ಜಗತ್ತಿನೆಲ್ಲೆಡೆಯ 10 ಚಿತ್ರ-ವಿಚಿತ್ರ ಚಾಲನಾ ನಿಯಮಗಳು!
ಪ್ರತಿಯೊಂದು ದೇಶದಲ್ಲೂ ಅಲ್ಲಿನ ರಸ್ತೆ ಪರಿಸ್ಥಿತಿಗಳಿಗಾನುಸಾರವಾಗಿ ಚಾಲನಾ ನಿಯಮಗಳು ಜಾರಿಯಲ್ಲಿರುತ್ತದೆ. ಭಾರತದಲ್ಲಂತೂ ಇವುಗಳು ಸಾರಿಗೆ ವಿಭಾಗದ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಇಂತಹ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಟ್ರಾಫಿಕ್ ಪೊಲೀಸರು ನೆರವಾಗುತ್ತಾರೆ.
ಇವನ್ನೂ ಓದಿ: ಸಾವಿನ ರಸ್ತೆ
ಭಾರತದಂತೆ ವಿದೇಶದಲ್ಲೂ ಅನೇಕ ಸಂಚಾರಿ ನಿಯಮ ಜಾರಿಯಲ್ಲಿದೆ. ಇವುಗಳನ್ನು ವಿವರಿಸುತ್ತಾ ಸಾಗಿದರೆ ಪಟ್ಟಿ ದೊಡ್ಡಗಾಗಿ ಬೆಳೆಯುತ್ತದೆ. ಆದರೆ ಇಂತಹ ನಿಯಮಗಳಲ್ಲಿ ಕೆಲವು ನಿಯಮಗಳು ನಿಮ್ಮಲ್ಲಿ ವಿಚಿತ್ರ ಭಾವನೆ ಮೂಡಿಸಬಹುದು. ಅಂತಹ ಕೆಲವು ಚಿತ್ರ-ವಿಚಿತ್ರಗಳ ನಿಯಮಗಳನ್ನು ಕೆಳಗಡೆ ಪಟ್ಟಿ ಮಾಡಿ ಕೊಡಲಾಗಿದೆ. ನೀವಿದನ್ನು ಖಂಡಿತ ಇಷ್ಟಪಡುವೀರಾ ಎಂಬ ನಂಬಿಕೆ ನಮ್ಮದ್ದು.
ಸಂಪೂರ್ಣ ಸುದ್ದಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ:

ಮುಂದಿನ ಒಂದೊಂದೆ ಸ್ಲೈಡರ್ ಮುಂದಕ್ಕೆ ಕ್ಲಿಕ್ಕಿಸುತ್ತಾ ವಿಚಿತ್ರವೆನಿಸುವ ರಸ್ತೆ ನಿಯಮಗಳ ಬಗ್ಗೆ ತಿಳಿದುಕೊಳ್ಳಿರಿ.

01. ಯುರೇಕಾ, ಅಮೆರಿಕ
ನಿಮಗಿದು ಗೊತ್ತಿದೆಯೇ, ಅಮೆರಿಕದ ಯುರೇಕಾದಲ್ಲಿ ರಸ್ತೆಯಲ್ಲಿ ಮಲಗುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ಚರ್ಚೆ ಮಾಡಿದರೆ, ಭಾರತದಲ್ಲಂತೂ ಪ್ರತಿಭಟನಾಕಾರರು ರಸ್ತೆಯನ್ನೇ ತಮ್ಮ ಪ್ರಧಾನ ಅಸ್ತ್ರವಾಗಿಸುತ್ತಾರೆ. ಹಾಗೆ ನೋಡುವಾಗ ಇಂದೊಂದು ಉತ್ತಮ ನಿಯಮವಾಗಿ ಮೂಡಿಬಂದಿದೆ.

02. ಮ್ಯಾಸಚೂಸೆಟ್ಸ್, ಅಮೆರಿಕ
ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿ ಇನ್ನೊಂದು ವಿಚಿತ್ರ ರಸ್ತೆ ನಿಯಮ ಜಾರಿಯಲ್ಲಿದ್ದು, ವಾಹನಗಳ ಹಿಂದುಗಡೆ ಗೊರಿಲ್ಲಾ ಕುಳ್ಳಿರಿಸಿ ಸಂಚರಿಸುವುದು ಶಿಕ್ಷಾರ್ಹವಾಗಿದೆ.

03. ಸ್ವೀಡನ್
ಇನ್ನು ಸ್ವೀಡನ್‌ನಲ್ಲಂತೂ ಹಗಲು ವೇಳೆಯಲ್ಲೂ ರಸ್ತೆಯಲ್ಲಿ ಸಂಚರಿಸುವಾಗ ಹೆಡ್‌ಲೈಟ್ ಕಡ್ಡಾಯವಾಗಿ ಬಳಕೆ ಮಾಡಬೇಕು.

04. ಅಲಾಸ್ಕಾ
ಬಹುಶ: ಇಂತಹ ಪ್ರಕರಣಗಳು ಜಾಸ್ತಿಯಾಗಿ ಕಂಡುಬಂದಿರುವುದರಿಂದಲೇ ಆಗಿರಬಹುದೇನೋ ಅಲಾಸ್ಕಾದಲ್ಲಿ ವಾಹನಗಳ ಮೇಲ್ಛಾವಣಿಯಲ್ಲಿ (ರೂಫ್) ಶ್ವಾನಗಳನ್ನು ಚಿತ್ರಿಕರಿಸಿ (ಡಾಗ್ ಮೆಮೆ) ಹೇಳಿಕೆ ಲಗತ್ತಿಸಿಕೊಂಡು ಹೋಗುವುದು ಶಿಕ್ಷಾರ್ಹವಾಗಿದೆ.

05. ಡಬ್ಲಿನ್, ಅಮೆರಿಕ
ಅದೇ ರೀತಿ ಅಮೆರಿಕದ ಡಬ್ಲಿನ್‌ನಲ್ಲಿ ಆಟದ ಮೈದಾನದಲ್ಲಿ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹವಾಗಿದೆ. ಇದು ನಿಜಕ್ಕೂ ಮಕ್ಕಳಿಗೆ ಖುಷಿ ತರುವಂತಹ ವಿಷಯವಾಗಿದೆ.

06. ಡೆನ್ಮಾರ್ಕ್
ಡೆನ್ಮಾರ್ಕ್‌ನಲ್ಲಿ ಮಗದೊಂದು ಸಂಚಾರಿ ನಿಯಮ ಜಾರಿಯಲ್ಲಿದ್ದು, ನಿಮ್ಮ ಪಯಣ ಆರಂಭಕ್ಕೂ ಮುನ್ನ ಕಾರಿನಡಿಯಲ್ಲಿ ಪರೀಶೀಲನೆ ಮಾಡಬೇಕಾಗಿದೆ. ಇದು ಯಾವುದೇ ಮೂಕ ಪ್ರಾಣಿಗಳು ವಾಹನಗಳ ಅಡಿಯಲ್ಲಿ ನಿದ್ರಿಸುತ್ತಿದ್ದರೆ ಸಂಭವಿಸಬಹುದಾದ ಅವಘಡವನ್ನು ತಪ್ಪಿಸಲಿದೆ.

07. ಗ್ಲೆಂಡಲ್, ಅಮೆರಿಕ
ಇಂದೊಂದು ವಿಚಿತ್ರ ನಿಯಮವೇ ಸರಿ. ಯಾಕೆಂದರೆ ಅಮೆರಿಕದ ಗ್ಲೆಂಡಲ್ ಪ್ರದೇಶದಲ್ಲಿ ಗಂಟೆಗೆ 65 ಕೀ.ಮೀ. ವೇಗದಲ್ಲಿ ಹೋಗುವ ವಾಹನಗಳ ನಡುವೆ ಹಾರುವುದು ಕಾನೂನುಬಾಹಿರವಾಗಿದೆ. ಅಷ್ಟಕ್ಕೂ ಇಷ್ಟು ಬುದ್ಧಿಹೀನತೆ ತೋರುವವರಾರು?

08. ಜಪಾನ್
ಡ್ರೈವಿಂಗ್ ವೇಳೆ ಚಾಲಕ ಮದ್ಯ ಸೇವಿಸಿದ್ದಲ್ಲಿ ಶಿಕ್ಷಾರ್ಹವಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದ ವಿಚಾರ. ಆದರೆ ಜಪಾನ್‌ನಲ್ಲಿ ಮದ್ಯ ಸೇವಿಸಿ ಸಹ ಪ್ರಯಾಣಿಕರಾಗಿ ಸಂಚರಿಸುವುದು ಸಹ ಕಾನೂನುಬಾಹಿರವಾಗಿದೆ.

09. ಜರ್ಮನಿ
ಆಟೋಬಾನ್ (autobahn) ಜರ್ಮನಿಯ ಜನಪ್ರಿಯ ಫೆಡರಲ್ ನಿಯಂತ್ರಿತ ಪ್ರವೇಶ ಹೆದ್ದಾರಿ ವ್ಯವಸ್ಥೆಯಾಗಿದ್ದು, ಇದರಂತೆ ಪೆಟ್ರೋಲ್ ಇಲ್ಲದೆ ವಾಹನ ಚಾಲನೆ ಮಾಡುವುದು ಕಾನೂನು ವಿರುದ್ಧವಾಗಿದೆ.

10. ಓಹಿಯೋ, ಅಮೆರಿಕ
ಅಂತಿಮವಾಗಿ ಅಮೆರಿಕದ ಓಹಿಯೋದಲ್ಲಿ ನಿಮ್ಮ ವಾಹನ ಬ್ರೇಕ್ ಫೇಲ್ ಆದ್ದಲ್ಲಿ, ನೀವೊಂದು ಟ್ಯಾಕ್ಸಿ ಕರೆಯಲು ನಿರ್ಧರಿಸಿದ್ದೀರಿ ಅಂದುಕೊಳ್ಳಿ. ಆದರೆ ಯಾವುದೇ ಕಾರಣಕ್ಕೂ ನೀವು ರೂಫ್ ಮೇಲೆ ಕುಳಿತುಕೊಳ್ಳಬಾರದು. ಯಾಕೆಂದರೆ ಇದು ಕಾನೂನು ಬಾಹಿರವಾಗಿದೆ.

ನಿಜಕ್ಕೂ ಈ ಎಲ್ಲ ನಿಯಮಗಳು ನಿಮಗೆ ವಿಚಿತ್ರ ಅನಿಸುವುದಿಲ್ಲವೇ? ನಿಮ್ಮ ಅಭಿಪ್ರಾಯಗಳನ್ನು ಹಾಗೆಯೇ ನಿಮಗೂ ಗೊತ್ತಿರುವ ಜಗತ್ತಿನ ವಿಚಿತ್ರ ರಸ್ತೆ ನಿಯಮಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ. ನಮ್ಮ ಮುಂದಿನ ಲೇಖನದಲ್ಲಿ ನಿಮ್ಮ ಸಲಹೆಗಳಿಗೆ ಮಾನ್ಯತೆ ಕೊಡಲಾಗುವುದು.


Click it and Unblock the Notifications








