ಮದುವೆಗೆ ರೆಡಿಯಾದ ಕಾರಿಗೆ ಇವೆಲ್ಲ ಬೇಕಾ? ಥಾರ್ ಚಾಲಕನಿಂದ ರಸ್ತೆಬಿಟ್ಟ ಆಡಿ A4!
ಮಹೀಂದ್ರಾ ಥಾರ್ ದೇಶದ ಆಫ್‌ರೋಡ್ ವಿಭಾಗದಲ್ಲಿ ಸಖತ್ ಹೆಸರು ಮಾಡಿರುವ ಎಸ್‌ಯುವಿಯಾಗಿದೆ. ತನ್ನ ರಗಡ್ ಲುಕ್, ಬೃಹತ್ ಆಕಾರ, ವಿಶಿಷ್ಟ ವಿನ್ಯಾಸದಿಂದಲೇ ಅಡ್ವೆಂಚರ್ ಉತ್ಸಾಹಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಈ ವಾಹನವನ್ನು ಸರಿಯಾದ ಅಂತರದಲ್ಲಿ ಓಡಿಸದಿದ್ದರೇ ಅನಾಹುತ ಕಟ್ಟಿಟ್ಟ ಬುತ್ತಿ ಎಂಬುದನ್ನು ತೋರುವ ವಿಡಿಯೋ ಈಗ ವೈರಲ್ ಆಗಿದೆ.
ಕೆಲವರು ಥಾರ್ ಅನ್ನು ಕೇವಲ ಅದರ ನೋಟವನ್ನು ಆಧರಿಸಿ ಖರೀದಿಸುವುದಲ್ಲದೇ, ಅದನ್ನು ದುರ್ಬಳಕೆ ಮಾಡುತ್ತಿದ್ದಾರೆ. ರಸ್ತೆಗಳಲ್ಲಿ ಇತರ ವಾಹನ ಚಾಲಕರನ್ನು ನಿರ್ಲಕ್ಷಿಸಿ ಅಜಾಗರೂಕ ವರ್ತನೆಯನ್ನು ತೋರುತ್ತಿದ್ದಾರೆ. ಇತ್ತೀಚಿನ ಮಹೀಂದ್ರಾ ಥಾರ್ ಮತ್ತು ಆಡಿ A4 ನಡುವಿನ ಅಪಘಾತವೇ ಇದಕ್ಕೆ ಉದಾಹರಣೆಯಾಗಿದೆ. ಈ ಕುರಿತ ವೈರಲ್ ವಿಡಿಯೋ ಥಾರ್ ಚಾಲಕನ ಬೇಜವಾಬ್ದಾರಿ ಚಾಲನೆಯನ್ನು ತೋರುತ್ತಿದೆ.

ಉತ್ತರ ಪ್ರದೇಶದಲ್ಲಿ ಈ ಅಪಘಾತ ನಡೆದಿದೆ ಎಂದು ವರದಿಯಾಗಿದೆ. ಮದುವೆ ಅಥವಾ ಕಾರ್ಯಕ್ರಮಕ್ಕೆ ಅಲಂಕೃತಗೊಂಡಂತೆ ಕಾಣುತ್ತಿರುವ ಆಡಿ A4 ಅಪಘಾತದಲ್ಲಿ ಸ್ವಲ್ಪ ಹಾನಿಯಾಗಿದೆ. ರಸ್ತೆಯಲ್ಲಿ ಒಟ್ಟಿಗೆ ಬಂದ ಈ ಎರಡು ಕಾರುಗಳು ಒಂದಕ್ಕೊಂದು ರೇಸ್ ಮಾಡುವ ರಿತಿಯಲ್ಲಿ ನುಗ್ಗುತ್ತಿದ್ದ ಸಂದರ್ಭದಲ್ಲಿ ಮಹೀಂದ್ರಾ ಥಾರ್ ಆಡಿಯನ್ನು ಹಿಂದಿಕ್ಕಲು ಪ್ರಯತ್ನಿಸಿ ತುಸು ತಾಗಿಸಿಕೊಂಡು ಹೋಗಿದೆ.
ಈ ವೇಳೆ ಆಡಿ ಚಾಲಕ ನಿಯಂತ್ರ ಕಳೆದುಕೊಂಡು ರಸ್ತೆಯಿಂದ ಹೊರಬಂದಿದ್ದಾನೆ. ಮೊದಲೇ ಹೇಳಿದಂತೆ ಥಾರ್ ಬೃಹತ್ ವಾಹನ ಇದನ್ನು ನಿಯಂತ್ರಿಸಬೇಕಾದರೆ ಚಾಲಕನಿಗೆ ಅಂತರದ ಬಗ್ಗೆ ಸರಿಯಾದ ಜ್ಞಾನವಿರಬೇಕು. ಸಾರ್ವಜನಿಕ ರಸ್ತೆಯಲ್ಲಿ ರೇಸ್ ಮಾಡಿದ್ದೇ ತಪ್ಪು, ಅದರಲ್ಲೂ ತಪ್ಪಾಗಿ ಅಂತರವನ್ನು ಗ್ರಹಿಸಿ ಮುನ್ನುಗ್ಗುವುದು ಇನ್ನೊ ದೊಡ್ಡ ತಪ್ಪು. ಸಿಂಗಲ್ ಲೇನ್ ರಸ್ತೆಯಲ್ಲಿ ಒಂದೆಡೆ ಆಡಿ ಕಾರು ಇದ್ದರೇ ಮುನ್ನುಗ್ಗಲು ಜಾಗವಿಲ್ಲದಿದ್ದರೂ ರಸ್ತೆಗಿಳಿದು ಥಾರ್ ಮುಂದೆ ಬಂದಿದೆ.

ಈ ವೇಳೆ ಥಾರ್ ಚಾಲಕ ಲಭ್ಯವಿರುವ ಜಾಗವನ್ನು ತಪ್ಪಾಗಿ ಬಳಸಿಕೊಂಡಿದ್ದಾನೆ. ಇದರಿಂದಾಗಿ ಅದರ ಹಿಂಭಾಗದ ಫೆಂಡರ್ ಆಡಿ A4 ನ ಮುಂಭಾಗದ ಫೆಂಡರ್‌ಗೆ ವೇಗವಾಗಿ ತಾಗಿದೆ. ಪರಿಣಾಮ ಆಡಿ ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಹೊರಕ್ಕೆ ನುಗ್ಗಿದೆ. ಇದೇ ವೇಳೆ ಹಿಂಬದಿ ಅಥವಾ ಆಡಿ ಪಕ್ಕದಲ್ಲಿ ಇತರ ಕಾರುಗಳು ಇದ್ದಿದ್ದೇ ಆಗಿದ್ದಲ್ಲಿ ಭೀಕರ ಅಪಘಾತವಾಗುತ್ತಿತ್ತು.
ಈ ಸಂಪೂರ್ಣ ದೃಶ್ಯಗಳನ್ನು ತುಸು ಮುಂಭಾಗದಲ್ಲಿ ಪಕ್ಕದಲ್ಲೇ ಬರುತ್ತಿದ್ದ ಮತ್ತೊಂದು ವಾಹನದಲ್ಲಿ ಯಾರೋ ಸೆರೆಹಿಡಿದಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಮಹೀಂದ್ರಾ ಥಾರ್ ಚಾಲಕನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು, ಕೇವಲ ಅಂತರ ತಿಳಿಯದೇ ಥಾರ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಮೊದಲಿಗೆ ಯಾವುದೇ ಕಾರು ಅಥವಾ ಬೃಹತ್ ವಾಹನಗಳಾಗಲಿ ಅವುಗಳನ್ನು ಓಡಿಸುವ ಮುನ್ನ ವಾಹನದ ಅಂತರದ ಬಗ್ಗೆ ನಮಗೆ ಅರಿವಿರಬೇಕು. ಒಂದು ವೇಳೆ ಅಂತರದ ಬಗ್ಗೆ ಅಷ್ಟು ತಿಳಿಯದಿದ್ದರೂ ಇತರ ವಾಹನಗಳಿಂದ ಗಮನಾರ್ಹ ಅಂತರವನ್ನು ಕಾಯ್ದುಕೊಳ್ಳಬೇಕು. ಇಲ್ಲದಿದ್ದರೇ ಈ ವೈರಲ್ ವಿಡಿಯೋದಂತೆಯೇ ಅಪಘಾತಗಳಿಗೆ ಕಾರಣವಾಗುತ್ತೀರ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications