Just In
Don't Miss!
- News
ಹುಣಸೋಡು ಸ್ಪೋಟದ ಸುತ್ತ ಒಂದು ನೋಟ: ಸಿಎಂ ಯಡಿಯೂರಪ್ಪ ಭೇಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ವರ್ಷ ಜಾರಿಗೆ ಬಂದ ಬಿಎಸ್ 6 ಮಾಲಿನ್ಯ ನಿಯಮಗಳ ಬಗೆಗಿನ ಸಂಗತಿಗಳಿವು
ಹೊಸ ಬಿಎಸ್ 6 (ಭಾರತ್ ಸ್ಟೇಜ್) ಮಾಲಿನ್ಯ ನಿಯಮಗಳನ್ನು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಜಾರಿಗೆ ತರಲಾಯಿತು. ಈ ನಿಯಮವು ವಾಹನಗಳ ಹೊರಸೂಸುವಿಕೆಯ ಮಾನದಂಡವಾಗಿದೆ. ಇದರಡಿಯಲ್ಲಿ ವಾಹನಗಳ ಮಾಲಿನ್ಯ ಪ್ರಮಾಣವನ್ನು ನಿಗದಿಪಡಿಸಲಾಗುತ್ತದೆ.

ಭಾರತದಲ್ಲಿ ಬಿಎಸ್ 4 ನಿಯಮದ ನಂತರ ಬಿಎಸ್ 6 ನಿಯಮವನ್ನು ನೇರವಾಗಿ ಜಾರಿಗೊಳಿಸಲಾಗಿದೆ. ಕಟ್ಟುನಿಟ್ಟಾದ ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸಲು ಬಿಎಸ್ 5 ನಿಯಮವನ್ನು ಕೈಬಿಟ್ಟು 2020ರ ಏಪ್ರಿಲ್ ನಿಂದ ಬಿಎಸ್ 6 ನಿಯಮವನ್ನು ಜಾರಿಗೊಳಿಸಲಾಯಿತು.

ಬಿಎಸ್ 6 ಮಾಲಿನ್ಯ ನಿಯಮಗಳ ಬಗ್ಗೆ:
ಬಿಎಸ್ (ಭಾರತ್ ಸ್ಟೇಜ್) ಅಂದರೆ ವಾಹನಗಳಲ್ಲಿನ ಮಾಲಿನ್ಯವನ್ನು ಅಳೆಯುವ ಮಾನದಂಡ. ಈ ಮಾನದಂಡವು ವಾಹನಗಳ ಎಂಜಿನ್‌ನಿಂದ ಹೊರಹೊಮ್ಮುವ ಕಾರ್ಬನ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್, ಸಲ್ಫರ್ ನಂತಹ ಮಾಲಿನ್ಯಕಾರಕಗಳನ್ನು ಅಳೆಯುವ ವಿಧಾನವಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬಿಎಸ್ ಪಕ್ಕದಲ್ಲಿರುವ ಸಂಖ್ಯೆಯು ಮಾಲಿನ್ಯದ ಪ್ರಮಾಣವನ್ನು ಸೂಚಿಸುತ್ತದೆ. ಅಂದರೆ ಸಂಖ್ಯೆ ಹೆಚ್ಚಾದಂತೆಲ್ಲಾ ವಾಹನವು ಕಡಿಮೆ ಮಾಲಿನ್ಯವನ್ನು ಹೊರಸೂಸುತ್ತದೆ. ಬಿಎಸ್ ನಿಯಮವನ್ನು ಕೇಂದ್ರ ಸರ್ಕಾರವು 2000ರಲ್ಲಿ ಮೊದಲ ಬಾರಿಗೆ ಪರಿಚಯಿಸಿತು.

ಕಾಲಕಾಲಕ್ಕೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಸ ಮಾನದಂಡವನ್ನು ಅಳವಡಿಸುತ್ತದೆ. ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಬಿಎಸ್ 5 ಅನ್ನು ಕೈ ಬಿಟ್ಟು ಬಿಎಸ್ 6 ಅನ್ನು ನೇರವಾಗಿ ಜಾರಿಗೆ ತರಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಿಎಸ್ 4ಗೂ ಮೊದಲು ದೇಶದಲ್ಲಿ ಬಿಎಸ್ 3 ನಿಯಮ ಜಾರಿಯಲ್ಲಿತ್ತು. ಬದಲಾಗುತ್ತಿರುವ ಮಾಲಿನ್ಯ ಪ್ರಮಾಣದೊಂದಿಗೆ ಕಂಪನಿಗಳು ವಾಹನದ ಎಂಜಿನ್ ಅನ್ನು ನವೀಕರಿಸಬೇಕಾಗುತ್ತದೆ.

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್, ಡೀಸೆಲ್ ವಾಹನಗಳ ಬೆಲೆ ತುಂಬಾ ಹೆಚ್ಚಾಗುತ್ತದೆ. ಸಣ್ಣ ಡೀಸೆಲ್ ಎಂಜಿನ್‌ಗಳ ಬೆಲೆ ದುಬಾರಿಯಾಗುವ ಕಾರಣಕ್ಕೆ ಅವುಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಹೇಳಲಾಗಿತ್ತು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬಿಎಸ್ 6 ಅನುಷ್ಠಾನದ ನಂತರ ಹಲವು ಕಂಪನಿಗಳು ಡೀಸೆಲ್ ಎಂಜಿನ್ ಕಾರುಗಳನ್ನು ಮಾರಾಟ ಮಾಡುತ್ತವೆಯಾದರೂ ಅವುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಮಾರುತಿ ಸುಜುಕಿ, ರೆನಾಲ್ಟ್ ನಂತಹ ಕಂಪನಿಗಳು ಡೀಸೆಲ್ ಎಂಜಿನ್ ಕಾರುಗಳನ್ನು ಸ್ಥಗಿತಗೊಳಿಸಿವೆ. ಇನ್ನು ಟಾಟಾ ಮೋಟಾರ್ಸ್ ಸಣ್ಣ ಡೀಸೆಲ್ ಎಂಜಿನ್ ಕಾರುಗಳನ್ನು ನಿಲ್ಲಿಸಿದೆ.

ಆದರೆ ಹ್ಯುಂಡೈ, ಮಹೀಂದ್ರಾ, ಕಿಯಾ ಮೋಟಾರ್ಸ್ ನಂತಹ ಕಂಪನಿಗಳು ಇನ್ನೂ ಸಣ್ಣ ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡುತ್ತಿವೆ. ಆದರೆ ಈ ಸಣ್ಣ ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳ ಬೆಲೆ ದುಬಾರಿಯಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬಿಎಸ್ 6ನಿಂದಾಗುವ ಪ್ರಯೋಜನ
ಬಿಎಸ್ -6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುವುದರಿಂದ ವಾಹನಗಳ ಎಂಜಿನ್‌ನಿಂದ ಬಿಡುಗಡೆಯಾಗುವ ಮಾಲಿನ್ಯಕಾರಕ ಅಂಶಗಳಾದ ಕಾರ್ಬನ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್, ಸಲ್ಫರ್ ಇತ್ಯಾದಿಗಳ ಪ್ರಮಾಣ ಕಡಿಮೆಯಾಗುತ್ತದೆ.

ಬಿಎಸ್ -4 ವಾಹನಗಳಿಗೆ ಹೋಲಿಸಿದರೆ ಬಿಎಸ್ -6 ವಾಹನಗಳ ಪೆಟ್ರೋಲ್, ಡೀಸೆಲ್ ಎಂಜಿನ್‌ಗಳಿಂದ ಬಿಡುಗಡೆಯಾಗುವ ನೈಟ್ರೋಜನ್ ಆಕ್ಸೈಡ್ ಪ್ರಮಾಣವು 25%ನಷ್ಟು ಹಾಗೂ ಸಲ್ಫರ್ ಪ್ರಮಾಣವು ಐದು ಪಟ್ಟು ಕಡಿಮೆಯಾಗುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬಿಎಸ್ -6 ವಾಹನಗಳ ಇಂಧನ ದಹನ ಅಂದರೆ ಫ್ಯೂಯಲ್ ಕಂಬಷನ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಬಿಎಸ್ -6 ಎಂಜಿನ್ ಹೊಂದಿರುವ ವಾಹನಗಳು ಬಿಎಸ್ -4 ಎಂಜಿನ್ ಹೊಂದಿರುವ ವಾಹನಗಳಿಗಿಂತ ಹೆಚ್ಚಿನ ಮೈಲೇಜ್ ನೀಡುತ್ತವೆ.

ಭಾರತದಲ್ಲಿ ಬಿಎಸ್ -6 ನಿಯಮವನ್ನು ಅನುಷ್ಠಾನಗೊಳಿಸುವಾಗ ಅನೇಕ ಸವಾಲುಗಳು ಎದುರಾಗಿವೆ. ಈ ಸವಾಲುಗಳನ್ನು ಹಂತ ಹಂತವಾಗಿ ನಿಭಾಯಿಸಲಾಗುತ್ತಿದೆ. ಈಗ ದೇಶದೆಲ್ಲೆಡೆ ಬಿಎಸ್ 6 ವಾಹನಗಳನ್ನು ಮಾರಾಟ ಮಾಡಲಾಗುತ್ತಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಇದರ ಜೊತೆಗೆ ಸಣ್ಣ ಕಾರುಗಳಲ್ಲಿ ಡೀಸೆಲ್ ಎಂಜಿನ್‌ಗಳು ಕಾಣೆಯಾಗಿವೆ. ಈಗ ಅನೇಕ ಕಂಪನಿಗಳು ಕಡಿಮೆ ಬಜೆಟ್‌ನಲ್ಲಿ ಹೆಚ್ಚಿನ ಮೈಲೇಜ್ ಪಡೆಯಲು ಸಿಎನ್‌ಜಿ, ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಆಯ್ಕೆಗಳೊಂದಿಗೆ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ.

ಕಾರು, ಬೈಕುಗಳ ರೀತಿಯಲ್ಲಿ ಟ್ರಾಕ್ಟರುಗಳಿಗೆ ಬಿಎಸ್ 6 ನಿಯಮವನ್ನು ಮುಂದಿನ ವರ್ಷ ಅಕ್ಟೋಬರ್‌ನಿಂದ ಜಾರಿಗೆ ತರಲಾಗುತ್ತದೆ.