ಖಲಿ ದಿ ಗ್ರೇಟ್ ಮುಂದೆ ಆಟದ ಸಾಮಾನಿನಂತೆ ಕಂಡ ಹೀರೋ ಬೈಕ್..!

ಡಬ್ಲ್ಯುಡಬ್ಲ್ಯುಇಯಲ್ಲಿ, ಭಾರತೀಯರು ಭಾಗವಹಿಸುವುದೇ ಅಪರೂಪ. ಆದರೆ ಈ ಮಾತನ್ನು ಸುಳ್ಳು ಮಾಡಿದವರು ಖಲಿ ದಿ ಗ್ರೇಟ್. ಖಲಿರವರು ಡಬ್ಲ್ಯುಡಬ್ಲ್ಯುಇನಲ್ಲಿ ಭಾಗವಹಿಸಿದ ನಂತರ ಭಾರತದಿಂದ ಮಾತ್ರವಲ್ಲದೆ ವಿಶ್ವದ ವಿವಿಧ ದೇಶಗಳಿಂದಲೂ ಅಭಿಮಾನಿಗಳನ್ನು ಸೆಳೆದರು.

ಖಲಿ ದಿ ಗ್ರೇಟ್ ಮುಂದೆ ಆಟದ ಸಾಮಾನಿನಂತೆ ಕಂಡ ಹೀರೋ ಬೈಕ್..!

ಖಲಿ ದಿ ಗ್ರೇಟ್ ಸದ್ಯಕ್ಕೆ ಭಾರತದಲ್ಲಿದ್ದಾರೆ. ಅವರು ಹಲವಾರು ಬಾರಿ ವಿವಿಧ ವಾಹನಗಳಲ್ಲಿ ಓಡಾಡುವುದನ್ನು ನೋಡಿದ್ದೇವೆ. ಈಗ ಅವರು ಹೀರೋ ಹೆಚ್‌ಎಫ್ ಡೀಲಕ್ಸ್ ಬೈಕ್‌ ಚಾಲನೆ ಮಾಡುತ್ತಿರುವ ವೀಡಿಯೊ ಬಿಡುಗಡೆಯಾಗಿದೆ. ಹೀರೋ ಹೆಚ್‌ಎಫ್ ಡೀಲಕ್ಸ್ 100 ಸಿಸಿಯ ಪ್ರಯಾಣಿಕ ಬೈಕ್‌ ಆಗಿದೆ.

ಖಲಿ ದಿ ಗ್ರೇಟ್ ಮುಂದೆ ಆಟದ ಸಾಮಾನಿನಂತೆ ಕಂಡ ಹೀರೋ ಬೈಕ್..!

ದೈತ್ಯ ದಿ ಗ್ರೇಟ್ ಖಲಿಯವರು ಈ ಬೈಕ್ ಮೇಲೆ ಕುಳಿತಿರುವುದು ಯಾವುದೋ ಆಟದ ಸಾಮಾನಿನಂತೆ ಕಾಣುತ್ತದೆ. ಖಲಿರವರು 7 ಅಡಿಗಳಿಗಿಂತ ಹೆಚ್ಚು ಎತ್ತರವಿದ್ದಾರೆ. ಈ ಕಾರಣಕ್ಕೆ ಹೀರೋ ಹೆಚ್‌ಎಫ್ ಡೀಲಕ್ಸ್ ಬೈಕ್ ಮಕ್ಕಳ ಬೈಕ್‌ನಂತೆ ಕಾಣುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಖಲಿ ದಿ ಗ್ರೇಟ್ ಮುಂದೆ ಆಟದ ಸಾಮಾನಿನಂತೆ ಕಂಡ ಹೀರೋ ಬೈಕ್..!

ದಿ ಗ್ರೇಟ್ ಖಲಿಯವರ ಬೃಹತ್ ಗಾತ್ರದ ಕಾರಣಕ್ಕೆ ಬೈಕ್ ಸಿಲುಕಿಕೊಂಡಿದೆ. ಹೀರೋ ಹೆಚ್‌ಎಫ್ ಡೀಲಕ್ಸ್ ಪ್ರೀಮಿಯಂ ಬೈಕಿನಲ್ಲಿ 97.2 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 7.94 ಬಿಹೆಚ್‌ಪಿ ಪವರ್ ಹಾಗೂ 8.05 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಖಲಿ ದಿ ಗ್ರೇಟ್ ಮುಂದೆ ಆಟದ ಸಾಮಾನಿನಂತೆ ಕಂಡ ಹೀರೋ ಬೈಕ್..!

ಈ ಬೈಕ್ ಏರ್ ಕೂಲ್ಡ್ ಎಂಜಿನ್ ಹಾಗೂ 4 ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿದೆ. ಈ ಬೈಕ್ ಅನ್ನು ದೈನಂದಿನ ಬೈಕ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ತಯಾರಿಸಲಾಗಿದೆ. ಈ ಬೈಕ್ ಪ್ರತಿ ಲೀಟರ್‌ ಪೆಟ್ರೋಲ್‌ಗೆ 83 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಖಲಿ ದಿ ಗ್ರೇಟ್ ಮುಂದೆ ಆಟದ ಸಾಮಾನಿನಂತೆ ಕಂಡ ಹೀರೋ ಬೈಕ್..!

ಖಲಿಯವರಂತಹ ದೈತ್ಯ ದೇಹಿ ಈ ಬೈಕ್ ಅನ್ನು ಚಾಲನೆ ಮಾಡುವುದನ್ನು ನೋಡಿದರೆ ಆಶ್ಚರ್ಯವಾಗದೇ ಇರದು. ಖಲಿಯವರು ಬೈಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲ ಸಲವಲ್ಲ. ಈ ಹಿಂದೆ ಅವರು ರಾಯಲ್ ಎನ್‌ಫೀಲ್ಡ್ ಬೈಕಿನಲ್ಲಿ ಕಾಣಿಸಿಕೊಂಡಿದ್ದರು.

ಖಲಿ ದಿ ಗ್ರೇಟ್ ಮುಂದೆ ಆಟದ ಸಾಮಾನಿನಂತೆ ಕಂಡ ಹೀರೋ ಬೈಕ್..!

ರಾಯಲ್ ಎನ್‌ಫೀಲ್ಡ್ ಬೈಕ್ ಸಹ ಅವರಿಗೆ ಆಟಿಕೆಯಂತೆ ಕಾಣುತ್ತಿತ್ತು. ಬಜಾಜ್ ಪಲ್ಸರ್ ಬೈಕ್ ವಿಷಯದಲ್ಲೂ ಇದೇ ರೀತಿಯಾಗಿತ್ತು. ರಾಯಲ್ ಎನ್‌ಫೀಲ್ಡ್ ಹಾಗೂ ಬಜಾಜ್ ಪಲ್ಸರ್ ಬೈಕ್‌ಗಳನ್ನು ಸಾಮಾನ್ಯವಾಗಿ ಸರಾಸರಿ ಎತ್ತರಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿರುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಕಾರಣಕ್ಕೆ ತುಂಬಾ ಎತ್ತರ ಅಥವಾ ತುಂಬಾ ಕಡಿಮೆ ಇರುವ ಜನರು ಈ ಬೈಕ್‌ಗಳನ್ನು ಚಾಲನೆ ಮಾಡುವಾಗ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೀರೋ ಹೆಚ್‌ಎಫ್ ಡೀಲಕ್ಸ್ ಬೈಕಿನಲ್ಲಿ ಚಲಿಸುತ್ತಿರುವ ವೀಡಿಯೊ ವೈರಲ್ ಆಗಿದೆ.

ಬೈಕುಗಳನ್ನು ಹೊರತುಪಡಿಸಿ ಖಲಿರವರು ಈ ಹಿಂದೆ ಟಾಟಾ ಸುಮೋದೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಕಾರು ಅವರಿಗೆ ಆರಾಮದಾಯಕವಾಗಿರಲಿಲ್ಲ. ಇತ್ತೀಚೆಗೆ ಟೊಯೊಟಾ ಫಾರ್ಚೂನರ್ ಕಾರಿನೊಂದಿಗೆ ಕಾಣಿಸಿಕೊಂಡಿದ್ದರು.

ಖಲಿ ದಿ ಗ್ರೇಟ್ ಮುಂದೆ ಆಟದ ಸಾಮಾನಿನಂತೆ ಕಂಡ ಹೀರೋ ಬೈಕ್..!

ಫಾರ್ಚೂನರ್ ಕಾರು ಸಹ ಖಲಿರವರ ಬೃಹತ್ ದೇಹಕ್ಕೆ ಹೊಂದಿಕೊಂಡಿರಲಿಲ್ಲ. ಅಂದ ಹಾಗೆ ಖಲಿ ದಿ ಗ್ರೇಟ್‌ರವರು ಬೈಕ್ ಚಾಲನೆ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸಿರಲಿಲ್ಲ. ಈ ಮೂಲಕ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

Most Read Articles

Kannada
English summary
Khali the great rides Hero HF Deluxe 100CC commuter bike. Read in Kannada.
Story first published: Sunday, May 10, 2020, 12:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X