ಬೈಕ್ ಪ್ರವಾಸದ ವೇಳೆ ಅಭಿಮಾನಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ನಟ

ತಲಾ ಎಂದೇ ಖ್ಯಾತರಾದ ನಟ ಅಜಿತ್ ಸದ್ಯಕ್ಕೆ ವಲಿಮೈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ 90%ನಷ್ಟು ಪೂರ್ಣಗೊಂಡಿದೆ. ಈ ಚಿತ್ರವನ್ನು ವಿನೋದ್ ನಿರ್ದೇಶಿಸುತ್ತಿದ್ದು, ಬೋನಿ ಕಪೂರ್ ನಿರ್ಮಿಸುತ್ತಿದ್ದಾರೆ.

ಬೈಕ್ ಪ್ರವಾಸದ ವೇಳೆ ಅಭಿಮಾನಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ನಟ

ನಟ ವಿಜಯ್ ಅವರ ಮಾಸ್ಟರ್ ಚಿತ್ರ ಪೊಂಗಲ್ ಹಬ್ಬಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ವಿಜಯ್ ಅವರ ಮುಂದಿನ ಚಿತ್ರಗಳ ಬಗ್ಗೆಯೂ ಮಾಹಿತಿ ಬಿಡುಗಡೆಯಾಗಿದೆ. ಆದರೆ ವಲಿಮೈ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಲಭ್ಯವಿರಲಿಲ್ಲ.

ಬೈಕ್ ಪ್ರವಾಸದ ವೇಳೆ ಅಭಿಮಾನಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ನಟ

ವಲಿಮೈ ಚಿತ್ರದ ಅಪ್‌ಡೇಟ್‌ಗಾಗಿ ಅಜಿತ್'ರವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಈಗ ನಟ ಅಜಿತ್ ಅವರಿಗೆ ಸಂಬಂಧಿಸಿದ ಹೊಸ ಫೋಟೋವೊಂದು ಬಿಡುಗಡೆಯಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬೈಕ್ ಪ್ರವಾಸದ ವೇಳೆ ಅಭಿಮಾನಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ನಟ

ಈ ಫೋಟೋದಲ್ಲಿ ತಲಾ ಅಜಿತ್ ಜಾಕೆಟ್ ಧರಿಸಿ ಅಭಿಮಾನಿಯೊಬ್ಬರ ಜೊತೆಗೆ ನಿಂತಿರುವುದನ್ನು ಕಾಣಬಹುದು. ವರದಿಗಳ ಪ್ರಕಾರ ಈ ಫೋಟೋವನ್ನು ಉತ್ತರ ಪ್ರದೇಶದ ವಾರಣಾಸಿಯಲ್ಲಿ ತೆಗೆಯಲಾಗಿದೆ.

ಬೈಕ್ ಪ್ರವಾಸದ ವೇಳೆ ಅಭಿಮಾನಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ನಟ

ತಲಾ ಅಜಿತ್ ವಾರಣಾಸಿಯ ರಸ್ತೆಬದಿಯ ಅಂಗಡಿಯಲ್ಲಿ ಊಟ ಮಾಡುವಾಗ ಈ ಫೋಟೋ ತೆಗೆಯಲಾಗಿದೆ ಎಂದು ಹೇಳಲಾಗಿದೆ. ಈ ಫೋಟೋಗೆ ಸಂಬಂಧಿಸಿದಂತೆ ವಿವಿಧ ಮಾಹಿತಿ ಬಹಿರಂಗವಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬೈಕ್ ಪ್ರವಾಸದ ವೇಳೆ ಅಭಿಮಾನಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ನಟ

ಈ ಮಾಹಿತಿಗಳ ತಲಾ ಅಜಿತ್ ಸಿಕ್ಕಿಂಗೆ ಬೈಕ್ ಮೂಲಕ ಪ್ರವಾಸ ಕೈಗೊಂಡಿದ್ದಾರೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂ ರಾಜ್ಯವು ಭೂತಾನ್, ಟಿಬೆಟ್ ಹಾಗೂ ನೇಪಾಳ ದೇಶಗಳ ಗಡಿಯಲ್ಲಿದೆ.

ಬೈಕ್ ಪ್ರವಾಸದ ವೇಳೆ ಅಭಿಮಾನಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ನಟ

ಅಜಿತ್'ರವರು ಈ ರಮಣೀಯ ಪ್ರದೇಶಕ್ಕೆ ಬೈಕ್ ಮೂಲಕ ತೆರಳುತ್ತಿದ್ದಾರೆ. ಸಿಕ್ಕಿಂಗೆ ಸಾಗುವ ಮಾರ್ಗ ಮಧ್ಯೆ ತಲಾ ಅಜಿತ್ ತಮ್ಮ ಬೈಕ್ ಅನ್ನು ವಾರಣಾಸಿಯಲ್ಲಿ ನಿಲ್ಲಿಸಿ ರಸ್ತೆಬದಿಯ ಅಂಗಡಿಯಲ್ಲಿ ಊಟ ಮಾಡುತ್ತಿದ್ದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬೈಕ್ ಪ್ರವಾಸದ ವೇಳೆ ಅಭಿಮಾನಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ನಟ

ಆಗ ಅಭಿಮಾನಿಯೊಬ್ಬರು ಅವರನ್ನು ಗುರುತಿಸಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್ ತಮಿಳುನಾಡಿನ ರಾಜಧಾನಿ ಚೆನ್ನೈನಿಂದ ಸುಮಾರು 2,400 ಕಿ.ಮೀ ದೂರದಲ್ಲಿದೆ.

ಬೈಕ್ ಪ್ರವಾಸದ ವೇಳೆ ಅಭಿಮಾನಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ನಟ

ಅಜಿತ್'ರವರು ತಮ್ಮ ಈ ಪ್ರವಾಸದ ಅವಧಿಯಲ್ಲಿ ಒಟ್ಟು 4,500 ಕಿ.ಮೀ ಸಂಚರಿಸಲಿದ್ದಾರೆ. ಈ ಪ್ರವಾಸದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ತಲಾ ಅಜಿತ್‌ ಈ ಹಿಂದೆಯೂ ಹಲವು ಬಾರಿ ಈ ರೀತಿಯ ಬೈಕ್‌ ಪ್ರಯಾಣವನ್ನು ಕೈಗೊಂಡಿದ್ದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬೈಕ್ ಪ್ರವಾಸದ ವೇಳೆ ಅಭಿಮಾನಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ನಟ

ತಲಾ ಅಜಿತ್ ಈ ರೀತಿಯ ಲಾಂಗ್ ರೈಡ್'ಗಳನ್ನು ರಹಸ್ಯವಾಗಿ ಕೈಗೊಳ್ಳುತ್ತಾರೆ. ಅಜಿತ್'ರವರು ಹಲವಾರು ಐಷಾರಾಮಿ ಕಾರು ಹಾಗೂ ಸ್ಪೋರ್ಟ್ಸ್ ಬೈಕುಗಳನ್ನು ಹೊಂದಿದ್ದಾರೆ. ನಟ ಅಜಿತ್ ಮೂಲತಃ ರೇಸರ್ ಎಂಬುದು ಗಮನಾರ್ಹ.

Most Read Articles

Kannada
English summary
Thala Ajith seen with fan on the way to Sikkim journey. Read in Kannada.
Story first published: Tuesday, January 19, 2021, 14:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X