ವಿಶಿಷ್ಟ ದೇಹ ಶೈಲಿಯ ಟಾಪ್ 10 ಕನ್ವರ್ಟಿಬಲ್ ಕಾರುಗಳು
ಆಟೋಮೊಬೈಲ್ ದೇಹ ಶೈಲಿಯಲ್ಲಿ ಹಲವು ವಿಧಗಳಿವೆ. ಇವುಗಳಲ್ಲಿ 'ಕನ್ವರ್ಟಿಬಲ್' (Convertible)ಕೂಡಾ ಒಂದಾಗಿದೆ. ಸಾಮಾನ್ಯವಾಗಿ ಐಷಾರಾಮಿ ಕಾರುಗಳು ಹೆಚ್ಚಾಗಿ ಕನ್ವರ್ಟಿಬಲ್ ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸುತ್ತದೆ.
ಭಾರತಕ್ಕಿಂತಲೂ ಇದು ವಿದೇಶದಲ್ಲಿ ಹೆಚ್ಚು ಜನಪ್ರಿಯತೆ ಕಾಪಾಡಿಕೊಂಡಿದ್ದು, ಕ್ಯಾಬ್ರಿಯೊಲೆಟ್, ಕ್ಯಾಬ್ರಿಯೊ ಹಾಗೂ ರೋಡ್‌ಸ್ಟರ್ ಎಂಬ ಹೆಸರಿನಿಂದಲೂ ಹೆಸರಿಸಲ್ಪಟ್ಟಿದೆ. ಇದನ್ನು ಸುಲಭವಾಗಿ ಓಪನ್ ಟಾಪ್ ಕಾರೆಗಳೆಂದು ಕರೆಯಬಹುದಾಗಿದೆ. ಇಂದಿನ ಈ ಲೇಖನದಲ್ಲಿ ವಿಶಿಷ್ಟ ದೇಹ ಶೈಲಿಯ ಟಾಪ್ 10 ಕನ್ವರ್ಟಿಬಲ್ ಕಾರನ್ನು ಪಟ್ಟಿ ಮಾಡುವ ಪ್ರಯತ್ನ ಮಾಡಲಿದ್ದೇವೆ.

10. ಫೋಕ್ಸ್‌ವ್ಯಾಗನ್ ಗಾಲ್ಫ್ ಕ್ಯಾಬ್ರಿಯೊಲೆಟ್
ಫೋಕ್ಸ್‌ವ್ಯಾಗನ್ ಗಾಲ್ಫ್ ಕ್ಯಾಬ್ರಿಯೊಲೆಟ್ ಕಾರು ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಯಾವುದೇ ಅಚ್ಚರಿಯನ್ನುಂಟು ಮಾಡಿಲ್ಲ. ಇದು ಅತ್ಯಂತ ಸುಂದರ ಕನ್ವರ್ಟಿಬಲ್ ಕಾರುಗಳಲ್ಲಿ ಒಂದಾಗಿದೆ.

09. ಲೋಟಸ್ ಎಲಿಸ್
ಅತ್ಯುತ್ತಮ ಹ್ಯಾಂಡ್ಲಿಂಗ್ ಕಾರುಗಳಲ್ಲಿ ಒಂದಾಗಿರುವ ಲೋಟಸ್ ಅತ್ಯುತ್ತಮ ನಿರ್ವಹಣೆಯನ್ನು ಕಾಪಾಡಿಕೊಂಡಿದೆ. ಇದರಲ್ಲಿ ರೋವರ್‌ನ ಕೆ ಸಿರೀಸ್ ಎಂಜಿನ್ ಆಳವಡಿಸಲಾಗಿದೆ.

08. ಆಡಿ ಟಿಟಿ
ಬಹುಶ: ಆಡಿ ಟಿಟಿ ಹೆಸರು ನಿಮ್ಮಲ್ಲಿ ಹೆಚ್ಚು ಪರಿಚಿತವಾಗಿರಬಹುದು. 1999ನೇ ಇಸವಿಯಲ್ಲಿ ಮಾರಾಟಕ್ಕೆ ಪ್ರವೇಶಿಸಿದ್ದ ಆಡಿ ಟಿಟಿ ರೋಡ್‌ಸ್ಟರ್, ತನ್ನ ಮನ ಗೆಲ್ಲವು ಸ್ಟೈಲಿಂಗ್‌ನಿಂದಾಗಿ ಹೆಚ್ಚು ಜನಪ್ರಸಿದ್ಧವಾಗಿತ್ತು. ವಿಶೇಷವೆಂದರೆ ಫೋಕ್ಸ್‌ವ್ಯಾಗನ್ ಗಾಲ್ಪ್ ಚಾಸೀ ತಳಹದಿಯಲ್ಲಿ ಇದು ನಿರ್ಮಾಣವಾಗಿದೆ.

07. ಬಿಎಂಡಬ್ಲ್ಯು 3 ಸಿರೀಸ್
ಬಿಎಂಡಬ್ಲ್ಯು 3 ಸಿರೀಸ್ ನಾಲ್ಕು ಸೀಟುಗಳ ಕನ್ವರ್ಟಿಬಲ್ ಕಾರಾಗಿದೆ. ಇದು ಆಡಿಯ ಕನ್ವರ್ಟಿಬಲ್ ಕಾರುಗಳಿಗೆ ಕೈಗನ್ನಡಿಯಾಗಿದೆ.

06. ಫೆರಾರಿ ಕ್ಯಾಲಿಫೋರ್ನಿಯಾ
2009ನೇ ಇಸವಿಯಲ್ಲಿ ಬಿಡುಗಡೆಯಾಗಿದ್ದ ಫೆರಾರಿ ಕ್ಯಾಲಿಫೋರ್ನಿಯಾ ಮಡಚಬಹುದಾದ ಹಾರ್ಡ್ ಟಾಪ್ ಪಡೆದ ಮೊದಲ ಕನ್ವರ್ಟಿಬಲ್ ಎನಿಸಿಕೊಂಡಿತ್ತು.

05. ಮಾಜ್ದಾ ಎಂಎಕ್ಸ್5
ಮಾಜ್ದಾದ ಎರಡು ಸೀಟುಗಳ ಈ ರೋಡ್‌ಸ್ಟರ್ ಕಾರು ಅಗ್ರ ಐದು ಕನ್ವರ್ಟಿಬಲ್ ಕಾರುಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ಯಾವುದೇ ಅಚ್ಚರಿಗೆ ಕಾರಣವಾಗಿಲ್ಲ. ಇದು ಅತ್ಯುತ್ತಮ ಸಮತೋಲಿತ ಫ್ರಂಟ್ ಎಂಜಿನ್ ರಿಯರ್ ವೀಲ್ ಡ್ರೈವ್ ವಿನ್ಯಾಸವನ್ನು ಪಡೆದುಕೊಂಡಿದೆ.

04. ಪೋರ್ಷೆ 911
ಪೋರ್ಷೆಯ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ 911 ಕ್ಯಾಬ್ರಿಯೊಲೆಟ್ ಅತ್ಯುತ್ತಮ ನಿರ್ವಹಣಾ ಕಾರುಗಳಲ್ಲಿ ಒಂದಾಗಿದೆ. ಇನ್ನು ಹೆಚ್ಚು ನಿರೀಕ್ಷೆ ಮಾಡುತ್ತಿದ್ದಲ್ಲಿ ನಿಮಗೆ 400 ಅಶ್ವಶಕ್ತಿ ಉತ್ಪಾದಿಸಲು ಸಮರ್ಥವಾಗಿರುವ ಕರೆರಾ ಎಸ್ ಗಂಟೆಗೆ ಗರಿಷ್ಠ 187 ಮೈಲ್ ವೇಗದಲ್ಲಿ ಸಾಗುವ ಕಾರು ಲಭ್ಯವಾಗಲಿದೆ.

03. ಜಾಗ್ವಾರ್ ಎಕ್ಸ್‌ಕೆ
ಪೋರ್ಷೆಗಿಂತಲೂ ತಾವೇನೂ ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ರೂಪುಗೊಂಡಿರುವ ಜಾಗ್ವಾರ್ ಎಕ್ಸ್‌ಕೆ 5.0 ಲೀಟರ್ ವಿ8 ಎಂಜಿನ್ ಪಡೆದುಕೊಂಡಿದೆ. ಇದು ಸೂಪರ್ ಕಾರು ಶೈಲಿಯನ್ನು ಪಡೆದುಕೊಂಡಿದೆ.

02. ಮರ್ಸಿಡಿಸ್ ಬೆಂಝ್ ಎಸ್‌ಎಲ್
ಮರ್ಸಿಡಿಸ್ ಬೆಂಝ್ ಎಸ್‌ಎಲ್ ಲೇಟೆಸ್ಟ್ ಮಾದರಿಯು 4,663 ಸಿಸಿ ವಿ8 ಎಂಜಿನ್‌ನಲ್ಲಿ ಲಭ್ಯವಿರುತ್ತದೆ. ಇದು ಮಗದೊಂದು ಆಕರ್ಷಕ ಕನ್ವರ್ಟಿಬಲ್ ಕಾರೆನಿಸಿಕೊಂಡಿದೆ.

01. ಆಸ್ಟನ್ ಮಾರ್ಟಿನ್ ವಾಂಟೇಜ್
ತನ್ನ ಅಗ್ರ ಸ್ಥಾನಕ್ಕೆ ಯಾವುದೇ ಕುತ್ತು ಸಂಭವಿಸಿಲ್ಲ ಎಂಬುದನ್ನು ಸ್ಪಷ್ಟವಾಗಿ ಮನಗಂಡಿರುವ ಆಸ್ಟನ್ ಮಾರ್ಟಿನ್ ವಾಂಟೇಜ್ ರೋಡ್‌ಸ್ಟರ್ ಎಲ್ಲ ಹಂತದಲ್ಲಿಯೂ ಜಗತ್ತಿನ ಅತ್ಯುತ್ತಮ ಕನ್ವರ್ಟಿಬಲ್ ಕಾರೆನಿಸಿಕೆಂಡಿದೆ. ಇದು ಐಷಾರಾಮಿ ಗ್ರಾಹಕರ ಪಾಲಿಗೆ ನೆಚ್ಚಿನ ಆಯ್ಕೆಯಾಗಿದೆ. ಇದು ಕೂಡಾ ವಿ8 ಎಂಜಿನ್‌ನಲ್ಲಿ ಆಗಮನವಾಗಿದೆ.


Click it and Unblock the Notifications








