ಇತಿಹಾಸದಲ್ಲಿ ಈ ದಿನ: ಮೊದಲ ಕ್ವಾಡ್ರಾಸೈಕಲ್ ಪ್ರಾಯೋಗಿಕ ಸಂಚಾರ
ಇತಿಹಾಸದಲ್ಲಿ ಈ ದಿನ: ಜೂನ್ 04, 1896
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಅಮೆರಿಕದ ಖ್ಯಾತ ಕೈಗಾರಿಕೋದ್ಯಮಿಯಾಗಿರುವ ಹೆನ್ರಿ ಫೋರ್ಡ್ (ಜುಲೈ 30, 1863 - ಎಪ್ರಿಲ್ 7, 1947) ಅವರು 1903ನೇ ಇಸವಿಯಲ್ಲಿ ಫೋರ್ಡ್ ಮೋಟಾರು ಸಂಸ್ಥೆಯನ್ನು ಸ್ಥಾಪಿಸಿದ್ದರು
ಇವರು ಇತಿಹಾಸದ ಇದೇ ದಿನದಂದು ಜಗತ್ತಿನ ಮೊತ್ತ ಮೊದಲ ಕ್ವಾಡ್ರಾಸೈಕಲ್ (Quadricycle) ವಾಹನವನ್ನು ಪ್ರಾಯೋಗಿಕ ಪರೀಕ್ಷೆ ನಡೆಸಿದ್ದರು. ಪೋರ್ಟ್ ಮೋಟಾರ್ ಸಂಸ್ಥೆ ಆರಂಭಕ್ಕೂ ಏಳು ವರ್ಷಗಳ ಹಿಂದೆ ಅಂದರೆ 1896ನೇ ಇಸವಿಯ ಜೂನ್ 4ರಂದು ಈ ಸಂಚಾರ ಪರೀಕ್ಷೆಯನ್ನು ನಡೆಸಿದ್ದರು.

ಸರಳ ಫ್ರೇಮ್ ರಚನೆಯನ್ನು ಹೊಂದಿರುವ ಫೋರ್ಡ್ ಕಾಡ್ರಾಸೈಕಲ್, ಎಥನಾಲ್ ನಿಯಂತ್ರಿತ ಎಂಜಿನ್ ಪಡೆದುಕೊಂಡಿತ್ತು. ಅಲ್ಲದೆ ನಾಲ್ಕು ಸೈಕಲ್ ಚಕ್ರಗಳನ್ನು ಇದಕ್ಕೆ ಜೋಡಣೆ ಮಾಡಲಾಗಿತ್ತು.
ಈ ಎರಡು ಸಿಲಿಂಡರ್ ಎಂಡಿನ್ ನಾಲ್ಕು ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಗಂಟೆಗೆ 32 ಕೀ.ಮೀ. ಸಂಚರಿಸುವಷ್ಟು ಶಕ್ತವಾಗಿತ್ತು. ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








