ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರು ಯಾವಾಗಲೂ ಯುವ ಜನರಿಗೆ ಸ್ಪೂರ್ತಿಯನ್ನು ತುಂಬುತ್ತಿದ್ದರು. ಯುವಕರೇ ದೊಡ್ಡ ಕನಸುಗಳನ್ನು ಕಾಣಿರಿ ಎಂದು ಸದಾ ಹೇಳುತ್ತಿದ್ದರು. ಆದರೆ ಭಾರತದ ಯುವಕರು ತಮ್ಮ ಬೆಳವಣಿಗೆಯ ಬಗ್ಗೆ ಚಿಂತಿಸದೇ ಹೋದರೂ, ಐಷಾರಾಮಿ ಜೀವನದ ಬಗ್ಗೆಯಂತೂ ಚಿಂತಿಸುತ್ತಾರೆ.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ಯುವ ಜನತೆಯ ಮನಸ್ಸಿನಲ್ಲಿ ಸದಾ ಹಣ ಹಾಗೂ ಐಷಾರಾಮಿ ಕಾರುಗಳೇ ತುಂಬಿರುತ್ತವೆ. ಅದರಲ್ಲೂ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಬೇಕೆಂಬುದು ಯುವ ಜನತೆಯ ಕನಸು. ರೋಲ್ಸ್ ರಾಯ್ಸ್ ಕಾರುಗಳ ಆರಂಭಿಕ ಬೆಲೆಗಳೇ ಹಲವು ಕೋಟಿಗಳಾಗುತ್ತವೆ. ಆದರೂ ಜನ ಈ ಕಂಪನಿಯ ಕಾರುಗಳನ್ನು ಕೊಳ್ಳುವ ಕನಸನ್ನು ಬಿಡುವುದಿಲ್ಲ.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ರೋಲ್ಸ್ ರಾಯ್ಸ್ ಕಾರುಗಳನ್ನು ಚಾಲನೆ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ರೋಲ್ಸ್ ರಾಯ್ಸ್ ಕಾರ್ ಅನ್ನು ಬಾಡಿಗೆ ಕಾರ್ ಆಗಿ ಬದಲಿಸಲಾಗಿದೆ. ರೋಲ್ಸ್ ರಾಯ್ಸ್ ಕಾರುಗಳನ್ನು ಒಂದು ದಿನದ ಮಟ್ಟಿಗೆ ಬಾಡಿಗೆಗೆ ನೀಡಲಾಗುವುದು.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ಪ್ರತಿದಿನದ ಬಾಡಿಗೆಯನ್ನು ರೂ.40,000ದಿಂದ ರೂ.50,000ಗಳಿಗೆ ನಿಗದಿಪಡಿಸಲಾಗಿದೆ. ಕೆಲವರಿಗೆ ಈ ಮೊತ್ತವು ಅರ್ಧ ತಿಂಗಳ ಸಂಬಳವಾಗಿದೆ. ಅವರು ಬಯಸಿದರೆ ಈ ಕಾರಿನಲ್ಲಿ ಓಡಾಡಬಹುದು. ಅಂದ ಹಾಗೆ ರೋಲ್ಸ್ ರಾಯ್ಸ್ ಕಾರ್ ಅನ್ನು ಟ್ಯಾಕ್ಸಿಯಾಗಿ ಬದಲಿಸಿರುವ ವ್ಯಕ್ತಿಯ ಹೆಸರು ಬಾಬಿ.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ಬಾಬಿರವರು ಕೇರಳದ ಚೆಮ್ಮನೂರಿಗೆ ಸೇರಿದವರು. ಇದೇ ಮೊದಲ ಬಾರಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ 7 ಎಲ್‍‍ಡಬ್ಲ್ಯು ಕಾರ್ ಅನ್ನು ಟ್ಯಾಕ್ಸಿಯಾಗಿ ಬದಲಿಸಲಾಗಿದೆ. ಬಾಬಿರವರು ಈ ರೋಲ್ಸ್ ರಾಯ್ಸ್ ಕಾರ್ ಅನ್ನು ಟ್ಯಾಕ್ಸಿ ಮಾಡಲು ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ಈ ಕಾರಿನಲ್ಲಿ ಗೋಲ್ಡನ್ ವೈಪರ್‍‍ಗಳನ್ನು ನೀಡಲಾಗಿದೆ. ಈ ಕಾರಿನ ರೂಫ್‍‍ನಲ್ಲಿ ಟ್ಯಾಕ್ಸಿ ಎಂದು ಬರೆಯಲಾಗಿದೆ. ಕಾರಿನ ಡೋರ್‍‍ಗಳ ಮೇಲೆ ಹಾಗೂ ಹಿಂಭಾಗದಲ್ಲಿ ಟ್ಯಾಗ್‍‍ಗಳನ್ನು ಕೆತ್ತಲಾಗಿದೆ. ಡೋರ್‍‍ಗಳ ಮೇಲೆ ಬಾಬಿ ಟ್ಯಾಕ್ಸಿ ಎಂಬ ಸ್ಟಿಕ್ಕರ್‍‍ಗಳನ್ನು ಅಳವಡಿಸಲಾಗಿದೆ. ಬಾಬಿರವರು ಈ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ಕಳೆದ ವರ್ಷ ಖರೀದಿಸಿದ್ದರು.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ಈ ಕಾರ್ ಅನ್ನು ಆಕ್ಸಿಜೆನ್ ರೆಸಾರ್ಟ್‍‍ನಲ್ಲಿ ಬಳಸಲು ಖರೀದಿಸಲಾಗಿದೆ. ಈ ಕಾರಿನ ಬೆಲೆ ರೂ. 12 ಕೋಟಿಗಳಾಗುತ್ತದೆ. ಕಂಪನಿಯೊಂದು ಈ ಕಾರಿಗೆ ಗೋಲ್ಡ್ ಕೋಟಿಂಗ್ ಮಾಡಿದೆ. ಬಾಬಿರವರು ಈ ಕಾರಿಗೆ ಗೋಲ್ಡ್ ಕೋಟಿಂಗ್ ಟಚ್ ನೀಡಿದ ನಂತರ ಈ ಐಷಾರಾಮಿ ಕಾರು ಈಗ ಮತ್ತಷ್ಟು ಜನರನ್ನು ತನ್ನತ್ತ ಸೆಳೆಯುತ್ತಿದೆ.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ಭಾರತದಲ್ಲಿ ಗೋಲ್ಡ್ ಕೋಟಿಂಗ್ ಹೊಂದಿರುವ ಹಲವಾರು ಕಾರುಗಳಿದ್ದರೂ ಇದೇ ಮೊದಲ ಬಾರಿಗೆ ರೋಲ್ಸ್ ರಾಯ್ಸ್ ಕಾರಿಗೆ ಗೋಲ್ಡ್ ಕೋಟಿಂಗ್ ಮಾಡಲಾಗಿದೆ. ನಿರ್ದಿಷ್ಟ ಪ್ಯಾಕೇಜ್‌ಗಳ ಅಡಿಯಲ್ಲಿ ತಮ್ಮ ಆಕ್ಸಿಜೆನ್ ರೆಸಾರ್ಟ್‌ಗೆ ಬರುವ ಜನರಿಗೆ ಈ ಕಾರನ್ನು ಬಾಡಿಗೆಗೆ ನೀಡಲಾಗುತ್ತದೆ. ಇದರಿಂದ ಹೆಚ್ಚು ಸಂಪಾದನೆಯಾಗುತ್ತಿಲ್ಲವೆಂದು ಬಾಬಿರವರು ಹೇಳುತ್ತಾರೆ.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ನಿರ್ದಿಷ್ಟವಾಗಿ ಹೇಳುವುದಾದರೆ, ಈ ಯೋಜನೆಯ ಮೂಲಕ ಹೆಚ್ಚಿನ ಲಾಭ ಗಳಿಸುವ ಉದ್ದೇಶವನ್ನು ಅವರು ಹೊಂದಿಲ್ಲ. ಅದಕ್ಕಾಗಿ ಕೈಗೆಟುಕುವ ಬೆಲೆಯಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಬಾಡಿಗೆಗೆ ನೀಡುತ್ತಿದ್ದಾರೆ. ರೆಸಾರ್ಟ್‍‍ಗೆ ಬರುವವರ ಗಮನ ಸೆಳೆಯಲು ಹಾಗೂ ಬೆಂಬಲವನ್ನು ಪಡೆಯಲು ಈ ಸೇವೆಯನ್ನು ಆರಂಭಿಸಲಾಗಿದೆ ಎಂದು ಬಾಬಿ ರವರು ಹೇಳಿದ್ದಾರೆ.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ಅಂದ ಹಾಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ 7 ಕಾರ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ 2003ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ರೋಲ್ಸ್ ರಾಯ್ಸ್ ಕಂಪನಿಯು 2017ರಲ್ಲಿ ಈ ಕಾರಿನ ಬದಲಿಗೆ ಹೊಸ ತಲೆಮಾರಿನ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಕಾರು ಭಾರತದಲ್ಲಿ ಮಾರಾಟವಾಗುತ್ತಿರುವ ದುಬಾರಿ ಬೆಲೆಯ ಕಾರುಗಳಲ್ಲಿ ಒಂದಾಗಿದೆ.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ಈ ಕಾರಿನಲ್ಲಿ ಹಲವಾರು ಐಷಾರಾಮಿ ಅಂಶಗಳನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿರುವ ಐಷಾರಾಮಿ ಅಂಶಗಳನ್ನು ಕೆಲವು ಸ್ಟಾರ್ ಹೋಟೆಲ್‍‍ಗಳಲ್ಲಿಯೂ ಸಹ ನೀಡಲಾಗುವುದಿಲ್ಲ. ಎಲ್ಲಾ ರೋಲ್ಸ್ ರಾಯ್ಸ್ ಕಾರುಗಳು ಟಾಪ್ ಎಂಡ್ ಟೆಕ್ನಾಲಜಿ ಹಾಗೂ ಲಗ್ಷುರಿಯನ್ನು ಹೊಂದಿರುತ್ತವೆ.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ಫ್ಯಾಂಟಮ್ 7 ಕಾರಿನಲ್ಲಿ 6.75 ಲೀಟರಿನ ನ್ಯಾಚುರಲ್ ಆಸ್ಪಿರೇಟೆಡ್ ವಿ12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 453 ಬಿ‍‍ಹೆಚ್‍‍ಪಿ ಪವರ್ ಹಾಗೂ 720 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಕೇವಲ 6.1 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸೆಲರೇಟ್ ಮಾಡುತ್ತದೆ.

ಬಾಡಿಗೆಗೆ ದೊರೆಯಲಿದೆ ಗೋಲ್ಡ್ ವ್ರಾಪ್ ರೋಲ್ಸ್ ರಾಯ್ಸ್ ಕಾರು..!

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 240 ಕಿ.ಮೀಗಳಾಗಿದೆ. ನೀವೂ ಸಹ ರೋಲ್ಸ್ ರಾಯ್ಸ್ ಕಾರ್ ಅನ್ನು ಚಾಲನೆ ಮಾಡುವ ಇಚ್ಛೆ ಹೊಂದಿದ್ದು, ದಿನಕ್ಕೆ ರೂ.50,000 ಖರ್ಚು ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೆ ಗೋಲ್ಡ್ ಬಣ್ಣವನ್ನು ಹೊಂದಿರುವ ಈ ಕಾರ್ ಅನ್ನು ಚಾಲನೆ ಮಾಡಬಹುದು.

More from DriveSpark

Article Published On: Wednesday, March 4, 2020, 11:39 [IST]
English summary
Gold wrapped Rolls Royce Phantom VII as taxi. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+