Tire Killer Spike: ಎಚ್ಚರ! ರಾಂಗ್ ಸೈಡ್ ಬಂದ್ರೆ ವಾಹನ ಗೋಂವಿದ
ವಾಹನ ಸವಾರರು ರಸ್ತೆಯಲ್ಲಿ ರಾಂಗ್ ಸೈಡ್ ಹೋಗುವ ಮೂಲಕ ಸರಿದಾರಿಯಲ್ಲಿ ಬರುವ ಇತರ ಸವಾರರಿಗೆ ಕಿರಿಕಿರ ಮಾಡುವುದಲ್ಲದೇ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ. ಹೆಚ್ಚಾಗಿ ನಗರಗಳಲ್ಲಿ ಬೈಕ್ ಸವಾರರು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ತಡೆಗಟ್ಟಲು ಮುಂಬೈ BMC ಖಡಕ್ ಆಲೋಚನೆಯೊಂದಿಗೆ ಮುಂದೆ ಬಂದಿದೆ.
ರಾಂಗ್ ಸೈಡ್ ಡ್ರೈವಿಂಗ್ ಸಮಸ್ಯೆಯನ್ನು ಪರಿಹರಿಸಲು, ಮುಂಬೈನಲ್ಲಿ ಸ್ಪೀಡ್ ಬ್ರೇಕರ್‌ಗಳಲ್ಲಿ Tire Killer Spike ಅಳವಡಿಸುವ ಕ್ರಮವನ್ನು BMC (Brihanmumbai Municipal Corporation) ತೆಗೆದುಕೊಂಡಿದೆ. ಅಂದರೆ ಇವು ರಾಂಗ್ ಸೈಡ್ ಬರುವ ವಾಹನಗಳ ಟೈರ್‌ಗಳನ್ನು ಹಾನಿಗೊಳಿಸುತ್ತವೆ. ಸ್ಥಳೀಯರು ಈ ಕ್ರಮವನ್ನು ಸ್ವಾಗತಿಸಿದರೂ, ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ವಿದೇಶಗಳಲ್ಲಿ ಇಂತಹ ಸ್ಪೈಕ್‌ಗಳು ಈಗಾಗಲೇ ಬಳಕೆಯಲ್ಲಿವೆ. ಹಾಗಯೇ ನಮ್ಮ ಭಾರತದಲ್ಲಿ ನೋಡಿಕೊಂಡರೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಇದೇ ರೀತಿಯ ಸ್ಪೈಕ್‌ಗಳು ಕಂಡುಬಂದಿವೆ. ಇದೀಗ ಮುಂಬೈನಲ್ಲಿ ಇಂತಹ ಸ್ಪೈಕ್‌ಗಳನ್ನು ಬಳಸುತ್ತಿರುವುದು ಇದೇ ಮೊದಲು, ಇವುಗಳಿಂದ ವಾಹನ ಹಾನಿಯಾಗುವ ಭಯದಿಂದ ಸವಾರರು ಕಂಡಿತ ವಿರುದ್ಧ ದಿಕ್ಕಿನಲ್ಲಿ ಚಲಿಸುವುದಿಲ್ಲ ಎಂಬುದು ಅಧಿಕಾರಿಗಳ ಆಲೋಚನೆಯಾಗಿದೆ.
ಬಿಎಂಸಿ ಅಧಿಕಾರಿಗಳ ಪ್ರಕಾರ, ಇಲ್ಲಿನ ಬೈಕರ್‌ಗಳು ತಪ್ಪಾದ ಲೇನ್‌ಗೆ ಪ್ರವೇಶಿಸುವ ಬಗ್ಗೆ ನಿವಾಸಿಗಳಿಂದ ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ ಈ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಅಗತ್ಯವಿದ್ದರೆ ಅದೇ ರಸ್ತೆಯಲ್ಲಿರುವ ಇತರ ಸ್ಥಳಗಳಲ್ಲಿ ಇದೇ ರೀತಿಯ ಹೆಚ್ಚಿನ ಸ್ಪೈಕ್‌ಗಳನ್ನು ಸ್ಥಾಪಿಸಲು BMC ಮುಕ್ತವಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯರು ಇದನ್ನು ಮೆಚ್ಚಿದರೆ, ತಜ್ಞರು ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಸ್ಪೈಕ್ ಗಳು ಅಪಘಾತದ ಸಂದರ್ಭದಲ್ಲಿ ಗಂಭೀರವಾದ ಗಾಯಗಳನ್ನು ಉಂಟುಮಾಡುತ್ತವೆ. ಇದರ ಬದಲು ಸಂಚಾರಿ ಪೊಲೀಸರು ತಪ್ಪಾದ ಮಾರ್ಗವನ್ನು ಬಳಸದಂತೆ ವಾಹನ ಚಾಲಕರಿಗೆ ದಂಡ ವಿಧಿಸಿದರೆ ಸಾಕು ಎಂದು ಕೆಲವು ತಜ್ಞರು ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.
2018 ರಲ್ಲಿ ಕೂಡ ಪುಣೆ ಟ್ರಾಫಿಕ್ ಪೊಲೀಸರು ಖಾಸಗಿ ಸೊಸೈಟಿಯಾದ ಅಮನೋರಾ ಟೌನ್‌ಶಿಪ್ ಬಳಿ ತಪ್ಪು ದಾರಿಯಲ್ಲಿ ವಾಹ ಚಾಲನೆ ಮಾಡುವುದನ್ನು ತಡೆಯಲು ಟೈರ್ ಕಿಲ್ಲರ್ ಸ್ಪೀಡ್ ಬ್ರೇಕರ್‌ಗಳನ್ನು ಹಾಕಿದ್ದರು. ಬಳಿಕ ಇವು ತುಂಬಾ ಅಪಾಯಕಾರಿ ಎಂದು ಪರಿಗಣಿಸಿ ಪೊಲೀಸರು ಅವನ್ನು ತೆಗೆದುಹಾಕಲು ಸೂಚಿಸಿದ್ದರು.
ಭಾರತೀಯ ಪರಿಸ್ಥಿತಿಗಳಿಗೆ ಸರಿಯೇ?: ಭಾರತದಲ್ಲಿನ ಪ್ರಮುಖ ನಗರಗಳಲ್ಲಿ ಹೆಚ್ಚಿನ ಟ್ರಾಫಿಕ್ ಸಾಮಾನ್ಯವಾಗಿಬಿಟ್ಟಿದೆ. ಸವಾರರು ಕೆಲ ತುರ್ತು ಪರಿಸ್ಥಿತಿಗಳಲ್ಲಿ ರಾಂಗ್ ಸೈಡ್ ಹೋಗುತ್ತಾರೆ, ಹಾಗಾಗಿ ಇದನ್ನು ಅಳವಡಿಸುವ ಮೂಲಕ ನಿಯಮ ಪಾಲನೆ ಮಾಡುತ್ತಾರೆ. ಆದರೆ ಇವುಗಳಿಂದ ಆಂಬುಲನ್ಸ್ ಹಾಗೂ ಅಗ್ನಿಶಾಮಕ ವಾಹನಗಳಿಗೂ ಸಮಸ್ಯೆಯಾಗುತ್ತದೆ.
ಒಂದು ವೇಳೆ ತುರ್ತು ವಾಹನಗಳು ಬಂದಾಗ ಅವುಗಳಿಗೆ ಪ್ರತ್ಯೇಕವಾಗಿ ಜಾಗ ಕಲ್ಪಿಸುವುದು ಅಥವಾ ಸೆನ್ಸಾರ್‌ಗಳ ಮೂಲಕ ಸ್ಪೈಕ್‌ಗಳು ಆ ವಾಹನಗಳಿಗೆ ಹಾನಿ ಮಾಡದೇ ಇದ್ದರೇ ಇದು ಉಪಯುಕ್ತವೆಂದು ಹೇಳಬಹುದು. ಇದೇ ರೀತಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ಅಳವಡಿಸುವುದರ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications