ಗಿನ್ನೆಸ್ ವಿಶ್ವ ದಾಖಲೆ ದಿನದಂದೇ ರಿವರ್ಸ್ ಪಾರ್ಕಿಂಗ್ ದಾಖಲೆ

By Nagaraja

ಇಕ್ಕಟ್ಟಾದ ಪ್ರದೇಶದಲ್ಲಿ ಇತರ ವಾಹನಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ವಾಹನ ನಿಲುಗಡೆಗೊಳಿಸುವುದು ಒಂದು ರೀತಿಯ ಕಲೆ. ಸತತ ಅಭ್ಯಾಸದಿಂದ ಮಾತ್ರ ಇದನ್ನು ಕರಗತ ಮಾಡಲು ಸಾಧ್ಯ.

Also Read: ವಿಶ್ವದ ಅತಿ ದೊಡ್ಡ ಸೈಕಲ್ ಗಿನ್ನೆಸ್ ದಾಖಲೆ

ಕೆಲವೊಂದು ಬಾರಿ ನೀವು ನಿಮ್ಮ ನಿತ್ಯ ಬದುಕಿನಲ್ಲಿ ಪಾರ್ಕಿಂಗ್ ವೇಳೆ ಇತರ ವಾಹನಗಳಿಗೆ ಸ್ವಲ್ಪನೂ ಸವರಿದರೂ ಬೈಗುಳನ್ನು ಆಲಿಸಿರುವ ಪ್ರಸಂಗವನ್ನು ಎದುರಿಸಿರಬಹುದು. ಈ ಎಲ್ಲದರ ನಡುವೆ ಇಲ್ಲೊಬ್ಬ ವ್ಯಕ್ತಿ ಅತಿ ಇಟ್ಟಕ್ಕಾಗಿ ಸಮಾನಾಂತರವಾಗಿ ನಿಂತಿರುವ ಎರಡು ಕಾರುಗಳ ಮಧ್ಯೆ ಕಾರು ಪಾರ್ಕಿಂಗ್ ಮಾಡುವ ಮೂಲಕ ಗಿನ್ನೆಸ್ ದಾಖಲೆ ಪುಟ ಸೇರಿದ್ದಾರೆ.

ಗಿನ್ನೆಸ್ ವಿಶ್ವ ದಾಖಲೆ ದಿನದಂದೇ ರಿವರ್ಸ್ ಪಾರ್ಕಿಂಗ್ ದಾಖಲೆ

ನಾವಿಂದು ಪರಿಚಯಿಸುವ ವ್ಯಕ್ತಿ ಅಲಿಸ್ಟಾರ್ ಮೊಫಟ್ (Alastair Moffatt ) ಎಂಬವರೇ ಇಕ್ಕಟ್ಟಾದ ಸಮಾನಂತರ ಪಾರ್ಕಿಂಗ್ ಗಾಗಿ ಗಿನ್ನೆಸ್ ದಾಖಲೆಗೆ ಅರ್ಹವಾಗಿದ್ದಾರೆ.

ಗಿನ್ನೆಸ್ ವಿಶ್ವ ದಾಖಲೆ ದಿನದಂದೇ ರಿವರ್ಸ್ ಪಾರ್ಕಿಂಗ್ ದಾಖಲೆ

ಅಲಿಸ್ಟಾರ್ ಇದಕ್ಕಾಗಿ ಜರ್ಮನಿಯ ಐಕಾನಿಕ್ ಮಿನಿ ಕೂಪರ್ ಕಾರನ್ನು ಆಯ್ಕೆ ಮಾಡಿದ್ದಾರೆ. ಇದು ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿರುವುದರಿಂದ ನಿರ್ವಹಣೆ ಬಹಳ ಸುಲಭವಾಯಿತು ಎಂದವರು ಅಭಿಪ್ರಾಯಪಡುತ್ತಾರೆ.

ಗಿನ್ನೆಸ್ ವಿಶ್ವ ದಾಖಲೆ ದಿನದಂದೇ ರಿವರ್ಸ್ ಪಾರ್ಕಿಂಗ್ ದಾಖಲೆ

ಮಿನಿ ಕೂಪರ್ ಕಾರನ್ನು ಅಲಿಸ್ಟಾರ್ ಹ್ಯಾಂಡ್ಲಿಂಗ್ ಮಾಡಿದ ರೀತಿಯಂತೂ ಅದ್ಭುತವಾಗಿತ್ತು. ಸ್ಟಂಟ್ ಗಳಲ್ಲಿ ನೋಡುವ ರೀತಿಯಲ್ಲಿ ಸರ್ರನೆ ವೇಗವಾಗಿ ಗಾಡಿ ಹಿಂದಕ್ಕೆ ಚಾಲನೆ ಮಾಡಿದ ಅವರು 360 ಡಿಗ್ರಿಯಲ್ಲಿ ಒಂದು ಸುತ್ತು ತಿರುಗಿಸಿದ ಬಳಿಕ ಬದಿಯಲ್ಲಿ ಸಮಾನಂತರವಾಗಿ ನಿಂತಿರುವ ಎರಡು ಕಾರುಗಳ ಮಧ್ಯೆ ತಮ್ಮ ಮಿನಿ ಕೂಪರ್ ಕಾರನ್ನು ನಿಲುಗಡೆ ಮಾಡಿದ್ದರು.

ಗಿನ್ನೆಸ್ ವಿಶ್ವ ದಾಖಲೆ ದಿನದಂದೇ ರಿವರ್ಸ್ ಪಾರ್ಕಿಂಗ್ ದಾಖಲೆ

ತಮ್ಮ ಮುಂದಿರುವ ಹಾಗೂ ಹಿಂದಿನ ವಾಹನಗಳ ನಡುವೆ ಒಟ್ಟಾರೆ 34 ಸೆಂಟಿಮೀಟರ್ ಗಳಷ್ಟು ಮಾತ್ರ ಅಂತರ ಕಾಪಾಡಿಕೊಂಡಿರುವ ಅವರೀಗ ಗಿನ್ನೆಸ್ ದಾಖಲೆಗೆ ಪಾತ್ರವಾಗಿದ್ದಾರೆ.

ಗಿನ್ನೆಸ್ ವಿಶ್ವ ದಾಖಲೆ ದಿನದಂದೇ ರಿವರ್ಸ್ ಪಾರ್ಕಿಂಗ್ ದಾಖಲೆ

ಇದನ್ನು ತಾಂತ್ರಿಕ ಭಾಷೆಯಲ್ಲಿ ಬಿಡಿಸಿ ಹೇಳಬೇಕಾದರೆ ಮೊದಲು ಜೆ ಟರ್ನ್ ಮಾಡಿಕೊಂಡಿರುವ ಚಾಲಕ ಆಲಿಸ್ಟಾರ್ ಬಳಿಕ ಹ್ಯಾಂಡ್ ಬ್ರೇಕ್ ಟರ್ನ್ ಮಾಡುವ ಮೂಲಕ ತಮ್ಮ ವಾಹನವನ್ನು ನಿಲುಗಡೆ ಮಾಡಿದ್ದಾರೆ.

ಗಿನ್ನೆಸ್ ವಿಶ್ವ ದಾಖಲೆ ದಿನದಂದೇ ರಿವರ್ಸ್ ಪಾರ್ಕಿಂಗ್ ದಾಖಲೆ

ಗಿನ್ನೆಸ್ ವಿಶ್ವ ದಾಖಲೆಯ ದಿನದಂದೇ ಈ ದಾಖಲೆ ಸ್ಥಾಪನೆ ಮಾಡಿರುವುದು ಮಗದೊಂದು ವಿಶೇಷತೆಯಾಗಿದ್ದು, ಈ ಬಗ್ಗೆ ಆಲಿಸ್ಟಾರ್ ಅತೀವ ಹರ್ಷ ವ್ಯಕ್ತಪಡಿಸುತ್ತಾರೆ.

ಗಿನ್ನೆಸ್ ವಿಶ್ವ ದಾಖಲೆ ದಿನದಂದೇ ರಿವರ್ಸ್ ಪಾರ್ಕಿಂಗ್ ದಾಖಲೆ

ಅಂದ ಹಾಗೆ ಬ್ರಿಟನ್ ನ ಬ್ರೂಕ್ ಲ್ಯಾಂಡ್ಸ್ ನಲ್ಲಿ ಗಿನ್ನೆಸ್ ದಾಖಲೆ ಅಧಿಕೃತರ ಸನ್ಮುಖುದಲ್ಲಿ ಈ ವಿಶಿಷ್ಟ ಪಾರ್ಕಿಂಗ್ ದಾಖಲೆಯನ್ನು ರಚಿಸಲಾಗಿದೆ.

ರೋಚಕ ವಿಡಿಯೋ ವೀಕ್ಷಿಸಿ

ಇವನ್ನೂ ಓದಿ

01. ರಿವರ್ಸ್ ಕಾರು ಜಂಪ್; ಗಿನ್ನೆಸ್ ದಾಖಲೆ ಬರೆದ ರೊಬ್

02. ಗುರುತ್ವ ಬಲವನ್ನು ಹಿಮ್ಮೆಟ್ಟಿಸಿ 360 ಡಿಗ್ರಿಯಲ್ಲಿ ಸರ್ರನೆ ಸುತ್ತಿದ ಕಾರು

More from DriveSpark

Article Published On: Friday, November 13, 2015, 12:45 [IST]
English summary
Tightest reverse parallel park - Guinness World Records
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+