿಸಲಾಗಿದೆ. ಈ ಬ್ಯಾಟರಿ ಕಾರಿನಲ್ಲಿರುವ ಎರಡು ಮೋಟರ್‌ಗಳಿಗೆ ಪವರ್ ಒದಗಿಸುತ್ತದೆ.

ಪೊಲೀಸ್ ಪಡೆ ಸೇರಿದ ದುಬಾರಿ ಬೆಲೆಯ ಕಾರುಗಳು

ಈ ಕಾರಿನಲ್ಲಿರುವ ಬ್ಯಾಟರಿ 450 ಬಿಹೆಚ್‌ಪಿ ಪವರ್ ಹಾಗೂ 639 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಿಂದಾಗಿ ಅಪರಾಧಿಗಳನ್ನು ವೇಗವಾಗಿ ಬೆನ್ನತ್ತಬಹುದು. ಈ ಕಾರು ಕೇವಲ 3.4 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಆಕ್ಸೆಲರೇಟ್ ಮಾಡುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಪೊಲೀಸ್ ಪಡೆ ಸೇರಿದ ದುಬಾರಿ ಬೆಲೆಯ ಕಾರುಗಳು

ಈ ಕಾರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಈ ಕಾರು 518 ಕಿ.ಮೀಗಳವರೆಗೆ ಚಲಿಸುತ್ತದೆ. ಟೆಸ್ಲಾ ಕಾರುಗಳನ್ನು ಬೇರೆ ದೇಶಗಳ ಸರ್ಕಾರಿ ಸಂಸ್ಥೆಗಳು ಬಳಸುತ್ತಿವೆ. ಟೆಸ್ಲಾ ಮಾಡೆಲ್ 3ರ 20 ಯೂನಿಟ್‌ಗಳನ್ನು ತೈವಾನ್ ಸೇನೆಯು ಬುಕ್ಕಿಂಗ್ ಮಾಡಿದೆ.

ಪೊಲೀಸ್ ಪಡೆ ಸೇರಿದ ದುಬಾರಿ ಬೆಲೆಯ ಕಾರುಗಳು

ಅಮೆರಿಕಾದಲ್ಲಿ ಟೆಸ್ಲಾ ಕಾರುಗಳನ್ನು ಕನೆಕ್ಟಿಕಟ್‌ನ ವೆಸ್ಟ್‌ಪೋರ್ಟ್ ಪೊಲೀಸ್ ಇಲಾಖೆ, ಇಂಡಿಯಾನಾದ ಬಾರ್ಗೆಸ್ವಿಲ್ಲೆ ಪೊಲೀಸ್ ಇಲಾಖೆ ಹಾಗೂ ಫ್ರೀಮಾಂಟ್ ಪೊಲೀಸ್ ಇಲಾಖೆಗಳು ಬಳಸುತ್ತಿವೆ. ಕಡಿಮೆ ಮೇಂಟೆನೆನ್ಸ್ ಹಾಗೂ ಇಂಧನ ವೆಚ್ಚದ ಕಾರಣಕ್ಕೆ ಟೆಸ್ಲಾ ಕಾರುಗಳು ಪೊಲೀಸ್ ಪಡೆಗಳಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಟೆಸ್ಲಾ ಕಾರುಗಳಿಂದ ವರ್ಷಕ್ಕೆ ಸಾವಿರಾರು ಡಾಲರ್‌ಗಳನ್ನು ಉಳಿಸಬಹುದು.

Most Read Articles

Kannada
English summary
Thailand Police add Tesla Model 3 performance to its fleet. Read in Kannada.
Story first published: Wednesday, April 22, 2020, 17:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X