54 ಡ್ರೋನ್ ಒಟ್ಟುಗೂಡಿಸಿ ಮಿನಿ ಹೆಲಿಕಾಪ್ಟರ್ ತಯಾರಿ
ತಂತ್ರಜ್ಞಾನದ ಅವಿಷ್ಕಾರದಲ್ಲಿ ಹಲವು ರೀತಿಯ ಕ್ರಾಂತಿಕಾರಿ ಬದಲಾವಣೆಗಳು ಆಗುತ್ತಲೇ ಇದೆ. ಇಲ್ಲೊಬ್ಬ ವ್ಯಕ್ತಿಯೋರ್ವರು 54 ಡ್ರೋನ್ ಗಳಿಂದ ಅತ್ಯಂತ ಸುಂದರವಾದ ಮಿನಿ ಹೆಲಿಕಾಪ್ಟರ್ ನಿರ್ಮಿಸಿದ್ದಾರೆ.
ಬ್ರಿಟನ್ ಮೂಲದ ವ್ಯಕ್ತಿ ಈ ಸಂಬಂಧ ಯೂಟ್ಯೂಬ್ ನಲ್ಲಿ ಗಸ್ಟರ್ ಬೈನ್101 (gasturbine101) ಎಂಬ ಹೆಸರಿನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು, ಸದಾ ಡ್ರೋನ್ ವಿಮಾನಗಳಲ್ಲಿ ಸಂಚರಿಸಿ ಸಂಚರಿಸಿ ಉತ್ಸಾಹ ಕುಂದಿರುವುದೇ ಇಂತಹದೊಂದು ನಾವೀನ್ಯ ತಂತ್ರಜ್ಞಾನವನ್ನು ಕಂಡುಹಿಡಿಯಲು ಪ್ರೇರಣೆಯಾಗಿದೆ ಎಂದಿದ್ದಾರೆ.

148 ಕೆ.ಜಿ ತೂಕದ ಈ ಏರಿಯಲ್ ವಿಮಾನವನ್ನು ಓರ್ವ ವ್ಯಕ್ತಿಯ ವೈಯಕ್ತಿಕ ಸಂಚಾರಕ್ಕಾಗಿ ಬಳಕೆ ಮಾಡಬಹುದಾಗಿದೆ.

ಹಲವು ಪ್ರಾಯೋಗಿಕ ಸಂಚಾರಗಳನ್ನು ದಾಟಿ ಬಂದಿರುವ ಈ ವಿಮಾನದಲ್ಲಿ 54 ಮಲ್ಟಿ ರೋಟರ್ ಸೂಪರ್ ಡ್ರೋನ್ ಗಳನ್ನು ಆಳವಡಿಸಲಾಗಿದೆ.

ಈ ಎಲ್ಲ ಡ್ರೋನ್ ಗಳು ಒಂದಕ್ಕೊಂದು ಜೋಡಣೆ ಮಾಡಲಾಗಿದ್ದು, ಗುಂಪಾಗಿ ಮುಂದಕ್ಕೆ ಚಲಿಸಲಿದೆ.

10 ನಿಮಿಷಗಳಷ್ಟು ಕಾಲ ಇದು ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಈ ಸಂಬಂಧ ಇದರ ಹಾರಾಟ ಸಾಮರ್ಥ್ಯ ಹೆಚ್ಚಿಸಲು ಹೆಚ್ಚಿನ ಅಧ್ಯಯನ ನಡೆಸುವ ಇರಾದೆಯಲ್ಲಿದ್ದಾರೆ.

22 ಕೆಡಬ್ಲ್ಯು ಚೈತನ್ಯವನ್ನು ಇದು ಉತ್ಪಾದಿಸುತ್ತಿದ್ದು, ಹೆಲಿಕಾಪ್ಟರ್ ರೀತಿಯಲ್ಲಿ ಎಲ್ಲ ಡ್ರೋನ್ ವಿಮಾನಗಳಿಗೆ ಒಂದರಂತೆ ಒಟ್ಟು 54 ಚಿಕ್ಕ ಫ್ಯಾನ್ ಗಳು ಇದರಲ್ಲಿ ತಿರುಗಲಿದೆ. ಇವೆಲ್ಲವೂ ವಾಹನವನ್ನು ಮೇಲಕ್ಕೆ ಹಾರಾಡಲು ಸಹಕಾರಿಯಾಗಲಿದೆ.

ಇನ್ನು ವ್ಯತಿರಿಕ್ತ ಹವಾಮಾನ ಪರಿಸ್ಥಿತಿಯಿಂದ ರಕ್ಷಣೆಗಾಗಿ ಮೇಲ್ಛಾವಣಿಯನ್ನು ನಿರ್ಮಿಸಲಾಗಿದೆ. ಒಟ್ಟಿನಲ್ಲಿ ನಾವೀನ್ಯತೆಯನ್ನು ಕಾಪಾಡಿಕೊಳ್ಳಲಿದೆ.
ವಿಡಿಯೋ ವೀಕ್ಷಿಸಿ


Click it and Unblock the Notifications








