ತೆಲುಗು ಖ್ಯಾತ ನಟನ ಕಾರ್ ತಡೆದು ಟಿಂಟ್ ಗ್ಲಾಸ್‌ಗಳನ್ನು ತೆರವುಗೊಳಿಸಿದ ಪೊಲೀಸರು!
ದಕ್ಷಿಣ ಭಾರತದ ತೆಲುಗು ಸಿನಿಮಾ ಇಂಡಸ್ಟ್ರಿಯ ನಟ ಎನ್‌ಟಿಆರ್, ಅನೇಕ ಚಿತ್ರಗಳಲ್ಲಿ ನಟಿಸಿ ತಮ್ಮ ಅದ್ಬುತ ನಟನೆಯಿಂದ ಭಾರತದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾವಾದ ಆರ್‌ಆರ್‌ಆರ್ ಸಿನಿಮಾದಲ್ಲೂ ನಟಿಸಿದ್ದು, ಈ ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಇದೇ ತಿಂಗಳ 25ರಂದು ಸಿನಿಮಾ ತರೆಗೆ ಅಪ್ಪಳಿಸಲಿದೆ.

ಆದರೆ ಇತ್ತೀಚೆಗೆ ಪ್ರಕಟವಾದ ವರದಿಯ ಪ್ರಕಾರ, ಜೂನಿಯರ್ ಎನ್‌ಟಿಆರ್ ಮತ್ತು ಅವರ ಮಗನನ್ನು ಹೈದರಾಬಾದ್‌ನಲ್ಲಿ ಸಂಚಾರಿ ಪೊಲೀಸರು ತಡೆದಿದ್ದಾರೆ. ಅವರ ಕಾರಿಗೆ ಟಿಂಟೆಡ್ ವಿಂಡೋ ಇತ್ತು ಎಂದು ಹೇಳಲಾಗುತ್ತಿದ್ದು, ಪೊಲೀಸರು ಟಿಂಟ್ ಫಿಲ್ಮ್ ಅನ್ನು ಕಾರಿನ ವಿಂಡೋದಿಂದ ತೆರವುಗೊಳಿಸಿ ನಂತರ ನಟ ಎನ್‌ಟಿಆರ್ ಅವರನ್ನು ಹೊರಹೋಗಲು ಅನುಮತಿಸಿದ್ದಾರೆ ಎನ್ನಲಾಗಿದೆ.

ಕಾರನ್ನು ಜೂನಿಯರ್ ಎನ್‌ಟಿಆರ್ ಅಥವಾ ಅವರ ಮಗ ಚಾಲನೆ ಮಾಡುತ್ತಿರಲಿಲ್ಲ ಬದಲಾಗಿ ಅವರ ಚಾಲಕ ಡ್ರೈವ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಹೈದರಾಬಾದ್ ಪೊಲೀಸರು ಪ್ರಸ್ತುತ ಟಿಂಟೆಡ್ ವಿಂಡೋಗಳನ್ನು ಬಳಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಟಿಂಟೆಡ್ ವಿಂಡೋ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ಈ ಕಾರ್ಯಾಚರಣೆ ಅಡಿಯಲ್ಲಿ, ಪೊಲೀಸರು ಅಂತಹ ವಾಹನಗಳನ್ನು ನಿಲ್ಲಿಸಿ ಟಿಂಟ್ ಫಿಲ್ಮ್ ಅನ್ನು ತೆರವುಗೊಳಿಸುತ್ತಿದ್ದಾರೆ. ಇಂತಹ ವಾಹನಗಳನ್ನು ಬಳಸುವ ಕಾರು ಚಾಲಕರಿಗೆ ದಂಡ ವಿಧಿಸುತ್ತಿದ್ದಾರೆ. ಇದರೊಂದಿಗೆ, ಪೊಲೀಸರು ಅನಿಯಮಿತ ನಂಬರ್ ಪ್ಲೇಟ್‌ಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಹಿಂದೆಯೇ ಟಿಂಟೆಡ್ ವಿಂಡೋಗಳ ಬಳಕೆಗೆ ಹಲವು ರಾಜ್ಯಗಳಲ್ಲಿ ನಿಷೇಧ ಹೇರಲಾಗಿದೆ.

ಟಿಂಟೆಡ್ ವಿಂಡೋಗಳಿಂದ ಕಾರಿನ ಒಳಗೆ ನಡೆಯುವ ದೃಷ್ಯಗಳನ್ನು ನೋಡಲು ಆಗುವುದಿಲ್ಲ. ಒಂದು ವೇಳೆ ಕಾರಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಅದನ್ನು ನೋಡಲಾಗುವುದಿಲ್ಲ. ಅಲ್ಲದೇ ರಸ್ತೆಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಸಹ ವಾಹನದೊಳಗಿನ ಚಟುವಟಿಕೆಗಳನ್ನು ದಾಖಲಿಸಲು ಸಾಧ್ಯವಾಗುವುದಿಲ್ಲ.

ಇನ್ನು ಹಿಟ್ ಅಂಡ್ ರನ್ ಕೇಸ್, ಕಳ್ಳತನ, ಇತ್ಯಾದಿ ಪ್ರಕರಣಗಳಲ್ಲಿ ಚಾಲಕನನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲ. ಅಲ್ಲದೇ ಭಾರತೀಯ ಹವಾಮಾನ ಪರಿಸ್ಥಿತಿಗಳಲ್ಲಿ, ಈ ಸನ್ ಫಿಲ್ಮ್‌ಗಳು ಬೇಸಿಗೆಯಲ್ಲಿ ಸುಡುವ ಶಾಖದಿಂದ ಪ್ರಯಾಣಿಕರನ್ನು ರಕ್ಷಿಸುವುದರಿಂದ ಸನ್ ಫಿಲ್ಮ್ ಒಂದು ವರದಾನವೆಂದು ಸಾಬೀತುಪಡಿಸಬಹುದು. ಇದರೊಂದಿಗೆ ಕಾರನ್ನು ಬಿಸಿಲಿನಲ್ಲಿ ನಿಲ್ಲಿಸಿದಾಗ, ಒಳಾಂಗಣವು ಅತ್ಯಂತ ಬಿಸಿಯಾಗುತ್ತದೆ. ಸನ್ ಫಿಲ್ಮ್ ಸೂರ್ಯನ ಕಿರಣಗಳು ಮತ್ತು ಗಾಜಿನ ನಡುವೆ ಹಸ್ತಕ್ಷೇಪವನ್ನು ಸೃಷ್ಟಿಸುತ್ತದೆ, ಆದ್ದರಿಂದ ಇದು ಕ್ಯಾಬಿನ್ ತಾಪಮಾನವನ್ನು ತುಲನಾತ್ಮಕವಾಗಿ ಸಾಮಾನ್ಯವಾಗಿಸಲು ಸಹಕಾರಿಯಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಕಾರು ತಯಾರಕರು ತಮ್ಮ ಕಾರುಗಳನ್ನು ಯುವಿ ಕಟ್ ಗ್ಲಾಸ್‌ನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗೆ, ಈ ವೈಶಿಷ್ಟ್ಯವನ್ನು ಮಾರುತಿ ಸುಜುಕಿ ಬಲೆನೊ ಮತ್ತು ಟೊಯೊಟಾ ಗ್ಲಾಂಜಾದಲ್ಲಿ ಸೇರಿಸಲಾಗಿದೆ, ಈ ವೈಶಿಷ್ಟ್ಯವು ಈ ಕಾರುಗಳ ಟಾಪ್-ಸ್ಪೆಕ್ ಮಾದರಿಗಳಲ್ಲಿ ಮಾತ್ರ ಕಂಡುಬರುತ್ತದೆ.

ಈ ಗ್ಲಾಸ್‌ಗಳು ಗಾಢ ಹಸಿರು ಛಾಯೆಯನ್ನು ಹೊಂದಿದ್ದು, ಇದನ್ನು ಭಾರತೀಯ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇಂತಹ ಗ್ಲಾಸ್‌ಗಳನ್ನು ಆರ್‌ಟಿಒ ಕೂಡ ಅನುಮೋದಿಸುತ್ತದೆ, ಏಕೆಂದರೆ ಅವು ಗೋಚರತೆಗೆ ಅಡ್ಡಿಪಡಿಸುವುದಿಲ್ಲ. ಇನ್ನು ಕ್ಯಾಬಿನ್ ತುಂಬಾ ಬಿಸಿಯಾಗದಂತೆ ಸೂರ್ಯನ ಬೆಳಕಿನ ಪ್ರಭಾವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


Click it and Unblock the Notifications








