ಆ್ಯಂಕರ್‌ನೊಂದಿಗೆ ಜಗಳಕ್ಕಿಳಿದು ಸುದ್ದಿಯಾಗಿದ್ದ ತೆಲುಗು ನಟ ವಿಶ್ವಕ್‌ಸೇನ್ ಹೊಸ ಕಾರು ಖರೀದಿ
ತೆಲುಗು ಚಿತ್ರರಂಗದ ಯುವ ನಟ ವಿಶ್ವಕ್ ಸೇನ್ ಟಾಲಿವುಡ್‌ನಲ್ಲಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಇತ್ತೀಚೆಗೆ ಸುದ್ದಿ ವಾಹಿನಿಯೊಂದರಲ್ಲಿ ಆ್ಯಂಕರ್‌ನೊಂದಿಗಿನ ವಿವಾದದಿಂದಾಗಿ ಅವರು ಇನ್ನಷ್ಟು ಜನಪ್ರಿಯತೆಯನ್ನು ಗಳಿಸಿದರು.

ವಿಶ್ವಕ್ ಸೇನ್ ನಟನೆಯ ಹೊಸ ಸಿನಿಮಾ ಅಶೋಕವನಂಲೊ ಅರ್ಜುನ ಕಲ್ಯಾಣಂ ಮೇ 6 ರಂದು ಬಿಡುಗಡೆಯಾಗಿ ದೊಡ್ಡ ಯಶಸ್ಸನ್ನು ಕಂಡಿತು. ಆ್ಯಂಕರ್‌ನೊಂದಿಗಿನ ಇಷ್ಟು ದೊಡ್ಡ ವಿವಾದದ ನಂತರವೂ ಚಿತ್ರವು ದೊಡ್ಡ ಹಿಟ್ ಆಗಿದ್ದು, ನಾಯಕ ತಮ್ಮದೇ ಶೈಲಿಯಲ್ಲಿ ಯಶಸ್ಸನ್ನು ಆಚರಿಸಿ ತಮ್ಮ ಕನಸಿನ ಕಾರನ್ನು ಖರೀದಿಸಿದ್ದಾರೆ.

ಅಂದಹಾಗೆ ಅವರು ಮರ್ಸಿಡಿಸ್ ಬೆಂಜ್ ಬ್ರಾಂಡ್‌ನಡಿಯಲ್ಲಿ ಅತ್ಯಂತ ದುಬಾರಿ ಎಸ್‌ಯುವಿ ಜಿ-ವ್ಯಾಗನ್ ಖರೀದಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾರಿನೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅವರು ಈ ಮರ್ಸಿಡಿಸ್ ಬೆಂಜ್ ಜಿ-ವ್ಯಾಗನ್ ಅನ್ನು ಹೈದರಾಬಾದ್‌ನ ಕಾವೂರಿ ಹಿಲ್ಸ್‌ನಲ್ಲಿರುವ ಮಹಾವೀರ್ ಮೋಟಾರ್ಸ್‌ನಿಂದ ಖರೀದಿಸಿದ್ದಾರೆ.

ವಿಶ್ವಕ್ ಸೇನ್ ಅವರು ತಮ್ಮ ನೆಚ್ಚಿನ ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಕಾರನ್ನು ಖರೀದಿಸುವ ಮೂಲಕ ತಮ್ಮ ಬಹುಕಾಲದ ಕನಸನ್ನು ನನಸಾಗಿಸಿಕೊಂಡಿದ್ದಾರೆ, ಇದು ಅವರ ಅಭಿಮಾನಿಗಳು ತೋರಿದ ಜನಪ್ರಿಯತೆ ಮತ್ತು ಪ್ರೀತಿಯಿಂದ ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.

"ನಾನು ನಿನ್ನೆ ನನ್ನ ಕನಸಿನ ಕಾರನ್ನು ಖರೀದಿಸಿದೆ. ನಿಮ್ಮ ನಿರಂತರ ಪ್ರೀತಿ ಮತ್ತು ಬೆಂಬಲದಿಂದ ಇದೆಲ್ಲವೂ ಸಾಧ್ಯವಾಯಿತು. ಎಲ್ಲರಿಗೂ ಧನ್ಯವಾದಗಳು. ನನ್ನ ಜೀವನದಲ್ಲಿ ನಡೆದ ಎಲ್ಲದಕ್ಕೂ ಮತ್ತು ಎಲ್ಲರಿಗೂ ಧನ್ಯವಾದಗಳು." ಈ ಸಂದರ್ಭದಲ್ಲಿ ಸಹಕಾರ ನೀಡಿದ ಮಹಾವೀರ್ ಮೋಟಾರ್ಸ್ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದರು.

ಹೀರೋ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಕಾರಿನೊಂದಿಗಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದು, ಮಾಸ್ ಕಾ ದಾಸ್ ಗೆ ಅಭಿನಂದನೆಗಳು ಎಂದು ಹಾಡಿಹೊಗಳಿದ್ದಾರೆ.

ಜರ್ಮನ್ ಐಷಾರಾಮಿ ಕಾರು ಬ್ರಾಂಡ್ ಮರ್ಸಿಡಿಸ್-ಬೆನ್ಜ್ ಜಿ-ಕ್ಲಾಸ್ ಸಹ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ದುಬಾರಿ ವಾಹನಗಳಲ್ಲಿ ಒಂದಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಾರಿನ ಬೆಲೆಯು 1.72 ಕೋಟಿ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಗ್ರಾಹಕರು ಆಯ್ಕೆಮಾಡುವ ಕಸ್ಟಮೈಸೇಶನ್ ಪ್ಯಾಕೇಜ್‌ಗಳನ್ನು ಅವಲಂಭಿಸಿ ಈ ಬೆಲೆಗಳು ಬದಲಾಗುತ್ತವೆ.

ಕಂಪನಿಯು ವಿಶೇಷವಾದ ಕಾರು Mercedes-AMG G63 4-ಮ್ಯಾಟಿಕ್ ಅನ್ನು ಸಹ ಮಾರಾಟ ಮಾಡುತ್ತದೆ, ಈ ಮಾದರಿಯ ಶ್ರೇಣಿಯಲ್ಲಿ ಅವರ ಕಾರ್ಯಕ್ಷಮತೆ ವಿಭಾಗ AMG ಗೆ ಟ್ಯೂನ್ ಮಾಡಲಾಗಿದೆ. ಈ ಉನ್ನತ-ಕಾರ್ಯಕ್ಷಮತೆಯ SUV ರೂ 2.55 ಕೋಟಿ (ಎಕ್ಸ್ ಶೋ ರೂಂ) ಯಿಂದ ಪ್ರಾರಂಭವಾಗುತ್ತದೆ.

ಹೀರೋ ವಿಶ್ವಕ್ ಸೇನ್ G 350d 4MATIC ರೂಪಾಂತರವನ್ನು ಖರೀದಿಸಿದ್ದಾರೆ. ಈ ರೂಪಾಂತರವು ಶಕ್ತಿಯುತ 3.0 ಲೀಟರ್ ಇನ್‌ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ಎಂಜಿನ್ 3400 - 4600 rpm ನಲ್ಲಿ ಗರಿಷ್ಠ 282 bhp ಮತ್ತು 1200 - 3200 rpm ನಲ್ಲಿ 600 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 9G-ಟ್ರಾನಿಕ್ (9-ಸ್ಪೀಡ್) ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಕಾರ್ಯಕ್ಷಮತೆಯ ವಿಷಯಕ್ಕೆ ಬಂದರೆ, Mercedes-Benz G350D4matic G-Class SUV ಕೇವಲ 7.4 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ತಲುಪುತ್ತದೆ. ಇದು ಗಂಟೆಗೆ ಗರಿಷ್ಠ 199 ಕಿಲೋಮೀಟರ್ ವೇಗದಲ್ಲಿ (ಟಾಪ್ ಸ್ಪೀಡ್) ಚಲಿಸಬಲ್ಲದು. ಈ SUV ಇಂಧನ ಟ್ಯಾಂಕ್ ಅನ್ನು ಹೊಂದಿದ್ದು, ಒಂದೇ ಬಾರಿಗೆ 100 ಲೀಟರ್ ಡೀಸೆಲ್ ಅನ್ನು ಸಂಗ್ರಹಿಸಬಹುದು.

ಈ ಕಾರಿನ ಪ್ರಮುಖ ವೈಶಿಷ್ಟ್ಯಗಳನ್ನು ನೋಡುವುದಾದರೆ, ಇದು ಬಾಕ್ಸ್ ಮಾದರಿಯ ವಿನ್ಯಾಸದ ಸಿಲೂಯೆಟ್ ಅನ್ನು ಹೊಂದಿದ್ದು, ಕ್ಲಾಸಿಕ್ ಎಸ್ಯುವಿಯಂತೆ ಕಾಣುತ್ತದೆ. ಇತರ ವೈಶಿಷ್ಟ್ಯಗಳೆಂದರೆ ಎಲ್ಇಡಿ ಹೈ ಪರ್ಫಾರ್ಮೆನ್ಸ್ ಹೆಡ್‌ಲ್ಯಾಂಪ್‌ಗಳು, ನಪ್ಪಾ ಲೆದರ್ ಇಂಟೀರಿಯರ್ಸ್, ಮಲ್ಟಿಫಂಕ್ಷನ್ ಸ್ಪೋರ್ಟ್ಸ್ ಸ್ಟೀರಿಂಗ್ ವೀಲ್, ಆಂಬಿಯೆಂಟ್ ಲೈಟಿಂಗ್, ರಿಯರ್ ಮೌಂಟೆಡ್ ಸ್ಪೇರ್ ವೀಲ್, ಮರ್ಸಿಡಿಸ್ ಮಿ ಕನೆಕ್ಟ್ ಮತ್ತು ಆಕ್ಟಿವ್ ಲೇನ್ ಕೀಪಿಂಗ್ ಅಸಿಸ್ಟ್ಗಳನ್ನು ಹೊಂದಿದೆ.

ಕಸ್ಟಮೈಸೇಶನ್‌ಗಳ ಭಾಗವಾಗಿ, ಕಂಪನಿಯು AMG ಲೈನ್ ಪ್ಯಾಕೇಜ್, ನೈಟ್ ಪ್ಯಾಕೇಜ್, ನೈಟ್ ಪ್ಯಾಕೇಜ್ ಮ್ಯಾಗ್ನೋ, ಸ್ಟೇನ್‌ಲೆಸ್ ಸ್ಟೀಲ್ ಪ್ಯಾಕೇಜ್, ಜಿ ಮ್ಯಾನುಫಕ್ಟೂರ್ ಇಂಟೀರಿಯರ್, ವುಡ್ ಮತ್ತು ಲೆದರ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, ಆಕ್ಟಿವ್ ಮಲ್ಟಿ - ಕಂಟೈನರ್, ಆಕ್ಟಿವ್ ಮಲ್ಟಿರೆಕ್ಷನ್ ಅನ್ನು ಪಡೆದುಕೊಳ್ಳಬಹುದು. ಅಲ್ಲದೆ, ಗ್ರಾಹಕರು 18 ಇಂಚುಗಳಿಂದ 20 ಇಂಚುಗಳವರೆಗೆ ಲಭ್ಯವಿರುವ ವಿವಿಧ ಅಲಾಯ್ ವೀಲ್‌ಗಳನ್ನು ಆಯ್ಕೆ ಮಾಡಬಹುದು.


Click it and Unblock the Notifications