ವಾಹನ ಸವಾರರೇ ಜೋಕೆ, ವಿನಾಕಾರಣ ಹೊರಗೆ ಬಂದರೆ ಸೋಂಕಿತನ ಜೊತೆಗಿರಬೇಕಾದಿತು..!

ಕರೋನಾ ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಇಟಲಿ, ಫ್ರಾನ್ಸ್, ಅಮೆರಿಕಾದಂತಹ ದೇಶಗಳು ಈ ಮಹಾಮಾರಿ ವೈರಸ್‌ನಿಂದ ತತ್ತರಿಸಿ ಹೋಗಿವೆ. ಕರೋನಾ ವೈರಸ್ ಹೆಚ್ಚಿನ ಜನರಿಗೆ ಹರಡದಂತೆ ತಡೆಯುವ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿವೆ.

ವಾಹನ ಸವಾರರೇ ಜೋಕೆ, ವಿನಾಕಾರಣ ಹೊರಗೆ ಬಂದರೆ ಸೋಂಕಿತನ ಜೊತೆಗಿರಬೇಕಾದಿತು..!

ಜನರ ಚಲನವಲನವನ್ನು ತಡೆಯುವ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಭಾರತದಲ್ಲಿ ಮಾತ್ರವಲ್ಲದೇ ಬಹುತೇಕ ಎಲ್ಲಾ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಜನರಿಗೆ ವಿನಾಕಾರಣ ಮನೆಯಿಂದ ಹೊರಬಾರದಂತೆ ಸೂಚಿಸಲಾಗಿದೆ.

ವಾಹನ ಸವಾರರೇ ಜೋಕೆ, ವಿನಾಕಾರಣ ಹೊರಗೆ ಬಂದರೆ ಸೋಂಕಿತನ ಜೊತೆಗಿರಬೇಕಾದಿತು..!

ಆದರೂ ಜನ ಈ ವೈರಸ್‌ಗೂ ನಮಗೂ ಸಂಬಂಧವೇ ಇಲ್ಲವೆಂಬಂತೆ ಸುತ್ತಾಡುತ್ತಿದ್ದಾರೆ. ಪೊಲೀಸರು ವಿನಾಕಾರಣ ಹೊರಬರುವ ಜನರಿಗೆ ಲಾಠಿಯ ರುಚಿ ತೋರಿಸುವುದರ ಜೊತೆಗೆ, ಅವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ವಾಹನ ಸವಾರರೇ ಜೋಕೆ, ವಿನಾಕಾರಣ ಹೊರಗೆ ಬಂದರೆ ಸೋಂಕಿತನ ಜೊತೆಗಿರಬೇಕಾದಿತು..!

ಆದರೆ ತಮಿಳುನಾಡಿನ ತಿರುಪುರದ ಪೊಲೀಸರು ವಿಭಿನ್ನವಾದ ಕ್ರಮಕ್ಕೆ ಕೈಹಾಕಿದ್ದಾರೆ. ವಿನಾಕಾರಣ ಹೊರಬರುವ ಜನರು ಆಂಬ್ಯುಲೆನ್ಸ್‌ನಲ್ಲಿರುವ ಕರೋನಾ ಸೋಂಕಿತನ ಜೊತೆಗೆ ಒಂದು ಗಂಟೆ ಕಾಲ ಕಳೆಯುವಂತಹ ಶಿಕ್ಷೆ ನೀಡುತ್ತಿದ್ದಾರೆ.

ವಾಹನ ಸವಾರರೇ ಜೋಕೆ, ವಿನಾಕಾರಣ ಹೊರಗೆ ಬಂದರೆ ಸೋಂಕಿತನ ಜೊತೆಗಿರಬೇಕಾದಿತು..!

ಮಾರಣಾಂತಿಕ ಕರೋನವೈರಸ್ ಬಗ್ಗೆ ಜಾಗೃತಿ ಮೂಡಿಸಲು ಅವರು ಈ ವಿಲಕ್ಷಣ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಖಾಲಿಯಿರುವ ರಸ್ತೆಯಲ್ಲಿ ಮೂವರು ಯುವಕರು ಸ್ಕೂಟರ್‌ನಲ್ಲಿ ಟ್ರಿಪಲ್ ರೈಡ್‌ನಲ್ಲಿ ಬರುತ್ತಾರೆ. ಇವರನ್ನು ಅಡ್ಡಗಟ್ಟುವ ಪೊಲೀಸರು ಅವರನ್ನು ಎಳೆದುಕೊಂಡು ಹೋಗಿ ಆಂಬ್ಯುಲೆನ್ಸ್ ಹತ್ತಿಸುತ್ತಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವಾಹನ ಸವಾರರೇ ಜೋಕೆ, ವಿನಾಕಾರಣ ಹೊರಗೆ ಬಂದರೆ ಸೋಂಕಿತನ ಜೊತೆಗಿರಬೇಕಾದಿತು..!

ಆಂಬ್ಯುಲೆನ್ಸ್‌ನ ಒಳಗೆ ಸ್ಟ್ರೆಚರ್ ಮೇಲೆ ಕರೋನಾ ಸೋಂಕಿತ ವ್ಯಕ್ತಿ ಮಲಗಿರುತ್ತಾನೆ. ಆತನ ಜೊತೆಗಿರಲು ಈ ಮೂವರು ಯುವಕರನ್ನು ಆಂಬ್ಯುಲೆನ್ಸ್ ಒಳಗೆ ಕೂಡಿ ಹಾಕಲಾಗುತ್ತದೆ. ಭಯಭೀತರಾದ ಯುವಕರು ಆಂಬ್ಯುಲೆನ್ಸ್‌ನಿಂದ ಹೊರಕ್ಕೆ ಹಾರಲು ಯತ್ನಿಸುವುದನ್ನು ಕಾಣಬಹುದು.

ವಾಹನ ಸವಾರರೇ ಜೋಕೆ, ವಿನಾಕಾರಣ ಹೊರಗೆ ಬಂದರೆ ಸೋಂಕಿತನ ಜೊತೆಗಿರಬೇಕಾದಿತು..!

ಈ ಮೂವರು, ಕಿಟಕಿಯಿಂದ ಜಿಗಿಯಲು ಪ್ರಯತ್ನಿಸುತ್ತಿರುವುದನ್ನು ನೋಡಿ ನಗು ಬರದೇ ಇರದು. ಫೇಸ್ ಮಾಸ್ಕ್ ಧರಿಸದೇ ವಿನಾಕಾರಣ ರಸ್ತೆಯಲ್ಲಿ ಹೋದರೆ ಏನಾಗಬಹುದು ಎಂಬುದನ್ನು ವಿವರಿಸಲು ಪೊಲೀಸರು ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವಾಹನ ಸವಾರರೇ ಜೋಕೆ, ವಿನಾಕಾರಣ ಹೊರಗೆ ಬಂದರೆ ಸೋಂಕಿತನ ಜೊತೆಗಿರಬೇಕಾದಿತು..!

ಈ ಯುವಕರಿಗೆ ಸಾವಿನ ಭಯ ಏನು ಎಂಬುದು ತಿಳಿದು ಬಂದಿದೆ. ಅಂದ ಹಾಗೆ ಈ ಆಂಬ್ಯುಲೆನ್ಸ್‌ನಲ್ಲಿದಿದ್ದು ನಕಲಿ ಕರೋನಾ ರೋಗಿ. ಸ್ಟ್ರೆಚರ್ ಮೇಲೆ ಇದ್ದ ವ್ಯಕ್ತಿಗೆ ಕರೋನಾ ಸೋಂಕು ಇರಲಿಲ್ಲ.

ವೈರಸ್ ಸೋಂಕು ನಿಜವಾಗಿಯೂ ನಮಗೆ ತಗುಲಿದರೆ, ನಾವು ಎಂತಹ ಕೆಟ್ಟ ಪರಿಸ್ಥಿತಿಗೆ ಹೋಗಬೇಕಾಗುತ್ತದೆ ಎಂಬುದನ್ನು ತಿಳಿಸಲು ತಿರುಪುರ್ ಪೊಲೀಸರು ಈ ಹೊಸ ಟ್ರಿಕ್ ಬಳಸಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ವಾಹನ ಸವಾರರೇ ಜೋಕೆ, ವಿನಾಕಾರಣ ಹೊರಗೆ ಬಂದರೆ ಸೋಂಕಿತನ ಜೊತೆಗಿರಬೇಕಾದಿತು..!

ಅಗತ್ಯವಿದ್ದಲ್ಲಿ ಮನೆಯಿಂದ ಹೊರಬರುವ ಮೊದಲು ಸೂಕ್ತ ಭದ್ರತೆಗಳೊಂದಿಗೆ ಹೊರಬರುವುದು ಉತ್ತಮ. ತಿರುಪುರ್ ಪೊಲೀಸರ ಈ ವಿಭಿನ್ನ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

Most Read Articles

Kannada
English summary
Tiruppur Police new awareness concept for coronavirus. Read in Kannada.
Story first published: Saturday, April 25, 2020, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X