ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ದ್ವಿಚಕ್ರ ವಾಹನಗಳಲ್ಲಿ ಲಾಂಗ್‌ ಡ್ರೈವ್ ಹೋಗುವುದೇ ಒಂದು ಮರೆಯಲಾಗದ ಅನುಭವ. ಬಹುತೇಕರಿಗೆ ಕಾರುಗಳಿಗಿಂತ ಬೈಕ್‌ಗಳಲ್ಲಿ ದೂರದ ಪ್ರಯಾಣ ಮಾಡುವುದು ತುಂಬಾ ಇಷ್ಟ. ಕೆಲವು ಸಂದರ್ಭಗಳಲ್ಲಿ ಮೋಟಾರು ಸೈಕಲ್‌ಗಳಲ್ಲಿ ಕಾರುಗಳಿಗಿಂತ ಹೆಚ್ಚು ಮೋಜು ಮಾಡಬಹುದು.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ನಮ್ಮ ಭಾರತದಲ್ಲಿ ಲಾಂಗ್ ಡ್ರೈವ್ ಎಂದಾಕ್ಷಣ ಬಹುತೇಕರಿಗೆ ನೆನಪಾಗುವುದು ರಾಯಲ್ ಎನ್‌ಫೀಲ್ಡ್. ಏಕೆಂದರೆ ಇದರ ಕಾರ್ಯಕ್ಷಮತೆಯು ದೂರದ ಪ್ರಯಾಣ ಕೈಗೊಂಡಾಗ ತೃಪ್ತಿದಾಯ ಡ್ರೈವಿಂಗ್ ಅನುಭವ ನೀಡುತ್ತದೆ. ರಾಯಲ್ ಎನ್‌ಫೀಲ್ಡ್‌ ಮಾದರಿಗಳು ಇಂತಹ ಲಾಂಗ್‌ಡ್ರೈವ್‌ಗಳಿಗೆ ಹೆಸರುವಾಸಿಯಾಗಿ ಭಾರತದಲ್ಲಿ ಗುರ್ತಿಸಿಕೊಂಡಿವೆ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ಎಲ್ಲಾ ಬೈಕುಗಳು ಅತ್ಯುತ್ತಮ ಕ್ರಾಸ್-ಕಂಟ್ರಿ ಡ್ರೈವ್ ಅನುಭವವನ್ನು ನೀಡಲು ಸಮರ್ಥವಾಗಿರುವುದಿಲ್ಲ. ಆದರೆ ಎನ್‌ಫೀಲ್ಡ್‌ನಂತೆಯೇ ಕೆಲವು ಬೈಕ್‌ಗಳು ಭಾರತದಲ್ಲಿ ಲಾಂಗ್‌ಡ್ರೈವ್‌ ಹೋಗಲು ಉತ್ತಮ ಆಯ್ಕೆಯಾಗಿವೆ. ಅಂತಹ ಕೆಲವು ಮೋಟಾರ್‌ಸೈಕಲ್‌ಗಳನ್ನು ಈ ಲೇಖನದಲ್ಲಿ ಪಟ್ಟಿ ಮಾಡಲಾಗಿದೆ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ಬಜಾಜ್ ಅಡ್ವೆಂಚರ್ ಕ್ರೂಸ್ 220

ಬಜಾಜ್ ಅಡ್ವೆಂಚರ್ ಕ್ರೂಸ್ 220 ಅನೇಕ ಮೋಟರ್‌ಸೈಕ್ಲಿಸ್ಟ್‌ಗಳ ಹೃದಯವನ್ನು ಗೆದ್ದಿರುವ ಮಾದರಿಯಾಗಿದೆ. ವಾಸ್ತವವಾಗಿ, ಕ್ರೂಸರ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಅತ್ಯಂತ ವೈವಿಧ್ಯಮಯ ಬೈಕ್ ಆಗಿದೆ. ಇದರ ವಿನ್ಯಾಸ, ಕಾರ್ಯಕ್ಷಮತೆ ರೈಡರ್‌ಗಳಿಗೆ ಆಕರ್ಷಣೀಯವಾಗಿ ಕಾಣುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ಈ ಲೆಡ್‌ಬ್ಯಾಕ್ ಕ್ರೂಸರ್, ದೀರ್ಘ ಪ್ರಯಾಣದಲ್ಲಿ ಸೌಕರ್ಯವನ್ನು ಬಯಸುವವರಿಗೆ ಸೂಕ್ತವಾಗಿದೆ. ಬಜಾಜ್ ಅಡ್ವೆಂಚರ್ ಕ್ರೂಸ್‌ನ ಬೆಲೆಯು ಸುಮಾರು 1.22 ಲಕ್ಷ ರೂ. ಇದೆ. ಇದು BS-VI ಸ್ಟ್ಯಾಂಡರ್ಡ್ ಮಾಡೆಲ್ ಆಗಿದ್ದು ಪೆಟ್ರೋಲ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಎಂಜಿನ್ ಸಹ ಸುಗಮ ಸವಾರಿಯನ್ನು ನೀಡುತ್ತದೆ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

KTM 390 ಡ್ಯೂಕ್

KTM ಬೈಕ್ ಭಾರತದಲ್ಲಿ ಕೇವಲ ಒಂದು ರೂಪಾಂತರದಲ್ಲಿ ಮಾತ್ರ ಲಭ್ಯವಿದೆ. 390 ಡ್ಯೂಕ್ ನ ಎಕ್ಸ್ ಶೋ ರೂಂ ಬೆಲೆ 2.58 ಲಕ್ಷ ರೂ. ಇದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 373.2cc ಎಂಜಿನ್ ಅನ್ನು ಪಡೆದುಕೊಂಡಿದೆ. ಈ ವಾಹನಕ್ಕೆ ಖರ್ಚು ಮಾಡುವ ಪ್ರತಿ ಪೈಸೆಯೂ ಯೋಗ್ಯವೆನಿಸುತ್ತದೆ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

KTM 390 ಡ್ಯೂಕ್ ಸಿಂಗಲ್-ಸಿಲಿಂಡರ್ 390 cc ಎಂಜಿನ್ ಹೊಂದಿರುವ ಲಾಂಗ್‌ ಡ್ರೈವ್ ಮೋಟಾರ್‌ಸೈಕಲ್ ಆಗಿದೆ, ಜೊತೆಗೆ ಅತ್ಯುತ್ತಮ ಸುರಕ್ಷತೆ ಮತ್ತು ತಾಂತ್ರಿಕ ವೈಶಿಷ್ಟ್ಯಗಳ ದೀರ್ಘ ಪಟ್ಟಿ, ಜೊತೆಗೆ ಅತ್ಯುತ್ತಮ ನಿರ್ವಹಣೆ ಮತ್ತು ರೈಡಿಂಗ್ ಡೈನಾಮಿಕ್ಸ್ ಅನ್ನು ಪಡೆದುಕೊಂಡಿದೆ. ಈ ಬೈಕ್‌ನಲ್ಲಿ ದೂರದ ಪ್ರಯಾಣವು ಮರೆಯಲಾಗದ ಅನುಭವ ನೀಡುತ್ತದೆ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ಹಾರ್ಲೆ ಡೇವಿಡ್ಸನ್ ಸೂಪರ್ಲೋ

ಹಾರ್ಲೆ ಡೇವಿಡ್ಸನ್ ಸೂಪರ್ಲೋ ಅನೇಕ ಬೈಕಿಂಗ್ ರೋಡ್ ಟ್ರಿಪ್ ಪ್ರಿಯರ ಕನಸಿನ ಬೈಕ್ ಆಗಿದೆ. ಈ ಬೈಕ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಅದರ 17 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಮತ್ತು ಪ್ರತಿ ಲೀಟರ್‌ಗೆ 20 ಕಿ.ಮೀ ಮೈಲೇಜ್. ಈ ಎಲ್ಲಾ ಅಸಾಧಾರಣ ವೈಶಿಷ್ಟ್ಯಗಳನ್ನು ನೀವು ಒಟ್ಟಿಗೆ ಪಡೆಯಲು ಬಯಸಿದರೆ, 5.60 ಲಕ್ಷ ರೂಪಾಯಿಗಳ ಎಕ್ಸ್ ಶೋ ರೂಂ ಬೆಲೆಯನ್ನು ಪಾವತಿಸಬೇಕಾಗುತ್ತದೆ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ಬಜಾಜ್ ಡೊಮಿನಾರ್ 400

ಬಜಾಜ್ ಡೊಮಿನಾರ್ 400 ಅನ್ನು ಭಾರತೀಯ ರಸ್ತೆಗಳಲ್ಲಿ ದೂರದ ಪ್ರಯಾಣಕ್ಕಾಗಿ ನಿರ್ಮಿಸಲಾಗಿದೆ. ದೇಶದ ಸ್ಪೋರ್ಟ್ಸ್ ಟೂರರ್ ಮೋಟಾರ್ ಸೈಕಲ್ ವಿಭಾಗದಲ್ಲಿ ಡೊಮಿನಾರ್ ಈಗಾಗಲೇ ಹೆಸರು ಮಾಡಿದೆ. ಇದರ ಆಕರ್ಷಕ ಲುಕ್ ಮತ್ತು ಹೆವಿ ಬಾಡಿಯು ರೈಡರ್‌ಗೆ ಒಳ್ಳೆಯ ಡ್ರೈವಿಂಗ್ ಎಕ್ಸ್ಪೀರಿಯನ್ಸ್‌ ನೀಡುತ್ತದೆ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 373.3cc ಏರ್ ಕೂಲ್ಡ್ ಎಂಜಿನ್ ನಿಮ್ಮ ನಿರೀಕ್ಷೆಗೆ ತಕ್ಕಂತೆ ಇರಲಿದೆ. 40 bhp ಮತ್ತು 35 Nm ಟಾರ್ಕ್ ಹೊಂದಿರುವ ಬಜಾಜ್ ಡೊಮಿನಾರ್ 400 ರೂಪಾಂತರವು 1.92 ಲಕ್ಷ ರೂಪಾಯಿಗಳಿಂದ 2.23 ಲಕ್ಷ ರೂಪಾಯಿಗಳ ಎಕ್ಸ್ ಶೋರೂಂ ಬೆಲೆಗೆ ಮಾರಾಟಕ್ಕೆ ಲಭ್ಯವಿದೆ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ವಾಹನವು ಅಡ್ವೆಂಚರ್ ಮತ್ತು ಉತ್ಸಾಹವನ್ನು ನೀಡುವ ಮಾದರಿಯಾಗಿದೆ. ಇದು ಇಂದು ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ AVD ಬೈಕ್ ಆಗಿದೆ. ಈ ಮಾದರಿಯು ಯಾವುದೇ ರಸ್ತೆ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಆಫ್-ರೋಡಿಂಗ್‌ಗೆ ಹೆಸರುವಾಸಿಯಾಗಿದೆ. ಮೋಟಾರ್‌ಸೈಕಲ್ ಅನ್ನು ಬೆರಗುಗೊಳಿಸುವ ಸಿಂಗಲ್ ಸಿಲಿಂಡರ್, ಫೋರ್-ಸ್ಟ್ರೋಕ್ ಎಂಜಿನ್ ಹೊಂದಿದೆ. ಈ ಬೈಕ್ ಹೆದ್ದಾರಿಯಲ್ಲಿ ಪ್ರತಿ ಲೀಟರ್‌ಗೆ ಗರಿಷ್ಠ 36.26 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ಜಾವಾ ಪೆರಾಕ್

2.06 ಲಕ್ಷಕ್ಕೆ ನೀವು ಜಾವಾ ಪೆರಾಕ್ ಅನ್ನು ಪಡೆಯಬಹುದು. ಈ ಹೈ ಹೆವಿ ಬೈಕ್ ನಿಮಗಾಗಿ ನಿಯಮಿತ ಪ್ರವಾಸಗಳಿಗೆ ಸೂಕ್ತವಾಗಿದೆ. ಇದು ಭಾರತದ ಮೊದಲ ಬಾಬರ್ ಶೈಲಿಯ ಮೋಟಾರ್‌ಸೈಕಲ್ ಎಂಬ ಖ್ಯಾತಿಗೂ ಪಾತ್ರವಾಗಿದೆ. ಇದರ ಲುಕ್ ಎಂತವರನ್ನೂ ಆಕರ್ಷಿಸಬಲ್ಲದು. ಅಲ್ಲದೇ ರೈಡಿಂಗ್ ವೇಳೆ ಇದರಿಂದ ಹೊರಹೊಮ್ಮುವ ಶಬ್ದವೂ ಎಲ್ಲರನ್ನು ತನ್ನ ಸೆಳೆಯುವಂತೆ ಮಾಡುತ್ತದೆ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುವ ಸಿಂಗಲ್-ಸಿಲಿಂಡರ್ 334cc ಏರ್-ಕೂಲ್ಡ್ ಎಂಜಿನ್ ಪೆರಾಕ್‌ನ ಹೊಂದಾಣಿಕೆಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಪೆರಾಕ್ ಕೂಡ ಒಂದು ಸ್ಮಾರ್ಟ್ ಮಾಡೆಲ್ ಆಗಿದ್ದು ನೀವು ದೂರದ ಪ್ರಯಾಣಕ್ಕಾಗಿ ಆಯ್ಕೆ ಮಾಡಬಹುದು.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮಾದರಿಯ ಅತಿ ದೊಡ್ಡ ಹೈಲೈಟ್ ಎಂದರೆ ಅದರ ಆಯಿಲ್/ಏರ್ ಕೂಲ್ಡ್ ಎಂಜಿನ್. ಸಮಾನಾಂತರ-ಟ್ವಿನ್ 649cc ಎಂಜಿನ್ ನಿಮಗೆ 47 bhp ನಲ್ಲಿ 52 Nm ಟಾರ್ಕ್ ಅನ್ನು ನೀಡುತ್ತದೆ. ಇದರ ಕಾರ್ಯಕ್ಷಮತೆ ಅದ್ಬುತವಾಗಿದ್ದು, ಹೈವೇಗಳಲ್ಲಿ ಉತ್ತಮ ಅನುಭವ ನೀಡುತ್ತದೆ.

ಭಾರತದಲ್ಲಿ ಲಾಂಗ್‌ ಡ್ರೈವ್ ಬಯಸುವ ರೈಡರ್‌ಗಳಿಗೆ ಈ ಬೈಕ್‌ಗಳು ಅತ್ಯುತ್ತಮ ಆಯ್ಕೆ

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಪ್ರತಿ ಲೀಟರ್‌ಗೆ 25 ಕಿ.ಮೀ ಕಿ.ಮೀ ಮೈಲೇಜ್‌ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಅಡ್ವೆಂಚರ್ ಬೈಕ್‌ಗಳನ್ನು ಬಳಸುವುದರಿಂದ ನಿಮ್ಮ ಕ್ರಾಸ್-ಕಂಟ್ರಿ ಟ್ರಿಪ್‌ಗಳನ್ನು ಮರೆಯಲಾಗದ ಅನುಭವಗಳನ್ನಾಗಿಸಿಕೊಳ್ಳಬಹುದು.

Article Published On: Monday, May 30, 2022, 18:08 [IST]
English summary
These bikes are the best choice for riders who want a long drive in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+