ಭೂಮಿಯ ಮೇಲಿನ 10 ಅತಿ ವೇಗದ ರಸ್ತೆಗಳು

By Nagaraja

ವಾಹನಗಳ ಸುರಕ್ಷಿತ ಪಯಣಕ್ಕೆ ಸೂಕ್ತ ರೀತಿಯ ರಸ್ತೆಗಳನ್ನು ಹೊಂದಿರಬೇಕಾಗಿರುವುದು ಸಹ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳು ರಸ್ತೆಗಳ ಮೂಲಸೌಕರ್ಯ ವೃದ್ಧಿಯತ್ತವೂ ಸಾಕಷ್ಟು ಗಮನ ಹರಿಸಿದೆ.

ಆದರೆ ಕೆಲವೊಂದು ಸನ್ನಿವೇಶಗಳಲ್ಲಿ ಭೂಮಿಯ ನೈಸರ್ಗಿಕ ಆಕಾರವು ತೊಡಕಾಗಿ ಪರಿಣಿಸುತ್ತದೆ. ಈ ಎಲ್ಲ ಸವಾಲುಗಳನ್ನು ಮೀರಿರುವ ಮಾನವ ಸಮೂಹವು ಅತ್ಯಂತ ವೇಗದ ರಸ್ತೆಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭೂಮಿಯ ಮೇಲಿನ 10 ಅತಿ ವೇಗದ ರಸ್ತೆಗಳು

ಇಂದಿನ ಈ ಲೇಖನದಲ್ಲಿ ಭೂಮಿಯ ಮೇಲೆ ಹಾದು ಹೋಗುತ್ತಿರುವ 10 ಅತಿ ವೇಗದ ರಸ್ತೆಗಳ ಬಗ್ಗೆ ಚರ್ಚಿಸಲಿದ್ದೇವೆ.

10. ಸ್ಲೋವಾಕಿಯಾ

10. ಸ್ಲೋವಾಕಿಯಾ

ಸ್ಲೋವಾಕಿಯಾದಲ್ಲಿರುವ ಹೆದ್ದಾರಿಯಲ್ಲಿ ಗಂಟೆಗೆ 35 ಮೈಲ್ ವೇಗ ಮಿತಿಯಿದೆ. ಹಾಗಿದ್ದರೆ ಹೇಗೆ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದೆಯೆಂಬ ಸಂಶಯ ಕಾಡುತ್ತಿದೆಯೇ? ಹೌದು ಇಲ್ಲಿನ ಚಾಲಕರು ನಿಯಮಗಳನ್ನು ಲೆಕ್ಕಿಸದೇ ಗಂಟೆಗೆ 80 ಮೈಲ್ ವೇಗ ಮಿತಿಯನ್ನು ದಾಟುತ್ತಿದ್ದಾರೆ.

ಚಿತ್ರ ಕೃಪೆ: ವಿಕಿ ಕಾಮನ್ಸ್

9. ಯುಎಇ

9. ಯುಎಇ

ಇಂತಹದೊಂದು ಪರಿಸ್ಥಿತಿ ಯುಎಇನಲ್ಲೂ ನಿರ್ಮಾಣವಾಗಿದ್ದು, ಗಂಟೆಗೆ 75 ಮೈಲ್ ವೇಗಮಿತಿಯಿದ್ದರೂ ಚಾಲಕರು ಗರಿಷ್ಠ 87 ಮೈಲ್ ವೇಗದಲ್ಲಿ ಸಂಚರಿಸಲು ಹಿಂಜರಿಯಲಾರರು. ಸಹಜವಾಗಿಯೇ ಮರುಭೂಮಿ ಪ್ರದೇಶವಾಗಿದ್ದರಿಂದ ಅತ್ಯುತ್ತಮ ಸಮತಲ ರಸ್ತೆ ಪರಿಸ್ಥಿತಿಯನ್ನು ನೀವಿಲ್ಲಿ ಅನುಭವಿಸಬಹುದಾಗಿದೆ.

8. ಆಸ್ಟ್ರೇಲಿಯಾ

8. ಆಸ್ಟ್ರೇಲಿಯಾ

ಆಸ್ಟ್ರೇಲಿಯಾದಲ್ಲೂ ಅತ್ಯುತ್ತಮ ರಸ್ತೆ ವ್ಯವಸ್ಥೆಯಿದೆ. ಇಲ್ಲಿ ಗಂಟೆಗೆ ಗರಿಷ್ಠ 81 ಮೈಲ್ ವೇಗ ಮಿತಿಯಿದ್ದರೂ ಉದ್ದವಾಗಿ ಹರಡಿರುವ ಈ ಹೈವೇ ನಿಯಮ ಪಾಲಿಸುವುದು ಕಷ್ಟದ ವಿಚಾರ.

7. ಅರಿಜೋನಾ

7. ಅರಿಜೋನಾ

ಅರಿಜೋನಾದಲ್ಲೂ ಗಂಟೆಗೆ ಗರಿಷ್ಠ 88 ಮೈಲ್ ವೇಗ ಮಿತಿಯಿದ್ದರೂ ಈ ತೆರೆದ ರಸ್ತೆಗಳಲ್ಲಿ 90 ಮೈಲ್ ವೇಗದಲ್ಲಿ ಸಂಚರಿಸಿದರೂ ಯಾವುದೇ ತೊಂದರೆಯುಂಟಾಗಲಾರದು.

ಚಿತ್ರ ಕೃಪೆ: aaroads.com
6. ನ್ಯೂಜಿಲೆಂಡ್

6. ನ್ಯೂಜಿಲೆಂಡ್

ವೇಗದ ದಾಖಲೆ ಸೃಷ್ಟಿಸುವುದರಲ್ಲಿ ನ್ಯೂಜಿಲೆಂಡ್ ರಸ್ತೆಗಳು ಹೆಸರಾಂತವಾಗಿದೆ. 1996ನೇ ಇಸವಿಯಲ್ಲಿ ಇಲ್ಲಿನ ಗೂಡಿಸ್ ರಸ್ತೆಯಲ್ಲಿ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದ್ದ ಓವೆನ್ ಈವೆನ್ಸ್ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದರು. ಅಂದವರು ಗರಿಷ್ಠ 216 ಮೈಲ್ ವೇಗ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು.

5. ಇಟಲಿ

5. ಇಟಲಿ

ಇಟಲಿ ಹಾಗೂ ರೋಮ್ ಬಂಧಿಸುವ ಎ1 ರಸ್ತೆಯಲ್ಲಿ ಗರಿಷ್ಟ ಗಂಟೆಗೆ 93 ಮೈಲ್ ವೇಗಮಿತಿರುತ್ತದೆ. ಆದರೆ ವೇಗದ ವಿಚರಾದಲ್ಲಿ ಫೆರಾರಿ ಹಾಗೂ ಲಂಬೋರ್ಗಿನಿ ಸೂಪರ್ ಕಾರುಗಳ ತವರೂರಾದ ಇಟಲಿಯಲ್ಲಿ ಇಂತಹ ಯಾವುದೇ ನಿಯಮ ಪಾಲಿಸಲಾಗುತ್ತಿಲ್ಲ.

ಚಿತ್ರ ಕೃಪೆ: ವಿಕಿ ಕಾಮನ್ಸ್
4. ನೂರ್ಬರ್ಗ್ರೀಂಗ್

4. ನೂರ್ಬರ್ಗ್ರೀಂಗ್

ಜರ್ಮನಿಯಲ್ಲಿ ಸ್ಥಿತಗೊಂಡಿರುವ ನೂರ್ಬರ್ಗ್ರೀಂಗ್ ರೇಸ್ ಟ್ರ್ಯಾಕ್‌ನಲ್ಲಿ ನಿಮ್ಮ ಚಾಲನಾ ಸಾಮರ್ಥ್ಯವನ್ನು ಪರೀಕ್ಷಿಸಲು ಇಚ್ಛಿಸುವುದಾದ್ದಲ್ಲಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

3. ಐಲ್ ಆಫ್ ಮ್ಯಾನ್

3. ಐಲ್ ಆಫ್ ಮ್ಯಾನ್

ಇಲ್ಲಿ ಯಾವುದೇ ವೇಗ ಮಿತಿಯಿರುವುದಿಲ್ಲ. ಹಾಗಾಗಿ ವೇಗ ಇಷ್ಟಪಡುವವರಿಗೆ ಹೇಳಿ ಮಾಡಿಸಿದಂತಹ ರಸ್ತೆಯಿದು. ಇಲ್ಲಿ ಪ್ರತಿ ವರ್ಷವೂ ಮೋಟಾರು ಸೈಕಲ್ ರೇಸ್ ಸಹ ಹಮ್ಮಿಕೊಳ್ಳಲಾಗುತ್ತದೆ. ತಿರುವುಗಳಿಂದ ಕೂಡಿರುವ ಈ ರಸ್ತೆಗಳಲ್ಲಿ ಸಾಹಸ ಚಾಲನೆಯನ್ನು ಸಹ ಕೈಬೀಸಿ ಕರೆಯುತ್ತದೆ.

2. ಪೊಲೆಂಡ್

2. ಪೊಲೆಂಡ್

ಪೊಲೆಂಡ್‌ನಲ್ಲಿ ಸ್ಥಿತಗೊಂಡಿರುವ ಆಟೋಸ್ಟ್ರಾಟಾ ಜಗತ್ತಿನ ಅತಿ ವೇಗದ ಕಾನೂನುಬದ್ಧವಾದ ಹೆದ್ದಾರಿಯಾಗಿದೆ. ಇಲ್ಲಿ ಗರಿಷ್ಠ ಗಂಟೆಗೆ 87 ಮೈಲ್ ವೇಗ ಮಿತಿ ಆಳವಡಿಸಲಾಗಿರುತ್ತದೆ.

ಚಿತ್ರ ಕೃಪೆ: ವಿಕಿ ಕಾಮನ್ಸ್
1. ಜರ್ಮನಿ

1. ಜರ್ಮನಿ

ನಿಸ್ಸಂಶಯವಾಗಿಯೂ ಜರ್ಮನಿಯ ಆಟೋಬಾನ್ ಅಂತರಾಜ್ಯ ಹೆದ್ದಾರಿಯು ಜಗತ್ತಿನ ಅತ್ಯಂತ ವೇಗದೂತ ರಸ್ತೆಯಾಗಿರುತ್ತದೆ. ಇಲ್ಲಿನ ಕಾನೂನುಬದ್ಧವಾದ ವೇಗ ಮಿತಿ ಗಂಟೆಗೆ 81 ಮೈಲ್ (130 kph) ಆಗಿದೆ. ಆದರೆ ಚಾಲಕರಿಲ್ಲಿ ಕಣ್ಣು ಮುಚ್ಚಿಕೊಂಡು ಈ ವೇಗ ಮಿತಿಯನ್ನು ದಾಟಬಹುದಾಗಿದೆ. ಅಷ್ಟೊಂದು ಸುರಕ್ಷಿತ ಚಾಲನೆಯನ್ನು ಆಟೋಬಾನ್ ರಸ್ತೆ ಪ್ರದಾನ ಮಾಡುತ್ತದೆ. ಅಷ್ಟೇ ಯಾಕೆ 1968ನೇ ಇಸವಿಯಲ್ಲಿ ಮರ್ಸಿಡಿಸ್ ಬೆಂಝ್ ಕಾರೊಂದು ಗಂಟೆಗೆ 268.8 ಮೈಲ್ ವೇಗವನ್ನು ಮೀರಿದ ಸಾಧನೆಯನ್ನು ಮಾಡಿದೆ.

ಚಿತ್ರ ಕೃಪೆ: ಫ್ಲಿಕರ್
ಬೊನೆವೆಲ್ ಸಾಲ್ಟ್ ಫ್ಲ್ಯಾಟ್

ಬೊನೆವೆಲ್ ಸಾಲ್ಟ್ ಫ್ಲ್ಯಾಟ್

ಪ್ರಖ್ಯಾತ ಬೊನೆವೆಲ್ ಸಾಲ್ಟ್ ಫ್ಲ್ಯಾಟ್ ಉಲ್ಲೇಖಿಸಿದಿದ್ದರೆ ಈ ಲೇಖನ ಅಪೂರ್ಣವಾದಿತು. ಅಮೆರಿಕದ ಉಟಾ (utah) ಪ್ರಾಂತ್ಯದಲ್ಲಿ ಸ್ಥಿತಗೊಂಡಿರುವ ಈ ಉಪ್ಪಿನಿಂದ ಆವೃತ್ತರಾಗಿರುವ ಸರೋವರವು ವಾಹನ ಉತ್ಸಾಹಿಗಳಿಗೆ ಅದ್ಭುತ ಅನುಭವ ನೀಡುತ್ತದೆ.

ಚಿತ್ರ ಕೃಪೆ: ವಿಕಿ ಕಾಮನ್ಸ್

More from DriveSpark

Article Published On: Thursday, July 10, 2014, 14:23 [IST]
English summary
Automobile manufacturers have always tried to defy the law of physics by engineering cars that can go fast. Over the years, engineering these machines have brought us fast cars in many shapes and sizes, with speed in mind.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+