ಇನ್ನೋವಾ ಕ್ರಿಸ್ಟಾ vs ಇನ್ನೋವಾ ಹೈಕ್ರಾಸ್: ಪರ್ಫೆಕ್ಟ್ ಫ್ಯಾಮಿಲಿಗೆ ಪರ್ಫೆಕ್ಟ್ ಕಾರು ಯಾವುದು?
ಒಂದು ಕುಟುಂಬ ಸುಖವಾಗಿ ಪ್ರವಾಸ, ಅಥವಾ ದೂರ ಪ್ರಯಾಣ ಮಾಡಿ ಬರಲು ಇಂದು ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಎಂಪಿವಿ ಕಾರುಗಳಿದೆ. ಹೆಚ್ಚು ಸ್ಥಳಾವಕಾಶ, ಸುಖಕರ ಪ್ರಯಾಣದ ಎಂಪಿವಿ ಗಳಲ್ಲಿ ಚಿರಪರಿಚಿತ ಟೊಯೋಟಾ ಇನ್ನೋವಾ ಹಲವಾರು ವರ್ಷಗಳಿಂದ ಭಾರತೀಯ ಮಾರುಕಟ್ಟೆಯನ್ನು ಆಳುತ್ತಿದೆ.
ಇನ್ನು ಟೋಯೋಟಾ ಕಳೆದ ವರ್ಷವಷ್ಟೇ ಟೊಯೋಟಾ ಕಂಪನಿಯು ಇನ್ನೋವಾ ಹೈಕ್ರಾಸ್ (Innova Hycross) ಎಂಬ ಪ್ರೀಮಿಯಂ ಸೆಗ್ಮೆಂಟ್‌ನ ಎಂಪಿವಿಯನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಇನ್ನೋವಾ ಹೈಕ್ರಾಸ್ ಯಶಸ್ವಿಯಾಗಿ ಮುನ್ನುಗ್ಗುವಲ್ಲಿ ಸಫಲವಾಗಿದೆ. ಇದೀಗ ಜನರಲ್ಲಿ ಇನ್ನೋವಾ ಕ್ರಿಸ್ಟಾ ತೆಗೆದುಕೊಳ್ಳಬೇಕೋ ಅಥವಾ ಇನ್ನೋವಾ ಹೈಕ್ರಾಸ್ ತೆಗೆದುಕೊಳ್ಳಬೇಕೋ ಎಂಬ ಸಂಶಯ ಎಲ್ಲರಲ್ಲೂ ಇದೆ.

ಸೇಫ್ಟೀ ಫೀಚರ್ಸ್ ಬಗ್ಗೆ ಹೇಳುವುದಾದರೆ ಮೊದಲೇ ಹೇಳಿದಂತೆ ಇನ್ನೋವಾ ಹೈಕ್ರಾಸ್ ಮತ್ತು ಇನ್ನೋವಾ ಕ್ರಿಸ್ಟಾ ಎರಡೂ ಕಾರು ಸಹ ಭಾರತೀಯ ಫ್ಯಾಮಿಲಿಗೆ ಹೇಳಿ ಮಾಡಿಸಿದಂತಹ ಕಾರು. ಇವೆರಡರಲ್ಲೂ ಸಹ ಎಬಿಎಸ್, ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಉತ್ತಮ ಸೇಫ್ಟೀ ರೇಟಿಂಗ್ ಅನ್ನು ಪಡೆದಿದೆ.
ಎರಡೂ ಕಾರುಗಳಲ್ಲಿ ಸಾಕಷ್ಟು, ಹೆಡ್ ರೂಮ್, ಲೆಗ್ ರೂಮ್ ಇದೆ. ಇನ್ನು ಈ ಎರಡೂ ಕಾರುಗಳ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಅದು ಇವುಗಳ ಗ್ರೌಂಡ್ ಕ್ಲಿಯರೆನ್ಸ್. ಇದರಿಂದ ಎಲ್ಲಾ ರೀತಿಯ ಜಾಗಗಳಲ್ಲೂ ಉತ್ತಮ ಡ್ರೈವಿಂಗ್ ಅನುಭವ ಮತ್ತು ಪ್ರಯಾಣಿಕರಿಗೆ ಕಂಫರ್ಟ್ ದೊರಕುತ್ತದೆ.

ಇನ್ನೋವಾ ಕ್ರಿಸ್ಟಾದಲ್ಲಿ 2.4 GX 7 STR ವೇರಿಯಂಟ್ ಬೆಸ್ಟ್ ಫ್ಯಾಮಿಲಿ ಕಾರ್ ಆಗಿ ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕೆ ಕಾರಣವೇನೆಂದರೆ ಇದರಲ್ಲಿ ಮೇಲೆ ತಿಳಿಸಿದ ಸೇಫ್ಟೀ ಫೀಚರ್ಸ್ ಜೊತೆಗೆ ಸ್ಪೇಷಿಯಸ್ ಇಂಟೀರಿಯರ್, ರೇರ್ ಎಸಿ ವೆಂಟ್ಸ್ ಗಳ ಮೂಲಕ ಕುಟುಂಬ ಸಮೇತರಾಗಿ ಒಂದೊಳ್ಳೆ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿದೆ.
ಇನ್ನು ಇನ್ನೋವಾ ಹೈಕ್ರಾಸ್ ಕಾರಿನಲ್ಲಿ G 7STR ವೇರಿಯಂಟ್ ಅನ್ನು ಉತ್ತಮ ಫ್ಯಾಮಿಲಿ ಫೋಕಸ್ಡ್ ಕಾರು ಎಂದರೆ ತಪ್ಪಾಗಲಾರದು. ಇದಕ್ಕೆ ಪ್ರಮುಖ ಕಾರಣ ಈ ಕಾರಿನಲ್ಲಿ ಸೇಫ್ಟಿ ಫೀಚರ್ಸ್ ಜೊತೆಗೆ ಒಂದೊಳ್ಳೆ ಕಂಫರ್ಟಬಲ್ ಡ್ರೈವ್ ಗೆ ಬೇಕಾದ ಹೈ ಸ್ಪೀಡ್ ಸ್ಟೆಬಿಲಿಟಿ, ಕಡಿಮೆ ಬಾಡಿ ರೋಲ್, ಎರಡು ಏರ್ ಬ್ಯಾಗ್‌ಗಳು ಮತ್ತು ಎಬಿಎಸ್ ಇರುವುದು.
ಇನ್ನು ಇನ್ನೋವಾ ಕ್ರಿಸ್ಟಾ 2.4 GX 7 STR ಬೆಲೆಯು 19,99,900 ಎಕ್ಸ್ ಶೋ ರೂಮ್ ಮತ್ತು ಇನ್ನೋವಾ ಹೈಕ್ರಾಸ್ G 7STR ವೇರಿಯಂಟ್ ಬೆಲೆಯು ಸುಮಾರು 18,55,000 ಎಕ್ಸ್ ಶೋ ರೂಮ್. ಇವೆರಡೂ ಕಾರಿನಲ್ಲಿ ಹಲವಾರು ವೇರಿಯಂಟ್ ಇದ್ದರೂ ಸರಿಯಾದ ಫೀಚರ್ಸ್‌ಗಳ ಒಂದೇ ಬೆಲೆಯ ವೇರಿಂಯಂಟ್ ಗಳ ಕುರಿತಾಗಿ ಇಲ್ಲಿ ಚರ್ಚೆ ಮಾಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications