ಸಾಗರದೊಳಗೆ ಮುಳುಗಿರುವ 18 ಅವಿಶ್ವಸನೀಯ ಹಡಗುಗಳು
16ನೇ ಶತಮಾನದ ಆರಂಭದಲ್ಲಿ ಯುರೋಪ್ ಖಂಡದಿಂದ ಭಾರತಕ್ಕೆ ಸಮುದ್ರಯಾನ ಕಂಡುಹುಡುಕಿದ್ದ ಪೋರ್ಚುಗೀಸ್‌ನ ನಾವಿಕ ವಾಸ್ಕೋಡಾಗಾಮಾ ಕೇರಳದ ಕಲ್ಲಿಕೋಟೆಗೆ ಆಗಮಿಸಿರುವ ಪ್ರಮುಖ ಉದ್ದೇಶವು ವ್ಯಾಪಾರವಾಗಿತ್ತು. ಹೀಗೆ ಬರ ಬರುತ್ತಾ ವರ್ಷಗಳು ಉರುಳಿದ ಹಾಗೆಯೇ ಸಮುದ್ರಯಾನದ ಮಹತ್ವವು ಇಮ್ಮಡಿಯಾಗಿತ್ತು.
Also Read : ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ
ಹಿಂದೆಲ್ಲ ಸಾಗರಯಾನಕ್ಕೆ ಹೆಚ್ಚಿನ ಸುರಕ್ಷತೆಯಿರಲಿಲ್ಲ. ನಾಲ್ಕು ಕಡೆ ನೋಡಿದರೂ ಅಬ್ಬರಿಸುವ ಸಾಗರದ ಅಲೆಯ ನಡುವೆ ದಿಕ್ಸೂಚಿಯನ್ನು ಹಿಡಿದುಕೊಂಡು ಹವಾಮಾನ ವೈಪರೀತ್ಯದ ನಡುವೆಯೂ ದಡ ಸೇರಲು ಪ್ರಯತ್ನ ಮಾಡುವ ನಾವಿಕರು. ಇನ್ನೊಂದೆಡೆ ಕಡಲುಗಳ್ಳರ ದಾಳಿ ಹೀಗೆ ಹಲವಾರು ಕಾರಣಗಳಿಂದಾಗಿ ಅದೆಷ್ಟು ಹಡಗುಗಳು ಮುಳುಗಿ ಹೋಗಿದ್ದು, ನಾಮಾವಶೇಷವಾಗಿದೆ. ಇಂದಿನ ಈ ಲೇಖನದಲ್ಲಿ ಸಾಗರದೊಳಗೆ ಮುಳುಗಿ ಹೋದರೂ ತನ್ನ ಅಸ್ತಿತ್ವವನ್ನು ಈಗಲೂ ಕಾಪಾಡಿಕೊಂಡಿರುವ ಜಗತ್ತಿನ 18 ಹಡಗುಗಳ ಬಗೆಗಿನ ಅವಿಶ್ವಸನೀಯ ಕಥೆಯನ್ನು ಹೇಳಿಕೊಡುವ ಪ್ರಯತ್ನ ಮಾಡಲಿದ್ದೇವೆ.

18. ರಷ್ಯನ್ ವ್ರೆಕ್
ರಷ್ಯನ್ ವ್ರೆಕ್ ಎಂದೇ ವಿಶ್ಲೇಷಿಸಲ್ಪಡುವ ನಿಗೂಢ ಹಡಗನ್ನು 1988ನೇ ಇಸವಿಯಲ್ಲಿ ಕಂಡುಹುಡುಕಲಾಯಿತು. ದಕ್ಷಿಣ ಈಜಿಪ್ಟ್ ನ ರೆಡ್ ಸಮುದ್ರದ ಝಾಬಘಾಡ್ ದ್ವೀಪದಿಂದ ಇದನ್ನು ಪಚ್ಚೆಹಚ್ಚಲಾಗಿತ್ತು. ಇದರಿಂದ ಪಡೆದ 200ರಷ್ಟು ಬ್ಯಾಟರಿ, ದಿಕ್ಸೂಚಿ, ಎಲೆಕ್ಟ್ರಿಕ್ ಉಪಕರಣಗಳನ್ನು ಗಮನಿಸಿದಾಗ ಕಣ್ಗಾವಲು ಅಥವಾ ಸಂವಹನಕ್ಕಾಗಿ ಇದನ್ನು ಬಳಕೆ ಮಾಡಲಾಗುತ್ತಿತ್ತು ಎಂಬುದು ತಿಳಿದು ಬಂದಿದೆ.

17. ದಿ ಡೋಟಿ
ಅಮೆರಿಕದ ಮಿಲ್ವಾಕೀ ಮಿಚಿಗನ್ ಲೇಕ್ ನಿಂದ ಡೋಟಿ ಹಡಗನ್ನು ಪತ್ತೆ ಹಚ್ಚಲಾಗಿದೆ. ಇತಿಹಾಸ ತಜ್ಞರ ಪ್ರಕಾರ 1898ರಲ್ಲಿ ಅಪ್ಪಳಿಸಿದ ಭೀಕರ ಚಂಡಮಾರುತಕ್ಕೆ ಪ್ರಸ್ತುತ ಹಡಗು ಮುಳಗಿ ಹೋಗಿರಬಹುದೆಂದು ಅಂದಾಜಿಸಲಾಗಿದೆ. ಇಲ್ಲಿ ಕುತೂಹಲದಾಯಕ ಅಂಶವೆಂದರೆ ಘಟನೆ ನಡೆದ 115 ವರ್ಷಗಳ ಬಳಿಕ ಅಂದರೆ 2010ನೇ ಇಸವಿಯಲ್ಲಿ ಇದರ ಅವಶೇಷವನ್ನು ಪತ್ತೆ ಹಚ್ಚಲಾಗಿತ್ತು.

16. ಎಸ್ ಎಸ್ ಪ್ರೆಸಿಡೆಂಟ್ ಕೂಲಿಡ್ಜ್
ದಕ್ಷಿಣ ಫೆಸಿಫಿಕ್ ಸಾಗರದ ವನೌತು ಸಾಗರದಲ್ಲಿ ಎಸ್ ಎಸ್ ಪ್ರೆಸಿಡೆಂಟ್ ಕೂಲಿಡ್ಜ್ ಹಡಗನ್ನು ಪತ್ತೆ ಹಚ್ಚಲಾಗಿದೆ. ವಿಜ್ಞಾನಿಗಳ ಪ್ರಕಾರ 1941ನೇ ಇಸವಿಯ ವರೆಗೆ ನಿರ್ಮಿಸಲಾದ ಅತ್ಯಂತ ಐಷಾರಾಮಿ ಸಮುದ್ರಯಾನ ಹಡಗುಗಳಲ್ಲಿ ಇದೂ ಒಂದಾಗಿದೆ.

15. ಅಂಬ್ರಿಯಾ
ಸಾಹಸ ಪ್ರದರ್ಶನಕ್ಕಾಗಿ ಸಮುದ್ರಕ್ಕೆ ಧುಮುಕಿದ ಡೈವರ್ ಗಳಿಂದ ರೆಡ್ ಸಮುದ್ರದಲ್ಲಿ ಪತ್ತೆ ಹಚ್ಚಲಾದ ಅಂಬ್ರಿಯಾ ಹಡಗು, ಜಗತ್ತಿನ ಅತ್ಯುತ್ತಮ ಹಡಗು ಅವಶೇಷಗಳಲ್ಲಿ ಒಂದಾಗಿದೆ. ಇದು ಇಟಲಿಗೆ ಸೇರಿದ ಹಡಗಾಗಿದೆ.

14. ಬಿಯಾಂಕಾ ಸಿ
'ಕೆರಿಬಿಯನ್ ದ್ವೀಪದ ಟೈಟಾನಿಕ್' ಎಂದೇ ವಿಶ್ಲೇಷಿಸಲ್ಪಡುವ ಬಿಯಾಂಕಾ ಸಿ 1961ನೇ ಇಸವಿಯಲ್ಲಿ ಸಮುದ್ರದಲ್ಲಿ ಮುಳುಗಿತ್ತು. ಎಂಜಿನ್ ನಲ್ಲಿ ಅಚಾನಕ್ ಸಂಭವಿಸಿದ ಸ್ಪೋಟದಿಂದಾಗಿ ಎರಡು ದಿನಗಳ ಕಾಲ ಬೆಂಕಿ ಹೊತ್ತಿ ಉರಿಯುತ್ತಿತ್ತು. ಬಳಿಕ ನಿಧಾನವಾಗಿ ನೀರಿಗೆ ಶರಣಾಯಿತು.

13. ಡಿಫಿಯಾನ್ಸ್
ಉತ್ತರ ಅಮೆರಿಕದ ಹ್ಯುರನ್ ನಲ್ಲಿ ಮುಳುಗಿದ ನೂರಾರು ಹಡಗುಗಳನ್ನು ಕಾಣಬಹುದಾಗಿದೆ. ಈ ಪೈಕಿ ಕೆಲವು ಹಡಗುಗಳು ಚರಿತ್ರೆಯ ಭಾಗವಾಗಿದೆ. ಪ್ರಸ್ತುತ ಹಡಗು 1854ನೇ ಇಸವಿಯಲ್ಲಿ ಮುಳುಗಿರುವ ಬಗ್ಗೆ ಮಾಹಿತಿಯಿದೆ.

12. ಆರ್ ಎಂಎಸ್ ರೋನ್
ಬ್ರಿಟನ್ ವರ್ಜಿನ್ ದ್ವೀಪದ ಸಾಲ್ಟ್ ಐಲ್ಯಾಂಡ್ ನಲ್ಲಿ 1867 ಅಕ್ಟೋಬರ್ ನಲ್ಲಿ ಸಂಭವಿಸಿದ ಸುಂಟರಗಾಳಿಗೆ ಆರ್ ಎಂಎಂಸ್ ರೋನ್ ಹಡಗು ತನ್ನ ನಾಮಾವಶೇಷವನ್ನೇ ಕಳೆದುಕೊಂಡಿತ್ತು.

11. ಸ್ವೀಪ್ ಸ್ಟೇಕ್ಸ್
ಕೆನೆಡಾದ ಟೊಬೆರ್ ಮರಿ ಸ್ವೀಪ್ ಸ್ಟೇಕ್ಸ್ ಮುಳುಗಿದ ಹಡಗಿನ ವಿಶೇಷವೆಂದರೆ ಇದರ ಅವಶೇಷಗಳನ್ನು ಮೇಲಿಂದಲೇ ಕಾಣಬಹುದಾಗಿದೆ. ಅಲ್ಲದೆ ಈಗಲೂ ಸಂರಕ್ಷಣೆ ಮಾಡಲಾಗಿದೆ. 1867ರಲ್ಲಿ ಕಲ್ಲಿದ್ದಲು ಸಾಗಾಣೆಗಾಗಿ ಇದನ್ನು ಬಳಕೆ ಮಾಡಲಾಗುತ್ತಿತ್ತು.

10. ಘೋಸ್ಟ್ ಶಿಪ್
ಎರಡನೇ ಮಹಾಯುದ್ಧದ ಬಳಿಕ ಮುಚ್ಚುಗಡೆಗೊಂಡಿದ್ದ ಬಾಲ್ಟಿಕ್ ಸಮುದ್ರದಲ್ಲಿ ಘೋಸ್ಟ್ ಶಿಪ್ ಅನ್ನು ಅನಿರೀಕ್ಷಿತವಾಗಿ ಪತ್ತೆ ಹಚ್ಚಲಾಗಿತ್ತು. 2003ರಲ್ಲಿ ನಾಪತ್ತೆಯಾದ ವಿಮಾನದ ಹುಡುಕಾಟದಲ್ಲಿದ್ದ ಸ್ವೀಡನ್ ಸೇನೆಯು ಈ ನಿಗೂಢ ಹಡಗು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಬಳಿಕ ನಡೆಸಿದ ಅಧ್ಯಯನದಲ್ಲಿ 1650ರ ಕಾಲಘಟ್ಟದ ಹಡಗು ಇದಾಗಿದೆ ಎಂಬುದು ತಿಳಿದು ಬಂದಿದೆ.

09. ವಾಸಾ
ಸ್ವೀಡನ್ ನ ಸ್ಟಾಕ್ಹೋಮ್ ವಾಸಾ ಮ್ಯೂಸಿಯಂನಲ್ಲಿ ಇದನ್ನು ಭದ್ರವಾಗಿಡಲಾಗಿದೆ. ಮಿನುಗುವ ಬೆಳಕಿನಿಂದ ಕಂಗೊಳಿಸುವ ವಾಸಾ ಹಡಗು ಇಲ್ಲಿಗೆ ಆಗಮಿಸುತ್ತಿರುವ ಪ್ರವಾಸಿಗರಲ್ಲೂ ಹೆಚ್ಚಿನ ಕುತೂಹಲ ಕೆರಳಿಸುತ್ತದೆ.

08. ಫ್ರೈಗೇಟ್ 356
ಕ್ಯೂಬಾದ 150 ಮೈಲು ದಕ್ಷಿಣದಲ್ಲಿ ಕೇಮ್ಯಾನ್ ಬ್ರಾಕ್ ನೀರಿನೊಳಗಡೆ ಫ್ರೈಗೇಟ್ 356 ಪತ್ತೆ ಹಚ್ಚಲಾಗಿದೆ. ಸೋವಿಯತ್ ಒಕ್ಕೂಟಕ್ಕೆ ಸೇರಿದ ಈ ಹಡಗನ್ನು 1980ರ ದಶಕದಲ್ಲಿ ನಿರ್ಮಾಣ ಮಾಡಲಾಗಿತ್ತು.

07. ಈಜಿಪ್ಟ್ ರೆಡ್ ಸಮುದ್ರ
ಈಜಿಪ್ಟ್ ನ ರೆಡ್ ಸಮುದ್ರದಲ್ಲಿ ಹೆಸರು ಗುರುತಿಸಲು ಸಾಧ್ಯವಾಗದ ಹಡಗನ್ನು ಪತ್ತೆ ಹಚ್ಚಲಾಗಿದೆ. ಅಲ್ಲಿನ ಸ್ಥಳೀಯರ ಪ್ರಕಾರ ಹಲವು ವರ್ಷಗಳ ಹಿಂದೆ ಇದು ಮುಳುಗಡೆಗೊಂಡಿತ್ತು.

06. ಯುಎಸ್ಎಸ್ ಉಟಾ
ಒಂದನೇ ಮಹಾಯುದ್ಧ ಕಾಲಘಟ್ಟದಲ್ಲೂ ತನ್ನ ಸೇವೆಯನ್ನು ಸಲ್ಲಿಸಿದ್ದ ಯುಎಸ್ಎಸ್ ಉಟಾ ಹಡಗನ್ನು 1909ರಲ್ಲಿ ನಿರ್ಮಿಸಲಾಗಿತ್ತು. ಆದರೆ 1941ರಲ್ಲಿ ಜಪಾನ್ ದಾಳಿಗೆ ಬಲಿಯಾಗಿದ್ದ ಪ್ರಸ್ತುತ ಹಡಗು ಈಗಲೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿರುವುದು ವಿಶೇಷ.

05. ಪಿ29
2007ರಲ್ಲಿ ಮಾಲ್ಟಾದ ಮಾರ್ಫಾ ಪಾಯಿಂಟ್ ನಲ್ಲಿ ಪಿ29 ಹಡಗನ್ನು ಪತ್ತೆ ಹಚ್ಚಲಾಗಿತ್ತು. ಇದೊಂದು ಗಸ್ತು ತಿರುಗುವ ಹಡಗಾಗಿದೆ.

04. ಯುಎಸ್ ಎಸ್ ಅರಿಜೋನಾ
ಯುದ್ಧ ಹಡಗಾಗಿರುವ ಯಎಸ್ಎಸ್ ಅರಿಜೋನಾ, ಪೆನಿನ್ಸುಲಾ ಪಿಯರ್ಲ್ ಹಾರ್ಬರ್ ನಲ್ಲಿ ದುರಂತ ಅಂತ್ಯ ಕಂಡಿತ್ತು. ಇದು ಕೂಡಾ ಜಪಾನ್ ದಾಳಿಗೆ ಶರಣಾಗಿತ್ತು.

03. ಗಿಯಾನಿಸ್ ಡಿ
ಈಜಿಪ್ಟ್ ರೆಡ್ ಸೀಯಲ್ಲಿ ಪತ್ತೆಹಚ್ಚಲಾದ ನಿಗೂಢ ಹಡಗು ಇದಾಗಿದೆ. 1969ರಲ್ಲಿ ಜಪಾನ್ ನಿಂದ ನಿರ್ಮಾಣವಾದ ಈ ಹಡಗನ್ನು ಗ್ರೀಕ್ ಸಂಸ್ಥೆ ಖರೀದಿಸಿತ್ತು.

02. ಟಗ್ ಬೋಟ್ ರೊಝಿ
ಹೀಗೆ ಹಲವು ನಿಗೂಢತೆಗಳಿಗಾಗಿ ಸಾಕ್ಷಿಯಾದ ಮಗದೊಂದು ಹಡಗು ಟಗ್ ಬೋಟ್ ಆಗಿದೆ. ಇದನ್ನು ಮಾಲ್ಟಾದ ಸಮುದ್ರದಡಿಯಿಂದ ಪತ್ತೆ ಹಚ್ಚಲಾಗಿತ್ತು. ಅಲ್ಲದೆ ಇದರ ಹಿಂದಿರುವ ರಹಸ್ಯವನ್ನು ಭೇದಿಸಲು ಇತಿಹಾಸ ತಜ್ಞರು ಪ್ರಯತ್ನದಲ್ಲಿದ್ದಾರೆ.

01. ಪ್ರಿನ್ಸ್ ಅಲ್ಬರ್ಟ್
ಹೊಂಡುರಾಸ್ ದ್ಪೀಪದಲ್ಲಿ ನಲ್ಲಿ ಪತ್ತೆ ಹಚ್ಚಲಾಗಿರುವ ಪ್ರಿನ್ಸ್ ಅಲ್ಬರ್ಟ್ ಹಡಗನ್ನು 1987ನೇ ಇಸವಿಯಲ್ಲಿ ಉದ್ದೇಶಪೂರ್ವಕವಾಗಿಯೇ ಸ್ವತ: ಮಾಲಿಕನೇ ಮುಳುಗಡೆಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಟೈಟಾನಿಕ್ ಹಡಗಿಗೆ ಸಂಬಂಧಪಟ್ಟ 10 ರೋಚಕ ಸತ್ಯಗಳು


Click it and Unblock the Notifications








