ದೇಶದ ಟಾಪ್ 10 ಅತಿ ವೇಗದ ರೈಲುಗಳು!
ಭಾರತ ಸರಕಾರದ ರೈಲ್ವೇ ಸಚಿವಾಲಯದ ಕೆಳಗಡೆ ಗುರುತಿಸಿಕೊಂಡಿರುವ 'ಭಾರತೀಯ ರೈಲ್ವೇ' ಅಥವಾ 'ಇಂಡಿಯನ್ ರೈಲ್ವೇ' ಜಗತ್ತಿನ ಅತಿ ದೊಡ್ಡ ರೈಲ್ವೇ ಜಾಲವನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದ್ದು, 115,000 ಕೀ.ಮೀ. ರೈಲು ಹಳಿ (65,436 ಕೀ.ಮೀ. ರೈಲು ರೂಟ್) ಮತ್ತು 7172 ಕೀ.ಮೀ. ಸ್ಟೇಷನ್‌ಗಳನ್ನು ಹೊಂದಿದೆ.
ಪ್ರತಿ ದಿನ ಸುಮಾರು23 ಮಿಲಿಯನ್ ಪ್ರಯಾಣಿಕರನ್ನೂ, 1050.18 ಮಿಲಿಯನ್ ಟನ್ನಿಗೂ ಹೆಚ್ಚು ಸರಕನ್ನೂ ಸಾಗಾಟ ಮಾಡುವ ಭಾರತೀಯ ರೈಲ್ವೆಯು ಪ್ರಪಂಚದಲ್ಲಿಯೇ ಅತಿ ದೊಡ್ಡ ಹಾಗೂ ಅತಿ ಚಟುವಟಿಕೆಯ ರೈಲು ಜಾಲಗಳಲ್ಲಿ ಒಂದಾಗಿದೆ. 1853ರಲ್ಲಿ ಆರಂಭವಾಗಿರುವ ಭಾರತೀಯರೈಲ್ವೇಯಲ್ಲಿ 1.307 ಮಿಲಿಯನ್ ಜನ ನೌಕರರಿದ್ದು, ಇದು ಪ್ರಪಂಚದಲ್ಲಿಯೇ ಯಾವುದೇ ವಾಣಿಜ್ಯ ಅಥವಾ ಸಾರ್ವಜನಿಕರ ಬಳಕೆಯ ಸೇವಾ ಕ್ಷೇತ್ರದಲ್ಲಿ ಅತಿ ಹೆಚ್ಚು ಎಂದು ಪರಿಗಣಿತವಾಗಿದೆ. ಒಂದೇ ಸಂಸ್ಥೆಯಲ್ಲಿ ಇದಕ್ಕಿಂತ ಹೆಚ್ಚು ಜನರಿರುವುದು ಚೀನಾದ ಸೇನೆಯಲ್ಲಿ ಮಾತ್ರ ಎಂದೂ ಹೇಳಲಾಗುತ್ತದೆ.

ಸದ್ಯ ಅತಿ ಪುರಾತನ ರೈಲ್ವೇ ಜಾಲವನ್ನು ಹೊಂದಿರುವ ಭಾರತದಲ್ಲೂ ರೈಲ್ವೇ ಗುಣಮಟ್ಟವನ್ನು ವೃದ್ಧಿಸುವ ಪ್ರಯತ್ನ ನಡೆಯುತ್ತಿದೆ. ಇದರಂತೆ ಅನೇಕ ಸೂಪರ್ ಫಾಸ್ಟ್ ರೈಲುಗಳ ಘೋಷಣೆಯಾಗುತ್ತಿದೆ. ಇಲ್ಲಿ ಪ್ರಯಾಣಿಕರು ಪ್ರಕೃತಿ, ಭೂದೃಶ್ಯಗಳ ಸೌಂದರ್ಯ ಸವಿಯಬಹುದು. ಅಲ್ಲದೆ ಅತಿ ಕಡಿಮೆ ದರಗಳಲ್ಲಿ ತಮ್ಮ ಗುರಿ ತಲುಪಬಹುದಾಗಿದೆ. ಈ ನಿಟ್ಟಿನಲ್ಲಿ ಸದ್ಯ ಭಾರತೀಯ ರೈಲ್ವೇಯಲ್ಲಿರುವ ಟಾಪ್ 10 ಅತಿ ವೇಗದ ರೈಲುಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ.

10. ನವದೆಹಲಿ-ಲಕ್ನೋ ಶತಾಬ್ದಿ
ದೇಶದ ಟಾಪ್ 10 ಅತಿ ವೇಗದ ರೈಲುಗಳ ಪಟ್ಟಿಯಲ್ಲಿ ನವದೆಹಲಿ-ಲಕ್ನೋ ಶತಾಬ್ದಿ ರೈಲು ಕಾಣಿಸಿಕೊಂಡಿದೆ. ಇದು ರಾಜಧಾನಿ ದೆಹಲಿ ಹಾಗೂ ಲಕ್ನೋ ನಗರವನ್ನು ಸಂಪರ್ಕಿಸುತ್ತದೆ. ಆಧುನಿಕ ಜರ್ಮನ್ ಕೋಚ್ ಪಡೆದ ದೇಶದ ಮೊದಲ ರೈಲು ಇದಾಗಿದ್ದು, ಗಂಟೆಗೆ ಸರಾಸರಿ 85.03 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ. ಹಾಗೆಯೇ 513 ಕೀ.ಮೀ. ದೂರದ ಹಾದಿಯನ್ನು 6 ಗಂಟೆ ಹಾಗೂ 15 ನಿಮಿಷಗಳಲ್ಲಿ ತಲುಪತ್ತದೆ.

9. ನಿಜಾಮುದ್ದೀನ್-ಬಾಂದ್ರಾ ಗರೀಬ್ ರಥ್
ಬಡವರ ಬಂಡಿ ಅಥವಾ ಗರೀಬ್ ರಥ್ ಎಂಬ ಅಕ್ಕರೆಯ ಹೆಸರಿನಿಂದಲೇ ಗುರುತಿಸಲ್ಪಡುವ ಈ ರೈಲು 2005ರಲ್ಲಿ ಮೊದಲ ಪಯಣ ಆರಂಭಿಸಿತ್ತು. ಇದು ಕಡಿಮೆ ದರದಲ್ಲಿ ಎಸಿ ಕೋಚ್ ಪಯಣವನ್ನು ಒದಗಿಸುತ್ತಿದೆ. ಇದು 1366 ಕೀ.ಮೀ. ದೂರವನ್ನು 16 ಗಂಟೆ ಹಾಗೂ 30 ನಿಮಿಷಗಳಲ್ಲಿ ಕ್ರಮಿಸುತ್ತದೆ.

8. ಸಿಯಾಲ್ದಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್
ಕೋಲ್ಕತ್ತಾದ ಶಿಯಾಲ್ದಾ ಮತ್ತು ನವದೆಹಲಿ ನಡುವೆ ಸಂಪರ್ಕಿಸುವ ಈ ರೈಲು ಗಂಟೆಗೆ 87.06 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ. ಈ ಮೂಲಕ 1458 ಕೀ.ಮೀ. ದೂರವನ್ನು 17 ಗಂಟೆ ಹಾಗೂ 30 ನಿಮಿಷಗಳಲ್ಲಿ ಕ್ರಮಿಸುತ್ತದೆ.

7. ನವದೆಹಲಿ-ಅಲಹಬಾದ್ ದುರಂತೊ ಎಕ್ಸ್‌ಪ್ರೆಸ್
ದುರಂತೊ ವಿಭಾಗಕ್ಕೆ ಸೇರಿರುವ ಮಗದೊಂದು ನವದೆಹಲಿ-ಅಲಹಬಾದ್ ದುರಂತೊ ಎಕ್ಸ್‌ಪ್ರೆಸ್ 2012ರಲ್ಲಿ ಮೊದಲ ಓಟ ಆರಂಭಿಸಿತ್ತು. ಇದು ಮುಂಬೈ-ಅಲಹಬಾದ್ ನಡುವಣ ದೂರವನ್ನು 19 ಗಂಟೆ ಹಾಗೂ 20 ನಿಮಿಷಗಳಲ್ಲಿ ತಲುಪಿತ್ತಿದೆ. ಹಾಗೆಯೇ ಗಂಟೆಗೆ 86.85 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

6. ನವದೆಹಲಿ-ಹೌರಾ ದುರಂತೊ ಎಕ್ಸ್‌ಪ್ರೆಸ್
ಕೋಲ್ಕತ್ತಾ ಹಾಗೂ ರಾಷ್ಟ್ರ ರಾಜಧಾನಿ ನಡುವೆ ಸಂಪರ್ಕಿಸುವ ಮಗದೊಂದು ರೈಲು ಆಗಿರುವ ನವದೆಹಲಿ-ಹೌರಾ ದುರಂತೊ ಎಕ್ಸ್‌ಪ್ರೆಸ್, ಲೇಟೆಸ್ಟ್ ಹೈಬ್ರಿಡ್ ಎಲ್‌ಎಚ್‌ಬಿ ಕೋಚ್‌ಗಳನ್ನು ಹೊಂದಿದೆ. ಒಟ್ಟು 1441 ಕೀ.ಮೀ. ದೂರವನ್ನು 17 ಗಂಟೆ ಹಾಗೂ 10 ನಿಮಿಷಗಳಲ್ಲಿ ಕ್ರಮಿಸುವ ಈ ರೈಲು ಗಂಟೆಗೆ 87.06 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

5. ನವದೆಹಲಿ-ಹೌರಾ ರಾಜಧಾನಿ ಎಕ್ಸ್‌ಪ್ರೆಸ್
ದೆಹಲಿ-ಕೋಲ್ಕತ್ತಾ ನಡುವೆ ಪ್ರಮುಖ ಸಂಪರ್ಕ ವಾಹಕವಾಗಿರುವ ನವದೆಹಲಿ-ಹೌರಾ ರಾಜಧಾನಿ ಎಕ್ಸ್‌ಪ್ರೆಸ್ ಅನ್ನು 1969ನೇ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಇದು 1445 ಕೀ.ಮೀ. ದೂರವನ್ನು 17 ಗಂಟೆ 20 ನಿಮಿಷಗಳಲ್ಲಿ ತಲುಪುತ್ತದೆ. ಇದು ದೇಶದ ಐದನೇ ಅತಿ ವೇಗದ ರೈಲು ಆಗಿದ್ದು, ವೈಫೈ ಸೌಲಭ್ಯವನ್ನು ಪಡೆದ ಮೊದಲ ರೈಲೆಂಬ ಖ್ಯಾತಿಗೆ ಪಾತ್ರವಾಗಿದೆ. ಹಾಗೆಯೇ ಗಂಟೆಗೆ 88.21 ಕೀ.ಮೀ. ವೇಗದಲ್ಲಿ ಚಲಿಸುತ್ತದೆ.

4. ನವದೆಹಲಿ-ಕಾನ್ಪುರ ಶತಾಬ್ದಿ ಎಕ್ಸ್‌ಪ್ರೆಸ್
ಕಾನ್ಪುರ ರಿವರ್ಸ್ ಶತಾಬ್ದಿ ಎಕ್ಸ್‌ಪ್ರೆಸ್ ಎಂಬ ಹೆಸರಿನಿಂದಲೂ ಗುರುತಿಸಲ್ಪಡುವ ನವದೆಹಲಿ-ಕಾನ್ಪುರ ಶತಾಬ್ದಿ ಎಕ್ಸ್‌ಪ್ರೆಸ್ ಮೊದಲ ಬಾರಿಗೆ 2009ರಲ್ಲಿ ಪರಿಚಯಿಸಲಾಗಿತ್ತು. ಇದು ನಾಲ್ಕು ಗಂಟೆ 44 ನಿಮಿಷಗಳಲ್ಲಿ 441 ಕೀ.ಮೀ. ದೂರವನ್ನು ಕ್ರಮಿಸುತ್ತಿದ್ದು, ಗಂಟೆಗೆ 89.63 ವೇಗದಲ್ಲಿ ಸಂಚರಿಸುತ್ತದೆ.

3. ಸಿಯಾಲ್ದಾ-ನವದೆಹಲಿ ದುರಂತೊ
ನಾನ್ ಸ್ಟಾಪ್ ಪಶ್ಚಿಮ ಬಂಗಾಳ ಮತ್ತು ನವದೆಹಲಿ ಎಕ್ಸ್‌ಪ್ರೆಸ್ ಇದಾಗಿದೆ. ದೇಶದಲ್ಲಿ ಅತಿ ಹೆಚ್ಚು ಸಮಯ ಲಾಭ ಮಾಡುವ ರೈಲು ಕೂಡಾ ಇದಾಗಿದೆ.

2. ಮುಂಬೈ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್
ರಾಷ್ಟ್ರ ರಾಜಧಾನಿಯಂದ ಹೊರಡುವ ಮಗದೊಂದು ಮುಂಬೈ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ದೇಶದ ಅಗ್ರ 10 ಅತಿ ವೇಗದ ರೈಲುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹೆಸರಲ್ಲೇ ಸೂಚಿಸಿರುವಂತೆಯೇ ಈ ರಾಜಧಾನಿ ದರ್ಜೆಯ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು, 1972ನೇ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಆರಂಭದಲ್ಲಿ 1385 ಕೀ.ಮೀ. ದೂರವನ್ನು 19 ದೂರದಲ್ಲಿ ತಲುಪಿದ್ದ ಈ ರೈಲು, ವಿದ್ಯುತೀಕರಣದ ಬಳಿಕ 15 ಗಂಟೆ 150 ನಿಮಿಷಗಳಲ್ಲೇ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿದೆ. ಇದು ಗಂಟೆಗೆ 90.46 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

1. ನವದೆಹಲಿ-ಭೋಪಾಲ್ ಶತಾಬ್ದಿ ಎಕ್ಸ್‌ಪ್ರೆಸ್
ಶತಾಬ್ದಿ ಎಕ್ಸ್‌ಪ್ರೆಸ್ ದೇಶದಲ್ಲಿರುವ ಅತಿ ವೇಗದ ಹಾಗೂ ಪ್ರತಿಷ್ಠಿತ ರೈಲುಗಳಲ್ಲಿ ಒಂದಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಭೋಪಾಲ್ ವರೆಗೆ ಸಂಚರಿಸು ಈ ರೈಲು ಗಂಟೆಗೆ 91 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ. 1988ನೇ ಇಸವಿಯಲ್ಲಿ ಪರಿಚಯವಾಗಿರುವ ಶತಾಬ್ದಿ ಎಕ್ಸ್‌ಪ್ರೆಸ್ ದೇಶದ ಅತಿ ವೇಗದ ರೈಲು ಎಂಬ ಖ್ಯಾತಿಗೆ ಪಾತ್ರವಾಗಿದೆ.


Click it and Unblock the Notifications








