ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲೆಟ್ ಓಡಿಸಿಕೊಂಡು ಬಂದ ವಧು

ವಧುವಿನ ವೇಷ ಧರಿಸಿರುವ ಯುವತಿಯೊಬ್ಬರು ರಾಯಲ್ ಎನ್‌ಫೀಲ್ಡ್ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವೀಡಿಯೊ ಬರೋಬ್ಬರಿ 1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಎದುರಾಗುವ ಅತಿದೊಡ್ಡ ಸಂಭ್ರಮವೆಂದರೆ ಅದು ಮದುವೆ. ಹಲವರು ತಮ್ಮ ಮದುವೆಯನ್ನು ಸಿಂಪಲ್ ಆಗಿ ಮಾಡಿಕೊಳ್ಳುವ ಕನಸ್ಸು ಕಂಡರೆ ಇನ್ನೂ ಕೆಲವರು ಗ್ರಾಂಡಾಗಿ ಮಾಡಿಕೊಳ್ಳುವ ಹಂಬಲದಲ್ಲಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಬದಲಾಗಿದೆ. ವಿಭಿನ್ನವಾಗಿ ಮದುವೆಯಾಗಿ ಎಲ್ಲರನ್ನು ಅಚ್ಚರಿಗೊಳಿಸಲು ಮುಂದಾಗುತ್ತಿದ್ದಾರೆ.

ಕಾರು, ಕುದುರೆ, ಒಂಟೆ, ಆನೆಯ ಮೇಲೆ ಏರಿ ಮದುವೆಗೆ ಬರುವುದು ಸಾಮಾನ್ಯವಾಗಿರುವುದರಿಂದ ತಮ್ಮ ಮದುವೆ ಎಲ್ಲದಕ್ಕಿಂತ ವಿಭಿನ್ನವಾಗಿರಲು ಹಲವರು ಹೊಸ ಹೊಸ ಟ್ರೆಂಡ್‌ಗಳನ್ನು ಪರಿಚಯಿಸುತ್ತಿದ್ದಾರೆ. ಅದರಂತೆ ದೆಹಲಿ ಮೂಲದ (ವೀಡಿಯೊ ಶೀರ್ಷಿಕೆಯ ಪ್ರಕಾರ) ಯುವತಿ ತನ್ನ ಮದುವೆಗೆ ಬುಲೆಟ್ ಓಡಿಸಿಕೊಂಡು ಬಂದಿದ್ದಾರೆ.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ಇದು ಹೊಸ ಟ್ರೆಂಡ್ ಎಂದು ನೆಟ್ಟಿಗರು ಯುವತಿಯನ್ನು ಶ್ಲಾಘಿಸಿ ಶುಭ ಹಾರೈಸುತ್ತಿದ್ದಾರೆ. ಇನ್ನು ವಿಷಯಕ್ಕೆ ಬಂದರೆ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ತನ್ನ ಮದುವೆ ಸ್ಥಳಕ್ಕೆ ಹೋಗುತ್ತಿರುವ ವಿಡಿಯೋವನ್ನು ಮೇಕಪ್ ಆರ್ಟಿಸ್ಟ್ ದೀಪಾಲಿ ಹಾಗೂ ವಧು ವೈಶಾಲಿ ಚೌಧರಿ ಎಂಬುವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ತಮ್ಮ ಮದುವೆ ದಿನದಂದು ಎಲ್ಲರು ಅಚ್ಚರಿಗೊಳ್ಳುವಂತೆ ಎಂಟ್ರಿ ಕೊಡುವುದು ಪ್ರತಿಯೊಬ್ಬರ ಕನಸಾಗಿದೆ, ಆದರೆ ಈ ವಧು ಮಾಡಿದ್ದನ್ನು ಅನೇಕರು ಅನುಸರಿಸಲು ಸಾಧ್ಯವಿಲ್ಲ. ಭಾರವಾದ ಲೆಹೆಂಗಾವನ್ನು ಧರಿಸಿ ರಾಯಲ್ ಎನ್‌ಫೀಲ್ಡ್ ಅನ್ನು ತುಂಬಾ ಚತುರತೆಯಿಂದ ಓಡಿಸಿಕೊಂಡು ಬಂದಿದ್ದಾರೆ. ಆಕೆ ತುಂಬಾ ಆತ್ಮವಿಶ್ವಾಸ ಮತ್ತು ತನ್ನ ಸವಾರಿಯನ್ನು ಸಂಪೂರ್ಣವಾಗಿ ಆನಂದಿಸಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ಈಗಿನ ಕಾಲದಲ್ಲಿ ಸ್ಕೂಲ್ ಬಾಲಕಿಯರು ಕೂಡ ಬೈಕ್ ಓಡಿಸುವುದನ್ನು ನಾವು ಕಾಣಬಹುದು. ಆದರೆ ಮದುವೆಗೆ ಭಾರವಾದ ಆಭರಣ, ಉಡುಗ-ತೊಡುಗೆ ಧರಿಸಿ ಬುಲೆಟ್ ಬೈಕ್ ಓಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆಗೆ ಕಾರಣವಾಗಿದೆ. ತಮ್ಮ ಮದುವೆಗಳನ್ನು ಇತರರಿಗಿಂತ ಭಿನ್ನವಾಗಿಸಲು ಇಂತಹ ಹೊಸ ಪ್ರಯತ್ನಗಳನ್ನು ಮಾಡುವುದು ತಪ್ಪೇನಲ್ಲ.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ಈಗಿನ ಕಾಲದಲ್ಲಿ ಸ್ಕೂಲ್ ಬಾಲಕಿಯರು ಕೂಡ ಬೈಕ್ ಓಡಿಸುವುದನ್ನು ನಾವು ಕಾಣಬಹುದು. ಆದರೆ ಮದುವೆಗೆ ಭಾರವಾದ ಆಭರಣ, ಉಡುಗ-ತೊಡುಗೆ ಧರಿಸಿ ಬುಲ್ಲೆಟ್ ಬೈಕ್ ಓಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆಗೆ ಕಾರಣವಾಗಿದೆ. ತಮ್ಮ ಮದುವೆಗಳನ್ನು ಇತರರಿಗಿಂತ ಭಿನ್ನವಾಗಿಸಲು ಇಂತಹ ಹೊಸ ಪ್ರಯತ್ನಗಳನ್ನು ಮಾಡುವುದು ತಪ್ಪೇನಲ್ಲ.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ಆದರೆ ಕೆಲವರು ತಿಳಿಯದೇ ತಮ್ಮ ಮದುವೆ ದಿನದಂದು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಈ ಹಿಂದೆಯೂ ಕೆಲವು ವಿಭಿನ್ನ ಮದುವೆಗಳು ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಉದಾಹರಣೆಗಳು ಇವೆ. ಮದುವೆಯನ್ನು ಇತಿ-ಮಿತಿಯಲ್ಲಿ ಸಂಭ್ರಮಾಚರಣೆ ಮಾಡಬೇಕೆ ಹೊರತೂ ಪ್ರಾಣಪಯಾಕ್ಕೆ ತಿರುಗುವಂತಹ ಪ್ರಯತ್ನಗಳಿಗೆ ಕೈ ಹಾಕಬಾರದು.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ಬುಲ್ಡೋಜರ್ ಏರಿ ಬಂದ ವರ

ಮದುವೆಗೆ ವಿಭಿನ್ನವಾಗಿ ಮೆರೆವಣಿಗೆ ಮಾಡಬೇಕು ಎಂಬ ಉದ್ದೇಶದಿಂದ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಈ ಹಿಂದೆ ವರನೊಬ್ಬ ಕುದುರೆ ಅಥವಾ ಅಲಂಕೃತ ವಾಹನಗಳ ಬದಲಿಗೆ ಬುಲ್ಡೋಜರ್‌ನಲ್ಲಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ. ಮದುವೆಯೇನೋ ಮುಗಿದಿದೆ ಆದರೆ ಇಲ್ಲಿ ಸಮಸ್ಯೆ ಎದುರಾಗಿದ್ದು ಮಾತ್ರ ಬುಲ್ಡೋಜರ್ ಚಾಲಕನಿಗೆ.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ಸಿವಿಲ್ ಎಂಜಿನಿಯರ್ ಆಗಿರುವ ವರ ಆಂಗಸ್ ಜೈಸ್ವಾಲ್ ಎಂಬಾತ ಕುದುರೆಯ ಬದಲು ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಸಿದ್ದಾನೆ. ಆಂಗಸ್ ಜೈಸ್ವಾಲ್ ಬುಲ್ಡೋಜರ್ ಮುಂಭಾಗದ 'ಲೋಡಿಂಗ್ ಬಕೆಟ್' ಪ್ರದೇಶವನ್ನು ಅಲಂಕರಿಸಿ ಅದರೊಳಗೆ ಕುಳಿತು ಮೆರವಣಿಗೆಯಲ್ಲಿ ಆಗಮಿಸಿದ್ದ. ಇದೇ ವೇಳೆ ಲೋಡಿಂಗ್‌ ಬಕೆಟ್‌ನಲ್ಲಿ ಯಾವುದೇ ಸೇಫ್ಟಿ ಇಲ್ಲದೇ ಇನ್ನೂ ಕೆಲವರು ಕುಳಿತ್ತಿದ್ದರು.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ನನ್ನ ಮದುವೆಯನ್ನು ಸ್ಮರಣೀಯವಾಗಿಸುವ ಸಲುವಾಗಿ ನಾನು ಈ ರೀತಿ ಮದುವೆ ಮನೆಗೆ ಬರಲು ನಿರ್ಧರಿಸಿದೆ. ಬುಲ್ಡೋಜರ್‌ನ ಲೋಡರ್ ಬಕೆಟ್‌ನ್ನು ಮದುವೆ ಸಮಾರಂಭಕ್ಕೆ ತಕ್ಕಂತೆ ಅಲಂಕರಿಸಲಾಗಿತ್ತು. ನಾನು ಮದುವೆ ಮೆರವಣಿಗೆ ವೇಳೆ ಬುಲ್ಡೋಜರ್‌ನಲ್ಲಿ ಆರಾಮದಾಯಕವಾಗಿ ಕುಳಿತಿದ್ದೆ ಎಂದು ವರ ಹೇಳಿದ್ದಾನೆ.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ಮದುವೆಯ ಮೆರವಣಿಗೆ ಮುಗಿದ ನಂತರ ಅದರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಫೋಟೋಗಳು ಮತ್ತು ವಿಡಿಯೋಗಳು ಸ್ಥಳೀಯ ಸರ್ಕಾರಿ ಅಧಿಕಾರಿಗಳಿಗೂ ತಲುಪಿವೆ. ಅಧಿಕಾರಿಗಳು ತನಿಖೆ ನಡೆಸಿ ಕ್ರಮಕೈಗೊಂಡಿದ್ದರು.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ಮೋಟಾರು ವಾಹನ ಕಾನೂನಿನ ಪ್ರಕಾರ ಇಂತಹ ಸಮಾರಂಭಗಳಿಗೆ ಬುಲ್ಡೋಜರ್ ಅನ್ನು ಬಳಸುವುದು ಅಪರಾದವಾಗಿದ್ದು, ಮೆರವಣಿಗೆಗೆ ಬಳಸಿದ ಬುಲ್ಡೋಜರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಜೊತೆಗೆ ಬುಲ್ಡೋಜರ್ ಚಾಲಕ ರವಿ ಪರಸ್ಕರ್‌ಗೆ ಕೌನ್ಸಿಲಿಂಗ್ ನೀಡಿ 5000 ರೂ. ದಂಡ ವಿಧಿಸಿದ್ದಾರೆ.

ವರನನ್ನು ಇಂಪ್ರೆಸ್ ಮಾಡಲು ಮದುವೆ ಮನೆಗೆ ಬುಲ್ಲೆಟ್ ಓಡಿಸಿಕೊಂಡು ಬಂದ ವಧು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮದುವೆಗಳನ್ನು ಭಿನ್ನವಾಗಿ ಮಾಡಿಕೊಳ್ಳುವುದು ತಪ್ಪಲ್ಲ. ಬದಲಿಗೆ ಅವು ಕಾನೂನು ಉಲ್ಲಂಘನೆಯಾಗದಂತೆ ಮಾಡಿಕೊಳ್ಳಬೆಕು, ದೆಹಲಿಯ ಯುವತಿ ಬುಲ್ಲೆಟ್ ಓಡಿಸಿಕೊಂಡು ಮದುವೆ ಮನೆಗೆ ಬಂದು ಎಲ್ಲರನ್ನು ಅಚ್ಚರಿಗೊಳಿಸುವಂತಹ ಕಾರ್ಯಗಳಿಗೆ ಯಾರೂ ಕೂಡ ಅಡ್ಡಿ ಹೇಳುವುದಿಲ್ಲ. ಆದರೆ ಬುಲ್ಡೋಜರ್ ಬಳಕೆಯಿಂದ ಸುತ್ತಮುತ್ತಲಿನ ಜನರ ಜೀವಕ್ಕೆ ಅಪಾಯವಿರುವುದರಿಂದ ಇಂತಹ ಪ್ರಯತ್ನಗಳಿಗೆ ಕೈಹಾಕಬಾರದು.

Most Read Articles

Kannada
English summary
The bride drove a bullet to the wedding house to impress the groom
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X