ಜಗತ್ತಿನ ಅಗ್ರ 10 ವಿಮಾನಯಾನ ಸಂಸ್ಥೆಗಳು
ಮಾನವನ ಅತ್ಯಂತ ಶ್ರೇಷ್ಠ ಶೋಧನೆಗಳಲ್ಲಿ 'ವಿಮಾನ' ಕೂಡಾ ಒಂದಾಗಿದೆ. ಇದಕ್ಕೆ ಯಾವುದೇ ಟ್ರಾಫಿಕ್ ತೊಂದರೆಗಳ ಕಿರಿಕಿರಿಯಿರುವುದಿಲ್ಲ. ಅಲ್ಲದೆ ಕಡಿಮೆ ಅಪಾಯದಲ್ಲಿ ಅತಿ ದೂರದ ಪ್ರದೇಶಗಳನ್ನು ಕೆಲವೇ ಗಂಟೆಗಳಲ್ಲಿ ಸಂಪರ್ಕಿಸಬಹುದಾಗಿದೆ.
ಇವನ್ನೂ ಓದಿ: ಪ್ರಪಂಚದ 23 ಭಯಾನಕ ವಿಮಾನ ರನ್ವೇಗಳು
ಉದ್ದವಾದ ದೇಹ ವಿನ್ಯಾಸ, ಎರಡು ಬದಿಗಳಲ್ಲೂ ರೆಕ್ಕೆಗಳನ್ನು ಹೊಂದಿರುವ ವಿಮಾನವು ಸ್ವಚ್ಛಂದವಾಗಿ ವಿಹರಿಸುವ ಪಕ್ಷಿಯನ್ನು ಹೋಲುತ್ತದೆ. ರೈಟ್ ಸೋದರರಿಂದ ಶೋಧನೆಗೆ ಒಳಪಟ್ಟಿರುವ ವಿಮಾನವು ಇಂದಿನ ಆಧುನಿಕ ಜಗತ್ತಿನ ಪ್ರಮುಖ ಸಂಪರ್ಕ ಮಾಧ್ಯಮವಾಗಿಬಿಟ್ಟಿದೆ.

ಇಂದಿನ ಈ ಲೇಖನದಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ಅಗ್ರ 10 ವಿಮಾನಯಾನ ಸಂಸ್ಥೆಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. 245 ವಿಮಾನಯಾನ ಸಂಸ್ಥೆಗಳಲ್ಲಿ ನಡೆಯಿಸಿರುವ ಅಧ್ಯಯನದ ಬಳಿಕ ಈ ಪಟ್ಟಿ ತಯಾರಿಸಲಾಗಿದೆ.

10. ಲುಫ್ತಾನ್ಸಾ
1953ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ಜರ್ಮನಿಯ ವಿಮಾನಯಾನ ಸಂಸ್ಥೆಯಾಗಿರುವ ಲುಫ್ತಾನ್ಸಾ 1955ರಿಂದ ತನ್ನ ಸೇವೆ ಆರಂಭಿಸಿತ್ತು. 282 ವಿಮಾನಗಳನ್ನು ಹೊಂದಿರುವ ಇದು ವಿಶ್ವದ 215 ವಿವಿಧ ಪ್ರದೇಶಗಳಿಗೆ ಸಂಪರ್ಕವನ್ನು ಹೊಂದಿದೆ.

09. ಎಟಿಹಾಡ್ ಏರ್‌ವೇಸ್
ಒಂಬತ್ತನೇಯ ಸ್ಥಾನದಲ್ಲಿ ಅಬುದಾಯಿಯ ಎಟಿಹಾಡ್ ಏರ್‌ವೇಸ್ ಕಾಣಿಸಿಕೊಂಡಿದೆ. 104 ವಿಮಾನಗಳನ್ನು ಹೊಂದಿರುವ ಸಂಸ್ಥೆಯು ಜಗತ್ತಿನ 96 ಸ್ಥಳಗಳಿಗೆ ಸಂಪರ್ಕವನ್ನು ಹೊಂದಿದೆ. 2003ರಲ್ಲಿ ಆರಂಭವಾದ ಬಳಿಕ ಎಟಿಹಾಡ್ ಇದುವರೆಗೆ 30 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

08. ಏಷಿಯಾನಾ ಏರ್‌ಲೈನ್ಸ್
ಸರಿ ಸುಮಾರು 26 ವರ್ಷಗಳ ಹಿಂದೆ ಅಂದರೆ 1988ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ದಕ್ಷಿಣ ಕೊರಿಯಾದ ವಿಮಾನಯಾನ ಸಂಸ್ಥೆಯಾಗಿರುವ ಏಷಿಯಾನಾ ಏರ್‌ಲೈನ್ಸ್ 84 ವಿಮಾನಗಳನ್ನು ಹೊಂದಿದ್ದು, 108 ವಿವಿಧ ಪ್ರದೇಶಗಳಿಗೆ ಸಂಪರ್ಕವನ್ನು ಹೊಂದಿದೆ. ಅಲ್ಲದೆ ಸದ್ಯದಲ್ಲೇ ಇನ್ನಷ್ಟು 108 ವಿಮಾನಗಳು ಸೇರ್ಪಡೆಯಾಗಲಿದೆ.

7. ಗರುಡ ಇಂಡೋನೇಷ್ಯಾ
ಇಂಡೋನೇಷ್ಯಾದ ಗರುಡ ಏರ್‌ಲೈನ್ 1947ನೇ ಇಸವಿಯಲ್ಲಿ ಸ್ಥಾಪಿತವಾಗಿತ್ತು. ಅಲ್ಲದೆ 1949ನೇ ಇಸವಿಯಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. 120 ವಿಮಾನಗಳನ್ನು ಹೊಂದಿರುವ ಗರುಡ ಏರ್‌ಲೈನ್ 35 ದೇಶಿಯ ಅಂತೆಯ 21 ಅಂತರಾಷ್ಟ್ರೀಯ ಪ್ರದೇಶಗಳಿಗೆ ಸಂಪರ್ಕವನ್ನು ಹೊಂದಿದೆ. ಇಂಡೋನೇಷ್ಯಾದ ಬ್ಯಾಂಟೆನ್‌ನಲ್ಲಿ ಇದರ ಪ್ರಧಾನ ಕಚೇರಿ ಸ್ಥಿತಗೊಂಡಿದೆ.

6. ಆಲ್ ನಿಪ್ಪಾನ್ ಏರ್‌ವೇಸ್ (ಎಎನ್‌ಎ)
ಜಪಾನ್‌ನ ಸ್ಪೂರ್ತಿದಾಯಕ ಆಲ್ ನಿಸ್ಸಾನ್ ಏರ್‌ವೇಸ್ ಆರನೇ ಸ್ಥಾನದಲ್ಲಿದೆ. 1952ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ಆಲ್ ನಿಪ್ಪಾನ್ ಏರ್‌ವೇಸ್, 202 ವಿಮಾನಗಳೊಂದಿಗೆ 73 ತಲುಪುದಾಣವನ್ನು ಹೊಂದಿದೆ. ಇದರ ಪ್ರಧಾನ ಕಚೇರಿ ಜಪಾನ್‌ನ ಟೊಕಿಯೋದಲ್ಲಿದೆ. ಅಲ್ಲದೆ ಏರ್ ಕಾರ್ಗೊ ಸರ್ವೀಸ್ ಅಂಗವಾಗಿ ಸಂಸ್ಥೆಯು ಒಂಬತ್ತು 767-300 ಬೋಯಿಂಗ್ ವಿಮಾನಗಳನ್ನು ಹೊಂದಿದೆ.

5. ಟರ್ಕಿಶ್ ಏರ್‌ಲೈನ್ಸ್
ಐದನೇ ಸ್ಥಾನದಲ್ಲಿರುವ ಟರ್ಕಿಶ್ ಏರ್‌ಲೈನ್ಸ್ ಸಂಸ್ಥೆಯು ಅತಿ ಪುರಾತನ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ. 1933ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ಈ ಸಂಸ್ಥೆಯು 258 ವಿಮಾನಗಳನ್ನು ಹೊಂದಿದ್ದು, ಜಗತ್ತಿನ ವಿವಿಧ ದೇಶದ 257 ಪ್ರದೇಶಗಳಲ್ಲಿ ವಿಮಾನಯಾನ ಸಂಚಾರವನ್ನು ಹೊಂದಿದೆ.

4. ಎಮಿರೇಟ್ಸ್
ಎಮಿರೇಟ್ಸ್ ಸಂಸ್ಥೆಯು ನಿಮಗೆ ಹೆಚ್ಚು ಪರಿಚಿತವಾಗಿರಬಹುದು. 1985ರಲ್ಲಿ ಸ್ಥಾಪಿತವಾಗಿರುವ ಈ ಸಂಸ್ಥೆಯು 211 ವಿಮಾನಗಳನ್ನು ಹೊಂದಿದ್ದು, 142 ಪ್ರದೇಶಗಳಿಗೆ ತನ್ನು ಸಂಪರ್ಕವನ್ನು ಹೊಂದಿದೆ. ಅಲ್ಲದೆ ತನ್ನ ಕೇಂದ್ರ ಕಚೇರಿಯನ್ನು ದುಬೈನಲ್ಲಿ ಹೊಂದಿರುತ್ತದೆ.

3. ಸಿಂಗಾಪುರ ಏರ್‌ಲೈನ್ಸ್
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ 1947ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ಸಿಂಗಾಪುರ ಏರ್‌ಲೈನ್ಸ್, 106 ವಿಮಾನಗಳನ್ನು ಹೊಂದಿದ್ದು 62 ತಾಣಗಳಲ್ಲಿ ತನ್ನ ಸಂಪರ್ಕವನ್ನು ವಿಸ್ತರಿಸಿದೆ. ಈಗಾಗಲೇ ಏರ್‌ಬಸ್ ಎ380ಗಳಂತಹ ಜಗತ್ತಿನ ಅತಿದೊಡ್ಡ ವಿಮಾನ ಸೇವೆ ಹೊಂದಿರುವ ಸಿಂಗಾಪುರ ಏರ್‌ಲೈನ್ಸ್ ಪ್ರಯಾಣಿಕರಿಗೆ ನೈಜ ಹಾರಾಟದ ಅನುಭವ ನೀಡುತ್ತದೆ.

2. ಖತಾರ್ ಏರ್‌ವೇಸ್
ಜಗತ್ತಿನ ಫೈ ಸ್ಟಾರ್ ಏರ್‌ಲೈನ್ ಆಗಿರುವ ಖತಾರ್ ಏರ್‌ವೇಯ್ಸ್ 1993ನೇ ಇಸವಿಯಲ್ಲಿ ಸ್ಥಾಪಿತವಾಗಿತ್ತು. ಖತಾರ್‌ನ ದೋಹಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಖತಾರ್ ಏರ್‌ವೇಯ್ಸ್ ಈ ಸಣ್ಣ ಅವಧಿಯಲ್ಲಿ ವಾಯು ಸಂಚಾರದಲ್ಲಿ ಅತಿ ಹೆಚ್ಚು ಪ್ರಗತಿ ಸಾಧಿಸಿದ್ದು, 133 ವಿಮಾನಗಳಿಂದಾಗಿ ಜಗತ್ತಿನ 144 ಪ್ರದೇಶಗಳಿಗೆ ತನ್ನ ಸಂಪರ್ಕ ಜಾಲವನ್ನು ಹೊಂದಿದೆ.

1. ಕ್ಯಾತೆ (Cathay) ಫೆಸಿಫಿಕ್ ಏರ್‌ವೇಸ್,
ನಿಸ್ಸಂಶವಾಗಿಯೂ ಅಗ್ರ ಸ್ಥಾನದಲ್ಲಿರುವ ಕ್ಯಾತೆ ಫೆಸಿಫಿಕ್ ಏರ್‌ವೇಸ್, ಜಗತ್ತಿನ ಅತಿಶ್ರೇಷ್ಠ ವಿಮಾನಯಾನ ಸಂಸ್ಥೆಯಾಗಿದೆ. ಹಾಂಕಾಂಗ್ ತಲಹದಿಯ ಈ ಸಂಸ್ಥೆಯು 1946ನೇ ಇಸವಿಯಲ್ಲಿ ಸ್ಥಾಪಿತವಾಗಿದ್ದು, 141 ವಿಮಾನಗಳಿಂದಾಗಿ 112 ಪ್ರದೇಶಗಳಿಗೆ ಸಂಪರ್ಕವನ್ನು ಹೊಂದಿದೆ.


Click it and Unblock the Notifications








