ಟೈಟಾನಿಕ್‌ ಅವಶೇಷ ತೋರಿಸಲು ಹೊರಟ ಸಬ್‌ಮೆರಿನ್ ನಾಪತ್ತೆ: ಇದರ ಟಿಕೆಟ್‌ ಬೆಲೆಗೆ 20 ಸ್ವಿಫ್ಟ್‌ ಖರೀದಿಸಬಹುದು

ಮೋಜು ಮಸ್ತಿ ಮಾಡಲು ಇಂದಿನ ಕಾಲದಲ್ಲಿ ಮಿತಿಗಳಿಲ್ಲ. ಅಡ್ವೆಂಚರ್‌ ಎಂಬ ಹೆಸರಿನಲ್ಲಿ ಈಗಿನ ಯುವಜನತೆ ಸಾಮಾನ್ಯ ಜನರು ಊಹಿಸಲಾರದ ರೀತಿಯ ಚಟುವಟಿಕೆಗಳನ್ನು ಮಾಡುತ್ತಾರೆ. ಇದೀಗ ಅದೇ ರೀತಿಯ ಘಟನೆಯೊಂದು ಕಳೆದೆರಡು ದಿನಗಳಿಂದ ಭಾರೀ ಸುದ್ದಿ ಮಾಡುತ್ತಿದೆ. ಇಂದಿನ ಲೇಖನದಲ್ಲಿ ಅದೇನೆಂದು ನೋಡೋಣ.

ಟೈಟಾನಿಕ್‌ ಹಡಗು ಮುಳುಗಿದ್ದ ಅಟ್ಲಾಂಟಿಕ್‌ ಸಾಗರದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಹಲವು ವರ್ಷಗಳ ಹಿಂದೆ ಟೈಟಾನಿಕ್‌ (Titanic) ಹಡಗು ಅಟ್ಲಾಂಟಿಕ್‌ ಸಾಗರದಲ್ಲಿ ಮಂಜುಗಡ್ಡೆಯ ಪರ್ವತವೊಂದಕ್ಕೆ ಡಿಕ್ಕಿ ಹೊಡೆದು ಮುಳುಗಿ ಹೋಗಿದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಆ ಟೈಟಾನಿಕ್‌ ಹಡಗಿನ ಅವಶೇಷಗಳಿದ್ದ ಸ್ಥಳಕ್ಕೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ನೌಕೆಯೊಂದು ಅಟ್ಲಾಂಟಿಕ್‌ ಸಾಗರದ ಆಳದಲ್ಲಿ ನಾಪತ್ತೆಯಾಗಿದೆ.

Titanic Tourist Submarine

ಕಳೆದ ಎರಡು ದಿನಗಳಿಂದ ಈ ಜಲಾಂತರ್ಗಾಮಿ ನೌಕೆಯನ್ನು ಹುಡುಕುವ ಪ್ರಯತ್ನಗಳನ್ನು ಮಾಡುತ್ತಿದ್ದು, ಇದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಈ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯನ್ನು ಹುಡುಕುತ್ತಿರುವ ಸಂಧರ್ಭದಲ್ಲಿ ಆಳ ಸಮುದ್ರದಲ್ಲಿ ಕೆಲವು ಶಬ್ದಗಳು ಕೇಳಿ ಬಂದಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.

ಇನ್ನು ನಾಪತ್ತೆಯಾಗಿರುವ ಜಲಾಂತರ್ಗಾಮಿ ನೌಕೆಯನ್ನು ಹುಡುಕುವ ಕೆಲಸ ಭರದಿಂದ ಸಾಗುತ್ತಿದ್ದು ಇದರಲ್ಲಿ ಐದು ಜನ ಪ್ರಯಾಣಿಕರು ಇದ್ದರು. ಟೈಟಾನಿಕ್‌ ನ ಅವಶೇಷಗಳನ್ನು ತೋರಿಸಲು ಹೊತ್ತೊಯ್ದ ಈ ಜಲಾಂತರಗಾಮಿ ನೌಕೆಯಲ್ಲಿ ಪ್ರಯಣ ಮಾಡುವ ಟಿಕೆಟ್‌ ದರ ಸುಮಾರು 250000 ಡಾಲರ್‌ಗಳು. ಅಂದರೆ ಸುಮಾರು 2,04,84,875 ರೂಪಾಯಿಗಳು.

Titanic Tourist Submarine

ಸುಮಾರು ಎಂಟು ದಿನಗಳ ಈ ಪ್ರವಾಸದ ಸಬ್‌ಮೆರಿನ್‌ ನ ಟಿಕೆಟ್‌ ಬೆಲೆ ಸುಮಾರು ಎರಡು ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು. ಇಷ್ಟು ದೊಡ್ಡ ಮೊತ್ತದ ಟಿಕೇಟನ್ನು ಖರೀಧಿಸಿದ ಐದು ಮಂದಿ ಇಂದು ಅಟ್ಲಾಂಟಿಕ್‌ ಆಳ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ ಎಂಬುದು ಸೋಜಿಗದ ಸಂಗತಿಯೇ ಸರಿ.

ಇನ್ನು ಈ ಅಟ್ಲಾಂಟಿಕ್‌ ಸಾಗರದಲ್ಲಿ ಏಪ್ರಿಲ್‌ 14, 1912 ರಲ್ಲಿ ಬ್ರಿಟೀಷ್‌ ಲಕ್ಷುರಿ ಟೈಟಾನಿಕ್‌ ಹಡಗು ಸೌತಾಂಪ್ಟನ್‌ ನಿಂದ ನ್ಯೂಯಾರ್ಕ್‌ ಸಿಟಿಗೆ ಪ್ರಯಾಣ ಬೆಳೆಸಿತ್ತು. ಈ ಸಂಧರ್ಭದಲ್ಲಿ ನಡುಸಮುದ್ರದಲ್ಲಿದ್ದ ಮಂಜು ಪರ್ವತವನ್ನು ಗುರುತಿಸುವಲ್ಲಿ ವಿಫಲವಾಗಿ ಅದಕ್ಕೆ ಗುದ್ದಿ ಅಲ್ಲೇ ಮುಳುಗಡೆಯಾಗಿತ್ತು. ಮಾಹಿತಿಗಳ ಪ್ರಕಾರ ಸುಮಾರು 1500 ಪ್ರಯಾಣಿಕರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ವರದಿಗಳ ಪ್ರಕಾರ ಓಷಿಯನ್‌ ಗೇಟ್‌ ಸಿಇಒ ಸ್ಟಾಕ್ಟಾನ್‌ ರಷ್, ಬ್ರಿಟೀಷ್‌ ಆಡ್ವೆಂಚರರ್ ಹಾಮಿಷ್‌ ಹಾರ್ಡಿಂಗ್, ಪಾಕಿಸ್ತಾನದ ಇಬ್ಬರು ಮತ್ತು ನೌಕೆಯ ಸಿಬ್ಬಂದಿ ಸೇರಿ ಸುಮಾರು ಐದು ಪ್ರಯಾಣಿಕರು ಈ ಜಲಾಂತರ್ಗಾಮಿ ನೌಕೆಯಲ್ಲಿ ಇದ್ದು ಇದು ನಾಪತ್ತೆಯಾಗುವುದಕ್ಕೂ ಒಂದು ಮುಕ್ಕಾಲು ಗಂಟೆಗೂ ಮೊದಲೇ ತನ್ನ ಸಪೋರ್ಟ್‌ ಶಿಪ್‌ ನಿಂದ ಸಂಪರ್ಕವನ್ನು ಕಳೆದುಕೊಂಡಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, June 22, 2023, 11:48 [IST]
English summary
Titanic tourist submarine with five passengers missing in atlantic ocean
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+