Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

ಕಾರು ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಚಲನಚಿತ್ರ ಸೆಲಬ್ರಿಟಿಗಳಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚಾಗೇ ಇರುತ್ತೆ. ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ಮಾಡೆಲ್ ಕಾರುಗಳನ್ನು ಖರೀದಿಸುವುದು ಸಿನಿಮಾ ಸೆಲಬ್ರಿಟಿಗಳಿಗೆ ಒಂದು ಟ್ರೆಂಡ್ ಆಗಿದೆ.

Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಜನಪ್ರಿಯ ನಟ Jr NTR ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ಜನಪ್ರಿಯ ನಟ ಹೆಚ್ಚು ಕಾರು ಕ್ರೇಜ್ ಹೊಂದಿದ್ದು, ಇವರ ಬಳಿ ಹಲವಾರು ಐಷಾರಾಮಿ ಮತ್ತು ದುಬಾರಿ ಕಾರುಗಳಿವೆ. ನಟ Jr NTR ಅವರು ಇತ್ತೀಚೆಗೆ ಹೊಸ Lamborghini Urus Graphite Capsule ಎಡಿಷನ್ ಅನ್ನು ಖರೀದಿಸಿದ್ದಾರೆ, ಈ ಐಷಾರಾಮಿ ಕಾರನ್ನು ಖರೀದಿಸಿದ ಮೊದಲ ಭಾರತೀಯ ಜೂನಿಯರ್ ಎನ್​ಟಿಆರ್ ಆಗಿದ್ದಾರೆ. ಈ ಹೊಸ Lamborghini Urus Graphite Capsule ಎಡಿಷನ್ ಹೈದರಾಬಾದ್‌ನಲ್ಲಿರುವ ಅವರ ಮನೆಗೆ ತಲುಪಿದೆ.

Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

ಇನ್‌ಸ್ಟಾಗ್ರಾಮ್ ನಲ್ಲಿ ಬೆಂಗಳೂರಿನ Lamborghini ಶೋರೂಂನಿಂದ ವಿತರಣೆಯ ಪಡೆಯುವ ಮೊದಲು ನಿಲ್ಲಿಸಿದ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಭಾರತದಲ್ಲಿ Lamborghini ಕಂಪನಿಯು ಈ ಹೊಸ Urus Graphite Capsule ಕಾರನ್ನು ದೆರಡು ದಿನಗಳ ಹಿಂದೆ ಪರಿಚಯಿಸಲಾಯಿತು.

Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

ಈ Lamborghini Urus ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,3.15 ಕೋಟಿಯಾಗಿದೆ. ಸ್ಟ್ಯಾಂಡರ್ಡ್ Urus ಮಾದರಿಗಿಂತ Urus Graphite Capsule ಎಡಿಷನ್ ಹೆಚ್ಚು ಪ್ರೀಮಿಯಂ ಆಗಿದೆ. ಇದೇ ರೀತಿ Lamborghini Urus ಕಾರನ್ನು ಭಾರತದ ಹಲವು ನಟರ ಬಳಿ ಇದೆ. ಆದರೆ ಇತ್ತೀಚೆಗೆ Lamborghini ಕಂಪನಿಯ್ ಪರಿಚಯಿಸಿದ Urus Graphite Capsule ಎಡಿಷನ್ ಖರೀದಿಸಿದ ಮೊದಲ ಭಾರತೀಯ ನಟ Jr NTR ಅವರು ಆಗಿದ್ದಾರೆ.

Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

ಜನತಾ ಗ್ಯಾರೇಜ್ ಖ್ಯಾತಿಯ ನಟ ಜೂನಿಯರ್ ಎನ್​ಟಿಆರ್ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಈ ನಟ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಹೊಸ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಅನ್ನು ಖರೀದಿಸಿದ್ದಾರೆ.

Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

Lamborghini Urus Graphite Capsule ಎಡಿಷನ್ ಅತ್ಯಾಧುನಿಕ ವಿನ್ಯಾಸ ಹೊಂದಿರುವ ವೇಗದ ಎಸ್‍ಯುವಿಗಳಲ್ಲಿ ಒಂದಾಗಿದೆ. ಇದು ಎರಡು-ಟೋನ್ ಕಲರ್ ಸ್ಕೀಮ್‌ನಲ್ಲಿ ಲಭ್ಯವಿರುವ ಮೊದಲೇ ಕಾನ್ಫಿಗರ್ ಮಾಡಿದ ಎಸ್‌ಯುವಿಯಾಗಿದೆ. ಗ್ರ್ಯಾಫೈಟ್ ಆವೃತ್ತಿಯ ಕ್ಯಾಬಿನ್ ಒಳಗೆ ಡಾರ್ಕ್ ಆನೋಡೈಸ್ಡ್ ಅಲ್ಯೂಮಿನಿಯಂ ಮತ್ತು ಮ್ಯಾಟ್ ಫಿನಿಶ್ ಕಾರ್ಬನ್ ಫೈಬರ್‌ ಅನ್ನು ಒಳಗೊಂಡಿದೆ.

Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

ಈ Lamborghini Urus ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಅಲ್ಲದೇ ಈ Lamborghini Urus ಕಂಪನಿಯ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಅದರಲ್ಲಿಯು ಭಾರತದಲ್ಲಿಯೂ ಗಮನಾರ್ಹ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

ಕಂಪನಿಯು 2018ರಲ್ಲಿ Urus ಎಸ್‌ಯುವಿ ಉತ್ಪಾದನೆಯನ್ನು ಮೊದಲ ಬಾರಿಗೆ ಆರಂಭಿಸಿತು. ಅಂದಿನಿಂದ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಉರುಸ್ ಕಾರಿನಲ್ಲಿ 4.0 ಲೀಟರಿನ 8-ಸಿಲಿಂಡರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ.

Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

ಈ ಎಂಜಿನ್ 641 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. Urus ಎಸ್‍ಯುವಿಯು Lamborghini ಕಂಪನಿಯ ಅತ್ಯಂತ ಶಕ್ತಿಶಾಲಿ ಕಾರುಗಳಲ್ಲಿ ಒಂದು. ಈ ಕಾರು ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಭಾರತದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್, ಉದ್ಯಮಿ ಮುಖೇಶ್ ಅಂಬಾನಿ ಸೇರಿದಂತೆ ಹಲವಾರು ಗಣ್ಯರು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ. ಇದೀಗ ಈ ಸಾಲಿಗೆ Jr NTR ಕೂಡ ಸೇರಿದ್ದಾರೆ. ಆದರೆ Jr NTR ಹೆಚ್ಚು ಪ್ರೀಮಿಯಂ ಆದ Lamborghini Urus Graphite Capsule ಎಡಿಷನ್ ಅನ್ನು ಹೊಂದಿದ್ದಾರೆ.

Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

Lamborghini Urus ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಎಲ್‌ಬಿ ಇವೊ ಪ್ಲಾಟ್‌ಫಾರಂ ಅನ್ನು ಆಧರಿಸಿದೆ. Lamborghini Urus ಕಾರು ಸ್ಲಿಮ್ ಆಗಿರುವ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳನ್ನು ಹೊಂದಿದೆ. ಈ ಕಾರಿನ ವಿನ್ಯಾಸವು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್ ಕಾರ್ ನಿಂದ ಸ್ಫೂರ್ತಿ ಪಡೆದಿದೆ. ಲ್ಯಾಂಬೊರ್ಗಿನಿ ಉರುಸ್ ಕಾರಿನಲ್ಲಿ 21 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

Lamborghini Urus Graphite Capsule ಕಾರನ್ನು ಖರೀದಿಸಿದ ಭಾರತದ ಮೊದಲಿಗ ನಟ Jr NTR

ರಸ್ತೆಯಲ್ಲಿ ಸಾಗುವಾಗ ತನ್ನತ್ತ ಜನರನ್ನು ಸೆಳೆಯುವ ಸಾಮರ್ಥ್ಯ ಹೊಂದಿರುವ Lamborghini Urusಚಿಕ್ಕ ಒವರ್‍‍ಹ್ಯಾಂಗ್‍‍ಗಳನ್ನು ಹೊಂದಿರುವ ಕೂಪೆ ಸಿಲೋಟ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ದೊಡ್ಡ ಗಾತ್ರದ ಬಂಪರ್‍‍ಗಳನ್ನು ಹೊಂದಿದೆ. Lamborghini Urus ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಕಾರುಗಳಲ್ಲಿ ಒಂದಾಗಿದೆ.

Most Read Articles

Kannada
English summary
Tollywood actor jr ntr buys lamborghini urus graphite capsule edition details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X