ಅಗ್ರ 10 ಸರ್ವಕಾಲಿಕ ಅತ್ಯಂತ ದುಬಾರಿ ಕಾರು ಅಪಘಾತಗಳು

By Nagaraja

ಕಾರು ಅಪಘಾತಗಳು ಅದು ಸಣ್ಣದೇ ಆಗಿರಬಹುದು ಅಥವಾ ಎಷ್ಟೇ ಭೀಕರವೇ ಆಗಿರಬಹುದು. ಇಂತಹ ಅಪಘಾತಗಳು ಸದಾ ನಷ್ಟವನ್ನುಂಟು ಮಾಡುತ್ತದೆ. ಕೆಲವೊಂದು ಬಾರಿ ಕಾರು ಸವಾರರು ತಮ್ಮ ಜೀವವನ್ನೇ ತೆರಬೇಕಾಗುತ್ತದೆ.

ಇವನ್ನೂ ಓದಿ: ಹೀಗೂ ಅಪಘಾತಗಳು ಸಂಭವಿಸುತ್ತಾ?

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವು ಎಷ್ಟೇ ಅಭಿವೃದ್ಧಿ ಸಾಧಿಸಿದರೂ ಕಾರು ಅಪಘಾತ ಪ್ರಮಾಣದಲ್ಲಿ ಮಾತ್ರ ಯಾವುದೇ ಇಳಿಕೆಯುಂಟಾಗಲಿಲ್ಲ. ಅಲ್ಲದೆ ಹೆಚ್ಚಿನ ಸಂಖ್ಯೆಯ ವಾಹನಗಳ ಬಳಕೆಯೊಂದಿಗೆ ಅಪಘಾತಗಳ ಸಂಖ್ಯೆಗಳಲ್ಲೂ ಭಾರಿ ವರ್ಧನೆ ಕಂಡುಬಂದಿದೆ. ಹಾಗಾಗಿ ಒಬ್ಬರೊಬ್ಬರು ತಮ್ಮ ಬದುಕಿನ ಮೌಲ್ಯವನ್ನು ತಿಳಿದುಕೊಂಡು ಕಾರು ಚಾಲನೆ ಮಾಡಬೇಕಾಗಿರುವುದು ಅತಿ ಮುಖ್ಯವೆನಿಸುತ್ತದೆ.

ಅಗ್ರ 10 ಸರ್ವಕಾಲಿಕ ಅತ್ಯಂತ ದುಬಾರಿ ಕಾರು ಅಪಘಾತಗಳು

ಇಂದಿನ ಈ ಲೇಖನದಲ್ಲಿ ಬೆಲೆಬಾಳುವ ಜಗತ್ತಿನ ಅಗ್ರ ಹತ್ತು ಕಾರುಗಳ ಅಪಘಾತಗಳ ಬಗ್ಗೆ ಚರ್ಚಿಸಲಿದ್ದೇವೆ. ಇದಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.

10. ಬುಗಾಟಿ ಇಬಿ110

10. ಬುಗಾಟಿ ಇಬಿ110

ಜಗತ್ತಿನ ಅತ್ಯಂತ ದುಬಾರಿ ಕಾರು ಅಪಘಾತಗಳ ಸಾಲಿನ ಅಂತಿಮ ಪಟ್ಟಿಯಲ್ಲಿ 1992ರ ಬುಗಾಟಿ ವೆರೋನ್ ಇಬಿ110 ಕಾಣಿಸಿಕೊಂಡಿದೆ. ಬರೋಬ್ಬರಿ 5 ಲಕ್ಷ ಅಮೆರಿಕನ್ ಡಾಲರ್ ವೆಚ್ಚದ ಈ ಕಾರನ್ನು ಮೆಕ್ಯಾನಿಕ್ ಟೆಸ್ಟ್ ಡ್ರೈವ್ ನಡೆಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿತ್ತು.

9 ಪಗಾನಿ ಜೋಂಡಾ ಸಿ12 ಎಸ್

9 ಪಗಾನಿ ಜೋಂಡಾ ಸಿ12 ಎಸ್

ಪಗಾನಿಯ ಈ ನಿರ್ದಿಷ್ಟ ಮಾದರಿಯನ್ನು 12 ಯುನಿಟ್‌ಗಳಷ್ಟು ನಿರ್ಮಿಸಲಾಗಿದ್ದರೂ ಯಾಕೋ ಮಾಲಿಕನಿಗೆ ಮಾತ್ರ ಈ ಸಂಖ್ಯೆ ಜಾಸ್ತಿಯಾಗಿ ಕಾಣಿಸಿತ್ತು. ಇದೇ ಕಾರಣಕ್ಕಾಗಿ ಈ ಸಂಖ್ಯೆ ಕಡಿತ ಮಾಡಲು 6.5 ಲಕ್ಷ ಅಮೆರಿಕನ್ ಡಾಲರ್ ಬೆಲೆ ಬಾಳುವ ಈ ಕಾರನ್ನು ಅಪಘಾತಕ್ಕೀಡು ಮಾಡಿದ್ದರು.

8. ಮರ್ಸಿಡಿಸ್ ಬೆಂಝ್ ಎಸ್‌ಎಲ್ 300

8. ಮರ್ಸಿಡಿಸ್ ಬೆಂಝ್ ಎಸ್‌ಎಲ್ 300

ಕ್ಲಾಸಿಕ್ ಕಾರನ್ನು ಇಷ್ಟಪಡುವವರಿಗೆ ಮರ್ಸಿಡ್ ಬೆಂಝ್ ಎಸ್‌ಎಲ್ 300 ತುಂಬಾನೇ ಇಷ್ಟವಾಗಬಹುದು. ಆದರೆ ದುರಾದೃಷ್ಟವಶಾತ್ 1965ರಲ್ಲಿ ನಿರ್ಮಾಣವಾಗಿರುವ 7.50 ಲಕ್ಷ ಅಮೆರಿಕನ್ ಡಾಲರ್ ಬೆಲೆಬಾಳುವ ಆ ಐಕಾನಿಕ್ ಕಾರು ಅಪಘಾತಕ್ಕೀಡಾಗಿರುವುದು ಎಲ್ಲರಲ್ಲೂ ಬೇಸರ ತರಿಸಿತ್ತು.

7. ಜಾಗ್ವಾರ್ ಎಕ್ಸ್‌ಜೆ220

7. ಜಾಗ್ವಾರ್ ಎಕ್ಸ್‌ಜೆ220

ಗಂಟೆಗೆ ಗರಿಷ್ಠ 217 ಮೈಲ್ ವೇಗವನ್ನು ಹೊಂದಿರುವ ಜಾಗ್ವಾರ್ ಎಕ್ಸ್‌ಜೆ220 ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಮಿಲಿಯನ್ ಡಾಲರ್ ಕಾರು ಅಪಘಾತಕ್ಕೀಡಾದ ದು:ಖ ಅರಗಿಸಿಕೊಳ್ಳಲಾಗದ ಮಾಲಿಕ ತನ್ನ ಅಚ್ಚುಮೆಚ್ಚಿನ ಕಾರಿನ ಬಳಿಯಲ್ಲೇ ನಿಂತುಕೊಂಡಿರುವುದನ್ನು ನೀವು ಗಮನಿಸಬಹುದು.

6. ಮೆಕ್‌‌ಲ್ಯಾರೆನ್ ಎಫ್1

6. ಮೆಕ್‌‌ಲ್ಯಾರೆನ್ ಎಫ್1

ಜನಪ್ರಿಯ ಹಾಸ್ಯ ನಟ ಮಿಸ್ಟರ್ ಬೀನ್ (ರೋವನ್ ಆಟ್ಕಿಸನ್) ಒಡೆತನದಲ್ಲಿರುವ ಈ 1.25 ಮಿಲಿಯನ್ ಡಾಲರ್ ವೆಚ್ಚದ ಮೆಕ್‌ಲ್ಯಾರೆನ್ ಎಫ್1 ಜಗತ್ತಿನ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿದೆ. ವಿಶೇಷವೆಂದರೆ ಮಿಸ್ಟರ್ ಬೀನ್ ಮಗದೊಂದು ಆಸ್ಟನ್ ಮಾರ್ಟಿನ್ ಅಪಘಾತದಲ್ಲೂ ಭಾಗಿಯಾಗಿದ್ದರು.

5. ಫೆರಾರಿ ಎನ್ಜೊ

5. ಫೆರಾರಿ ಎನ್ಜೊ

ಫೆರಾರಿ ಸೂಪರ್ ಕಾರು ಕೇಳಿದಾಕ್ಷಣವೇ ಇದು ಎಷ್ಟು ದುಬಾರಿ ಕಾರೆಂಬುದನ್ನು ಮನಗಾಣಬಹುದು. 1.3 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ಈ ಕಾರು ಗಂಟೆಗೆ 196 ಮೈಲ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

4. ಬುಗಾಟಿ ವೇರೊನ್

4. ಬುಗಾಟಿ ವೇರೊನ್

ಜಗತ್ತಿನ ಅತಿ ದುಬಾರಿ ಕಾರು ಅಪಘಾತಗಳ ಸಾಲಿನಲ್ಲಿ ಬುಗಾಟಿ ವೇರೊನ್ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಜಗತ್ತಿನ ಅತಿ ವೇಗದ ಕಾರುಗಳಲ್ಲಿ ಒಂದಾಗಿರುವ ಬುಗಾಟಿ ವೇರೊನ್ 1.6 ಮಿಲಿಯನ್ ಅಮೆರಿಕನ್ ಡಾಲರುಗಳಷ್ಟು ದುಬಾರಿಯೆನಿಸಿದೆ.

3. 1959 ಫೆರಾರಿ 250 ಜಿಟಿ ಟಿಡಿಎಫ್

3. 1959 ಫೆರಾರಿ 250 ಜಿಟಿ ಟಿಡಿಎಫ್

ಫೆರಾರಿಯ ಕ್ಲಾಸಿಕ್ ಕಾರು ಅಗ್ರ ಮೂರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ತುಂಬಾನೇ ನಿರಾಶಜನಕವಾಗಿದೆ. ಇದು 1.65 ಮಿಲಿಯನ್ ಅಮೆರಿಕನ್ ಡಾಲರುಗಳಷ್ಟು ಬೆಲೆಬಾಳುವುದಾಗಿದೆ.

2. ಫೆರಾರಿ 250 ಜಿಟಿ ಸ್ಪೈಡರ್

2. ಫೆರಾರಿ 250 ಜಿಟಿ ಸ್ಪೈಡರ್

ನಿಮ್ಮ ಬಳಿಯಿದ್ದ ಫೆರಾರಿ ಸ್ಪೈಡರ್ ಕಾರು ಅಪಘಾತಕ್ಕೀಡಾದ್ದಲ್ಲಿ ಏನು ಮಾಡುವೀರಾ? ಇದನ್ನು ರಿಪೇರಿ ಮಾಡಲು ಲಕ್ಷಗಟ್ಟಲೆ ಖರ್ಚು ಮಾಡಬೇಕಾಗುತ್ತದೆ. ಅಂದ ಹಾಗೆ 2008ರಲ್ಲಿ ನಡೆದ ಹರಾಜಿನಲ್ಲಿ ಇಂತಹದೊಂದು ಕಾರು ಬರೋಬ್ಬರಿ 10,894,900 ಮಿಲಿಯನ್ ಡಾಲರುಗಳಿಗೆ ಹರಾಜಾಗಿತ್ತು.

1. ಫೆರಾರಿ 250 ಜಿಟಿಒ

1. ಫೆರಾರಿ 250 ಜಿಟಿಒ

ಜಗತ್ತಿನ ಅತ್ಯಂತ ದುಬಾರಿ ಕಾರು ಅಪಘಾತಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಫೆರಾರಿಯ ಮಗದೊಂದು ಆಕರ್ಷಕ ಕಾರು ಕಾಣಿಸಿಕೊಂಡಿದೆ. ಈ ದುಬಾರಿ ಕಾರು ಹರಾಜುವೊಂದರಲ್ಲಿ 28.5 ಮಿಲಿಯನ್ ಡಾಲರುಗಳಿಗೆ ಮಾರಾಟವಾಗಿತ್ತು.

More from DriveSpark

Article Published On: Tuesday, September 2, 2014, 8:02 [IST]
English summary
In the modern world, accidents and crashes have become common due to the growth of population and people making more money. Owning cars has become easy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+