ಮುಂಗಾರು ಶುರುವಾಗುತ್ತಿದೆ, ನಿಮ್ಮಕಥೆ ಓಕೆ ಆದರೆ ನಿಮ್ಮ ಬೈಕ್‌ ಕಥೆಯೇನು?: ಟಾಪ್‌ ಫೈವ್‌ ಟಿಪ್ಸ್‌

ಮುಂಗಾರು ಶುರುವಾಯಿತೆಂದರೆ ಮನಸ್ಸಿಗೆ ಒಂದು ರೀತಿಯ ಸಮಾಧಾನ. ಬಿಸಿಲ ಬೇಗೆಗೆ ಬಳಲಿ ಬೆಂಡಾಗಿದ್ದ ನಮಗೆಲ್ಲಾ ಕೊಂಚ ಆರಾಮ ಎನಿಸುವುದು ಮುಂಗಾರು ಆರಂಭವಾದಾಗಲೇ ಎಂಬುವುದು ನಿಜವಾದ ಮಾತು. ಆದರೆ ನೀವು ಬಳಸುವ ಬೈಕ್‌ ಅನ್ನು ಮುಂಗಾರಿನಲ್ಲಿ ನೀವು ಸರಿಯಾಗಿ ನೋಡಿಕೊಳ್ಳದೇ ಇದ್ದರೆ ನಷ್ಟ ನಿಮ್ಮದೇ.

ಮಳೆಗಾಲದಲ್ಲಿ ಬೈಕ್‌ ಓಡಿಸುವಾಗ ಕೊಂಚ ಹೆಚ್ಚೇ ಜಾಗೃತರಾಗಿರಬೇಕು. ಅದೇ ರೀತಿ ಬೈಕ್‌ನ ನಿರ್ವಹಣೆಯೂ ಸಹ ಅಷ್ಟೇ ಮುಖ್ಯ(Bike Maintenance Tips). ಆದರೆ ಒಮ್ಮೊಮ್ಮೆ ನಿಮ್ಮದೇ ಕೆಲವು ನಿರ್ಲಕ್ಷ್ಯದ ಹವ್ಯಾಸಗಳು, ಅಭ್ಯಾಸಗಳು ನಿಮ್ಮ ಬೈಕ್‌ನ ಧೀರ್ಘ ಬಾಳಿಕೆಗೆ ದೊಡ್ಡ ಮುಳುವಾಗಲಿದೆ ಎಂದರೆ ನೀವು ನಂಬಲೇ ಬೇಕು.

Bike Maintenance Tips

ಸಾಮಾನ್ಯ ನಿರ್ವಹನೆಯ ಕಡೆಗಣನೆ: ಹೌದು, ಮಳೆಗಾಲದಲ್ಲಿ ಬೈಕ್‌ ಹಾಳಾಗಲು ನೀವು ಆಗಾಗ ನಡೆಸುವ ಬೈಕ್‌ನ ನಿರ್ವಹಣೆಯನ್ನು ಕಡೆಗಣಿಸುವುದು ಮೊದಲನೆಯದು. ಮಳೆಗಾಲದಲ್ಲಿ ಬೈಕ್‌ ಓಡಿಸುವಾಗ ಮಳೆ ನೀರು, ಕೆಸರು ಮತ್ತು ಮಣ್ಣಾಗುವುದು ತೀರಾ ಸಾಮಾನ್ಯವಾದ ವಿಷಯ. ಬೈಕನ್ನು ಆಗಾಗ ಶುಚಿಗೊಳಿಸದೇ ಇದ್ದರೆ ಇದು ನಿಮ್ಮ ಬೈಕನ್ನು ಹಾಳು ಮಾಡುವುದಂತೂ ಖಂಡಿತ.

ಕೆಸರಿನಲ್ಲಿ ಓಡಿಸುವುದು: ಮಳೆಗಾಲದಲ್ಲಿ ಕೆಸರಿನಲ್ಲಿ ಬೈಕ್‌ ಓಡಿಸುವುದೆಂದರೆ ಹಲವರಿಗೆ ಅಚ್ಚುಮೆಚ್ಚು. ಆದರೆ ನಿರಂತರವಾಗಿ ಕೆಸರಿನಲ್ಲಿ ಓಡಿಸುವುದರಿಂದ ನಿಮ್ಮ ಬೈಕ್‌ ಗೆ ನೀವೇ ಕೈಯಾರೆ ಎಳ್ಳುನೀರು ಬಿಟ್ಟ ಹಾಗೆ ಎಂದರೆ ನಂಬುತ್ತೀರಾ? ರಸ್ತೆಯಲ್ಲಿರುವ ಗುಂಡಿಗಳು, ಹಂಪ್‌ಗಳನ್ನು ಕೆಸರು ಮರೆಮಾಚಿ ಇಟ್ಟಿರುತ್ತದೆ. ಇದರಿಂದ ನಿಮ್ಮ ಬೈಕ್‌ನ ಟೈರ್‌, ಸಸ್ಪೆನ್ಷನ್‌ಗಳು ನಿಮಗೆ ಹಿಡಿ ಶಾಪ ಹಾಕುವುದಂತೂ ಖಂಡಿತ.

Bike Maintenance Tips

ಸೂಕ್ತವಲ್ಲದ ಪಾರ್ಕಿಂಗ್‌: ಮಳೆಗಾಲದಲ್ಲಿ ಬೈಕ್‌ ಸವಾರರು ಎದುರಿಸುವ ಅತಿದೊಡ್ಡ ಸಮಸ್ಯೆ ಎಂದರೆ ಸರಿಯಾದ ರೀತಿಯಲ್ಲಿ ಬೈಕನ್ನು ಮಳೆ ನೆನೆಯದಂತೆ ಪಾರ್ಕ್‌ ಮಾಡಲು ಜಾಗವಿಲ್ಲದೇ ಇರುವುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಮಳೆಗಾಲದಲ್ಲಿ ಪಾರ್ಕ್‌ ಮಾಡಲು ಜಾಗವಿದ್ದರೂ ಹೊರಗೆ ಹೋದಾಗ ವ್ಯವಸ್ಥೆ ಇಲ್ಲದೇ ಇರಬಹುದು. ಮಳೆಗಾಲದಲ್ಲಿ ಬೈಕ್‌ ನಿರಂತರವಾಗಿ ನೆನೆದರೆ ಬ್ಯಾಟರಿ ಮತ್ತು ಇನ್ನಿತರ ಎಲೆಕ್ಟ್ರಿಕ್‌ ಭಾಗಗಳು ಹಾನಿಯಾಗಬಹುದು.

ಟೈರ್‌ಗಳನ್ನು ಕಡೆಗಣಿಸುವುದು: ರೋಡ್‌ ಮತ್ತು ಬೈಕ್‌ಗೆ ಇರುವು ಒಂದೇ ಒಂದು ಸಂಪರ್ಕ ವಸ್ಉವೆಂದರೆ ಅದು ಟೈರ್‌ಗಳು. ಮಳೆಗಾಲದಲ್ಲಿ ಟೈರ್‌ಗಳು ಸವೆದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಮಳೆಗಾಲ ಆರಂಭವಾಗುವ ವೇಳೆ ಟೈರ್‌ಗಳು ಸವೆದಿದ್ದರೆ ಅದನ್ನು ಆದಷ್ಟು ಬೇಗ ಬದಲಾಯಿಸುವುದು ನಿಮಗೆ ಮತ್ತು ನಿಮ್ಮ ಬೈಕ್‌ಗೆ ಉತ್ತಮ.

ಚೈನ್‌ಗಳನ್ನು ಸರಿಯಾದ ಸಮಯದಲ್ಲಿ ನಿರ್ವಹಣೆ ಮಾಡದಿರುವುದು: ಚೈನ್‌ ಸಹ ಬೈಕ್‌ನ ಒಂದು ಪ್ರಮುಖ ಭಾಗವಾಘಿದ್ದು ಇದನ್ನು ಮಳೆಗಾಲದಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದರೆ ಹಾಲಾಗುವುದಂತೂ ಖಂಡಿತ. ಮಳೆಗಾಲದಲ್ಲಿ ನೀರು, ಕೆಸರುಗಳ ಮೇಲೆ ಬೈಕ್‌ ಹೋಗುವಾಗ ಚೈನ್‌ನಲ್ಲಿ ಅವು ಅಂಟಿಕೊಂಡು ಒಂದು ರೀತಿಯ ಶಬ್ದವನ್ನು ಉಂಟು ಮಾಡುತ್ತದೆ. ಇದನ್ನು ಸರಿಯಾದ ಸಮಯದಲ್ಲಿ ಕ್ಲೀನ್‌ ಮಾಡಿ ಶುಚಿಮಾಡದಿದ್ದರೆ ಹೊಸ ಚೈನ್‌ ಖರೀದಿ ಮಾಡಬೇಕಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 9, 2023, 17:44 [IST]
English summary
Top five bike maintenance tips in monsoon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+