ಟಾಟಾ ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಆಗಿದ್ದು ಹೇಗೆ?

Written By:

1945ರಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರಕ್ ಉತ್ಪಾದನೆ ಮೂಲಕ ಆಟೋ ಮೊಬೈಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ಟಾಟಾ ಸಂಸ್ಥೆಯು ಇಂದಿನ ತನಕ ನೆಕ್ಸನ್ ಕಾರು ಉತ್ಪಾದನೆಯ ವರೆಗೆ ಹಲವು ಏಳು ಬಿಳುಗಳನ್ನು ಕಂಡಿದ್ದು, ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಹಿಂದಿನ ಹಲವು ಇಂಟ್ರಸ್ಟಿಂಗ್ ಮಾಹಿತಿಗಳು ಇಲ್ಲಿವೆ.

ಟಾಟಾ ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಆಗಿದ್ದು ಹೇಗೆ?

ಮೊದಲ ಬಾರಿಗೆ ವಾಣಿಜ್ಯ ವಾಹನಗಳನ್ನು ಉತ್ಪಾದನೆ ಕೈಗೊಂಡಿದ್ದ ಟಾಟಾ ಸಂಸ್ಥೆಯು, ಯಾವುದೇ ರೀತಿಯ ಸ್ವಾಯತ್ತ ಎಂಜಿನ್ ತಂತ್ರಜ್ಞಾನ ಹೊಂದಿರಲಿಲ್ಲ. ಹೀಗಾಗಿ ಜರ್ಮನ್ ಪ್ರತಿಷ್ಠಿತ ಟ್ರಕ್ ಉತ್ಪಾದನಾ ಸಂಸ್ಥೆ ಡೈಮ್ಲರ್-ಬೆಂಝ್ ಜೊತೆ ಟಾಟಾ ಕೈ ಜೋಡಿಸಿತ್ತು.

ಟಾಟಾ ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಆಗಿದ್ದು ಹೇಗೆ?

ಕೇವಲ ಟ್ರಕ್ ಕವಚಗಳನ್ನು ಮಾತ್ರ ನಿರ್ಮಾಣ ಮಾಡುತ್ತಿದ್ದ ಟಾಟಾ ಸಂಸ್ಥೆಯು ಡೈಮ್ಲರ್ ತಂತ್ರಜ್ಞಾನಗಳ ಬಳಕೆಯೊಂದಿಗೆ ಉತೃಷ್ಟ ಗುಣಮಟ್ಟದ ಟ್ರಕ್ ಉತ್ಪನ್ನಗಳೊಂದಿಗೆ ದೇಶದಲ್ಲಿ ಜನಪ್ರಿಯಗೊಳ್ಳತೊಡಗಿತು.

ಟಾಟಾ ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಆಗಿದ್ದು ಹೇಗೆ?

1955ರಲ್ಲಿ ನಡೆದ ಬಾಂಬೆ-ಜಿನೇವಾ ಟ್ರಕ್ ರ‍್ಯಾಲಿಯಲ್ಲಿ ಭಾಗಿಯಾಗುವ ಮೂಲಕ ದೇಶದ ಮನೆ ಮಾತಾದ ಟಾಟಾ, ವಿದೇಶಿ ಟ್ರಕ್ ಮಾದರಿಗಳಿಗಿಂತ ಅತ್ಯುತ್ತಮ ಪ್ರದರ್ಶನ ನೀಡಿದ್ದು ಇಂದಿಗೂ ಇತಿಹಾಸದ ಪುಟಗಳಲ್ಲಿ ಅಚ್ಚಅಳಿಯದೇ ಉಳಿದೆ.

ಟಾಟಾ ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಆಗಿದ್ದು ಹೇಗೆ?

60ರ ದಶಕದವರೆಗೂ ದೇಶಿಯವಾಗಿ ಮಾತ್ರ ಉತ್ಪಾದನೆ ಕೈಗೊಳ್ಳುತ್ತಿದ್ದ ಟಾಟಾ ಸಂಸ್ಥೆಯು 1961ರಲ್ಲಿ ಮೊದಲ ಬಾರಿಗೆ ಶ್ರೀಲಂಕಾಗೆ ವಾಣಿಜ್ಯ ವಾಹನಗಳನ್ನು ರಫ್ತು ಮಾಡುವ ಮೂಲಕ ಸಾಗರೋತ್ತರ ವ್ಯವಹಾರಗಳನ್ನು ಆರಂಭಿಸಿತ್ತು.

ಟಾಟಾ ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಆಗಿದ್ದು ಹೇಗೆ?

1969ರಲ್ಲಿ ಡೈಮ್ಲರ್‌ನಿಂದ ಪ್ರತ್ಯೇಕಗೊಂಡ ಟಾಟಾ ಸ್ವತಂತ್ರವಾಗಿ ತನ್ನ ಉತ್ಪನ್ನಗಳ ಮೇಲೆ "T" ಚಿಹ್ನೆಯುಳ್ಳ ಲೋಗೊ ಅಚ್ಚುಹಾಕಲು ಪ್ರಾರಂಭಿಸಿತು. ಇದೇ ಕಾರಣಕ್ಕೆ ಮೊದಮೊದಲು ಟಾಟಾ ಉತ್ಪನ್ನಗಳ ಮೇಲೆ ಬೆಂಝ್ ಚಿಹ್ನೆಯನ್ನೇ ಹಾಕಲಾಗುತ್ತಿತ್ತು.

ಟಾಟಾ ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಆಗಿದ್ದು ಹೇಗೆ?

1986ರಲ್ಲಿ ಬಿಡುಗಡೆಗೊಂಡ ಟಾಟಾ 407 ವಾಹನಗಳು ಹಲವು ದಾಖಲೆಗೆ ಕಾರಣವಾಗಿದಲ್ಲದೇ ಇತಿಹಾದ್ ಮಿಟ್ಸುಬಿಸಿ, ಡಿಸಿಎಂ ಟೊಯೊಟಾ ಮತ್ತು ಸ್ವರಾಜ್ ಮಸ್ದಾ ಟ್ರಕ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡಿತ್ತು.

ಟಾಟಾ ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಆಗಿದ್ದು ಹೇಗೆ?

ಆ ನಂತರ ಬಿಡುಗಡೆಯಾಗಿದ್ದೇ ಟಾಟಾ ಸುಮೋ. ಇದು ಟಾಟಾದ ಮೊದಲ ಯುಟಿಲಿಟಿ ವಾಹನವಾಗಿದ್ದು, ಕಂಪನಿಯ ನಿವೃತ್ತ ಎಂಡಿ ಸುಮಾತ್ ಮುಲೋಂಗನ್ ಅವರ ನೆನಪಿಗಾಗಿ ಸುಮೋ ಹೆಸರಿಡಲಾಯಿತು.

ಟಾಟಾ ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಆಗಿದ್ದು ಹೇಗೆ?

ಕೇವಲ ವಾಣಿಜ್ಯ ವಾಹನಗಳಲ್ಲದೇ ಮಿಲಟರಿ ವಾಹನಗಳ ಉತ್ಪಾದಲ್ಲೂ ಜನಪ್ರಿಯತೆ ಸಾಧಿಸಿದ ಟಾಟಾ, ತದನಂತರ ಸುಧಾರಿತ ತಂತ್ರಜ್ಞಾನಗಳೊಂದಿಗೆ ಇಂಡಿಕಾ ಕಾರನ್ನು ಬಿಡುಗಡೆ ಬಹುದೊಡ್ಡ ಯಶಸ್ಸು ಸಾಧಿಸಿತು.

ಟಾಟಾ ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಆಗಿದ್ದು ಹೇಗೆ?

ಹೀಗೆ ಹಲವು ಬಗೆಯ ವಾಹನಗಳ ಉತ್ಪಾದನೆ ಮಾಡಿ ದೇಶದ ಜನತೆಯೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಟಾಟಾ ಸಂಸ್ಥೆಯು, ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲೂ ತನ್ನ ಜನಪ್ರಿಯತೆ ಉಳಿಸಿಕೊಂಡಿರುವುದು ಅದರ ಯಶಸ್ಸಿಗೆ ಹಿಡಿದ ಕೈಗನ್ನಡಿ ಎಂದ್ರೆ ತಪ್ಪಾಗಲಾರದು.

English summary
Read in Kannada about some of the things you do not know about Tata.
Story first published: Thursday, July 27, 2017, 19:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark