ವಾಹನ ಚಾಲಕರೇ ಎಚ್ಚರ: ನಿಮ್ಮನ್ನೂ ರಾಬರಿ ಮಾಡಬಹುದು ಟಕ್ ಟಕ್ ಗ್ಯಾಂಗ್..!
ಕುಖ್ಯಾತ ಟಕ್ ಟಕ್ ಗ್ಯಾಂಗ್ ದೇಶದ ಉತ್ತರ ಭಾಗದಲ್ಲಿ ಸಾಕಷ್ಟು ಸಕ್ರಿಯವಾಗಿದೆ. ದೆಹಲಿ ಎನ್‌ಸಿಆರ್‌ನ ಜನನಿಬಿಡ ರಸ್ತೆಗಳಲ್ಲಿ ಕಾರ್ಯನಿರ್ವಹಿಸುವ ಈ ಗ್ಯಾಂಗ್ ಹಲವು ಬಾರಿ ಸಿಕ್ಕಿ ಬಿದ್ದಿದೆ. ಜನನಿಬಿಡ ರಸ್ತೆಗಳಲ್ಲಿ ಜನರನ್ನು ಲೂಟಿ ಮಾಡುವ ಟಕ್ ಟಕ್ ಗ್ಯಾಂಗ್ ಈಗ ತನ್ನ ಕಾರ್ಯತಂತ್ರವನ್ನು ಬದಲಿಸಿದೆ.

ಹೊಸ ಕಾರ್ಯತಂತ್ರದಂತೆ ವ್ಯಕ್ತಿಯೊಬ್ಬರನ್ನು ರಾಬರಿ ಮಾಡುತ್ತಿರುವ ಈ ಗ್ಯಾಂಗ್‍ನ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಮೊದಲು ಮುಂಬೈನಲ್ಲಿ ರಾಬರಿ ಮಾಡುತ್ತಿದ್ದ ಗ್ಯಾಂಗ್ ನಂತರ ದೆಹಲಿಗೆ ಕಾಲಿಟ್ಟಿತು. ದೆಹಲಿಯಲ್ಲಿ ಈ ಗ್ಯಾಂಗ್ ರಾಬರಿ ಮಾಡುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ನಡೆದಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಈ ವೀಡಿಯೊದಲ್ಲಿರುವ ವ್ಯಕ್ತಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ ಈ ಗ್ಯಾಂಗ್‍ನ ಸದಸ್ಯರು ಅವರ ಕೈನಲ್ಲಿದ್ದ ಬ್ಯಾಗ್ ಅನ್ನು ಕಸಿದು ಪರಾರಿಯಾಗಿದ್ದಾರೆ.

ಈ ವೀಡಿಯೊದಲ್ಲಿ ಹ್ಯುಂಡೈ ಎಲೈಟ್ ಐ20 ಕಾರು ಜನನಿಬಿಡ ರಸ್ತೆಯಲ್ಲಿ ಬರುತ್ತಿರುವುದನ್ನು ಕಾಣಬಹುದು. ಈ ರಸ್ತೆಯಲ್ಲಿ ಇತರ ಕಾರುಗಳು, ಬೈಕುಗಳು ಹಾಗೂ ದನಗಳು ಓಡಾಡುತ್ತಿವೆ. ಎಲೈಟ್ ಐ20 ಕಾರು ಎಚ್ಚರಿಕೆಯಿಂದ ಚಲಿಸುತ್ತಿದೆ.

ಕಪ್ಪು ಬಣ್ಣದ ಸ್ಕೂಟರ್‍ನಲ್ಲಿ ಕಾರ್ ಅನ್ನು ಹಿಂಬಾಲಿಸಿಕೊಂಡು ಬರುವ ಇಬ್ಬರು, ಕಾರು ನಿಧಾನವಾಗುತ್ತಿದ್ದಂತೆ ಕಾರಿನ ವಿಂಡೊವನ್ನು ಬಡಿದು, ಕಾರಿಗೆ ಬೆಂಕಿ ಬಿದ್ದಿದೆ ಎಂದು ಡ್ರೈವರ್‍ಗೆ ಹೇಳುತ್ತಾರೆ. ನಡೆದು ಕೊಂಡು ಬರುವ ಮತ್ತೊಬ್ಬ ಕಾರಿನ ಮುಂದೆ ಆಯಿಲ್ ಎರಚಿ ಮುಂದೆ ಹೋಗುತ್ತಾನೆ.

ಕಾರನ್ನು ಚಾಲನೆ ಮಾಡುತ್ತಿರುವ ವ್ಯಕ್ತಿ ಏನಾಗಿರಬಹುದು ಎಂದು ಯೋಚಿಸುವಷ್ಟರಲ್ಲಿ ಕಾರಿನ ಬಲಭಾಗಕ್ಕೆ ಮತ್ತೊಂದು ಸ್ಕೂಟರಿನಲ್ಲಿ ಬರುವವರೂ ಸಹ ಕಾರಿಗೆ ಬೆಂಕಿ ಬಿದ್ದಿರುವುದಾಗಿ ತಿಳಿಸುತ್ತಾರೆ. ಎರಡು ಬೇರೆ ಬೇರೆ ಸ್ಕೂಟರ್‍ಗಳಲ್ಲಿ ಬಂದವರು ಕಾರಿಗೆ ಬೆಂಕಿ ಬಿದ್ದಿದೆ ಎಂದು ಹೇಳಿದ ಕಾರಣ ಕಾರು ಚಾಲನೆ ಮಾಡುತ್ತಿದ್ದವರು ಗಾಬರಿಗೊಂಡು ಕಾರಿನಿಂದ ಕೆಳಕ್ಕಿಳಿಯುತ್ತಾರೆ.

ಆದರೆ ಕಾರಿನಿಂದ ಕೆಳಗಿಳಿಯುವ ವೇಳೆ ಮುನ್ನೆಚ್ಚರಿಕೆಯಾಗಿ ಹಣವಿದ್ದ ಬ್ಯಾಗ್ ಅನ್ನು ಕಾರಿನಲ್ಲಿಡದೇ, ಕೈಯಲ್ಲಿಡಿದು ಕಾರಿನಿಂದ ಕೆಳಕ್ಕಿಳಿಯುತ್ತಾರೆ. ಕಾರಿನಿಂದ ಹೊರ ಬಂದು ಕಾರಿಗೆ ಯಾವುದೇ ತೊಂದರೆಯಾಗಿಲ್ಲವೆಂದು ಖಚಿತಪಡಿಸಿಕೊಳ್ಳುತ್ತಾರೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಕಾರಿನ ಮುಂಭಾಗದಲ್ಲಿ ನಿಂತು ಕಾರಿನ ಮುಂದೆ ಆಯಿಲ್ ಹೇಗೆ ಬಂತು, ಕಾರಿಗೆ ಬೆಂಕಿ ಬಿದ್ದಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸುತ್ತಾರೆ. ಕಾರಿನ ಬಲಭಾಗಕ್ಕೆ ಕಪ್ಪು ಸ್ಕೂಟರಿನಲ್ಲಿ ಬಂದಿದ್ದ ಇಬ್ಬರು ಮತ್ತೆ ವಾಪಸ್ ಬಂದು, ಆ ವ್ಯಕ್ತಿಯು ಕಾರ್ ಅನ್ನು ಪರೀಕ್ಷಿಸುತ್ತಿರುವಾಗ ಅವರ ಕೈಯಲ್ಲಿದ್ದ ಬ್ಯಾಗ್ ಅನ್ನು ಕಸಿದುಕೊಂಡು ಪರಾರಿಯಾಗುತ್ತಾರೆ.
MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಬ್ಯಾಗ್ ಕಳೆದು ಕೊಂಡ ವ್ಯಕ್ತಿಯನ್ನು ವಿಜಯ್ ಎಂದು ಗುರುತಿಸಲಾಗಿದೆ. ವಿಜಯ್‍ರವರು ನರೆಲಾ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಿಯಾಗಿದ್ದು, ಎರಡೂವರೆ ಲಕ್ಷ ರೂಪಾಯಿಗಳನ್ನು ಬ್ಯಾಂಕಿನಿಂದ ವಿಥ್ ಡ್ರಾ ಮಾಡಿಕೊಂಡು ಬರುವಾಗ ಈ ಘಟನೆ ಸಂಭವಿಸಿದೆ. ಈ ಗ್ಯಾಂಗ್‍ನ ಸದಸ್ಯರು ವಿಜಯ್‍ರವರನ್ನು ಬ್ಯಾಂಕಿನಿಂದ ಹಿಂಬಾಲಿಸಿಕೊಂಡು ಬಂದಿರುವ ಸಾಧ್ಯತೆಗಳಿವೆ.
MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!
ಅಂದ ಹಾಗೆ ಈ ಟಕ್ ಟಕ್ ಗ್ಯಾಂಗ್‍ನ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಮೊದಲು ಈ ಗ್ಯಾಂಗ್‍ನ ಸದಸ್ಯರು ವಾಹನದ ಹೊರಗೆ ಹಣವನ್ನು ಎಸೆದು ವಾಹನಗಳ ಚಾಲಕರಿಗೆ ಬಿದ್ದಿರುವ ಹಣವನ್ನು ಎತ್ತಿಕೊಳ್ಳುವಂತೆ ತಿಳಿಸಿ, ಆ ವಾಹನಗಳಲ್ಲಿದ್ದವರು ಹಣವನ್ನು ಎತ್ತಿಕೊಳ್ಳಲು ಮುಂದಾಗುತ್ತಿದ್ದಂತೆ ವಾಹನಗಳಲ್ಲಿರುವುದನ್ನು ದೋಚುತ್ತಿದ್ದರು.

ಇದರ ಜೊತೆಗೆ ಈ ಗ್ಯಾಂಗ್‍ನ ಸದಸ್ಯರು ಅನೇಕ ಸಂದರ್ಭಗಳಲ್ಲಿ, ಪಾದಚಾರಿಗಳಂತೆ ನಟಿಸಿ ಉದ್ದೇಶಪೂರ್ವಕವಾಗಿ ವಾಹನಕ್ಕೆ ಹೊಡೆಯುತ್ತಾರೆ. ಆ ವಾಹನದ ಚಾಲಕನ ಗಮನವನ್ನು ಬೇರೆಡೆ ಸೆಳೆದು ಮೊಬೈಲ್ ಫೋನ್‌ಗಳಂತಹ ವಸ್ತುಗಳನ್ನು ದೋಚಿ ಪರಾರಿಯಾಗುತ್ತಾರೆ.


Click it and Unblock the Notifications