ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ, ಚೆನ್ನೈ ಮೂಲದ ಉದ್ಯಮಿಯೊಬ್ಬರು ತಮ್ಮ ಸಿಬ್ಬಂದಿ ಮತ್ತು ಸಹೋದ್ಯೋಗಿಗಳಿಗೆ ರೂ. 1.2 ಕೋಟಿ ಮೌಲ್ಯದ ಕಾರು ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಚೆನ್ನೈನ ಚಲನಿ ಜ್ಯುವೆಲ್ಲರಿ ಮಾಲೀಕ ಜಯಂತಿ ಲಾಲ್ ಚಯಂತಿ ಅವರು ತಮ್ಮ ಸಿಬ್ಬಂದಿ ಮತ್ತು ಸಹೋದ್ಯೋಗಿಗಳಿಗೆ ಎಂಟು ಕಾರುಗಳು ಮತ್ತು 18 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೆಲವರಿಗೆ ಇದು ಆಶ್ಚರ್ಯವಾದರೆ, ಇನ್ನು ಕೆಲವರು ನಂಬಲಾಗದೇ ಸಂತೋಷದಿಂದ ಕಣ್ಣೀರು ಹಾಕಿದ್ದಾರೆ.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಈ ಕುರಿತು ಮಾತನಾಡಿದ ಜಯಂತಿ ಲಾಲ್, ನಮ್ಮ ಸಿಬ್ಬಂದಿ ಕುಟುಂಬವಿದ್ದಂತೆ, ಎಲ್ಲಾ ಕಷ್ಟ ಕಾಲದಲ್ಲೂ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ. ಇದು ಅವರ ಕೆಲಸವನ್ನು ಪ್ರೋತ್ಸಾಹಿಸಲು ಮತ್ತು ಅವರ ಜೀವನಕ್ಕೆ ವಿಶೇಷವಾದ ಉಡುಗೊರೆಯನ್ನು ಸೇರಿಸುವ ಉದ್ದೇಶವಾಗಿದೆ. ಅವರು ನನ್ನ ವ್ಯವಹಾರದಲ್ಲಿ ಎಲ್ಲಾ ಏರಿಳಿತಗಳಲ್ಲಿ ನನ್ನೊಂದಿಗಿದ್ದು ನನಗೆ ಲಾಭ ಗಳಿಸಲು ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದರು.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಅವರು ಕೇವಲ ಸಿಬ್ಬಂದಿಯಲ್ಲ ನನ್ನ ಕುಟುಂಬವಿದ್ದಂತೆ ಹಾಗಾಗಿ, ಅವರಿಗೆ ಇಂತಹ ಅಚ್ಚರಿಗಳನ್ನು ನೀಡುವ ಮೂಲಕ ಅವರನ್ನು ನನ್ನ ಕುಟುಂಬದ ಸದಸ್ಯರಂತೆ ಪರಿಗಣಿಸಲು ನಾನು ಬಯಸುತ್ತೇನೆ. ಪ್ರತಿಯೊಬ್ಬ ಮಾಲೀಕರು ತಮ್ಮ ಸಿಬ್ಬಂದಿ ಮತ್ತು ಸಹೋದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುವ ಮೂಲಕ ಗೌರವಿಸಬೇಕು ಎಂದು ಸಲಹೆಯಿತ್ತರು.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಇಂತಹ ಉಡುಗೊರೆಗಳಿಗೆ ಚೆನ್ನೈ ಫೇಮಸ್

ಇದೇ ವರ್ಷದ ಆರಂಭದಲ್ಲಿ ಚೆನ್ನೈ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ 100 ಮಾರುತಿ ಕಾರುಗಳನ್ನು ಉಡುಗೊರೆಯಾಗಿ ನೀಡಿತ್ತು, ಇದಾದ ಬಳಿಕ ಕಳೆದ ಏಪ್ರಿಲ್‌ನಲ್ಲಿ ಇದೇ ಚೆನ್ನೈ ಮೂಲದ ಮತ್ತೊಂದು ಐಟಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿತ್ತು.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಮೊದಲು ಕಿಸ್‌ಫ್ಲೋ ಎಂಬ ಕಂಪನಿಯು ತನ್ನ ಐವರು ಹಿರಿಯ ಉದ್ಯೋಗಿಗಳಿಗೆ ಬಿಎಂಡಬ್ಲ್ಯು 5 ಸಿರೀಸ್ ಐಷಾರಾಮಿ ಕಾರುಗಳನ್ನು ಅನಿರೀಕ್ಷಿತ ಉಡುಗೊರೆಯಾಗಿ ನೀಡಿತ್ತು. ಈ ಪ್ರತಿಯೊಂದು ಕಾರಿನ ಬೆಲೆ 1 ಕೋಟಿ ರೂ. ಇದ್ದು, ಈ ಕುರಿತ ಸುದ್ದಿಯನ್ನು ಕೇಳಿದವರೆಲ್ಲ ಅಚ್ಚರಿಗೊಂಡಿದ್ದರು.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಕಠಿಣ ಪರಿಶ್ರಮಕ್ಕಾಗಿ ಉಡುಗೊರೆ

ಈ ಐವರು ಉದ್ಯೋಗಿಗಳ ನಿಷ್ಠೆ, ಬೆಂಬಲ ಮತ್ತು ಶ್ರದ್ಧೆಯ ಕೆಲಸಕ್ಕೆ ಪ್ರತಿಯಾಗಿ ಈ ಉಡುಗೊರೆಯನ್ನು ನೀಡಲಾಗಿದೆ ಎಂದು ಕಂಪನಿ ಹೇಳಿದೆ. ಕಿಸ್‌ಫ್ಲೋ ಇಂಕ್‌ನ ಸಿಇಒ ಸುರೇಶ್ ಸಂಬಂದಂ ಅವರ ಪ್ರಕಾರ, ಈ ಐವರು ಉದ್ಯೋಗಿಗಳು ಕಂಪನಿಯ ಪ್ರಾರಂಭದಿಂದಲೂ ಅವರೊಂದಿಗೆ ಇದ್ದಾರೆ.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಅಲ್ಲದೇ ಕಂಪನಿಯ ಕಷ್ಟದ ಸಮಯದಲ್ಲಿ ಅವರೊಂದಿಗೆ ಇದ್ದು, ಎಷ್ಟೇ ಸಮಸ್ಯೆಗಳು ಎದುರಾದರು ಒಗ್ಗಟ್ಟಾಗಿ ಸಹಕರಿಸುತ್ತಿದ್ದರು. ಅಲ್ಲದೇ ಕಂಪನಿಯ ಈ ಉದ್ಯೋಗಿಗಳು ಸರಳ ಕುಟುಂಬದಿಂದ ಬಂದವರು ಮತ್ತು ತಮ್ಮ ಕಂಪನಿಗೆ ಸೇರುವ ಮೊದಲು ಹಲವಾರು ಸವಾಲುಗಳನ್ನು ಎದುರಿಸಿದ್ದರು.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಕಂಪನಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಕಂಪನಿಯು ಅವರಿಗೆ ಕಾರು ನೀಡುತ್ತಿಲ್ಲ, ಅವರು ತಮ್ಮ ಸ್ವಂತ ದುಡಿಮೆಯ ಹಣದಿಂದ ಗಳಿಸಿದ್ದಾರೆ. ಇನ್ನು Kisflow ಕಂಪನಿಯು ತನ್ನ ಸ್ಥಾಪನೆಯ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಅಂಗವಾಗಿ ಶ್ರಮವಹಿಸಿ ದುಡಿಯುವ ಉದ್ಯೋಗಿಗಳಿಗೆ ಉಡುಗೊರೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದರು.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

100 ಉದ್ಯೋಗಿಗಳಿಗೆ 100 ಕಾರುಗಳ ಉಡುಗೊರೆ

ಇದಾದ ಬಳಿಕ ಚೆನ್ನೈ ಮೂಲದ ಐಡಿಯಾಸ್‌2ಐಟಿ(Ideas2IT) ಕಂಪನಿಯು ತನ್ನ ಕಚೇರಿಯಲ್ಲಿ ಬಹುದಿನಗಳಿಂದ ಕಾರ್ಯನಿರ್ವಹಿಸುತ್ತಿರುವ ನೂರು ಉದ್ಯೋಗಿಗಳಿಗೆ ಮಾರುತಿ ಸುಜುಕಿ ನಿರ್ಮಾಣದ ನೂರು ಕಾರುಗಳನ್ನು ಉಡುಗೊರೆಯಾಗಿ ನೀಡಿತ್ತು.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಚೆನ್ನೈನಲ್ಲಿ ಪ್ರಧಾನ ಕಛೇರಿ ಹೊಂದಿರುವ ಐಡಿಯಾಸ್2ಐಟಿ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದ್ದು, ಕಂಪನಿಯು ಆದಾಯದಲ್ಲಿನ ಬೆಳವಣಿಗೆಯು ಉದ್ಯೋಗಿಗಳ ಮಹೋನ್ನತ ಕೊಡುಗೆ ಪ್ರಮುಖ ಕಾರಣವೆಂದು ಪರಿಗಣಿಸಿ ಶ್ರಮಿಸಿದ ಉದ್ಯೋಗಿಗಳಿಗೆ ಕಾರುಗಳನ್ನು ಬಹುಕರಿಸಿತ್ತು.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಹೀಗಾಗಿ ಕಂಪನಿಯು ಉದ್ಯೋಗಿಗಳನ್ನು ಪ್ರೇರೇಪಿಸುವ ಸಲುವಾಗಿ ದೀರ್ಘಾವಧಿ ಸೇವೆ ಸಲ್ಲಿಸಿದ 100 ಉದ್ಯೋಗಿಗಳಿಗೆ 100 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದು, ಕಾರಿನ ಜೊತೆಗೆ ಇತರೆ ಉದ್ಯೋಗಿಗಳಿಗೂ ವಿವಿಧ ದುಬಾರಿ ಉಡುಗೊರೆಯಾಗಿ ನೀಡಿತ್ತು.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಉದ್ಯೋಗಿಗಳಿಗೆ ಕಾರು ಉಡುಗೊರೆ ಕುರಿತಂತೆ ಮಾತನಾಡಿದ ಐಡಿಯಾಸ್2ಐಟಿ ಕಂಪನಿಯ ಮುಖ್ಯಸ್ಥ ಹರಿ ಸುಬ್ರಮಣಿಯನ್ ಅವರು, ನಮ್ಮ ಸಂಸ್ಥೆಯಲ್ಲಿ 500ಕ್ಕೂ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಕಂಪನಿಯ ಉನ್ನತಿಗಾಗಿ ಶ್ರಮಿಸಿರುವ 100 ಹಿರಿಯ ಉದ್ಯೋಗಿಗಳಿಗೆ ಅವರ ಶ್ರಮದಿಂದ ನಾವು ಪಡೆದ ಸಂಪತ್ತಿನಲ್ಲಿ ಒಂದಿಷ್ಟು ಉಡುಗೊರೆಯಾಗಿ ನೀಡಲಾಗಿದೆ ಎಂದು ಹೇಳಿದ್ದರು.

ಮಾಲೀಕ ಅಂದ್ರೆ ಹೀಗಿರ್ಬೇಕು ನೋಡಿ: 1.2 ಕೋಟಿ ರೂ. ಮೌಲ್ಯದ ಕಾರು, ಬೈಕ್‌ಗಳನ್ನು ಹಂಚಿದ ಹೃದಯವಂತ

ಐಡಿಯಾಸ್2ಐಟಿ ಕಂಪನಿಯ ಉದ್ಯೋಗಿಗಳಿಗೆ ನೀಡಲಾಗಿರುವ ಹೊಸ ಕಾರುಗಳು ಬಹುತೇಕ ಮಾರುತಿ ಸುಜುಕಿ ನಿರ್ಮಾಣದ ಕಾರು ಮಾದರಿಗಳಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಬಲೆನೊ ಮಾದರಿಯನ್ನು ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿಗೆ ವಿತರಿಸಲಾಗಿದೆ.

Article Published On: Monday, October 17, 2022, 13:03 [IST]
English summary
The owner gifted 8 cars 18 bikes to the staff for the Diwali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+